ಹುಚ್ಚು ಕೋಡಿ ಮನಸು 2
ಕಳೆದ ಭಾನುವಾರದಿಂದ ಮೂರುದಿವಸ ರಮಧಾನ್ ರಜೆ ಇರುತ್ತದೆ ಎಂದು ತಿಳಿದಾಗ ಪಟ್ಟ ಸಂಭ್ರಮ ಹೇಳಿ ತೀರುವುದಲ್ಲ.
ಮೂರೂ ದಿನಗಳನ್ನೂ ಕ್ಷಣವೂ ಹಾಳಾಗದಂತೆ ಅನುವಿಸಬೇಕು ಎನ್ನುವ ಉದ್ದೇಶದಿಂದ ನಾಲ್ಕು ದಿನಗಳ ಮೊದಲೇ ಪ್ಲಾನ್ ಮಾಡಿ ಆಗಿತ್ತು.
ಮೊದಲ ದಿನ ಮುಸೈದ್ ಎನ್ನುವ ಸಮುದ್ರ ತೀರಕ್ಕೆ ಹೋಗುವ ನಿರ್ಧಾರವಾಗಿತ್ತು ಅದರಂತೆ ನಾನು, ಶಾಮ ಕಾರ್ತೀಕ ಹಾಗು ಕಾಕಾ (ನಮ್ಮ ಹಿರಿಯ ಸ್ನೇಹಿತರು) ಮದ್ಯಾನ್ಹ ಎರಡು ಗಂಟೆಗೆ ಹೊರಟು ನಲವತ್ತು ಕಿಲೋಮೀಟರ್ ದೂರದ ಬೀಚ್ ನಲ್ಲಿ ಒಂದುತಾಸು ಸತ್ತಾಡಿ ನಂತರ ಡೆಸರ್ಟ್ ಬೈಕ್ ಓಡಿಸುವಲ್ಲಿಗೆ ಬಂದೆವು ಹಬ್ಬದ ರಜೆ ಇದ್ದಿದ್ದರಿಂದ ಅಲ್ಲಿ ಜನಸಾಗರವೇ ನೆರೆದಿತ್ತು ಇದ್ದಿದ್ದರಲ್ಲೇ ಒಳ್ಳೆಯ ಎರಡು ಬೈಕ್ ಗಳನ್ನು ಬಾಡಿಗೆಗೆ ಪಡೆದು ಮರಳ ಗುಡ್ಡದ ಕಡೆ ಹೊರಟಾಯಿತು. ನಾಲ್ಕು ಜನರೂ ಡೆಸರ್ಟ್ ಬೈಕನ್ನ ಸುಮಾರು ಎರಡು ತಾಸುಗಳ ವರೆಗೆ ಎನ್ನುವುದಕ್ಕಿಂತ ಕತ್ತಲಾಗುವವರೆಗೆ ಓಡಿಸಿ ಖುಶಿ ಪಟ್ಟಿದ್ದಾಯಿತು.
ಅದರ ಒಂದು ಸಣ್ಣ ವೀಡಿಯೋ ತುಣುಕನ್ನ ಹಾಗು ಕೆಲವು ಫೋಟೊಗಳನ್ನ ಇಲ್ಲಿ ಹಾಕಿದ್ದೇನೆ.
ದೊಡ್ಡ ಮರಳ ಗುಡ್ಡದ ತುತ್ತ ತುದಿಯಲ್ಲಿದ್ದೇವೆ ಅಪ್ಪಿ ತಪ್ಪಿ ಒಂದಡಿ ಮುಂದೆ ಹೋಗಿದ್ದಿದ್ದರೆ ಮರಳಲ್ಲಿ ಬೈಕ್ ಸಮೇತ ಹುಗಿದು ನಮ್ಮನ್ನ ಹುಡುಕಲು ನಮಗೇ ಆಗುತ್ತಿರಲಿಲ್ಲ.

ಬ್ರೇಕ್ ಮೇಲೆ ಇಟ್ಟ ಕಾಲು ಸಡಿಲವಾದರೆ ಕೈಲಾಸ ಸೇರಬೇಕು ಅಂತಹಾ ಸಂದರ್ಭದಲ್ಲಿ ಆಪ್ತಮಿತ್ರ ದ ವಿಷ್ಣು,ದ್ವಾರಕೀಶ ರ ಹಾಡು "ಗಾಳಿಯನ್ನು ತಡೆಯೋರು ಯಾರೂ ಇಲ್ಲ" ನೆನಪಾಗಬೇಕೇ !!!

ಲಾಕಪ್ ಡೆತ್ ಸಿನಿಮಾದಲ್ಲಿ ರವಿ ಮಾಡಿದ್ದ ಸ್ಟಂಟ್ ನೆನಪಾಯಿತು ಪ್ರಯತ್ನ ಪಟ್ಟೆ.

ಮೊದಲೇ ಗೊತ್ತಿದ್ದರೆ ಜಂಪಾದಾಗ ಒಡೆದು ಹೋಗುವಂತದ್ದನ್ನೆಲ್ಲಾ ಮನೆಯಲ್ಲೇ ಇಟ್ಟುಬರುತ್ತಿದ್ದೆ ಎನ್ನುತ್ತಾನೆ ನಮ್ಮ ನ್ಯಾವಿಗೇಟರ್!

ಕಳೆದ ವರ್ಷ ಹೋದಾಗ ಮಾಡಲಾಗದ ವ್ಹೀಲೀಯಿಂಗ್ ಈಗ ಏಕೆ ಸುಲಭವಾಗಿ ಬಂತು ?ನನ್ನ ಭಾರ ಅಷ್ಟೊಂದು ಹೆಚ್ಚಾಗಿದೆಯೇ?

ಎರಡನೆಯ ದಿನ ಬಹಳಾ ಸುಸ್ತು ಮೈಕೈ ನೋವು ಇದ್ದಿದ್ದರಿಂದ ದೂರ ಎಲ್ಲೂ ಹೋಗದೇ ಪೇಟೆ ಸುತ್ತುವ ನಿರ್ಧಾರದಿಂದ ಒಂದು ಸುತ್ತು ದೋಹಾ ವನ್ನ ಸುತ್ತಿದೆವು. ಅದರ ಕೆಲವು ಫೋಟೋ ಗಳನ್ನು ಕೆಳಗೆ ಹಾಕಿದ್ದೇನೆ.
2006 ರ ಏಶ್ಯನ್ ಗೇಮ್ಸ್ ಗಾಗಿ ನಿರ್ಮಿಸಲ್ಪಟ್ಟ ಓಲಂಪಿಕ್ ಟಾರ್ಚ್ ( ಅಸ್ಪೈರ್ ಟವರ್)

ಸ್ಪೋರ್ಟ್ ಸಿಟಿಯ ಸಮೀಪದ ಸ್ಪೋರ್ಟ್ಸ್ ರೌಂಡ್ ಅಬೌಟ್

ಹೋಟೆಲ್ ಷರಟನ್ ಸಪ್ತತಾರಾ ಹೋಟೆಲ್.

ಖತಾರ್ ಇಸ್ಲಾಮಿಕ್ ಮ್ಯೂಸಿಯಮ್

ಓರಿಕ್ಸ್ ರೌಂಡ್ ಅಬೌಟ್

ಕಾರ್ನಿಷ್ ಪ್ರಾರಂಭದಲ್ಲಿ ಇರಿಸಲ್ಪಟ್ಟ ಕಪ್ಪೇಚಿಪ್ಪು ಹಾಗು ಮುತ್ತಿನ ಮಾದರಿ.

ಕಾರ್ನಿಷ್ ನ ಮದ್ಯಭಾಗದಲ್ಲಿರುವ ಆಕೃತಿ

ಮತ್ತೊಂದು ರೌಂಡ್ ಅಬೌಟ್ ನಲ್ಲಿ ಇರಿಸಲ್ಪಟ್ಟ ಖತಾರ್ ನ ರಾಷ್ಟ್ರಲಾಂಚನ.

ಹೀಗೇ ಸುತ್ತುತ್ತಾ ಸಿಕ್ಕ ಸಿಕ್ಕದ್ದನ್ನೆಲ್ಲ ಸೆರೆಹಿಡಿಯುತ್ತಾ ಅಂದಿನ ದಿನವನ್ನ ಕಳೆದೆವು.
ಮೂರನೆಯದಿನ ಬೆಳಿಗ್ಗೆ ಎಂಟು ಗಂಟೆಗೇ ಹೊರಟು ಇಂಟರ್ ಕಾಂಟಿನೆಂಟಲ್ ಹೋಟೆಲ್ ತಲುಪಿದೆವು ಅವತ್ತು ಅಲ್ಲಿ Jetski (Wave runner) ಓಡಿಸುವ ಉದ್ದೇಶವಿತ್ತು.
ಬೆಳಗಿನ ಸಮಯ ಯಕ್ಕಾಚಿಕ್ಕಿ ಬಿಸಿಲು ಇದ್ದಿದ್ದರಿಂದ ಅಷ್ಟೊಂದು ಜನ ಇರಲಿಲ್ಲ ನಾವು ಒಂದು 1300 cc ಯ YAMAHA
ಜೆಟ್ ಸ್ಕೀ ಯನ್ನ ಬಾಡಿಗೆಗೆ ಪಡೆದು ಸುಮಾರು ಮೂರುತಾಸುಗಳ ಕಾಲ ಅಲೆಗಳ ಮೇಲೆ ಕುಣಿದಾಡುತ್ತಾ ಮಸ್ತೀ ಮಾಡಿದೆವು. ಅದರ ಕೆಲವು ಫೋಟೊ ಗಳೂ ವೀಡಿಯೋಗಳನ್ನು ಇಲ್ಲಿ ಹಾಕಿದ್ದೇನೆ.
ನನ್ನ ಮನೆಯವರ ಫೋನ್ ನಂಬರ್ ಇದೆಯೋ ಒಮ್ಮೆ ಖಾತ್ರಿ ಮಾಡಿಕೋ ಶ್ಯಾಮ !!!!!!!!!!!

1300 cc ಯಮಹಾ ಜೆಟ್ ಸ್ಕೀ ತ್ರೇತೆಯಲ್ಲಿ ರಾಮನಿಗೆ ಸಿಕ್ಕಿದ್ದರೆ ಕಪಿಗಳಿಗೆ ಸಲಾಮ್ ಹೊಡೆಯುವ ಕೆಲಸವೇ ಇರಲಿಲ್ಲ.

ಧೂಮ್ 3 ನಲ್ಲಿ ಅಭಿಶೇಕ್ ಬಚ್ಚನ್,ಆದಿತ್ಯ ಚೋಪ್ರಾ ಇಬ್ಬರಿಗೂ ಖೋಕ್ ಇಬ್ಬರು ಹೊಸ ಹೀರೋಗಳು ಹಾಲೀವುಡ್ ಗೆ,
ವಿಷಯ ತಿಳಿದ ಇಶಾ ಡಿಯೋಲ್ ಈಗಾಗಲೇ ಸೈನ್ ಮಾಡಿ ಆಗಿದೆ.

ನಮ್ಮೂರಿಗ್ ತಕ ಹ್ವಾರ್ ಕೆರೆಬ್ಯಾಟೆ ಮಾಡೂತಾತ್ತು ಅಲ್ದೇ?

ಉಮೇಶ್ ಹೆಗ್ದೇರ್ ಮನೆ ಬುಲೊಟ್ ಗಾಡಿ ಹೋದಂಗೆ ಹೋಕೈತಿ ಹಲೇ ?

ಸುಮ್ಮನೆ ಡ್ಯೂಪಿಗೆಲ್ಲ ಹಣ ಕೊಡುವುದು ಬ್ಯಾಡ ಮಾರಾಯ್ರೆ ಸಿಂಪಲ್ ಉಂಟು ನಾವೇ ಮಾಡ್ತೇವೆ !!!!!!!!!!!!

ಒಟ್ಟಿನಲ್ಲಿ ಮೂರುದಿನ ಕಳೆದದ್ದೇ ಗೊತ್ತಾಗಲಿಲ್ಲ.
(ಪ್ರಕಾಶ್ ಹೆಗಡೆಯವರ,ಶಿವು ಸರ್ ರ, ಮಲ್ಲಿ ಸರ್ ರಷ್ಟು ಒಳ್ಳೆಯ ಚಾಯಾಗ್ರಹಕನೂ ಅಲ್ಲ, ಚಿತ್ರಲೇಖನ ಬರೆದು ಪಳಗಿದವನೂ ಅಲ್ಲ ಇದೊಂದು ಪ್ರಯತ್ನ ಅಷ್ಟೇ !!!!!!!!!!!!!!!!!!!!!!!)
ಚಿತ್ರಕೃಪೆ:- ಶ್ಯಾಮ್ ಹೆಗಡೆ.
ಕಾರ್ತೀಕ್ ನಡಹಳ್ಳಿ.
ಮಂಜುನಾಥ್ ಕೆ ಎಸ್ .

Comments
keep posting!!
@ Thanks for comments and suggestions Raajmaava.
Keep coming.
hum maneli pota iddu aadrooo sukaasumne hogi bidti heli hejaaru aste !!!!!!!!!!!!!!!!!!!!
ಫೋಟೋ ಗಳು ಸೂಪರ್ಬ್..!
ಧನ್ಯವಾದಗಳು ಹೀಗೇ ಬರುತ್ತಾ ಇರಿ ಬರೆಯುತ್ತಾ ಇರಿ.
ನನ್ನ ಬ್ಲಾಗೆಂಬ ಕಸದಬುಟ್ಟಿಗೆ ಸ್ವಾಗತ.
ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ.
ಪುರುಸೊತ್ತಿದ್ದಾಗ ಒಂದ ಸಲ ಕಸದ ಬುಟ್ಟಿ ತಡಕಿ ನೋಡಿ ಇನ್ನೂ ಯಾವ್ದಾರು ಕಸ ಇಷ್ಟ ಆದ್ರೂ ಆಗ್ಲಕ್ಕು.
ಹಿಂಗೇ ಬತ್ತಾ ಇರಿ ಬರಿತಾ ಇರಿ.
ಧನ್ಯವಾದಗಳು.
ಬ್ಲಾಗಿಗೆ ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ...
ಇದು ರಾಸಲಾಫಾನ್ ಬೀಚಾ..?
ಕತಾರ್ ದೇಶದಲ್ಲಿ ನಾನು ನಾಲ್ಕು ವರ್ಷ ಇದ್ದೆ...
ಆ ನೆನಪೆಲ್ಲ ಹಸಿರಾದವು...
ಮರಳುಗಾಡಿನ ದೇಶವಾದರೂ ಬಲು ಸುಂದರ ದೇಶ ಅದು...
ನನಗಂತೂ ಹೊಟ್ಟೆಕಿಚ್ಚಾಯಿತು...
ನಾನಿದ್ದಾಗ ಈ ಥರಹ ಎಂಜಾಯ್ ಮಾಡಲಾಗಲಿಲ್ಲವಲ್ಲ... ಅಂತ...
ಎಲ್ಲ ಫೋಟೊಗಳು...
ಅದಕ್ಕೆ ತಕ್ಕ ವಿವರಣೆಗಳು...
ಒಂದಕ್ಕಿಂತ ಒಂದು ಸೂಪರ್...!
ಆ ದೇಶದ ಬಗೆಗೆ ಇನ್ನಷ್ಟು ಬರಿ ಮಾರಾಯಾ...!
ವಿದಿಯೋ ಕೂಡ ಚೆನ್ನಾಗಿದೆ...
ಒಮ್ಮೆ ನಮ್ಮನ್ನೆಲ್ಲ ಪುಕ್ಕಟೆಯಾಗಿ ದೋಹ ತಿರುಗಾಡಿಸಿದ್ದಕ್ಕೆ ಧನ್ಯವಾದಗಳು...
ಸುಂದರ ಫೋಟೊ,
ವಿವರಣೆಗಳಿಗಾಗಿ ಅಭಿನಂದನೆಗಳು...
ಮೊದಲನೆಯ ದಿನದ್ದು ಉಮ್ ಸೈದ್ ಬೀಚ್,ಮೂರನೆಯ ದಿನದ್ದು ಇಂಟರ್ ಕಾಂಟಿನೆಂಟಲ್ ಹೋಟೆಲ್ ನ ಪಕ್ಕದ ಬೀಚ್.
2006 ರ ಏಶ್ಯನ್ ಗೇಮ್ಸ್ ನ ನಂತರ ಖತಾರ್ ಬಹಳ ಬದಲಾಗಿದೆಯಂತೆ.
ನೀವೂ ಒಮ್ಮೆ ಕುಟುಂಬ ಸಮೇತರಾಗಿ ಬನ್ನಿ ಖತಾರ್,ಕುವೈತ್,ಯೂ ಏ ಈ ಎಲ್ಲಾ ನೋಡಿ ಹೋಗಬಹುದು.ಖತಾರ್ ನ ಮೂಲೇ ಮೂಲೆ ಸುತ್ತಿಸುವ ಜವಾಬ್ದಾರಿ ನನ್ನದು.
ದೋಹನಗರದಲ್ಲಿ ಮಜಮಾಡಿದ ಫೋಟೋಗಳು ಮತ್ತು ವಿಡಿಯೋಗಳನ್ನು ನೋಡಿದೆ. ಖುಷಿಯಾಯ್ತು. ಸಮಯ ಸಿಕ್ಕಾಗಲೆಲ್ಲಾ ಈ ರೀತಿ ಮಜಮಾಡುವುದೆಂದರೇ ಬಲು ಖುಷಿ ಅಲ್ವಾ...ಮತ್ತೆ ನೀವು ಹೇಳಿದಂತೆ ನಾವೇನು ಒಳ್ಳೇ ಛಾಯಾಗ್ರಾಹಕರಲ್ಲ ಸರ್. ನಾನು ಮೊದಲು ಹೀಗೆ ತೆಗೆಯುತ್ತಿದ್ದು ಈಗ ಕಲಿತಿರಬಹುದು ನೀವು ಹಾಗೆ ಮುಂದೆ ಪಕ್ಕಾ ಆಗಿಬಿಡ್ತೀರಿ ಬಿಡಿ ಸರ್...
ಮತ್ತಷ್ಟು ಲೇಖನ ಮತ್ತು ಚಿತ್ರಗಳನ್ನು ಹಾಕಿ ಸರ್..
Pratikriyege dhanyavaadagaLu.
ನೀನು ಕರೆಯೋದು ಹೆಚ್ಚೋ
ನಾವು ಬರೋದು ಹೆಚ್ಚೊ...?
ಎಲ್ಲ ಫೋಟೊಗಳೂ ಚೆನ್ನಾಗಿದ್ದು.
aadare blog ge baruttaa iri pratikriyisuttaa iri.
ನಾವಂತೂ ಬರ್ಲಿಕ್ಕೆ ತಯ್ಯಾರು...
ನಮ್ಮವರು ಹೇಳಿದ ಹಾಗೆ
ನೀ ಕರಿಯೋದು ಹೆಚ್ಚೊ... ನಾವು ಬರೋದು ಹೆಚ್ಚೊ...?
ಖರ್ಚೆಲ್ಲಾ ನಮ್ಮದು...
ಹಣ ಮಾತ್ರಾ ನಿಂದು ...!
ದೋಹ ಪಟ್ಟಣ ತಿರುಗಿಸ್ತೀಯಾ... ಹೇಗೆ...?