Posts

Showing posts from March, 2009

"ಆಟ ಆಟ ಒಂದೇ ಒಂದು ಆಟ"

ಸಂಜೆ ಆಫೀಸಿನಿಂದ ಹೊರಡುವಾಗ ವಿಪರೀತ ಗಾಳಿ ಎದ್ದಿತ್ತು ಮರಳು ಗಾಡಿನ ಗಾಳಿಯ ಪುರ್ಣ ಪರಿಚಯವಿದ್ದ ಮನೇಜರ್ ಸ್ವಲ್ಪ ಹೊತ್ತು ಕಾದು ಗಾಳಿ ನಿಂತ ಮೇಲೆ ಹೋಗು ಎಂದರೂ ಕೇಳದೆ ನಾ ಕಾಣದ ಗಾಳಿ ಯಾವುದು ಎಂದು ಮನಸ್ಸಿನಲ್ಲೇ ಹೇಳಿಕೊಳ್ಳುತ್ತಾ ಹೊರಟೆ ಸ್ವಲ್ಪ ದೂರ ಬರುವಷ್ಟರ ಹೊತ್ತಿಗೆ ಗಾಳಿಯ ಪ್ರಭಾವ ಸ್ವಲ್ಪ ತಿಳಿದಿತ್ತು ಆದರೂ ಬಿಸಿರಕ್ತ ಪ್ರವಾಹದ ವಿರುದ್ದ ಈಜುವ ಹುಮ್ಮಸ್ಸು,ಹುಂಬತನ ಕಾರಿನ ತೇಲಾಟವನ್ನೂ ಎಂಜಾಯ್ ಮಾಡುತ್ತ CD ಯಲ್ಲಿ ಕಾಳಿಂಗ ನಾವಡರ ಭಸ್ಮಾಸುರ ಮೋಹಿನಿ ಪದ್ಯ ಕೇಳುತ್ತಾ ಮುಂದುವರೆದೆ. ಒಂದು ಮೈಲಿಯ ದಾರಿಯ ನಂತರ ಸೂಪರ್ ಹೈವೇ ಸಿಕ್ಕಿತ್ತು ಎಂದಿನಂತೆ ಕಾರನ್ನ ಸ್ಪೋರ್ಟ್ಸ್ ಮೋಡಿಗೆ ಹಾಕಿ ಮೂರನೇ ಗಿಯರ್ ದಾಟದಂತೆ ಮಾಡಿಕೊಂಡು ಓಡೋಮೀಟರ್ 115 ರಲ್ಲಿ ನೆಲೆಗೊಳಿಸಿ ರಾಲ್ಫ್ ಶೂಮೇಕರ್ ನ ಮುಕಭಾವದಲ್ಲಿ ಮುಂದುವರೆದಿದ್ದೆ ಲಾಲಿಸು ದೇವರ ದೇವಾ ಸಂಜೀವ| ಪಾಲ ಲೋಚನ ರುಂಡ ಮಾಲ ಮಹದೇವ|| ನಾವಡರ ಕಪ್ಪು ಮೂರರ ಶೃತಿಯ ಪದ್ಯಕ್ಕೆ ನನ್ನ ಬೆರಳು ಸ್ಟಿಯರಿಂಗ್ ಮೇಲೆ ತಾಳ ಹಾಕಿತ್ತಿತ್ತು ನಾವಡರ ಪದ್ಯದ ಮುಕ್ತಾಯ ಮುರಿಯುವ ಕ್ರಮ ನನಗೆ ಇವತ್ತಿಗೂ ನುಂಗದ ತುತ್ತಾಗಿ ಕಾಡುತ್ತಿತ್ತು.ಕೋರೆತಾಳದ ಮುಕ್ತಾಯ ಮುರಿವುವುದನ್ನೇ ಕಾದು ತಾಳ ಹಾಕಿ ಮುಗಿಸುವ ಸಲುವಾಗಿ ಗಮನ ಆಕಡೆ ಕೊಟ್ಟಿದ್ದೆ ಬಂದ ಬಲ ಬದಿಯ ಸಣ್ಣ ತಿರುವು ಗಮನಿಸಲೇ ಇಲ್ಲ 110 km/h ಕಾರು ಬಲತಿರುವಿನಲ್ಲಿ ಆಯತಪ್ಪಿ ಪಲ್ಟಿಯಾಯಿತು ಪಕ್ಕದಲ್ಲಿದ್ದ 24 ಚಕ್ರದ ದೈತ್ಯ ಟ್ರಕ್ಕಿನ ಕೆ...