Posts

Showing posts from May, 2009

ಕಾಮನ್ ಸೆನ್ಸ್

ಒಂದು ಹುಡುಗಿ ಒಂದ್ ಸಲ ಅವಳ ಹಳ್ಳಿಗೆ ಹೋದ್ಲು.. ಆಗ ತಾನೆ ಪಿ ಯು ಸಿ ಮುಗಿದಿತ್ತು.. ಚಂದುಳ್ಳಿ ಚೆಲುವೆ ಬೇರೆ.. ಸಿಕ್ಕಪಟ್ಟೆ ಬಿನ್ನಾಣಗಿತ್ತಿ ಅಂದ್ಕೊಳ್ಳಿ.. ಹಳ್ಳೀಲಿ ಇವಳನ್ನ ನೋಡಿದ ಪಡ್ಡೆ ಹೈಕ್ಳೆಲ್ಲ ಎರಡು ನಿಮಿಷ ಕಣ್ಣು ಬಡೀಲಿಲ್ಲ.. ಇವಳ್ಗೋ ಖುಶೀನೋ ಖುಶಿ.. ಅಂಗಡಿಗೆ ಹೋದ್ಲು ತರಕಾರಿ ತರೋಕಂತ. ಅಂಗಡಿಯ ಹೆಂಗಸಿಗೆ ಒಂದು ಸಾಮಾನು ಹೇಳೋದು ಸೆಲ್ಲ್ ಫೋನ್ ನಲ್ಲಿ ಟೊಯ್ ಟೊಯ್ ಅಂತ ಎಸ್ ಎಮ್ ಎಸ್ ಮಾಡೋದು ಮತ್ತೆ ಅಂಗಡಿಯಾಕೆ ಕೇಳಿದಾಗ ತಲೆ ಎತ್ತಿ ಇನ್ನೊನ್ದ್ ಸಾಮಾನ್ ಹೆಸರು ಹೇಳೋದು.. ಹೀಗೆ ಐದು ನಿಮಿಷ ನಡೀತು.. ಕೊನೆಗೆ ಈ ಹುಡುಗಿ ಪ್ಲಾಸ್ಟಿಕ್ ಬ್ಯಾಗ್ನಲ್ಲಿದ್ದ ಸಾಮಾನೆಲ್ಲವನ್ನ ತಾನು ತಂದಿದ್ದ ಬ್ಯಾಗಿಗೆ ಹಾಕ್ಕೊಂಡು "ದುಡ್ಡು ಎಷ್ಟಾಯ್ತು" ಅಂತ ಕೇಳಿದ್ಲು.. ಅಂಗಡಿಯವ್ಳು: "ಎಪ್ಪತ್ತು ರೂಪಾಯಿ." ಹುಡುಗಿ ನೂರು ರೂಪಾಯಿ ಕೊಟ್ಳು.. ಅಂಗಡಿಯವ್ಳು: ಏನವ್ವ ನೀವು ದೊಡ್ಡ ಪಟ್ಟಣದವ್ರು ಅನ್ಸತ್ತೆ.. ತುಂಬಾ ಓದಿದೀರ ಅನ್ಸತ್ತೆ! ಹುಡುಗಿಗೆ ಖುಶಿ. ನನ್ ಬಟ್ಟೆ, ಸೆಲ್ಫೋನ್, ಆಧುನಿಕತೆ ನೋಡಿ ಈ ಹೆಂಗಸು ಹೀಗೆ ಹೇಳ್ತಾ ಇದಾಳೆ ಅನ್ಕೊಡ್ಳು. ಸರಿ ಹುಡುಗಿ ಕೇಳಿದ್ಲು "ಹೌದು ನಿನಗೆ ಹೇಗೆ ಗೊತ್ತಾಯ್ತು?" ಅಂಗಡಿಯವ್ಳು: "ಅಲ್ಲ ಈರುಳ್ಳಿ, ಆಲುಗೆಡ್ಡೆ, ಬೇಳೆ , ಸಕ್ಕರೆ ಎಲ್ಲ ಸಾಮನು ತಗೊಂಡು.. ಟೊಮಾಟೊನ ಮೊದಲು ಬ್ಯಾಗ್ ಒಳಗಡೆ ಹಾಕ್ಕಂಡ್ರಿ ನೋಡಿ ಆಗಲೆ ಗೊತ್ತಾಯ್ತು ಕಾಮನ್ ಸೆನ್ಸ್ ಇಲ್ಲ...