Posts

Showing posts from January, 2010

ಹುಟ್ಟುಹಬ್ಬದ ಶುಭಾಷಯ

ನನ್ನ ಮೊದಲ ಬ್ಲೋಗ್ ಓದಿ "ನಾನೂ ಖತಾರ್ನಲ್ಲಿ ನಾಲ್ಕು ವರ್ಷ ಇದ್ದೆ"ಎಂದು ತಮ್ಮನ್ನು ಪರಿಚಯಿಸಿಕೊಂಡ ಪ್ರಕಾಶ ಹೆಗಡೆ ಎಂಬ ಅಪರಿಚಿತ ಕೇವಲ ಒಂದು ವರ್ಷದಲ್ಲಿ ನನ್ನ ಎಲ್ಲ ಕೆಲಸಗಳಲ್ಲಿ ಬೆನ್ನು ತಟ್ಟುವ ಅಣ್ಣನಾದ, ಹಿತವಾದ ಹಾಸ್ಯದಿಂದ ಕಾಲೆಳೆಯುವ ಸ್ನೇಹಿತನಾದ, ಬಾವನೆಗಳಿಗೆ ಸ್ಪಂದಿಸುವ ಆತ್ಮೀಯನಾದ, ಹಾಗು ನನ್ನ ಹಲವಾರು ಬರಹಗಳಿಗೆ ಸ್ಪೂರ್ತಿಯಾದ. ವೃತ್ತಿಯಲ್ಲಿ ಸಿವಿಲ್ ಕಾಂಟ್ರಾಕ್ಟರ್ ಆದ ಪ್ರಕಾಶಣ್ಣ ಒಬ್ಬ ಉತ್ತಮ ಚಾಯಾಗ್ರಾಹಕ, ಬರಹಗಾರ ಹೀಗೆ ಹಲಾವಾರು ಪ್ರವೃತ್ತಿ ಗಳನ್ನ ಮೈಗೋಡಿಸಿಕೊಂಡ ಒಬ್ಬ ನನಗಿಂತ ಹಿರಿಯ ಸ್ನೇಹಿತನ್ನ ಪಡೆದ ಬಗ್ಗೆ ನನಗೆ ನಿಜವಾದ ಹೆಮ್ಮೆ ಇದೆ. ಇವತ್ತು ಪ್ರಕಾಶಣ್ಣನ 19 ನೆಯ ಹ್ಯಾಪಿ ಬರ್ಥಡೇ. ಬ್ಲಾಗ್ ನಲ್ಲಿ ಮೊದಲ ಪರಿಚಯವಾದ ಪ್ರಕಾಶಣ್ಣನಿಗೆ ಬ್ಲಾಗ್ ನ ಮೂಲಕವೇ ಹುಟ್ಟುಹಬ್ಬದ ಶುಭಾಷಯಗಳನ್ನ ತಿಳಿಸುವ ಯೋಚನೆ ಮಾಡಿದ್ದೇನೆ. ಕುಟುಂಬದೊಟ್ಟಿಗೆ ಸುಖ ಸಂತೋಷದಿಂದ ನೂರುಕಾಲ ಬಾಳಿ ಸಾವಿರಾರು ಉತ್ತಮ ಬ್ಲಾಗುಗಳನ್ನು ಬರೆಯುವಂತಾಗಲಿ ಎಂದು ಎಲ್ಲ ಬ್ಲಾಗ್ ಮಿತ್ರರ ಪರವಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಜ ನ್ಮ ದಿ ನ ದ ಶು ಭಾ ಷ ಯ ಗ ಳು ಪ್ರ ಕಾ ಶ ಣ್ಣ.

ಎಸ್ ಎಮ್ ಎಸ್ ಮಾಡಿದ ಅವಾಂತರ

ಇದು ಹರೀಶ್ ಆಡೂರರ ಈ ಕನಸು.ಕಾಮ್ ನಲ್ಲಿ ಪ್ರಕಟವಾದ ನನ್ನ ಮೊದಲ ಬರಹ ಅದನ್ನ ಇಲ್ಲಿ ಮತ್ತೆ ಪ್ರಕಟಿಸಿದ್ದೇನೆ. "Hay I am Sreekanth, am doing ma 5th sem of BE in Malnad eng clg Hasan, may I know about you? can we be friends?" ಸರಿಸುಮಾರು 5 ವರ್ಷಗಳ ಕೆಳಗೆ ಒಂದು sms ಬಂತು ಮೊಬೈಲ್ ಎಸ್ ಎಮ್ ಎಸ್ ಗಳ ಉಛ್ರಾಯ ಸ್ತಿತಿಯ ಕಾಲ ಆಗ SMS ಗಳಿಂದ ಹುಡುಗಿಯರಿಗೆ ಕಾಳು ಹಾಕುವವರು,ತಮ್ಮ ಬ್ಯುಸಿನೆಸ್ ನೆಟ್ ವರ್ಕ್ ಬೆಳೆಸುವವರು,ಸ್ನೇಹಿತರು,ನಮ್ಮಂತಹ ತರ್ಲೆಗಳು ದಿನದ ಹಲವಾರು ಘಂಟೆ ಗಳನ್ನ ತಮ್ಮ ಹೆಬ್ಬೆರಳು ಊದಿಸಿಕೊಳ್ಲಲು ಶ್ರಮಿಸುತ್ತಿದ್ದರು. ಯಾರೋ ಕಳಿಸಿದ ಫಾರ್ವರ್ಡೆಡ್ ಮೆಸೆಜನ್ನ ನಮ್ಮವರಿಗೆ ಕಳಿಸಿ ಸ್ಕೋಪ್ ತೆಗೆದು ಕೊಳ್ಳುತ್ತಿದ್ದೆವು ಆದರೆ ನನಗೆ ಮೆಸೆಜಿಂಗ್ ಎಂದರೆ ಸ್ವಲ್ಪ ಅಲರ್ಜಿ ಇತ್ತು ಬಿಲ್ ಕಂಪನಿ ಕಟ್ಟುತ್ತಿದ್ದದ್ದರಿಂದ ಕಾಲ್ ಮಾಡಿ ಬಿಡುತ್ತಿದ್ದೆ.ಇಂತಹ ನೂರಾರು ಮೆಸೆಜುಗಳನ್ನ ನೋಡದೆಯೇ ಅಳಿಸಿ ಹಾಕುತ್ತಿದ್ದೆ. ಅವತ್ತು ರಾತ್ರಿ ಮಲಗಿ ನಿದ್ರೆ ಬಾರದೆ ಉರುಳುತ್ತಿದ್ದಾಗ ಮೆಸೆಜ್ ಕಳಿಸಿದ ಶ್ರೀಕಾಂತ ನನಗೆ ಹಣೆಯಲ್ಲಿ ಉದ್ದ ನಾಮ,ಕುತ್ತಿಗೆಯಲ್ಲಿ ಕಾಕಡಾ ಹೂವಿನ ಹಾರ ಹಾಕಿಸಿಕೊಂಡು ಕತ್ತಿ ಹಿಡಿದ ಕರಿ ದಡಿಯನ ಪಕ್ಕ ನಿಂತ ಬಖರಾ ನಂತೆ ಕಂಡ. ಅವನ್ನನ್ನ ಸ್ವಲ್ಪ ಆಟ ಆಡಿಸುವ ಆಲೋಚನೆ ಮಾಡಿದೆ. "hey Am Sruti E&C engineer working for Honeywell nice talking to y...