Posts

Showing posts with the label ಕನ್ನಡ ಭಾಷೆಗೆ 18 ಅರ್ಥ

ಅಣ್ಣ ತಮ್ಮ ಯಾಜ್ಜ್ಯ ತೆಕ್ಕುಂದ್ ಯಸ್ಟ್ರಾ ಬ್ಯಾರೆ ಆಗ್ಯಾರೆ

ಎರಡು ವರ್ಷ ಹಿಂದೆ ದೀಪಾವಳಿ ಹಬ್ಬಕ್ಕಾಗಿ ಊರಿಗೆ ಹೋಗಿದ್ದೆ, ಹಬ್ಬ ಮೂರು ದಿನ ಇರುವಾಗ ನನಗೆ ಸಾಗರಕ್ಕೆ ಹೋಗಬೇಕಾಗಿ ಬಂತು ಅವತ್ತು ಗುರುವಾರ ಸಾಗರದ ಸಂತೆ ಸಾಲದ್ದಕ್ಕೆ ಹಬ್ಬದ ಹಿಂದಿನ ಸಂತೆ ಆದ್ದರಿಂದ ಅದನ್ನ ಹಬ್ಸಂತೆ ಎಂದು ವಿಜೃಂಬಣೆಯಿಂದ ಆಚರಿಸುತ್ತಾರೆ. ನಮ್ಮ ಹಳ್ಳಿಯ ಮುಗ್ಧಜನರು ಹಬ್ಬಗಳನ್ನ ಆಚರಿಸುವ ಮಜವೇ ಬೇರೆ ಎಷ್ಟೇ ಕಷ್ಟ ಇರಲಿ, ಬತ್ತದ ಬೆಳೆ ಇಲ್ಲದಿರಲಿ,ಅತಿವೃಷ್ಟಿ,ಅನಾವೃಷ್ಟಿ,ಭೂಕಂಪ,ಸಾಂಕ್ರಾಮಿಕರೋಗ ಏನೇ ಇರಲಿ ಹಳ್ಳಿಗರು ಹಬ್ಬ ಆಚರಿಸದೇ ಇರುವುದಿಲ್ಲ. ಯಾವ ರಿಸಿಷನ್ನೂ ಇವರ ಹಬ್ಬವನ್ನ ತಡೆಯುವುದಿಲ್ಲ. ಪೇಟೆಯವರಷ್ಟು ಖರ್ಚುಮಾಡದಿದ್ದರೂ ಅವರ ಮಟ್ಟಿಗೆ ಸಂಭ್ರಮದಿಂದಲೇ ಆಚರಿಸುತ್ತಾರೆ.ಮಜದ ಸಂಗತಿಯೆಂದರೆ ಅವರು ಹಬ್ಬಕ್ಕಿಂತ ಹಬ್ಬದ ಹಿಂದುಮುಂದಿನ ಕಾರ್ಯಕ್ರಮಗಳು, ಹಬ್ಬದ ಹಿಂದಿನ ವಾರ ಎಲ್ಲಿ ಸಂತೆ ಆದರೂ ಹೋಗಿಬರುವುದು, ಹಬ್ಬ ಆದಮೇಲೆ ವಾರಗಟ್ಟಲೇ ಕೆಲಸಕ್ಕೆ ರಜಾ ಮಾಡಿ ಸಿನಿಮಾ ನೋಡುವುದು,ತಿರುಗಾಡುವುದು ಹೀಗೆ ಜೀವನವನ್ನ ಪೂರ್ಣಪ್ರಮಾಣದಲ್ಲಿ ಅನುಭವಿಸುವವರು ಅವರೇ ಅನಿಸುತ್ತದೆ. ನನಗೆ ಎಲ್ಲಾಕ್ಕಿಂತ ಹಿಡಿಸುವುದು ಅವರ ಭಾಷೆ,ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿ ಯ ಭಾಷೆ ನನ್ನನ್ನ ಮೊದಲು ಸೆಳೆಯುತ್ತದೆ. ತಕ್ಕಮಟ್ಟಿಗೆ ಅದನ್ನ ಕಲಿಯುವ ಪ್ರಯತ್ನ ಕೂಡಾ ಮಾಡುತ್ತೇನೆ. ಹೀಗೆ ಸಾಗರಕ್ಕೆ ಹೊಗುವ ಬಸ್ಸು ಹತ್ತಿದೆ ಆಗಲೇ ಸುಮಾರು ನೂರುಜನ ಬಸ್ಸಿನಲ್ಲಿ ನಿಂತಿದ್ದರು ನನಗೆ ಕುಳಿತುಕೊಳ್ಳುವ ಅವಕಾಶ ಎಲ್ಲಿ ಎಂದು ತಿಳಿದು ಕಂ...

"ಅವ ದವಾಕಾನಿಗ್ ಹೋಗೂ ರಾಸ್ತಾದಾಗಾ ಸರಿ ಹೋದನ್ರೀ"

ಚಿತ್ರಕ್ಕರ ನಂ ಕನ್ನಡ ಬಾಸೆ -೨ ಬ್ಲೊಗ್ ಓದುತ್ತಾ ಇದ್ದಾಗ ನನಗೂ ಹಲವಾರು ತಮಾಷೆಯ ಪ್ರಸಂಗಗಳು ನೆನಪಾದವು ಚಿತ್ರಕ್ಕರಿಗೆ ಪರಿಕಲ್ಪನೆಯನ್ನ ಕದ್ದ ಅಪವಾದ ಹೊರಿಸಬೇಡಿ ಎಂದು ವಿನಂತಿಸಿ ಕಾಮೆಂಟ್ ಹಾಕಿ ನನ್ನ ಬೆರಳುಗಳ ಲಟಿಗೆ ತೆಗೆದು ಸಿದ್ದನಾದೆ. ಕನ್ನಡ ಒಂದೇ ಭಾಷೆಯಲ್ಲಿ ಪ್ರಾಂತ್ಯಗಳಿಗನುಗುಣವಾಗಿ ಬೇರೆ ಬೇರೆ ಅರ್ಥ ಕೊಡುತ್ತದೆ ಇಂತಹಾ ಹಲವಾರು ನಗೆ ಸನ್ನಿವೇಷಗಳು ನನ್ನ ನಿತ್ಯದ ಜೀವನದಲ್ಲಿ ನಡೆಯುತ್ತವೆ ಕೆಲವನ್ನ ಇಲ್ಲಿ ಬರೆಯುತ್ತಿದ್ದೇನೆ. ಸುಮಾರು ಹತ್ತು ವರ್ಷಗಳ ಹಿಂದೆ ನನ್ನ ಅಣ್ಣನ ಟ್ರಾನ್ಸ್ ಪೊರ್ಟ್ ವ್ಯವಹಾರವನ್ನ ನೋಡಿಕೊಳ್ಳಲೆಂದು ನಾನು ಗುಲ್ಬರ್ಗಾದಲ್ಲಿದ್ದೆ. ಅಲ್ಲಿ ಒಂದು ಫ್ಯಾಕ್ಟರಿಯಲ್ಲಿನ ಸರಕನ್ನ ಸಾಗಿಸುವ ಗುತ್ತಿಗೆ ಅಣ್ಣನದಾಗಿತ್ತು. ಮ್ಯಾನೆಜರ್ ಗಳು ಹಾಗು ಹೆಚ್ಚಿನ ಕೆಲಸಗಾರರು ಬೆಂಗಳೂರು ಹಾಗು ಮಡಕೇರಿಯವರಾಗಿದ್ದರಿಂದ ನನಗೂ ಪ್ಯಾಕ್ಟರಿಯಲ್ಲಿ ಕ್ವಾರ್ಟರ್ಸ್ ಹಾಗು ಮೆಸ್ ನ ಅನುಕೂಲ ಒದಗಿಸಿ ಕೊಟ್ಟಿದ್ದರು. ಅಲ್ಲಿ ನಮ್ಮ ಡ್ರೈವರ್ ಗಳು ಹಾಗು ಫ್ಯಾಕ್ಟರಿಯ ದಿನಗೂಲಿ ಕೆಲಸವರು ಸ್ಥಳೀಯರೆ ಇರುತ್ತಿದ್ದರು ಅವರ ಭಾಷೆಯನ್ನ ಬೆಂಗಳೂರಿನ ಹುಡುಗರು ಆಡಿಕೊಳ್ಳುತ್ತಿದ್ದರು.ಅವರು ಮಾತನಾಡುವ ಕನ್ನಡದಲ್ಲಿ ಮರಾಠಿ ತೆಲುಗು ಹಾಗು ಹಿಂದಿ ಶಬ್ಧಗಳ ಬಳಕೆ ಹೇರಳವಾಗಿತ್ತು ಮತ್ತೆ ಅರ್ಥ ಆದರೆ ಕೇಳಲು ಮಜವಾಗಿರುತ್ತಿತ್ತು. "ರಾಸ್ತಾಬಿ ಬಕ್ಕಳ್ ಕರಾಬ್ ಅದಾರೀ ಬ್ರೇಕ್ ಬೀ ಕಮ್ಜೋರ್ ಅದಾರೀ ಹಳ್ಳಗ್ ಹೋಬೆಕಾತದ್ರೀ"...

ಹೇಳೂಕಾತ್ತಿಲ್ಲೆ ಅನುಭವಿಸೂಕ್ ತೀರೂದಿಲ್ಲೆ

ಮದ್ಯಾಹ್ನ ಆಫೀಸಿನಿಂದ ಹೊರಟೆ ಕಾರ್ ಸ್ಟಾರ್ಟ್ ಮಾಡುವಷ್ಟರಲ್ಲಿ ನಮ್ಮ ಅಫೀಸ್ ಬಿಲ್ಡಿಂಗ್ ನ ಸೆಕ್ಯೂರಿಟಿ ಮುಕುಂದ ಓಡುತ್ತಾ ನನ್ನ ಕಾರಿನ ಹತ್ತಿರ ಬಂದ. "ಒಡಿಯ್ನೆ ಕಾರ್ನಿಷ್ ಕಡೆ ಹ್ವಾಪ್ದಾದ್ರೆ ನನ್ನ ಅಲ್ಲಿ ಬಿಡೂಕಾತ್ತಾ" ಕೇಳಿದ ಸರಿ ಬಾ ಅಂದೆ.ನಾನು ಡ್ರೋಪ್ ಕೊಡದಿದ್ದರೆ ಆ ಉರಿಬಿಸಿಲಿನಲ್ಲಿ ಸುಮಾರು ಆರು ಕಿಲೋಮೀಟರ್ ಅವ ನಡೆಯುವವನಿದ್ದ ಪಾಪ ನಾನು ಹೋಗುವುದು ಬೇರೆ ಕಡೆಯಾದರೂ ಅವನನ್ನ ಬಿಟ್ಟು ಹೋಗುವ ನಿರ್ದಾರ ಮಾಡಿದೆ. ಉಡುಪಿ ಕಡೆಯ ಮುಗ್ದ ಹುಡುಗನಿಗೆ ನನ್ನ ಕಂಡರೆ ಸ್ವಲ್ಪ ಸಲುಗೆ.ತನ್ನ ಬಿಡುವಿನ ವೇಳೆಯಲ್ಲಿ ನಮ್ಮ ಆಫೀಸನ್ನೂ ಸ್ವಚ್ಚ ಮಾಡಿ ಸ್ವಲ್ಪ ಮಟ್ಟಿಗೆ ಮೇಲ್ಕರ್ಚಿನ ವ್ಯವಸ್ಥೆ ಮಾಡಿಸಿಕೊಟ್ಟಿದ್ದೆ. ಅಷ್ಟೇ ನಿಯತ್ತಿನ ಹುಡುಗ ಕಷ್ಟವಾನಿ ಆದ್ದರಿಂದ ನಾನೂ ಅವನನ್ನ ನಂಬಿ ಸಣ್ಣ ಪುಟ್ಟ ಕೆಲಸ ಮಡಿಸಿಕೊಳ್ಳುತ್ತಿದ್ದೆ,ಎರಡು ದಿನಕ್ಕೊಮ್ಮೆ ನನ್ನ ಕಾರು ತೊಳೆದು ಕೊಡುತ್ತಿದ್ದ. ಸ್ವಲ್ಪ ತಲೆತಿನ್ನುವ ಸ್ವಭಾವ ಇದ್ದಿದ್ದರಿಂದ ನಾ ಅವನಿಂದ ತಪ್ಪಿಸಿಕೊಂಡು ತಿರುಗಾಡುವುದೇ ಹೆಚ್ಚು.ಕಾರಲ್ಲಿ ಕುಳಿತವನಿಗೆ ಆದಷ್ಟು ಮಾತನಾಡಲು ಅವಕಾಶ ಕೊಡದೇ ಯಕ್ಶಗಾನದ ಸಿಡಿ ಹಾಕಿದ್ದರೂ ಪುಣ್ಯಾತ್ಮ "ಓಹೋ ಭಾಗ್ವಂತ್ರು ಗಣಪತಿ ಭಟ್ರಲ್ದೇ" ಅಂದ.ಹೌದು ನಿನಗೂ ಯಕ್ಷಗಾನದ ಆಸಕ್ತಿ ಇದೆಯೇ ಅಂದೆ. "ಹೌದೆ ನಾ ಊರಾಗಿಪ್ಪಾಗ ಆಟ ಕಾಂತಿದ್ನೆ ಇಲ್ಲಿ ಎಂತ ಮಾಡುದು ಹೇಳಿ ಯಂತಾಮಾಡೂಕಾತ್ತಿಲ್ಲೆ,ದುಡ್ಡು ಒಂದು ಸಿಕ್ಕುತ್ತು ಅಂ...