ಒಣ್ ವೇ, ಣೋ ಎಂಡ್ರಿ, ಗಿವ್ ವೇ, ಣೋಪಾರ್ಕಿಂಗ್.
ಡ್ರೈವಿಂಗ್ ಸ್ಕೂಲಿನ ವೈಟಿಂಗ್ ರೂಮಿನಲ್ಲಿ ಕುಳಿತು ಹೊತ್ತು ಹೋಗದಿದ್ದಾಗ ಒಂದು ಬ್ಲೊಗ್ ಬರೆಯೋಣ ಎನಿಸಿತ್ತು. ನನ್ನ ಕ್ಲಾಸ್ ಇರುವುದು ಸಂಜೆ 6-45 ಕ್ಕೆ ಆದರೆ 5-00 ಕ್ಕೆ ಆಫೀಸಿನಿಂದ ಹೊರಟರೆ ಅರ್ದ ಗಂಟೆಯಲ್ಲಿ ಇಲ್ಲಿಗೆ ಬಂದು ಸೇರಿರುತ್ತೇನೆ. ಸುಮಾರು ಒಂದೂಕಾಲು ತಾಸು ಸುಮ್ಮನೆ ಕೂರುವುದು ನನಗೋ ನನ್ನಂಥವರಿಗೋ ಸುಲಭದ ಮಾತಲ್ಲ. ಪರದೇಶಿ ಆದ್ ಮೇಲೆ ದಿನದ ಹತ್ತು ತಾಸು ಇಂಟರ್ನೆಟ್ಟ್ ಗೆ ಕಚ್ಚಿಕೊಳ್ಳುವ ದುರಬ್ಯಾಸ ಬೆಳೆಸಿಕೊಂಡಿದ್ದೇನೆ.ಇಲ್ಲಿ ವೈರ್ ಲೆಸ್ ಇಂಟರ್ ನೆಟ್ ಇದ್ದಿದ್ದರೆ ಬ್ಲೊಗ್ ಬರೆಯಲು ಪುರುಸೊತ್ತು ಇರುತ್ತಿರಲಿಲ್ಲವೇನೋ. ಅಂತೂ ಇಂತು ಆಫೀಸಿನಲ್ಲಿ ಚತುರೋಪಾಯ ಬಳಸಿ ಖತಾರ್ ನ ರೆಸಿಡೆನ್ಸ್ ಪರ್ಮಿಟ್ಟ್ ಮಾಡಿಸಿಕೊಂಡೆ.ಅದಿಲ್ಲದೆ ಇದ್ದರೆ ಇರಲೇ ಸಾದ್ಯವಿಲ್ಲದೆ ಇದ್ದರೂ RP ಪಡೆಯಲಿಕ್ಕೆ ಸತತ ನಾಲ್ಕು ತಿಂಗಳ ಪ್ರಯತ್ನ ಬೇಕಾಯಿತು.ಅದಾದ ನಂತರವೇ ಪಾಟೀ ಚೀಲ ಹಿಡಿದು ಡ್ರೈವಿಂಗ್ ಸ್ಕೂಲ್ ಬಾಗಿಲಲ್ಲಿ ನಿಂತೆ ಇಲ್ಲಿ ಡ್ರೈವಿಂಗ್ ಸ್ಕೂಲಿನಲ್ಲಿ ಹೆಸರು ಸೇರಿಸಿದ ಮೇಲೆ ಕ್ಲಾಸ್ ಶುರುವಾಗಲು ಮೂರು ತಿಂಗಳಾದರೂ ಬೇಕಂತೆ, ದಿನಕ್ಕೆ ಮುಕ್ಕಾಲು ಗಂಟೆ ಯಂತೆ ಸತತ ನಲವತ್ತು ದಿನವಾದ ಮೇಲೆ ಟೆಸ್ಟ್ ಕೊಡಬೇಕಂತೆ, Lಅಂತೆ pocket parking ಅಂತೆ ಸೀಟ್ ಬೆಲ್ಟ್ ಅಂತೆ,ಸೀಟ್ ಸರಿಮಾಡಿಕೊಳ್ಳಬೇಕಂತೆ, ಭಾರತೀಯರನ್ನ ಮೊದಲ ಭಾರಿ ಪಾಸ್ ಮಾಡಿದರೆ inspector ನ ಘನತೆಗೆ ಕಡಿಮೆಯಂತೆ, ಮೂರು ಅವಕಾಶಗಳಲ್ಲಿ ಪಾಸ್ ಮಾಡಬೇಕಂತೆ,ಇಲ್ಲವಾದರೆ ಲೈಸೆನ್ಸ್ ಗೆ ಅನರ್ಹರಂತೆ ಎಲ್ಲಕ್ಕಿಂತ ಮುಖ್ಯವಾಗಿ ಲಂಚ ತೆಗೆದುಕೊಳ್ಳುವುದಿಲ್ಲವಂತೆ ಎಂಬಿತ್ಯಾದಿ ಅಂತೆ ಕಂತೆ ಗಳ ಸಂತೆಯಲ್ಲಿ ಭಯ ತಲೆಯಲ್ಲಿ ತುಂಬಿಕೊಂಡು ಸೇರಿಕೊಂಡಾಯಿತು. ಸೇರಿದ ಒಂದೇ ವಾರದಲ್ಲಿ ಕ್ಲಾಸ್ ಶುರುವಾಯಿತು (short cut ಗಳ ಕೈಪಿಡಿ ಗಳೆಂದು ಜನಜನಿತ ವಾಗಿರುವ ಮಲಯಾಳೀ instructor ಒಬ್ಬನ ದಯದಿಂದ)
ಇಂದು ನಾಲ್ಕನೇ ದಿನ ಎಲ್ಲರೂ ಹೇಳುವಂತೆ ಡ್ರೈವಿಂಗ್ ಲೈಸೆನ್ಸ್ ಎಂಬ MBBS ಅನ್ನ ಪಡೆವುವೆನೋ ಪಡೆದರೆ ಎಷ್ಟು chances ಬೇಕಾಗಬಹುದು ನೋಡೋಣ. ಇಲ್ಲಿ ಕೆಲವರ ಅನುಭವಾಮೃತ ದ ಪ್ರಕಾರ ಅವರು DL ಗಾಗಿ ಮಾಡಿರುವ ಖರ್ಚು ಭಾರತದಲ್ಲಿ ಒಂದು alto ಕಾರು ಕೊಳ್ಳಲು ಸಾಕಾಗುತ್ತದೆ.ನಾನೀಗಾಗಲೇ ಒಂದು 150CC ಬೈಕ್ ಕೊಂಡಾಗಿದೆ.
ಆಂದ ಹಾಗೆ ನನಗೆ ಕಾರು ಓಡಿಸುವುದು ಇದೇನು ಹೊಸದಲ್ಲ 8 ವರ್ಷಗಳಿಂದ ಓಡಿಸಿದ್ದೇನೆ ಜೀವನದಲ್ಲಿ ಯಾವುದು,ಏನು,ಎಷ್ಟು ಎಂದು ತಿಳಿದು ಕೊಳ್ಳುವ ಕೆಟ್ಟ ಚಾಳಿ ಇರುವ ನಾನು tata 1316 ಲಾರಿಯ ವರೆಗೆ ಎಲ್ಲ ವಾಹನ ಗಳನ್ನೂ ಓಡಿಸಿದ್ದೇನೆ.ಭಾರತದಲ್ಲಿ ಲೈಸೆನ್ಸ್ ಬೇಕು ಅನ್ನಿಸಲೇ ಇಲ್ಲ. ಇಲ್ಲಿ ಕಾನೂನು ಅದರ ಅನುಸರಣೆಗಳೆಲ್ಲದರ ಸುದ್ದಿ ಕೇಳಿ ಮೊದಲು ನಗು ಬಂದರೂ ಬರಬರುತ್ತಾ ತಿಳಿಯಿತು.
ಮೊದಲನೆಯ ದಿನ ಸ್ವಲ್ಪ ಭಯದಲ್ಲಿ ಕುಳಿತಿದ್ದ ನನ್ನ ತರಬೇತಿದಾರ ಎರಡನೆಯ ದಿನದಿಂದ ರಿಲ್ಯಾಕ್ಸ್ ಆಗಿ ಸಿಗರೇಟ್ ಹಚ್ಚಿ,ಲೆಫ಼್ಟ್ ಪೋಕಟೆ, ನ್ಯಾರ ಪೋಕಟೆ, ಸ್ಲೋ ಆಯಿಟು ಎಂದಷ್ಟೇ ಹೇಳುತ್ತಾ ಕುಳಿತಿದ್ದ ಅವನಿಗೆ ಸರಿಯಾಗಿ ಗೊತ್ತಿರುವ ಭಾಷೆಯಲ್ಲಿಯೇ ನಾನೂ ಮಾತನಾಡಿ ಕನ್ನಡತೆ ಮೆರೆಯುವುದರಿಂದ ಅವನಿಗೂ ಹೇಳಿ ಕೊಡುವುದು ಸುಲಭ, ಮಲಯಾಳಂ ಮಾತಾಡಿದ್ದರಿಂದ ನಮ್ಮವನೆಂಬ ಭಾವನೆ ಅವನಿಗೂ ಬಂದಿದ್ದು ಸ್ವಲ್ಪ ಕಾಳಜಿಯಿಂದ ಹಿಕ್ಮತಿಗಳನ್ನೆಲ್ಲ ಹೇಳಿಕೊಡುತ್ತಾನೆ. ಉನ್ನೂ ಪೆಡಿಕ್ಯಂಡ ಫ಼ಸ್ಟ್ ಟೆಸ್ಟ್ಲಿಯೇ ಪಾಸ್ ಆವು ಎನ್ನುವ ಆಸೆ ತೋರಿಸಿದ್ದಾನೆ.
ನೋಡೋಣ ಅವನ ಬಾಯಿಹರಕೆ ಇಂದ ಮೂರು ಅವಕಾಶಗಳಲ್ಲಾದರೂ ಲೈಸೆನ್ಸ್ ಸಿಕ್ಕಿದರೆ ಸಾಕಪ್ಪ ಎನ್ನುವ ಯೋಚನೆಯಲ್ಲಿದ್ದೇನೆ.
ನಾನು ಹೈಸ್ಕೂಲಿನಲ್ಲಿ ಓದುತ್ತಿರುವಾವ ಸಾಗರದ ARTO ಅಲ್ಮೆಡೋ ಎಂದವ ಬೈಕ್ DL test ಗಾಗಿ ಹೋದವರಿಗೆ ಎಂಟರ ಅಂಕೆಯಲ್ಲಿ ಬೈಕ್ ಓಡಿಸುವಂತೆ ಹೇಳಿ ಸುಮಾರು ಜನಕ್ಕೆ ನಿದ್ರೆ ಬಾರದಂತೆ ಮಾಡಿದ್ದ. ಆಗ ನಾನು ಸೈಕಲ್ಲಿನಲ್ಲಿ ಎಂಟರ ಅಂಕೆ ಹೊಡೆದು ಅಭ್ಯಾಸ ಮಾಡಿ ಕೋಂಡಿದ್ದೇ ಬಂತು ಅದಾದ 10 ವರ್ಷಗಳ ಸುಮಾರು ಹಲವು ಸಾವಿರ ಗಳನ್ನ ದಂಡ ಕಟ್ಟಿ ನಂತರ ನಾನು Test ಗಾಗಿ ಜಯನಗರದ ಕಾಂಪ್ಲೆಕ್ಸ್ ಬಳಿಯ RTO ಆಫೀಸಿಗೆ ಬರುವುದನ್ನ ನೋಡಿದವನೇ ಪಾಸ್ ಹೋಗು ನಾಳೆ ಬಂದು DL ತಗೊಂಡು ಹೋಗು ಎಂದಿದ್ದ.
ಒಟ್ಟೂ ಅಣ್ಣನಿಗೆ ಅಂದಿಗಿಂದಿಗೂ ತ್ರಾಸು ತಪ್ಪಿದ್ದಲ್ಲ ಮೊದಲು ತಲೆ ಮೇಲೆ ಹೊಡೆದು ಬೈಕ್ ಓಡಿಸಲು ಕಲಿಸುವುದು ನಂತರ ಪೋಲೀಸರು ಹಿಡಿದಿಟ್ಟ ಅವನ ಬೈಕನ್ನ ದಂಡ ಕಟ್ಟಿ ಬಿಡಿಸಿ ಕೊಂಡು ಬರುವುದು ಈಗ ನನ್ನ ಡ್ರೈವಿಂಗ್ ಸ್ಕೂಲಿಂದ ನನ್ನ ಕರೆದು ಕೊಂಡು ಬರುವುದು. ಮುಂದೆ ನನ್ನ ಚಾಲನಾ ಕೌಶಲ್ಯವನ್ನ ಹಲ್ಲುಮಟ್ಟೆ ಕಚ್ಚಿಕೊಂಡು ಸಹಿಸುವುದು (ಹಿ ಹಿ ಹಿ)
ಪಾಸ್ ಆದ ದಿನ ಇಲ್ಲಿ ಪಾರ್ಟಿ ಆಚರಿಸುತ್ತಾರಂತೆ. ಆ ಆಸೆಗಾದರೂ ನನಗೊಂದು al the best ಹೇಳಿ.(ಪಾರ್ಟಿಗೆ ಬರಬೇಕೆನ್ನುವ ಖಡ್ಡಯ ಏನಿಲ್ಲ.)

Comments
ತಾವು ಕಾರನ್ನು ಆದಷ್ಟು ಬೇಗ ಅವರ ಶೈಲಿಯಲ್ಲಿ ಕಲಿತು DL ಪಡೆಯಲಿ ಎಂಬ ಹಾರೈಕೆ ನನ್ನದು. ತಮ್ಮ ಪಾರ್ಟಿಗೆ ಬರುವ ಸುಯೋಗ ನಮಗೆ ಲಭಿಸಲಿ. ವಾಹನ ಚಾಲನೆ ಮಾಡುವಾಗ ಕಾಳಜಿ ಇರಲಿ.
ನಾನಿನ್ನೂ ಬ್ಲೊಗ್ ನ ಅಂತಿಮ ತಿದ್ದುಪಡಿ ಮಾಡುವ ಮೊದಲೇ ನಿನ್ನಿಂದ ಪ್ರತಿಕ್ರಿಯೆ ಬಂದಾಗಿದೆ.
ಧನ್ಯವಾದಗಳು.ನಾಳಿನ ಭಾಗ್ಯೋದಯದಲ್ಲಿ ಒಂದಲ್ಲಾ ಒಂದು ಪಾರ್ಟಿಯಲ್ಲಿ ಒಟ್ಟಾಗೋಣ.
ನಿಮಗೆ ಪಾರ್ಟಿ ಕೊಡಿಸುವುದು ನನಗೆ ಕಷ್ಟವೇ ಅಲ್ಲ ಒಂದಷ್ಟು ಸೊಪ್ಪುಸದೆ,ಸ್ವಲ್ಪ ಮೊಸರನ್ನ ಇದ್ದರೆ ನಿಮ್ಮ ಪಾರ್ಟಿ ಮುಗಿಯಿತು.
Suddine helde party mugisi bitya enta kathe???
ಟೆಸ್ಟ್ ಇನ್ನೂ ಮುಗಿಯಲ್ಲೆ 19ಕ್ಕೆ ಇದ್ದು ಮೊದಲನೇ ಚಾನ್ಸಲ್ಲಿ ಪಾಸಾದ್ರೆ ಪಾರ್ಟಿ ಗ್ಯಾರೆಂಟಿ.
(ಮುರೂರು ಪೋಲೀಸರ ಮೇಲೆ ನಂಬಿಕೆ ಇದ್ದು ನನ್ನ ದುಡ್ ಕರ್ಚು ಮಾಡುಸ್ತ್ವಲ್ಲೆ ಹೇಳಿ)