Posts

Showing posts from December, 2009

ಮತ್ತೆ ಬಂದೆ ತಮಾಷೆ ಮಾಡಲು.

ಸುಮಾರು ಎರಡು ತಿಂಗಳುಗಳಿಂದ ಬ್ಲಾಗ್ ಲೋಕದಕಡೆ ಬರಲೇ ಆಗುತ್ತಿರಲಿಲ್ಲ. ಅಫೀಸಿನಲ್ಲಿ ಸ್ವಲ್ಪ ಕೆಲಸದ ಒತ್ತಡ,ಮದುವೆಯ ತಯಾರಿ, ಮದ್ಯದಲ್ಲಿ ಒಂದುವಾರದ ಬೆಂಗಳೂರು ಪ್ರವಾಸ, ಹೀಗೆ ಹಲವಾರು ಕಾರಣಗಳಿಂದ ಮನಸ್ಸು ಹೇಳಿದಲ್ಲಿ ನಿಲ್ಲುತ್ತಿರಲಿಲ್ಲ, ಬೇಡವೆಂದಲ್ಲಿ ಹೋಗದೆ ಇರುತ್ತಿರಲಿಲ್ಲ. ವರ್ತಮಾನದ ಉದಾಹರಣೆ ಕೊಡುವುದಾದರೆ Task manager ಕೂಡ not responding ಆದಂತಾಗಿತ್ತು. ಹೊಸ ಬ್ಲಾಗ್ ಬರೆಯುವುದು ಹಾಗಿರಲಿ ಅಪ್ಡೇಟ್ ಆದ ಬ್ಲಾಗ್ಗಳನ್ನ ಓದಿ ಪ್ರತಿಕ್ರಿಯಿಸಲೂ ಆಗದ ಸ್ತಿತಿಯಲ್ಲಿದ್ದೆ. ಈತನ್ಮದ್ಯೆ ನಮ್ಮ ಇಟ್ಟಿಗೆ ಸಿಮೆಂಟು ಪ್ರಕಾಶಣ್ಣ ಹಾಗು ಛಾಯಾ ಕನ್ನಡಿ ಶಿವು ಸರ್ ರ ಪುಸ್ತಕ ಬಿಡುಗಡೆ ಕೂಡಾ ಆಯಿತು ಅವರಿಗೆ ಅಭಿನಂದನೆ ಹೇಳುವ ಸೌಜನ್ಯಕ್ಕೂ ಕೊರತೆ ಯಾಗಿ ಬಿಟ್ಟಿತ್ತು. ಅದರ ಜೊತೆ ಯಕ್ಷಗಾನದಲ್ಲಿ ನಾನು ಅರಾಧಿಸುವ ಮೇರು ಕಲಾವಿದ ಕೆರೆಮನೆ ಮಹಾಬಲ ಹೆಗಡೆ ಯವರು ದಿವಂಗತರಾದರು ಅವರಿಗೆ ಎರಡು ಸಾಲಿನ ಶ್ರದ್ದಾಂಜಲಿ ಬರೆಯಲೂ ಆಗದ ಸ್ತಿತಿಯಾಗಿ ಬಿಟ್ಟಿತ್ತು. ಸುಮಾರು ಒಂದು ವರ್ಷದಿಂದ ಬ್ಲಾಗಿಗರ ಸಮುದ್ರದ ಒಂದು ಹನಿಯಾಗಿ, ಬರವಣಿಗೆಯ ಲೋಕದಲ್ಲಿ ನನ್ನದೇ ಸಣ್ಣ ಬಳಗವನ್ನ ಸೃಷ್ಟಿಸಿ ಕೊಂಡಿದ್ದೆ ಆದರೆ ಒಮ್ಮೊಮ್ಮೆ ಯೋಚಿಸಿದರೆ ಇದೆಲ್ಲದರಿಂದ ದೂರವಾಗಿಬಿಡುವ ಆತಂಕ ಕಾಡತೊಡಗಿತ್ತು. ಎರಡು ತಿಂಗಳುಗಳಿಂದ ಜೀವನದಲ್ಲಾದ ಬದಲಾವಣೆಗಳು (ಅನ್ನುವುದಕ್ಕಿಂತ ಬೆಳವಣಿಗೆಗಳು ಎನ್ನುವುದೇ ಸರಿಯಾಗಬಹುದು.) ಇದಕ್ಕೆಲ್ಲಾ ಕಾರಣ ಇರಬಹುದು. ಆದರೆ ಕೆಲವು...