ಕಾಮನ್ ಸೆನ್ಸ್

ಒಂದು ಹುಡುಗಿ ಒಂದ್ ಸಲ ಅವಳ ಹಳ್ಳಿಗೆ ಹೋದ್ಲು.. ಆಗ ತಾನೆ ಪಿ ಯು ಸಿ ಮುಗಿದಿತ್ತು.. ಚಂದುಳ್ಳಿ ಚೆಲುವೆ ಬೇರೆ.. ಸಿಕ್ಕಪಟ್ಟೆ ಬಿನ್ನಾಣಗಿತ್ತಿ ಅಂದ್ಕೊಳ್ಳಿ.. ಹಳ್ಳೀಲಿ ಇವಳನ್ನ ನೋಡಿದ ಪಡ್ಡೆ ಹೈಕ್ಳೆಲ್ಲ ಎರಡು ನಿಮಿಷ ಕಣ್ಣು ಬಡೀಲಿಲ್ಲ..
ಇವಳ್ಗೋ ಖುಶೀನೋ ಖುಶಿ.. ಅಂಗಡಿಗೆ ಹೋದ್ಲು ತರಕಾರಿ ತರೋಕಂತ. ಅಂಗಡಿಯ ಹೆಂಗಸಿಗೆ ಒಂದು ಸಾಮಾನು ಹೇಳೋದು ಸೆಲ್ಲ್ ಫೋನ್ ನಲ್ಲಿ ಟೊಯ್ ಟೊಯ್ ಅಂತ ಎಸ್ ಎಮ್ ಎಸ್ ಮಾಡೋದು ಮತ್ತೆ ಅಂಗಡಿಯಾಕೆ ಕೇಳಿದಾಗ ತಲೆ ಎತ್ತಿ ಇನ್ನೊನ್ದ್ ಸಾಮಾನ್ ಹೆಸರು ಹೇಳೋದು.. ಹೀಗೆ ಐದು ನಿಮಿಷ ನಡೀತು.. ಕೊನೆಗೆ ಈ ಹುಡುಗಿ ಪ್ಲಾಸ್ಟಿಕ್ ಬ್ಯಾಗ್ನಲ್ಲಿದ್ದ ಸಾಮಾನೆಲ್ಲವನ್ನ ತಾನು ತಂದಿದ್ದ ಬ್ಯಾಗಿಗೆ ಹಾಕ್ಕೊಂಡು "ದುಡ್ಡು ಎಷ್ಟಾಯ್ತು" ಅಂತ ಕೇಳಿದ್ಲು..
ಅಂಗಡಿಯವ್ಳು: "ಎಪ್ಪತ್ತು ರೂಪಾಯಿ."
ಹುಡುಗಿ ನೂರು ರೂಪಾಯಿ ಕೊಟ್ಳು..
ಅಂಗಡಿಯವ್ಳು: ಏನವ್ವ ನೀವು ದೊಡ್ಡ ಪಟ್ಟಣದವ್ರು ಅನ್ಸತ್ತೆ.. ತುಂಬಾ ಓದಿದೀರ ಅನ್ಸತ್ತೆ!
ಹುಡುಗಿಗೆ ಖುಶಿ. ನನ್ ಬಟ್ಟೆ, ಸೆಲ್ಫೋನ್, ಆಧುನಿಕತೆ ನೋಡಿ ಈ ಹೆಂಗಸು ಹೀಗೆ ಹೇಳ್ತಾ ಇದಾಳೆ ಅನ್ಕೊಡ್ಳು.
ಸರಿ ಹುಡುಗಿ ಕೇಳಿದ್ಲು "ಹೌದು ನಿನಗೆ ಹೇಗೆ ಗೊತ್ತಾಯ್ತು?"
ಅಂಗಡಿಯವ್ಳು: "ಅಲ್ಲ ಈರುಳ್ಳಿ, ಆಲುಗೆಡ್ಡೆ, ಬೇಳೆ , ಸಕ್ಕರೆ ಎಲ್ಲ ಸಾಮನು ತಗೊಂಡು.. ಟೊಮಾಟೊನ ಮೊದಲು ಬ್ಯಾಗ್ ಒಳಗಡೆ ಹಾಕ್ಕಂಡ್ರಿ ನೋಡಿ ಆಗಲೆ ಗೊತ್ತಾಯ್ತು ಕಾಮನ್ ಸೆನ್ಸ್ ಇಲ್ಲ ಅಂತ..ಅದಕ್ಕೆ ಪಟ್ಟಣದವರಾ ಅಂತ ಕೇಳ್ದೆ. ಬೇಜಾರ್ ಮಾಡ್ಕಬೇಡಿ."
ಹುಡುಗಿ ಗಪ್ ಚುಪ್!

ಅರ್ದ ವೀಕೆಂಡ್ ಮುಗಿಸಿ ಶನಿವಾರ ಆಫೀಸಿಗೆ ಬಂದು ತೊಡೆಮೇಲಿನ ಗಣಕಯಂತ್ರವನ್ನ ಆನ್ ಮಾಡುತ್ತಿದ್ದಂತೆ ತಂಗಿ ಅರ್ಚನ ಕಳಿಸಿದ ಮೈಲ್ ಬಂತು ಓದಿ ನಗು ಬಂತು. ನಿಮ್ಮೊಂದಿಗೆ ಹಂಚಿಕೊಳ್ಳುವ ಸಲುವಾಗಿ ಅವಳ ಅನುಮತಿ ಪಡೆದು ಇಲ್ಲಿ ಬ್ಲೋಗಿಸಿದ್ದೇನೆ.
ವೀಕೆಂಡ್ ಶುರುಮಾಡುತ್ತಿರುವ ಎಲ್ಲ ಓದುಗರಿಗೂ ಹ್ಯಾಪಿ ವೀಕೆಂಡ್.

Comments

ಹ್ಹಾ ಹ್ಹಾ ಹ್ಹಾ....

ನಿಮಗೂ ಹ್ಯಾಪಿ ವೀಕೆಂಡ್....
ಮನಸು said…
hahaha chennagide....week end agi eega start agide namge alva hahaha
shivu.k said…
ಸರ್,

ಓದಿ ಸಕ್ಕತ್ ನಗುಬಂತು....

ಧನ್ಯವಾದಗಳು.
ಮೂರ್ತಿ,
ತುಂಬಾ ಚೆನ್ನಾಗಿದೆ ಕಾಮನ್ ಸೆನ್ಸ್ ಬರಹ
Ittigecement said…
ಮೂರ್ತಿ.....

ಟೊಮ್ಯಾಟೊ ಮೊದಲು ತುಂಬಿಸಿ..
ಆಮೇಲೆ ಉಳಿದ ಸಾಮಾನು ತುಂಬಿಸುವ
ಆಧುನಿಕರು ನಮ್ಮಲ್ಲಿ ಜಾಸ್ತಿ ಇದ್ದಾರೆ....

ಸಿಕ್ಕಾಪಟ್ಟೆ ನಗು ಬಂತು....
ಜಲನಯನ said…
ಮೂರ್ತಿ, ನಿಮ್ಮ ಈ ಬ್ಲಾಗ್ ಪೋಸ್ಟ್ ನನಗೆ ಯಾರೋ ಮೈಲ್ ಮಾಡಿದ್ರು...ಬಹುಶಃ ಈ ಕವಿ ಮೂಲಕ...ನೆನಪಾಗ್ತಿಲ್ಲ, ಚನ್ನಾಗಿದೆ ವಿಷಯ ತಮಾಷೆ ಮತ್ತು ನಮ್ಮ ನಾಗರಿಕ ನಗರವಾಸಿಗಳು ಹಳ್ಳಿಯವರನ್ನು ಕಂಡು ಮೂಗು ಮುರಿಯೋದು ಬಿಡಬೇಕು..ಯಾಕಂದ್ರೆ ಕೆಲ ವಿಷಯ ಅವ್ರಿಂದ ಕಲೀಬೇಕಾಗುತ್ತೆ...
ಉದಾ.. ಹಳ್ಳಿ ಸ್ಕೂಲಿಗೆ ಕುತೂಹಲಕ್ಕೆ ಬಂದ ನಗರದ ಹುಡುಗ ಹಳ್ಳಿ ಹುಡುಗ್ರನ್ನ ಬುದ್ದಿ ಇಲ್ಲದೋರು ಅಂತ ಆಡ್ಕೊಂಡಿದ್ದನ್ನ ನೋಡಿ ಅವನಿಗೆ ಮತ್ತು ತಿಮ್ಮನಿಗೆ ಹೊರಗಡೆ ಹೋಗಿ ನಾವು ತಿನ್ನೋ ಅನ್ನದ ಮೂಲಾನ ತನ್ನಿ ಅನ್ತಾರೆ...ನಗರದ ಹುಡುಗ ಹೊರಗಡೆ ಕುಯ್ಲಿಗೆ ಗದ್ದೆ ಇದ್ದದ್ದು ನೋಡಿ ಮೇಷ್ಟ್ರು ನನ್ನ ಬುದ್ಧಿ ಪರೀಕ್ಷೆಗೆ ಹೀಗೆ ಹೇಳಿದ್ದಾರೆ ಅಂತ ..ತನ್ನ ಭಾವನ ಮನೆಗೆ ಹೋಗಿ ಅಕ್ಕಿ ಕಾಳುಗಳನ್ನ ತರ್ತಾನೆ...ಮೇಷ್ಟ್ರು ಇಬ್ಬರನ್ನೂ ಕೇಳ್ದಾಗ ತಿಮ್ಮ ಭತ್ತದ ತೆನೆ ತೋರ್ಸಿದ್ರೆ..ನಗರದ ಹುಡುಗ ಹೆಮ್ಮೆಯಿಂದ ಅಕ್ಕಿ ಕಾಳು ತೋರಿಸ್ತಾನೆ.
ಮೇಷ್ಟ್ರು ಹೇಳ್ತಾರೆ.. ನಾನು ಹೇಳಿದ್ದು ನಾನು ತಿನ್ನೋ ಅನ್ನದ ಮೂಲ.. ಅದಕ್ಕೆ ನಗರದ ಹುಡುಗ ಹೇಳ್ತಾನೆ..ಅಕ್ಕಿ ಅಲ್ಲವೇ ಅನ್ನಮಾಡೋಕೆ ಬೇಕಾಗಿರೋದು...ಆದ್ರೆ ತಿಮ್ಮ ಹೇಳ್ತಾನೆ, ಸಾ ಅಕ್ಕಿಗೂ ಮೊದ್ಲು ಭತ್ತ ಅಲ್ವೇ ಸಾ... ಷಹಬ್ಬಾಶ್ ತಿಮ್ಮ ಅಂತಾರೆ ಮೇಷ್ಟ್ರು.

Popular posts from this blog

ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ ! :)

ಹುಚ್ಚು ಕೋಡಿ ಮನಸು 2

Farmville Application in Facebook