ಗಿರಿಬಟ್ಟ ಗೋಡಂಬಿ ಗಿರಿ ಆದದ್ದು.

ಆರೇಳು ವರ್ಷಗಳ ಹಿಂದೆ ನನ್ನ ಚಿಕ್ಕಪ್ಪನ ಮಗಳ ಮದುವೆ ಬೆಂಗಳೂರಿನಲ್ಲಿ ಇತ್ತು. ಊರಿಂದ ಬಹಳ ಜನ ಬಂದಿದ್ದರು ಮದುವೆ ದಿನ ಸಂಜೆ ನಮ್ಮ ಚಿಕ್ಕಮ್ಮಂದಿರು ತಂಗಿಯರು ತಮ್ಮಂದಿರು ಎಲ್ಲಾ ನಮ್ಮನೆಗೆ ಬಂದಿದ್ದರು ದಿಲೀಪ MBA ಎಂಟ್ರೆನ್ಸ್ ನ ತಯಾರಿಗಾಗಿ ನಮ್ಮ ಮನೆಯಲ್ಲಿದ್ದು ಕೊಂಡು ಕ್ಲಾಸ್ ಗೆ ಹೋಗುತ್ತಿದ್ದ. ನನ್ನ ಭಾವನ ಮಗ ಗಿರಿಭಟ್ಟ (ಆಗ ಬರೀ ಗಿರಿಭಟ್ಟ ಈಗ ದೊಡ್ಡ ದೇವಸ್ಥಾನ ದ ಭಟ್ಟರು ಭಟ್ಟ ಎಂದರೆ ಸಿಟ್ಟು ಬಂದರೂ ಬರಬಹುದು) ನಮ್ಮ ಮನೆಯಲ್ಲೇ ಇದ್ದ.

ಅವತ್ತು ಊರಿಂದ ಸಂತೋಷ,ದೀಪು,ಅಶ್ವತ್ತ ಎಲ್ಲಾ ಮದುವೆ ಗಾಗಿ ಬಂದಿದ್ದರು ಸಂಜೆ ಎಲ್ಲರ ದಂಡು ನಮ್ಮನೆಯಲ್ಲಿ ಸೇರಿತ್ತು. ಕೆರೆಕೊಪ್ಪದ ಕಾನ್ಲೇ ಮನೆತನದ ಎಲ್ಲ ಪಟಿಂಗರೂ ಬೆಂಗಳೂರಿನಲ್ಲಿ ಸೇರಿದ್ದೆವು ದಿಲೀಪ ಮತ್ತೆ ಅಶ್ವತ್ತ ಪಟಿಂಗರ ಹಾಜರಾತಿ ಪುಸ್ತಕದಲ್ಲಿ ಇಲ್ಲದಿದ್ದರೂ ನಮ್ಮ ಜೊತೆ ಸೇರುತ್ತಿದ್ದರು. ಅವತ್ತು ರಾತ್ರಿ ಊಟದ ನಂತರ ಒಂದು jakpot ಆಡಿ ಆಯಿತು ಕೆಲವರು ಇಸ್ಪೀಟ್ ಆಡುವವರಲ್ಲ, ಇನ್ನು ನಾನು ಸಂತೋಷ ಪುಕ್ಕಟ್ಟೆ ಆಡಲು ನಿದ್ದೆ ಬಿಡುವವರಲ್ಲ ಹೀಗಾಗಿ ಒಂದೇ pot ಗೆ ಬೇಜಾರು ಬಂತು.ದೊಡ್ದವರೆಲ್ಲಾ ಮಲಗಿದ್ದನ್ನ ಖಾತ್ರಿ ಮಾಡಿಕೊಂಡು ಸಂಗೀತಾ ವಾಹಿನಿಯರನ್ನ ಮಲಗುವಂತೆ ಹೇಳಿ ನಮ್ಮ ಹುಡುಗರ ತಂಡ ನಮ್ಮನೆ ಟೆರೇಸ್ ಮೇಲೆ ಮೀಟಿಂಗ್ ಸೇರಿತು. ಹುಡುಗರ ತಂಡ ಸೇರಿದರೆ ಅಲ್ಲಿ ನಡೆಯುವ ಮಾತುಕಥೆಯ ಬಗ್ಗೆ ಹೊಸದಾಗಿ ವಿವರಣೆ ಬೇಕಾಗುವುದಿಲ್ಲ. ಸುಮಾರು ಹೊತ್ತು ಅಕ್ಕಪಕ್ಕದವರಿಗೆ ತೊಂದರೆ ಆಗದಂತೆ ದುಂಡಗೆ ಕುಳಿತು (ಒಂದು ಸುತ್ತು ಬರುವಂತೆ) ಪಿಸುಮಾತಿನಲ್ಲಿ ಪಟಂಗ ಹೊಡೆದಾಯಿತು.ಮದುವೆ ಮನೆಯಲ್ಲಿ ದಿಲೀಪ ಹಾಗು ದೀಪುಗೆ ಅವರು ಓದುವ ಸಾಗರದ L B ಕಾಲೇಜಿನ ಇಬ್ಬರು ಹುಡುಗಿಯರು ಸಿಕ್ಕಿದ್ದು ನಮಗೆಲ್ಲ ಸ್ವಲ್ಪ ಜಟರಾಗ್ನಿ ತರಿಸಿತ್ತು. ಹೇಳಿಕೊಳ್ಳಲು ಅಣ್ನ ತಮ್ಮಂದಿರು,ಆಪ್ತ ಸ್ನೇಹಿತರು ಎಲ್ಲಾ ಆದರೂ ಆ ವಯಸ್ಸಿನಲ್ಲಿ ಇಂತಾ ವಿಷಯಗಳಲ್ಲಿ ಅಭಾವವೈರಾಗ್ಯ ಎನ್ನುವುದು ಅವರನ್ನ ರೇಗಿಸುವಂತೆ ಪ್ರಚೋದಿಸುತ್ತಿತ್ತು. ಅವತ್ತು ದಿಲೀಪನ ಕೈಯ್ಯಲ್ಲಿದ್ದ ಮೊಬೈಲ್ ನನ್ನದ್ದೇ ಆಗಿದ್ದು ಅದರ ನಂಬರ್ ಅವಳಿಗೆ ಕೊಟ್ಟಿದ್ದು ಇವತ್ತಲ್ಲಾ ನಾಳೆ ನನಗೆ ಕಾಲ್ ಬರಬಹುದು ಎಂಬ ಸಮಾಧಾನ ಇತ್ತು. ಇವತ್ತಿನ ತನಕ ಕಾಲ್ ಬರಲಿಲ್ಲ ಎನ್ನುವುದು ಇಲ್ಲಿ ಅಪ್ರಸ್ತುತ.

ಹೀಗೆ ಬ್ರಹ್ಮಚಾರಿಗಳ ಮಾತುಕತೆ,ಟೀಕೆ,ರೇಗಿಸುವಿಕೆ ಎಲ್ಲಾ ನಡೆಯುತ್ತಿರುವಾಗ ನಮ್ಮ ಮನೆಯ ಪಕ್ಕದ ಸೈಟಿನಲ್ಲಿ ಹಾಕಿದ್ದ ಶಾಮಿಯಾನ ನನ್ನ ಗಮನ ಸೆಳೆಯಿತು. ಪಕ್ಕದ ಮನೆಯ ಗೃಹಪ್ರವೇಶ ಕ್ಕಾಗಿ ಅಡುಗೆಮನೆಯಾಗಿ ಈ ಸೈಟನ್ನ ಬಳಸಿಕೊಂಡಿದ್ದಾರೆ ಎಂಬ ತೀರ್ಮಾನಕ್ಕೆ ಬಂದೆವು. ವಿಷಯ ಅದಲ್ಲ ಆ ಶಾಮಿಯಾನದಲ್ಲಿ ಗಮನಸೆಳೆಯುವ ಇನ್ನೂ ಅನೇಕ ವಿಷಯಗಳಿದ್ದವು.
ದೊಡ್ದ ಹೊಟ್ಟೆಯ ಅಡಿಗೆ ಭಟ್ಟರೊಬ್ಬದು ಗಟ್ಟಿ ಸಾಗವಾನಿ ನಾಟಾ ಕೊಯ್ಯುತ್ತಾ ಅಡಿಗೆ ಪದಾರ್ಥಗಳನ್ನ ಕಾಯಿತ್ತಾ ನಿದ್ದೆ ಮಾಡುತ್ತಿದ್ದರು.ಹೊರಗೆ ನಾಯಿಯೊಂದು ಜೊಲ್ಲು ಸುರಿಸುತ್ತಾ ಒಳಗೆ ನುಗ್ಗಲು ಹವಣಿಸುತ್ತಿತ್ತು, ಅಡಿಗೆ ಭಟ್ಟರ ಪಕ್ಕದಲ್ಲಿ ಒಂದು ಗೋಡಂಬಿಯ ಪ್ಲ್ಯಾಸ್ಟಿಕ್ ಚೀಲ ನನ್ನನ್ನ ಬಹಳ ಸೆಳೆಯುತಿತ್ತು. ಗಿರಿಭಟ್ಟನಿಗೆ ಹೇಳಿದ್ದೇ ತಡ ಅವ ಕಾರ್ಯೋನ್ಮುಖ ನಾದ. ಕೆಳಗೆ ಇಳಿದವನೇ ಕೈಯಲ್ಲಿ ಒಂದು ಕೊಲು ಹಿಡಿದು ಶಾಮಿಯಾನದ ಕಡೆ ಹೋರಟ. ನಮಗೆ ಆತಂಕ,ಬೆದರಿಕೆ,ಭಯ ಎಲ್ಲಾ ಒಟ್ಟಾಗಿ ಸೇರಿ ಯಾವ ಸಂಧರ್ಭ ದಲ್ಲೂ ಓಡಲು ಸಿದ್ದರಾಗಿ ಕುಳಿತಲ್ಲಿಂದಲೇ ಇಣುಕಿ ನೋಡತೊಡಗಿದೆವು. ನಮ್ಮ ಗಿರಿ ಕೋಲನ್ನು ಹಿಡಿದು ಶಾಮಿಯನ ಸಮೀಪಿಸಿದವ ಅಡಿಗೆ ಭಟ್ಟರ ಪಕ್ಕದಲ್ಲಿ reverse gear ನಲ್ಲಿ ಹೊರಟ. ನಮಗೆ ಇವ ಹೇಗೇಕೆ ಎಂದು ತಿಳಿದುಕೊಳ್ಳಲು ಬಹಳ ಹೊತ್ತು ಹಿಡಿಯಲಿಲ್ಲ. ಕೈಯಲ್ಲಿ ಕೋಲು ಹಿಡಿದು ಶಾಮಿಯಾನದಿಂದ ಹೊರಬರುತ್ತಿರುವಂತೆ ನಟಿಸುತ್ತಾ ಹೋಗಿ ಗೊಡಂಬಿ ಚೀಲ ತಂದೇ ಬಿಟ್ಟ. ಅಕಸ್ಮಾತ್ ಭಟ್ಟರಿಗೆ ಎಚ್ಚರವಾಗಿದ್ದರೆ ನಾಯಿ ಓಡಿಸುವ ನೆವನ, ಆಗದಿದ್ದರೆ ಎರಡು ಕೇಜಿ ಗೋಡಂಬಿ ಎನ್ನುವುದು ಗಿರಿಭಟ್ಟನ ನಿಲುವಾಗಿತ್ತು. ಅಂತೂ ಗೋಡಂಬಿ ನಮ್ಮ ಟೆರೇಸ್ ಗೆ ಬಂದು ಸೇರಿತು. ಉಪ್ಪು ಖಾರ ಹಾಕಿ ಹುರಿದಿದ್ದರೆ ಚೆನ್ನಾಗಿತ್ತು ಎಂದು ಒಬ್ಬ, ಸ್ವಲ್ಪ ಗಸಗಸೆ,ಬಂಗಿಸೊಪ್ಪು ಸೇರಿಸಿ ಬೀಸಿ ಪಾನಕ ಮಾಡಬಹುದಿತ್ತು ಎಂದು ಇನ್ನೊಬ್ಬ ತಮ್ಮ ತಮ್ಮ ಅಭಿಪ್ರಾಯ ಗಳನ್ನ ಕೊಟ್ಟರು. ಹೇಗೂ ಮನೆಯಲ್ಲಿ ನೆಂಟರಿದ್ದಾರೆ ನಾಳಿನ ಉಟಕ್ಕೆ ಅಮ್ಮನಿಗೆ ಹೇಳಿ ಗೋಡಂಬಿ ಬರ್ಫಿ ಮಾಡಿಸಬಹುದು ಎಂದು ನನು ಪ್ಲಾನ್ ಮಾಡಿ ಎಲ್ಲರಿಗೂ ಒಂದೊಂದು ಮುಷ್ಟಿ ಕೊಟ್ಟು ಉಳಿದದ್ದನ್ನ ನನ್ನ ರೂಮಿನಲ್ಲಿ ಇಟ್ಟೆ ಆದರೆ ಅದು ಮಂಗನ ಉಪವಾಸ ಆಗಿ ಹೋಯಿತು ಬೆಳಗಾಗುವಷ್ಟರಲ್ಲಿ ಅರ್ಧ ಖಾಲಿ. ಬೆಳಿಗ್ಗೆ ಎದ್ದರೆ ನಮ್ಮನಮ್ಮಲ್ಲೆ ಗುಸು ಗುಸು ಪಿಸು ಪಿಸು ಶುರುವಾಗಿ ಸಂಗೀತ, ವಾಹಿನಿಗೆ ಸುದ್ದಿ ಗೊತ್ತಾಗಿ ಹೋಗಿತ್ತು ಅವರನ್ನ ಸಮಾಧಾನ ಪಡಿಸಿ ಸ್ವಲ್ಪ ಲಂಚ ಕೊಟ್ಟು ಸುಮ್ಮನಿರಿಸಿದ್ದಾದರೂ ಅವರು ತಮಗೆ ಬೇಕಾದವರಿಗೆ ಮಾತ್ರ ಹೇಳಿದ್ದರು. ಮನೆಯಲ್ಲಿ ಎಲ್ಲರಿಗೂ ಎಲ್ಲರೂ ಬೇಕಾದವರಾದ್ದು ಗೊತ್ತಾದ್ದು ಎಲ್ಲರೂ ಲಂಚ ಕೇಳೀದಾಗ ಮಾತ್ರ.ಇನ್ನು ಉಳಿದದ್ದು ಬರ್ಫಿಗೆ ಸಾಲದು ಮತ್ತೆ ಇದು ಬಂದ ರೀತಿ ತಿಳಿದ ಮೇಲೂ ಅಮ್ಮನಲ್ಲಿ ಬರ್ಫಿ ಸುದ್ದಿ ಹೇಳಿದರೆ ಪೆಟ್ಟು ಬಿದ್ದೀತೆಂದು ಸುಮ್ಮನಾದೆ.

ಅಂತೂ ಯಾರಿಗೂ ಆರೋಗ್ಯ ಹಾಳಾಗದೇ ಅಷ್ಟೂ ಗೋಡಂಬಿಯನ್ನ ತಿಂದು ಮುಗಿಸಿದ್ದಾಯಿತು. ಮರುದಿನ ಗೃಹಪ್ರವೇಶದ ಗೊಡಂಬಿ ಕೀರಿನ ಕಥೆ ಏನಾಯಿತೋ ದೇವರೇಬಲ್ಲ.ಆದರೆ ಅವತ್ತಿಂದ ನಮ್ಮನೇ ಗಿರಿ ಭಟ್ಟ ಗೋಡಂಬಿ ಗಿರಿ ಆದ. ಶಾಸ್ತ್ರಿಗಳ ಬ್ಲೋಗ್ ಒಂದನ್ನ ಓದುವಾಗ ಇದು ನೆನಪಾಯಿತು ಮರೆತು ಹೋಗುವ ಮುನ್ನ ಬರೆದು ಬಿಡುವ ಸಾಹಸ ಮಾಡಿದ್ದೇನೆ.

Comments

shivu.k said…
ಅಕಸ್ಮಾತ್ ಭಟ್ಟರಿಗೆ ಎಚ್ಚರವಾಗಿದ್ದರೆ ನಾಯಿ ಓಡಿಸುವ ನೆವನ, ಆಗದಿದ್ದರೆ ಎರಡು ಕೇಜಿ ಗೋಡಂಬಿ.....
ನಿಮ್ಮ ತರಲೇ ಆಟ ಚೆನ್ನಾಗಿದೆ...
@ ಧನ್ಯವಾದಗಳು ಶಿವು ಸರ್
Unknown said…
He he he he he mast baindhu. Really e incedentna maathra lifalli maryakke sadhyave yille. Yinnu yintha avakaasha siktha yilya gothille. but sikka avakashana maathra nanga yella sariyagi upayogisikaindhya. Yinnu e incedent kanna mundhe kattidha haage yidhu. But ondhu bejar andhre aa yibru madhve alli sikkidha hudgir bandhaste fastalli hobutvala antha.
@ ದಿಲೀಪ,
ಪ್ರತಿಕ್ರಿಯೆಗೆ ಧನ್ಯವಾದಗಳು.ನಮ್ಮ ಆ ವಯಸ್ಸಿನ ಕಥೆಗಳನ್ನ ಬರೆದರೆ ಒಂದು ಪುಸ್ತಕಕ್ಕಾಗುವಷ್ಟು ಸರಕು ಇದೆ.
ಹೌದು ಆ ಹುಡುಗೀರು ಬಂದಷ್ಟೇ ಬೇಗ ಹೊರಟು ಹೋದರು ಯಾರ ಒಳ್ಳೇದಕ್ಕೆ ಗೊತ್ತಿಲ್ಲ.
ಹೀಗೆ ಬರುತ್ತಾ ಇರು ಬರೆಯುತ್ತಾ ಇರು.
ಮನಸು said…
haha chennagide nimma tarale
Anonymous said…
ಇದು ಎಲ್ಲ ಮಾಡ್ತೀ ಹೇಳಿ ಗೊತ್ತೆ ಇರ್ಲೆ ಬಿಡು!!