ತಮಸೋಮಾ ಜ್ಯೋತಿರ್ಗಮಯ
ರಾತ್ರಿ ಊಟ ಮಾಡುತ್ತಿದ್ದಾಗ ಈ ಬ್ಲೊಗಿನ ಮೊಳಕೆ ಒಡೆಯತೊಡಗಿತು ಸ್ವತಃ ಮಾಡಿದ ಅಡುಗೆ ಬ್ಲೊಗಿನ ಹುರುಳಾಯಿತು.ಹಸಿವು ಎನ್ನುವುದು ಮನುಷ್ಯನನ್ನು ಎಷ್ಟು ಕೆಳಮಟ್ಟಕ್ಕೆ ಕೊಂಡೊಯ್ಯುತ್ತದೆ ನೋಡಿ,ಅಮ್ಮ ಆರೂಗ್ಯ ಸರಿ ಇಲ್ಲದೆ ಹಾಸಿಗೆ ಹಿಡಿದಾಗ ಕೂಡ ಅಡಿಗೆ ಮಾಡಿದವನಲ್ಲ ನಾನು. ಈಗ ಅಡಿಗೆ ಮನೆಯಲ್ಲಿ ಸಂಜೆ ನಮ್ಮ "ಹಾಸ್ಯಾಸ್ಪದ ಪಾಕೋತ್ಸವ".(ಗತ್ಯಂತರವಿಲ್ಲದೇ ಅಲ್ಲ) ಮನೆಇಂದ ಹೊರಬಿದ್ದರೆ ಪ್ರಪಂಚದ ಎಲ್ಲ ಪ್ರದೇಶಗಳ ಖಾದ್ಯ ಸಿಗುತ್ತದಾದರೂ ಮನೆ ಅಡುಗೆಯ ರುಚಿ ಅಲ್ಲೆಲ್ಲಿ? ನಿನ್ನೆ ಮಾಡಿದ ಬೀಟ್ರೂಟ್ ಪಲ್ಯ ದೊಡ್ಡಮ್ಮನ ಕೈಅಡುಗೆಯಷ್ಟೇ ರುಚಿಯಾಗಿಬಿಟ್ಟಿತ್ತು(by mistake!).ಸ್ವಲ್ಪ ಉಳಿದದ್ದು ದಂಡ ಆಗುತ್ತದೆ ಎಂದು ಅದನ್ನ ಖಾಲಿ ಮಾಡಿ ಮಾಡಿ ಹೀಗೆ ದಪ್ಪಾಗಿದ್ದೀಯ ಎಂದು ಅಮ್ಮನನ್ನ ರೇಗಿಸುತ್ತಿದ್ದೆ ಆದರೆ ಕಾಲಚಕ್ರ ತಿರುಗಲು ಬಹಳ ಸಮಯ ಹಿಡಿಯಲೇ ಇಲ್ಲ ಎನ್ನುವುದಕ್ಕೆ ನನ್ನ ಕೈಗಡಿಯಾರ ಬಿಗಿಯಾದದ್ದೇ ಸಾಕ್ಷಿ. ಅಬ್ಬ! ತಕ್ಕಮಟ್ಟಿಗೆ ಅಡುಗೆ ಮಾಡಲು ಕಲಿತಾಯಿತು,ಬಟ್ಟೆ ತೊಳೆಯುವುದು ಅಬ್ಯಾಸವಾಗಿದೆ,ಇನ್ನು ಮದುವೆ ಆದರೂ ಬದುಕಬಹುದು ಎಂಬ ದೈರ್ಯ ಬಂದಿದೆ. ಅಂದ ಹಾಗೇ ನಾಳೆ ದೊಡ್ಡಬ್ಬ ಹೊಸಬಾಳೆಯಲ್ಲಿ ನನ್ನ ಪಾರ ಕಾಯುವ ಹುಡುಗರಿಗೆ ಈ ವರ್ಷ ನಿರಾಸೆ ಖಂಡಿತ. ಪ್ರತಿವರ್ಷದಂತೆ ಮಧ್ಯಾಹ್ನದ ಊಟವಾದ ಕೂಡಲೆ ಗುರಿಗಾಯಿ ಒಡೆಯುವವರಿಗೆ ಅಡಿಕೆ ಕಂಬ,ಗುರಿಗಾಯಿ ಗುಂಡು,ಮೆಟ್ಟಿನ ಅಳತೆ, ಹಣಕಾಸಿನ ಲೆಕ್ಕಾಚಾರದ ವ್ಯವಸ್ತೆ ಮಾಡಿಕೊಟ್ಟು ನಮ್ಮ ಮೂ...