ನಂಬಕೂಡದ ಸತ್ಯಕಥೆ.
"ಒಂದಾನೊಂದು ಕಾಲದಲ್ಲಿ ಒಂದಾನೊಂದು ಊರಿನಲ್ಲಿ" ಇದು ನಾ ಕೇಳಿದ ಕಥೆಗಳೆಂಬ ಕಥೆಗಳ ಪ್ರಾರಂಭ. ಕಥೆ ಕೇಳಿದ್ದೇನೆ, ಕಥೆ ಹೇಳಿದ್ದೇನೆ, ಕಥೆ ಕಟ್ಟಿದ್ದೇನೆ, ಆದರೆ ಕಥೆ ಬರೆಯುವ ಸಾಹಸ ಮಾಡಿರಲಿಲ್ಲ ಅದೊಂದು ಆಗಿ ಹೋಗಲಿ ಎಂದು ಶುರು ಮಾಡಿದ್ದೇನೆ. "ದಾರಿಯಲ್ಲಿ ಹೋಗುವವರು ಬೈದರೆ ನಿನಗೆ ಬುದ್ದಿ ಬರುತ್ತದೆ" ನಮ್ಮ ಸೂರಜ್ಜನ ಮಾತಿನಂತೆ ನೀ ಬರೆದಿದ್ದು ಸಾಕು ಮಾರಾಯ ನಿಲ್ಲಿಸು ಎಂದು ಬೆರೆಯವರು ಹೇಳುವ ವರೆಗೂ ಬರವಣಿಗೆ ಮುಂದುವರೆಸುವ ಸಂಕಲ್ಪ ಮಾಡಿದ್ದೇನೆ. ರಾತ್ರಿಯ 10-30ರ ಸಮಯ ತಲೆಯ ಮೇಲೆ ಕೆಂಪು ದೀಪವನ್ನಿಟ್ಟು ಕೊಂಡು ಮಲ್ಯ ಆಸ್ಪತ್ರೆಯ ಅಂಬ್ಯುಲೆನ್ಸ್ ಪುಣೆ ಹೈವೆ ಯಲ್ಲಿ ಚಿತ್ರದುರ್ಗ ಮಾರ್ಗವಾಗಿ ಹೋಗುತ್ತಿತ್ತು. ಡ್ರೈವರ್ ಆನಂದ ಸತತ ವಾಗಿ ಅಳುತ್ತಿದ್ದ ಸಂತೂವನ್ನು ಸಮಾದಾನಪಡಿಸಲು ಹೆಣಗಾಡಿ ಸೋತಿದ್ದ. ಪಿತೃವಿಯೊಗ ಎಂದರೆ ಕೆಲವರಿಗೆ ಹಾಗೆಯೇ ಒಂದುದಿನದಲ್ಲಿ ಅತ್ತೂ ಕರೆದು ಕಾಲಿ ಆಗುವುದಲ್ಲ ಅದರಲ್ಲಿಯೂ ಸಂತೂ ಉರೂಫ್ ಸಂತೋಷನಿಗೆ ತಂದೆಯನ್ನ ಬಿಟ್ಟು ಬದುಕುವ ಸ್ವಪ್ನ ಕಾಣುವುದೂ ಸಾದ್ಯವಾಗಿರಲಿಲ್ಲ. ಕೇವಲ 16 ಮಳೆಗಾಲ ಕಳೆದ ಅವನಾದರೂ ಎರಡು ದಿನಗಳಿಂದ ಅತ್ತೂ, ಅತ್ತೂ ಕಣ್ಣೀರು ತಾತ್ಕಾಲಿಕ ವಾಗಿ ಬತ್ತಿ ಹೋಗಿತ್ತು ಮನಸ್ಸು ತುಂಬ ಊಟಮಾಡಿ ಎಷ್ಟು ದಿನವಾಗಿತ್ತೋ ದೇವರೇಬಲ್ಲ ಸ್ವರ ಬಿಚ್ಚಿ ಅಳುವ ಚೈತನ್ಯವನ್ನೂ ಕಳಕೊಂಡಿದ್ದ. ನಮಗಾಗಿ ಎಷ್ಟು ದಿನ ಬರೇ ನೀರು ಕುಡಿದು ದಿನವನ್ನ ಮುಗಿಸಿದ ಬಾಬಾ (ಅಪ್ಪ)ನನ್ನ ಉ...