"ಆಟ ಆಟ ಒಂದೇ ಒಂದು ಆಟ"

ಸಂಜೆ ಆಫೀಸಿನಿಂದ ಹೊರಡುವಾಗ ವಿಪರೀತ ಗಾಳಿ ಎದ್ದಿತ್ತು ಮರಳು ಗಾಡಿನ ಗಾಳಿಯ ಪುರ್ಣ ಪರಿಚಯವಿದ್ದ ಮನೇಜರ್ ಸ್ವಲ್ಪ ಹೊತ್ತು ಕಾದು ಗಾಳಿ ನಿಂತ ಮೇಲೆ ಹೋಗು ಎಂದರೂ ಕೇಳದೆ ನಾ ಕಾಣದ ಗಾಳಿ ಯಾವುದು ಎಂದು ಮನಸ್ಸಿನಲ್ಲೇ ಹೇಳಿಕೊಳ್ಳುತ್ತಾ ಹೊರಟೆ ಸ್ವಲ್ಪ ದೂರ ಬರುವಷ್ಟರ ಹೊತ್ತಿಗೆ ಗಾಳಿಯ ಪ್ರಭಾವ ಸ್ವಲ್ಪ ತಿಳಿದಿತ್ತು ಆದರೂ ಬಿಸಿರಕ್ತ ಪ್ರವಾಹದ ವಿರುದ್ದ ಈಜುವ ಹುಮ್ಮಸ್ಸು,ಹುಂಬತನ ಕಾರಿನ ತೇಲಾಟವನ್ನೂ ಎಂಜಾಯ್ ಮಾಡುತ್ತ CD ಯಲ್ಲಿ ಕಾಳಿಂಗ ನಾವಡರ ಭಸ್ಮಾಸುರ ಮೋಹಿನಿ ಪದ್ಯ ಕೇಳುತ್ತಾ ಮುಂದುವರೆದೆ. ಒಂದು ಮೈಲಿಯ ದಾರಿಯ ನಂತರ ಸೂಪರ್ ಹೈವೇ ಸಿಕ್ಕಿತ್ತು ಎಂದಿನಂತೆ ಕಾರನ್ನ ಸ್ಪೋರ್ಟ್ಸ್ ಮೋಡಿಗೆ ಹಾಕಿ ಮೂರನೇ ಗಿಯರ್ ದಾಟದಂತೆ ಮಾಡಿಕೊಂಡು ಓಡೋಮೀಟರ್ 115 ರಲ್ಲಿ ನೆಲೆಗೊಳಿಸಿ ರಾಲ್ಫ್ ಶೂಮೇಕರ್ ನ ಮುಕಭಾವದಲ್ಲಿ ಮುಂದುವರೆದಿದ್ದೆ ಲಾಲಿಸು ದೇವರ ದೇವಾ ಸಂಜೀವ| ಪಾಲ ಲೋಚನ ರುಂಡ ಮಾಲ ಮಹದೇವ|| ನಾವಡರ ಕಪ್ಪು ಮೂರರ ಶೃತಿಯ ಪದ್ಯಕ್ಕೆ ನನ್ನ ಬೆರಳು ಸ್ಟಿಯರಿಂಗ್ ಮೇಲೆ ತಾಳ ಹಾಕಿತ್ತಿತ್ತು ನಾವಡರ ಪದ್ಯದ ಮುಕ್ತಾಯ ಮುರಿಯುವ ಕ್ರಮ ನನಗೆ ಇವತ್ತಿಗೂ ನುಂಗದ ತುತ್ತಾಗಿ ಕಾಡುತ್ತಿತ್ತು.ಕೋರೆತಾಳದ ಮುಕ್ತಾಯ ಮುರಿವುವುದನ್ನೇ ಕಾದು ತಾಳ ಹಾಕಿ ಮುಗಿಸುವ ಸಲುವಾಗಿ ಗಮನ ಆಕಡೆ ಕೊಟ್ಟಿದ್ದೆ ಬಂದ ಬಲ ಬದಿಯ ಸಣ್ಣ ತಿರುವು ಗಮನಿಸಲೇ ಇಲ್ಲ 110 km/h ಕಾರು ಬಲತಿರುವಿನಲ್ಲಿ ಆಯತಪ್ಪಿ ಪಲ್ಟಿಯಾಯಿತು ಪಕ್ಕದಲ್ಲಿದ್ದ 24 ಚಕ್ರದ ದೈತ್ಯ ಟ್ರಕ್ಕಿನ ಕೆಳಗೆ ಸೇರಿಕೊಂಡೆ ಅಲ್ಲಿಗೆ ಭಯದಲ್ಲಿ ಎಚ್ಚರ ತಪ್ಪಿ ಹೋಯಿತು.

ಮತ್ತೆ ಎಚ್ಚರವಾದಾಗ ದಪ್ಪಮೀಸೆಯ ಜವರಾಯನ ಆಸ್ಥಾನ ದಲ್ಲಿ ಕೈಕಟ್ಟಿ ನಿಂತಿದ್ದೆ ಸುಮಾರು ಹೊತ್ತು ಮಾಡಿದ ಸರಿ ತಪ್ಪುಗಳ ವಿಚಾರಣೆಗಳ ನಂತರ ಯಮರಾಯ ತೀರ್ಪು ಕೊಟ್ಟೇ ಬಿಟ್ಟ.ಇವನು ನರಕದಲ್ಲಿ ಅನುಭವಿಸ ಬೇಕಾದ ಯಾತನೆಯನ್ನ ಭೂಮಿಯಲ್ಲಿ ಮಾನವ ನಾಗಿದ್ದಾಗಲೇ ಅನುಭವಿಸಿದ್ದಾನೆ. ಇವನು,ಇವನ ಪೂರ್ವಜರು ಮಾಡಿದ ಪುಣ್ಯವೇ ಹೆಚ್ಚಾಗಿರುವುದರಿಂದ ಇವನನ್ನ ಸ್ವರ್ಗಕ್ಕೆ ಬಿಟ್ಟು ಬನ್ನಿ ಎಂದು ಆಜ್ನೆ ಮಾಡಿ ತನ್ನ ಪೆನ್ನನ್ನ ಮೇಜಿಗೆ ಒತ್ತಿ ಮುರಿದು ಎದ್ದು ಹೊರಟೇ ಬಿಟ್ಟ ಹೋಯ್ ಯಜಮಾನರೇ ನಿಮ್ಮ ದೇಹಾಕಾರದ ರಹಸ್ಯ ಏನು ಎಂದು ಕೇಳಿಬಿಡಬೇಕೆನ್ನು ವಷ್ಟರಲ್ಲಿ ಅಲ್ಲಿಂದ ಹೋಗಿ ಆಗಿತ್ತು.ಅಷ್ಟರಲ್ಲಿ ಮತ್ತೆ ಇಬ್ಬರು ಸಿದ್ದಿ ಜನಾಂಗದವರಂತೆ ಕಾಣುವ ದೃಡಕಾಯರು ಬಂದು ಅಲ್ಲಿಂದ ಹೊರಡುವಂತೆ ಕಣ್ಣಲ್ಲೇ ವಿನಂತಿಸಿಕೊಂಡರು ಅಲ್ಲಿಂದ ಹೊರಟ ನಾವು ಮೂವರು ಕಷ್ಟ ಸುಖ ಮಾತನಾಡುತ್ತಾ ಸ್ವರ್ಗದಕಡೆ ಹೊರಟೆವು.
ಇನ್ನೇನು ಸ್ವರ್ಗದ ಬೀದಿದೀಪ ಗಳು ಕಾಣಿಸತೊಡಗಿದ್ದೆವು ಅಷ್ಟರಲ್ಲಿ ದಾರಿ ಬದಿಯ ಬ್ಯಾನರ್ ಒಂದು ನನ್ನ ಗಮನ ಸೆಳೆಯಿತು.
ಪೂರ್ಣ ಓದಲು ಈ ಹಲ್ಕಟ್ ಪೋರರು ಬಿಟ್ಟರೆ ತಾನೆ ಅವರಿಗೆ ಮತ್ತೆ ನರಕಕ್ಕೆ ಹೋಗಿ ಅಲ್ಲಿ ಶಿಕ್ಷೆ ಮುಗಿಸಿದವರನ್ನ ಸ್ವರ್ಗಕ್ಕೆ ಕರೆದು ಕೊಂಡು ಬಿಡಬೇಕು ಕರ್ತವ್ಯನಿಷ್ಟೆ ಅನ್ನುವುದಕ್ಕಿಂತ ಇನ್ಸೆಂಟಿವ್ ಆಸೆ.ಸ್ವಲ್ಪ ದೂರ ಜೊತೆಯಲ್ಲಿ ಬಂದು ಒಮ್ಮೆಲೇ ನಿಂತವರು ನನ್ನನ್ನು ಮುಂದೆ ಹೋಗುವಂತೆ ಕಣ್ಸನ್ನೆ ಮಾಡಿ ತಲೆ ತುರಿಸುತ್ತಾ ನಿಂತರು ಮುಖ ನೋಡಿ ಜಾತಕ ಬರೆಯುವ ನನಗೆ ಅವರ ಮನಸ್ಸಿನಲ್ಲಿದ್ದುದು ತಿಳಿದಿತ್ತು ಪರ್ಸ್ ನಲ್ಲಿದ್ದ 100ರ ಒಂದೊಂದು ಖತಾರ್ ರಿಯಲ್ ಅವರ ಕೈಯಲ್ಲಿಟ್ಟು ಮುಂದೆ ನಡೆದೆ. ದಾರಿಯಲ್ಲಿ ಕಂಡ ಬ್ಯಾನರ್ ನನ್ನ ತಲೆ ಕೊರೆಯುತ್ತಿತ್ತು.


ಸ್ವರ್ಗದ ಮೇಳ ಮತ್ತೆ ನರಕದ ಮೇಳದವರಿಂದ ಜೋಡಾಟವಂತೆ ಉಪ್ಪೂರರು ನಾವಡರು ದುರ್ಗಪ್ಪ ದೇವಾಡಿಗ ಬೇಳೆಯೂರು ಕಿಟ್ಟಣ್ಣ ಎಲ್ಲರನ್ನೂ ನೋಡುವ ಅವಕಾಶ ಅದೂ ಸ್ವರ್ಗದವರೂ ನರಕದವರೂ ಒಟ್ಟಿಗೆ ಸೇರುವುದರಿಂದ ಎಲ್ಲ ಕಲಾವಿದರೂ ಒಂದೇ ಕಡೆ ಸೇರುತ್ತಾರೆ ಅಷ್ಟೇ ಆಲ್ಲ ಆಟ ನಾಳೆಯೇ ನನ್ ಖುಶಿಗೆ ಮಿತಿ ಇಲ್ಲದಂತಾಯಿತು ಈಸ ಹೆಚ್ಚಾಗಿ ಕುಣಿಯುವಂತಾದೆ. ದಿವಂಗತಃ ಎನ್ನುವ ಶಬ್ದದ ಅರ್ಥ ಸ್ವರ್ಗಸುಖ ಅನುಭವಿಸುತ್ತಿರುವ ಎನ್ನುವುದು ಇವತ್ತು ನನಗೆ ಆಯಿತು.ಅಷ್ಟರಲ್ಲಿ ನಾನು ಸ್ವರ್ಗದ ಸರಹದ್ದನ್ನ ತಲುಪಿದ್ದೆ ಎನ್ನುವುದು ಪೆರ್ಡೂರು ಮೇಳದ ಪೀಟಿಕೆ ಸ್ತ್ರೀವೇಷ ಗಳಂತಿದ್ದ ಎರಡು ಹೆಣ್ಣುಗಳು ನನ್ನ ಸೇವೆಗೆ ನಿಂತಾಗ ಗೊತ್ತಾಯಿತು.ಅವರೊಟ್ಟಿಗೆ ಕುಶಲೋಪರಿ ಮಾತನಾಡುತ್ತಾ ಮುಂದಿನ ದಿನದ ಆಟದ ಕನಸುಕಾಣುತ್ತಾ ಮುಂದುವರೆದೆ. ಸಾವಿರ ವರ್ಷ ಬದುಕಿದರೆ ಸಾವಿರ ಚೋದ್ಯಗಳನ್ನ ನೋಡಬಹುದಂತೆ ಆದರೆ ನನಗೆ ಸತ್ತಮೇಲೂ ಚೊದ್ಯ ಕಾದಿತ್ತು ನನಗಾಗಿ ಕೊಡಲಾದ ಹೈಫ಼ೈ ರೂಮಿನಲ್ಲಿ ನಾನು ನನ್ನ ಸ್ವಂತ ಪರಿಶ್ರಮದಿಂದ ಸಂಪಾದಿಸಿದ್ದ ಎಲ್ಲವೂ ಅಲ್ಲಿದ್ದವು. ಒಂದು ಸ್ನಾನ ಹೊಡೆದು ನನ್ನ ಕಂಪ್ಯೂಟರ್ ನಲ್ಲಿ ಮೈಲ್ ಗಳನ್ನ ನೊಡಿದೆ ನನ್ನ ಮೈಲ್ ಬಾಕ್ಸ್ ನಲ್ಲಿ ಕೆಲವು ಸ್ವರ್ಗಕ್ಕೆ ಸಂಬಂಧಪಟ್ಟ ಮಾಹಿತಿ ಮತ್ತು ಜಾಹಿರಾತುಗಳು ಮಾತ್ರ ಇದ್ದವು Gmail,yaahoo ಯಾವುದೂ ಕನೆಕ್ಟ್ ಆಗಲಿಲ್ಲ ನಾನು ಸುಮ್ಮನಿರಬೇಕಲ್ಲ ನನ್ನ ಅಫೀಸಿನಲ್ಲಿ orkut ಓಪನ್ ಮಾದಲು ಬಳಸುತ್ತಿದ್ದ proxyserver ಗಳನ್ನೆಲ್ಲ ಪ್ರಯತ್ನಿಸಿದೆ ಪ್ರಯೋಜನ ಇಲ್ಲ internet option nalli trusted site ಲಿಸ್ಟ್ ನಲ್ಲಿ ಸೇರಿಸೊಣ ಎಂದರೆ ನನ್ನ ಸಿಸ್ಟಮ್ ನಲ್ಲಿ admin rights ತೆಗೆದಿದ್ದಾರೆ.ಆಗ ನನಗೆ ಇದುಸ್ವರ್ಗ ಇಲ್ಲಿಂದ ಭೂಮಿಗೆ access ಸಿಕ್ಕಿದ್ದರೆ ದೇವೇಗೌಡರಿಂದ ವಾಚಾಮ ಗೋಚರ ಬೈಸಿಕೊಂಡು ನಾರಾಯಣ ಮೂರ್ತಿಗಳು ಅಲ್ಲೆ ಯಾಕೆ ಒದ್ದಾಡುತ್ತಿದ್ದರು ಸ್ವರ್ಗದಲ್ಲಿ ಒಂದು ಬ್ರಾಂಚ್ ತೆರೆಯುತ್ತಿದ್ದರು ಎನ್ನುವ ಅರಿವಾಯಿತು ಆದರೆ ಸ್ವರ್ಗದಲ್ಲಿ ಬೇರೆ ಬೇರೆ ಕಮ್ಯೂನಿಟಿಗಳಿರಬಹುದು ಪುರುಸೊತ್ತಿನಲ್ಲಿ ಎಲ್ಲ ಹುಡುಕಿದರಾಯಿತು ಎಂದು ಊಟ ಮಾಡಿ ಮಲಗಿದೆ. ಮರುದಿನ ಬೆಳಿಗ್ಗೆ ಎದ್ದಾಗ ಅವತ್ತಿನ ದಿನಚರಿ ಗಳನ್ನೆಲ್ಲ ವಿವರಿಸುತ್ತಾ ಸೆಕ್ರೆಟರಿ ನಿಂತಿದ್ದಳು ಆದರೆ ಮಾತ್ರ ಇದನ್ನ ನಾ ಬದುಕಿದ್ದಾಗ ಸಂಪಾದಿಸಿರಲಿಲ್ಲ ಇವಳು ಎಲ್ಲಿಂದ ಬಂದಳು ಎನ್ನುವ ವಿಚಾರ ತಲೆಯಲ್ಲಿ ಕೊರೆಯಲು ಶುರುವಾಯಿತು ಏನೇ ಇರಲಿ ಸಂಜೆ ಆಟಕ್ಕೆ ಹೋಗ ಬೇಕು ಎನ್ನುವ ಖುಶಿಯಲ್ಲೇ ಸ್ವರ್ಗವನ್ನೆಲ್ಲ ಸುತ್ತಾಡಿ ಬಂದೆ ನಮ್ಮ ಬಹಳ ಹತ್ತಿರದವರೆಲ್ಲರನ್ನ ಒಮ್ಮೆ ಭೇಟಿಯಾಗಿ ಬಂದೆ ಮಧ್ಯಾನ್ನ ಊಟ ಮಾಡಿ ಮಲಗಿದೆ ಸಂಜೆ ಏಳುವ ಹೊತ್ತಿಗೆ ಎಂಟು ಘಂಟೆ ಆಗಿ ಬಿಟ್ಟಿತ್ತು.

ತಯಾರಾಗುವ ಹೊತ್ತಿಗೆ ಗಜಾನನ ದೇವಾಡಿಗನ ಅಬ್ಬರಚಂಡೆ ಕೇಳಿಯೇ ಬಿಟ್ಟಿತ್ತು. ಓಡುತ್ತಾ ಟೆಂಟಿನ ಬಳಿ ಹೋಗಿ ಎಂದಿನಂತೆ ಚೌಕಿ ಮನೆಯನ್ನ ಹುಡುಕಿ ಒಳನುಗ್ಗಿಯೇ ಬಿಟ್ಟೆ. ಆಗಲೇ ಕೊಳಗಿ ಅನಂತ ಮಾವನ ಈಶ್ವರನ ವೇಷ ತಯಾರಾಗಿತ್ತು.ಪಾರ್ವತಿ ರಾಮನ್ಯಾರಿ ಯವರದ್ದು,ವಿಷ್ಣು ಡಿ ಜಿ ಹೆಗಡೆ ಯವರದ್ದು.ಭಸ್ಮಾಸುರ ಯಾರು ಗೂತ್ತಾಗಲಿಲ್ಲ ಕೇಳುವಾಗ ಶಿವರಾಮಜ್ಜ ಅಂದರು. ಅನಂತ ಮಾವನೊಟ್ಟಿಗೆ ಮಾತಾಡುತ್ತಿದ್ದಂತೆ ಬೆಳೆಯೂರು ಕಿಟ್ಟಣ್ಣ ಬಂದ ಕವಳ ಹಾಕದೇ ದಿನಗಟ್ಟಲೇ ಕಳೆದಿದ್ದರಿಂದ ಕಿಟ್ಟಣ್ಣ ನನ್ನ ಮಾತಾಡಿಸುವ ನೆವದಲ್ಲಿ ಅವನ ಕವಳದ ಸಂಚಿಗೆ ಕೈ ಹಾಕಿದೆ ಅಪ್ಪಿ ನಿಂಗೆ ಬೀಕಾದ್ದು ಇಲ್ಲೆ ತಡಿ ಹೆಳಿ ಪಕ್ಕದಲ್ಲಿದ್ದ ಚೀಲದಲ್ಲಿದ್ದ ಮಧು ಕೊಟ್ಟೆ ತೆಗೆದು ಕೊಟ್ಟ ಅವನೊಟ್ಟಿಗೆ ಚೌಕಿಮನೆ ಪಟಂಗ ಹೊಡೆಯುತ್ತಿದ್ದಂತೆ ಉಪ್ಪೂರರು,ತಿಮ್ಮಪ್ಪ ನಾಯಕರೂ ಪೇಟ ಕಟ್ಟಿ ಗಣಪತಿ ಪೂಜೆಗೆ ತಯಾರಾದರು ಅಷ್ಟರಲ್ಲಿ ಅಲ್ಲಿದ್ದವರೆಲ್ಲರೂ ಎದ್ದು ನಿಂತು ಚೌಕಿಯ ಒಂದು ಮೂಲೆ ಸೇರಿ ನಿಂತರು ಏನಾಗುತ್ತಿದೆ ಎಂದು ನೋಡು ವಷ್ಟರಲ್ಲಿ ಸಾಕ್ಷಾತ್ ಗಣಪತಿ ಬಂದು ಕುಳಿತ ವಿಚಿತ್ರ ಎನಿಸಿದರೂ ನಾನೂ ಅಲ್ಲೇ ಒಂದು ಮೂಲೆ ಸೇರಿ ನಿಂತೆ. ಉಪ್ಪೂರರು, ತಿಮ್ಮಪ್ಪ ನಾಯಕರೂ,ವಿಜಯದಾಸ ಮೊದಲಿನ ಹಿಮ್ಮೇಳದವರಾದ್ದರಿಂದ ತಯಾರಾಗಿ ಗಣಾಪತಿ ಪೂಜೆ ಮಾಡಿ ಮುಗಿಸಿದರು.ನೋಡನೋಡುತ್ತಿದ್ದಂತೆ ಆಟ ಪ್ರಾರಂಭವಾಯಿತು.ನಾನೂ ಸ್ವಲ್ಪ ಹೊತ್ತು ಎಲ್ಲರನ್ನೂ ಮಾತನಾಡಿಸಿ ರಂಗಸ್ಥಳದ ಒಂದು ಬದಿಯಲ್ಲಿ ಕುಳಿತೆ ಈಶ್ವರ ಭಸ್ಮದ ತಟ್ಟೆ ಬಿಸಾಡುವಷ್ಟರಲ್ಲಿ ಶಿವರಾಮ ಹೆಗಡೆಯವರ ಭಯಂಕರ ಭಸ್ಮಾಸುರನ ಅದ್ಭುತ ಪ್ರವೇಷ ಆಗಿಯೇ ಹೋಯಿತು. ನಂತರ ಮಾತ್ರ ಮದ್ಯರಾತ್ರಿ ಆದದ್ದೇ ಗೊತ್ತಾಗಲಿಲ್ಲ ಇನ್ನೇನು ಕಾಳಿಂಗ ನಾವಡರು, ದುರ್ಗಪ್ಪಣ್ಣ, ದೇವಾಡಿಗ ರಂಗಸ್ಥಳಕ್ಕೆ ಬರಲು ತಯಾರಾಗುತ್ತಿದ್ದರು. ಹೆದರುತ್ತಾ ನಾವಡರನ್ನ ಪರಿಚಯ ಮಾಡಿಕೊಂಡೆ ನಿಮ್ಮಿಂದಲೇ ಹೀಗಾದದ್ದು ನನಗೆ ಎಂದಾಗ ಮೊದಲು ಅರ್ಥ ಆಗಲಿಲ್ಲ ನಂತರ ಬಿಡಿಸಿ ಹೇಳಿದಾಗ ವಿಷಾದಿಸಿದರು. ನಂತರ ರಂಗಸ್ಥಳಕ್ಕೆ ಹೊರಟರು ಅವರನ್ನು ಹಿಂಬಾಲಿಸಿ ರಂಗಸ್ಥಳದ ಬದಿಯಲ್ಲಿ ಕುಳಿತೆ. ಸದ್ದಿಲ್ಲದೆ ಮದ್ದರಿಯುವೆ ಪದ್ಯಕ್ಕೆ ಹೋದವರು ಒಂದು ತಾಸು ಹಿಮ್ಮೇಳದವರ ದ್ವಂದ್ವ ನಡೆಯಿತು. ಆಯಿತಿನ್ನೇನೆನುತ ಪದ್ಯಕ್ಕೆ ಉಪ್ಪುರರು ಇಳಿದು ಹೋದರು ಅದನ್ನೇ ಕಾಯುತ್ತಿದ್ದ ನಾವಡರು ಎರಡು ಮನೆ ಶೃತಿ ಮೇಲೆ ಹಾಕಿ ಕುಳಿತವರು ಎಲ್ಲಿಲ್ಲದ ಉಮೇದಿನಲ್ಲಿ ಪದ್ಯ ಸೊಗೆಯುತ್ತಾ ಬೆಳಗಾಗಿದ್ದೇ ಗೊತ್ತಾಗಲಿಲ್ಲ.ಜಯರಾಮ ಗಾಣಿಗನ ಮೋಹಿನಿಯೂ ಕಡಿಮೆ ಇಲ್ಲ ರಂಗಸ್ಥಳ ಹುಡಿಹಾರಿಸಿದ್ದ. ಇನ್ನೇನು ಭಸ್ಮಾಸುರ ಮೋಹಿನಿಯರ ತಾಂಡವ ಶುರು ವಾಗಬೇಕು ಎನ್ನುವಷ್ಟರಲ್ಲಿ ಬದಿಯಲ್ಲೆಲ್ಲೋ ಕೋಳಿ ಕೂಗಲು ಶುರುವಾಯಿತು ಕೆಂಪುಕಣ್ಣು ಬಿಟ್ಟು ನಾವಡರು ಆಚೀಚೆ ನೋಡಿ ಏನೂ ಕಾಣದಿದ್ದಾಗ ಮತ್ತೆ ಶುರು ಮಾಡಿದರು ಧಿಮಿತಕಿಟ ಧಿಮಿತಕಿಟ ಧಿಮಿತಕಿಟ ದಿತ್ತಾ ಎನ್ನುವಷ್ಟರಲ್ಲಿ ಮತ್ತೆ ಕೋಳಿ ಕೂಗಿತು ಈ ಭಾರಿ ಸ್ವರ ಕೇಳಿ ನಾನು ಹೌಹಾರಿ ಜೇಬಿನಲ್ಲಿದ್ದ ಮೊಬೈಲ್ ತೆಗೆದೆ ಅದನ್ನ ನೋಡಿ ನಾವಡರು ತಾಳ ಕೆಳಗಿಟ್ಟು ಇಳಿದು ನಡೆದೇ ಬಿಟ್ಟರು ಈ ಘಟನೆಯಿಂದ ಭಯಂಕರ ಹೆದರಿದ ನಾನು ಆಟ ನಿಲ್ಲಿಸಿದ ತಪ್ಪಿಗೆ ಅಲ್ಲಿದ್ದ ಜನರ ಪೆಟ್ಟು ತಪ್ಪಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಮೂರನೇ ಭಾರಿ ಕೋಳಿ ಕೂಗಿ ಎಚ್ಚರವಾಯಿತು. ನೋಡಿದರೆ ಸಮಯ 6-30 ಆಗಿತ್ತು.

ನನ್ನ ಈ ಬ್ಲೊಗನ್ನ ಅರ್ಥ ಆಗದೇ ಮದ್ಯ ನಿಲ್ಲಿಸಿದವರು ಬುದ್ದಿವಂತರು,ಪೂರ್ಣ ಓದಿದವರಿಗೆ ಮೂರ್ಖರ ದಿನದ ಶುಭಾಶಯಗಳು. ಭೇಜಾಫ್ರೈ ಎನ್ನುವ ಹಿಂದಿ ಸಿನಿಮಾ ನೋಡಿದ್ದೆ ಆ ಸಿಟ್ಟನ್ನ ನಿಮ್ಮ ಮೇಲೆ ತೀರಿಸಿಕೊಳ್ಳುತ್ತಿದ್ದೇನೆ ದಯವಿಟ್ಟು ಕ್ಷಮಿಸಿ ನಾ ಹೇಳೋದೆಲ್ಲಾ ತಮಾಷೆಗಾಗಿ.

Comments

Anonymous said…
heyyyyyyyy, if someone gets the HEART ATTACK by reading this post....dont blame me tht i havnt warned u!!!
hats off to this new idea of fooling people!!
Ejnoyed reading it aftr the first paragraph :)
Unknown said…
ನಾನುಯಾರಮೇಲೆ ತೀರಿಸಿಕೊಳ್ಳಬೇಕೆಂದು ಹುಡುಕುತ್ತಿದ್ದೇನೆ.

ಒ ಇಂದು ಮೂರ್ಖರ ದಿನ
Thanks for reading sumanatte
keep reading
ರಾಘುಮಾವ,
ನೀವೂ ಈಗಾಗಲೇ ನಿಮ್ಮ ಬ್ಲೊಗ್ ನಲ್ಲಿ ಬಲೆ ಹೆಣೆದಿಟ್ಟಿದ್ದೀರಲ್ಲ.
ಬರೆದ ವಿಷಯ ಹಿಂಸೆ ಕೊಟ್ಟರೂ ಪೂರ್ಣ ಓದಿದ್ದಕ್ಕೆ ಧನ್ಯವಾದಗಳು.
Hey Nannu,
nanage kelawu vyakthigala parichaya iralilla adrali aadaru poorthi odhidhe....last para ge bartha idhaga gothaytu indhu namma mathu nimma dina antha!!!!
Happy fools day...
Good writing
Nannu,

Rambe urvashi yaru iralilwa alli....hagadre naanu swarga ke hogalla....
ಧನ್ಯವಾದಗಳು ಮಹೇಶಣ್ಣ,
ನನ್ನ ದಿನ ನನ್ನಂತೇ ಆಗಿದ್ದಕ್ಕೆ ಧನ್ಯವಾದಗಳು.
ಮನಸು said…
ನಾಣು
ಮೊದಲು ನಾನು ಕಾಮೆಂಟ್ ಹಾಕಿ ಓದುತ್ತ ಇದ್ದೀನಿ...ಆಮೇಲೆ ಫೂಲ್ ಆದ್ರು ಎಂದು ಭಾವಿಸಕೂಡದು... ಬರವಣಿಗೆಯ ಶೈಲಿ...ಹೇಗಿದೆ ಅದರಲ್ಲಿನ ತಿರುಳು ಎಲ್ಲವನ್ನು ಓದುವ ಸಲುವಾಗಿ ಓದುತ್ತಲಿದ್ದೇನಿ..ಹ ಹ ಹ ಹ...
ಮಹೇಶ್ ಕಾಮೆಂಟ್ಗೆ ನನ್ನ ಹೆಸರು ಹಚ್ಚುತೀರ ಇರಲಿ...ಹ ಹಹ
ಸುಗುಣಕ್ಕ,
ನಿಮ್ಮ ಮನಸು,ನುಗುಸು,ಸುಗುಮ, ಈ ಹೆಸರು ಗಳನ್ನೆಲ್ಲ ನೋಡುವಾಗ ನನಗೆ ತಾರೇ ಝಮೀನ್ ಪರ್ ಸಿನಿಮಾದ ಹುಡುಗನ ಹಾಗೆ ಆಗಿ ಬಿಡುತ್ತದೆ. ನಿಮ್ಮ ಕಾಮೆಂಟ್ ಗೆ ಅವರ ಹೆಸರಿಗೆ ಉತ್ತರಿಸುತ್ತೇನೆ.ಅವರ ಕಾಮೆಂಟಿಗೆ ನಿಮ್ಮ ಹೆಸರಿನಲ್ಲಿ. ಕೆಲವರನ್ನ ಮೂರ್ಖರನ್ನ ಮಾಡುವ ಅವಶ್ಯಕತೆ ಇರುವುದಿಲ್ಲ ನೀವು ನನ್ನ ಬ್ಲೊಗನ್ನು ಒದುತ್ತಿರುವುದಕ್ಕೆ ಧನ್ಯವಾದಗಳು.
ಮನಸು said…
ಹಹಹ ಚೆನ್ನಾಗಿದೆ....ಕನಸಿನ ಪ್ರಪಂಚದಲ್ಲಿ ವಿಹರಿಸುತ್ತ ಇರೊದು.....ತಮಾಷೆಯ ಚಿತ್ರಣ ಚೆನ್ನಾಗಿ ಮೂಡಿಬಂದಿದೆ
shivu.k said…
ಮೂರ್ತಿ ಸರ್,

ನಾನು ಸುಮ್ಮನೇ ಓದುತ್ತಾ ಇದ್ದೆ...ಒಂಥರ ಮಜ ಇಂಥವುಗಳನ್ನು ಓದಲು. ನಂತರ ಗೊತ್ತಾಯಿತು...ಇದು ಕನಸು....ನೀವು ಕನಸನ್ನು ಚೆನ್ನಾಗಿ ಕಾಣ್ತೀರಾ...ಚೆನ್ನಾಗಿ ಕನಸು ಕಾಣುವುದು..ಅದನ್ನು ಯಥಾವತ್ತಾಗಿ ಬರೆಯುವುದು ಒಂದು ಕಲೆ....
ಯಾವ ಬ್ಲಾಗಿನ ಲೇಖನವನ್ನು ಓದಿದರೂ ನಿದಾನವಾಗಿ ಪೂರ್ತಿಯಾಗಿ ಓದುತ್ತೇನೆ...ಇಲ್ಲೂ ಪೂರ್ತಿ ಓದಿ ಮುಗಿಸಿದ ಮೇಲೆ ಗೊತ್ತಾಯಿತು...ನಾನು ಫೂಲ್ ಆಗಿದ್ದು....
Gowtham said…
ಚೆನ್ನಾಗಿದೆ. ಮಾಮೂಲಿ ಬ್ಲಾಗ್ ಗಳಿಗಿಂತ ಭಿನ್ನವಾಗಿರೋದಕ್ಕೆ ಓದಕ್ಕೆ ತುಂಬಾ ಖುಷಿಯಾಗುತ್ತೆ. :-)
@ ಶಿವು ಸರ್,
ಓದಿದ್ದಕ್ಕೆ (ಫೂಲ್ ಆದದ್ದಕ್ಕೆ) ಧನ್ಯವಾದಗಳು
@ ಗೌತಮ
ನನ್ನ ಬ್ಲೋಗೆಂಬ ಕಸದ ಬುಟ್ಟಿಗೆ ಸುಸ್ವಾಗತ
ಓದಿ ಪ್ರೋತ್ಸಾಹಿಸುತ್ತಿರಿ.
Hey Murthy
tumbaa sundaravaagi yakshagaanavannu varnisiddiya, manassige muda neevua varanane.
ಗುರುಬ್ಯೋ ನಮಃ
ಓದಿದ್ದಕ್ಕೆ (ಫೂಲ್ ಆದದ್ದಕ್ಕೆ) ಧನ್ಯವಾದಗಳು
ಚೆನ್ನಾಗಿದೆ. ನನ್ನ ಹೆಂಡತಿಯ ಊರು ಹೊಸಬಾಳೆ ಪಕ್ಕದ ತಲಕಾಲುಕೊಪ್ಪ.
shivu.k said…
ಸರ್.

ಮೂರ್ಖರ ದಿನ ಸಕ್ಕತ್ ಪಂಛ್...ಆದ್ರೆ ನಾನು ಕೆಲಸದ ಒತ್ತಡದಿಂದಾಗಿ ಲೇಟಾಗಿ ಬಂದಿದ್ದರಿಂದ ನಾನು ಬಚಾವ್...

ಧನ್ಯವಾದಗಳು..

Popular posts from this blog

ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ ! :)

ಹುಚ್ಚು ಕೋಡಿ ಮನಸು 2

Farmville Application in Facebook