ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ ! :)
ಒಂದು ವಾರದಲ್ಲಿ ರಜೆಯ ಮೇಲೆ ಊರಿಗೆ ಹೋಗುವ ಕಾರ್ಯಕ್ರಮ ಇರುವುದರಿಂದ ಬೇಗ ಆಫೀಸಿಗೆ ಹೋಗುವ ಸಲುವಾಗಿ ಬೆಳಿಗ್ಗೆ 4-30 ಕ್ಕೆ ಎದ್ದು ಇವತ್ತಿನ ಮೈಲ್ಸನ್ನೆಲ್ಲಾ draft ಮಾಡಿಡುತ್ತಿದ್ದೆ ಅಷ್ಟರಲ್ಲಿ ಥೈಲೆಂಡಿನಲ್ಲಿರುವ ಮಾವನ ಮಗ ಪ್ರದೀಪ ಒಂದು forwarded mail ಕಳಿಸಿದ ಓದುತ್ತಾ ಹೋದಂತೆ ಭಯಂಕರ ಮಜ ಬಂತು (ಈ ಕಾಲಘಟ್ಟ ದಲ್ಲಿ ನಿನಗೆ ಈ ಮೈಲ್ ಹಿಡಿಸಿದ್ಯಾಕೆ ಅಂತ ಕೇಳಬೇಡಿ). ಇದು ಕೃತಿಚೌರ್ಯ ಖಂಡಿತಾ ಅಲ್ಲ ಚಂದವಾದದ್ದನ್ನ ಬ್ಲೋಗ್ ಮಿತ್ರರೊಡನೆ ಹಂಚಿಕೊಳ್ಳುವ ಸಲುವಾಗಿ ನನಗೆ ಮೈಲ್ ಕಳಿಸಿದ ಪ್ರದೀಪನ ಅನುಮತಿ ಪಡೆದು forwarded mail ನಿಂದ copy paste ಮಾಡಿದ್ದು, ಇದರ ಮೂಲ ಬರಹಗಾರ ಯಾವುದಾದರೂ ಬ್ಲೋಗ್ ನಲ್ಲಿ, ಮಾದ್ಯಮದಲ್ಲಿ ಹಾಕಿ ನೀವು ಓದಿದ್ದರೆ ಸಮಯಹಾಳು ಮಾಡೀದ್ದಕ್ಕೆ ನನ್ನನ್ನ ಬೈಯಬೇಡಿ. ಮೂಲ ಬರಹಗಾರರದ್ದೇನಾದರೂ ತಕರಾರಿದ್ದರೆ ದಯವಿಟ್ಟು ತಿಳಿಸಿ ಇಲ್ಲಿಂದ ಅಳಿಸಲಾಗುತ್ತದೆ. ನಮ್ಮ ವಾರಗೆಯ ಹುಡುಗರಿಗೆ ಇದೊಂಥರಾ ಸಂಕ್ರಮಣದ ಕಾಲ . ಸಂಕಷ್ಟದ ಕಾಲ ಅಂತಲೂ ಹೇಳಬಹುದು . ವೃಶ್ಚಿಕ ರಾಶಿಗೆ ಚಂದ್ರನ ಪ್ರವೇಶವಾಗಿದೆ . ಶುಕ್ರ ಆರನೇ ಮನೆಯಿಂದ ಏಳನೇ ಮನೆಗೆ ಕಾಲಿಡುತ್ತಿದ್ದಾನೆ . ಅತ್ತ ಶನಿಯೂ ಏಳನೇ ಮನೆಗೇ ದಾಟಲಾಗುತ್ತದಾ ನೋಡುತ್ತಿದ್ದಾನೆ . ರಾಹು ಕೇತುಗಳು ಯಾವಾಗ ಯಾರನ್ನು ಯಾವ ಮನೆಯಲ್ಲಿ ಆಕ್ರಮಿಸುವುದು ಎಂದು ಹೊಂಚುಹಾಕುತ್ತಿವೆ . ಒಟ್ಟಾರೆ ಹೇಳಬೇಕೆಂದರೆ ’ ಟೈಮ್ ಬಂದಿದೆ ’. ಹ್ಮ್ .. ಹೌದು ...