ಎನಿತು ಬಲವಿರಲು ಇನ್ನೆನಿತು ಸಂಪದವಿರಲು…………………………
ಎನಿತು ಬಲವಿರಲು ಇನ್ನೆನಿತು ಸಂಪದವಿರಲು…………………………
ಅಂತು ಇಂತು ಅಣ್ಣನ ಸಹಾಯದಿಂದ ದೂರದ ಮರಳುಗಾಡಿನ ಮದ್ಯ ಕತಾರ್ ಎಂಬ ದೇಶದಲ್ಲಿ ಕೆಲಸ ಸಿಕ್ಕಿದೆ.
ಹಣಕ್ಕೆ ಕೊರತೆ ಇಲ್ಲ, ಕರ್ಚಿಗೆ ದಾರಿ ಇಲ್ಲವಾದ್ದರಿಂದ ಸ್ವಲ್ಪ ಮಟ್ಟಿಗಿನ ಉಳಿತಾಯ ಆದರೂ ಆಗಿ ಬಿಡಬಹುದು.
ಕಳೆದ ಏಳು ವರ್ಷದ ಅನುಭವ ಜೀವನದಲ್ಲಿ ಎಲ್ಲವನ್ನೂ ಕಲಿಸಿದೆ.ಜೊತೆಯಲ್ಲಿ ಮಾಡುವ ಕೆಲಸಕ್ಕೂ ಒಂದು ಶಿಸ್ತನ್ನು ತಂದು ಕೊಟ್ಟಿದೆ.ಆಫೀಸಿನಲ್ಲಿ ಎಲ್ಲರ ಗಿಂತ ಸ್ವಲ್ಪ ಚುರುಕಾಗಿ ಕೆಲಸ ಮಾಡುವುದರಿಂದ ಸರಿಯಾದ ಸಮಯಕ್ಕೆ ಮನೆಗೆ ಹೋಗಬಹುದು.
ಮನೆಯಲ್ಲಿ ಅಡುಗೆ ಮಾಡುವ ಕೆಲಸವೂ ಇಲ್ಲ ಅದನ್ನೂ ರೂಮ್ ಮೇಟ್ ಗಳು ಮಾಡುತ್ತಾರೆ.ಇನ್ನು ಅಣ್ಣ,ಅತ್ತಿಗೆ ಪ್ರತಿದಿನ ಬಂದು ಯೋಗಕ್ಶೇಮ ವಿಚಾರಿಸಿ ಕೊಂಡು ಹೋಗುತ್ತಾರಾದ್ದರಿಂದ ಹೇಳಿಕೊಳ್ಳುವಂತಹಾ ಸಮಸ್ಯೆಗಳೇನೂ ಇಲ್ಲ.
ಬಂದ ಎರಡೇ ವಾರದಲ್ಲಿ ಪುಟ್ಟ ಕತಾರಿನ ಎಲ್ಲ ಮೂಲೆಗಳೂ ಹಳತಾದವು.ದೆವರ ದಯದಿಂದ ಅಣ್ಣ,ಆತ್ತಿಗೆಯರೂ ನನ್ನಂತೆಯೇ ಶ್ವಾನರೇಖೆ ಯವರಾದ್ದರಿಂದ ತಿರುಗಾಟಕ್ಕೆ ತೊಂದರೆ ಇಲ್ಲ.
ಈಗ ನಿಜವಾದ ಸಮಸ್ಯೆ ಎಂದರೆ ಹೊತ್ತುಕಳೆಯುದು ತಂದ ಎಲ್ಲ ಯಕ್ಶಗಾನ ಸಿ ಡಿ ಗಳೂ ಹಳತಾದವು.ಭವಿಷ್ಯ ದ ಬಗ್ಗೆ ಯೋಚಿಸಿ ಯೋಚಿಸಿ ಬೇಸರ ಬಂತು.ಹಿಂದಿನ ಕಷ್ಟಗಳ ಯೋಚನೆ ಮಾಡೋಣವೇ, ನಿಂದೆಂತ್ತದ್ದು ಮಹಾ ಕಷ್ಟ ನನ್ನ ಕಷ್ಟದ ಮುಂದೆ ಎನ್ನುತ್ತೀರಿ.ಅನುಬವಿಸಿದ ಅಲ್ಪ ಸಂತೋಷದ ಬಗ್ಗೆ ಯೋಚಿಸಿದರೆ ಕಣ್ಣು ಮಂಜಾಗುತ್ತದೆ.ಬೆಂಗಳೂರಿನಲ್ಲಿದ್ದಾಗ ಯಾವುದು ಇರಲಿಲ್ಲಯೋ ಇಲ್ಲಿ ಎಲ್ಲಯೂ ಇದೆ ಅಲ್ಲಿ ಸಂಪಾದಿಸಿದ ಯಾವುದೂ ಇಲ್ಲಿ ಇಲ್ಲ.ಅದಕ್ಕೇ ಎನಿತು ಬಲವಿರಲು ಇನ್ನೆನಿತು ಸಂಪದವಿರಲು………. ಎನ್ನುವ ಈ ಸಾಲಿಗಳು ನೆನಪಾದವು.
ಬಿಟ್ಟೆ ರಾಜ್ಯವ,ಕೊಟ್ಟೆ ಕೋಶವ ಎಂಬಂತೆ ಮನೆಯವರನ್ನ, ಬಿಟ್ಟು ಯಕ್ಷಗಾನ ನೋಡದೆ,ಸ್ನೆಹಿತರನ್ನು ಅನ್ಯಮನಸ್ಕನಾಗಿ ಅಗಲಿ
ಇಲ್ಲಿ ಬಂದು ಒಂಟಿಬಡುಕ ಜೀವನ ನಡೆಸುವ ಅನಿವಾರ್ಯತೆ ಇದೆಯೆ ಇದು ರಾತ್ರಿ ನಿದ್ತ್ರೆ ಬಾರದಿದ್ದಾಗಿನ ಪ್ರಶ್ನೆ!
ಆ ಕಾರು,ರಸ್ತೆ, ಇಲ್ಲಿನ ಜೀವನ ಶೈಲಿ ದುಡಿಮೆಗೆ ತಕ್ಕ ಸಂಬಳ ಶಿಸ್ತಿನ ಜೀವನ ನೋಡುವಾಗ ಭಾರತ ದಲ್ಲಿ ನನ್ನಂತಹ P U C ಗ್ರ್ಯಾಜುಎಟ್ಗೆ ಇದೆಲ್ಲ ಎಲ್ಲಿ ಎಂಬ ಪ್ರಶ್ನೆ!
ನಾನು ಯಾವಾಗಲೂ ಹೇಳುತ್ತಿದ್ದೆ ಗಾದೆಗಳನ್ನು ನನ್ನನ್ನ್ನು ನೋಡಿಯೆ ಕಟ್ಟಿದ್ದಾರೆ ಎಂದು ಅದು ಇನ್ನೊಮ್ಮೆ ನಿದರ್ಶನಕ್ಕೆ ಬಂತು. “ಹಲ್ಲಿದ್ದರೆ ಕಡಲೆ ಇಲ್ಲ!ಕಡಲೆ ಇದ್ದರೆ ಹಲ್ಲಿಲ್ಲ” ಆದರೆ ಮರುಕ್ಶಣವೇ ನೆನಪಾಗುವುದು ”ಖುಚ್ ಪಾನೇ ಕೆ ಲಿಯೆ ಖುಚ್ ಖೊನ ಹೈ ಎನ್ನುವ ಈ ಹಿಂದಿ ಸಾಲು. ಒಟ್ಟಿನಲ್ಲಿ ಕಳೆದು ಕೊಂಡಿದ್ದನ್ನು ನೆನಪಿಸಿಕೊಳ್ಳುವ ಸಮಯಕ್ಕಿಂತ ಸಂತೂಷ ಅನುಬವಿಸುವ ಸಮಯ ಹೆಚ್ಚು ಎನ್ನುವುದೊಂದೇ ಸಮಾದಾನ……………………...
Comments
"ಇರುವುದೆಲ್ಲವ ಬಿಟ್ಟು...
ಈರುದುದರೆಡೆಗೆ ತುಡಿವುದೆ ಜೀವನ...."
ನಾನು ಮಾಡ್ತಿರೋದು ಅದನ್ನೇ....!!
ಚೆನ್ನಾಗಿದೆ.. ಬರಹಯಜ್ಞ ಹೀಗೆಯೇ ಮುಂದುವರೆಯಲಿ....
"iddudellava bittu irdudaredege tudivude jeevanaa"
iddudaralle kushipaduvude nijavada baalina artaa..
"iddudellava bittu irdudaredege tudivude jeevanaa"
iddudaralle kushipaduvude nijavada baalina artaa..
Ene hadaru namma BHARATHA is great Maralu gaadina jeevana neera melina gulle thara..
ಶುಕ್ರಾನ್ ಮಹೇಶ್ ಸಾಹೇಬ್ರೆ.