"ಅವ ದವಾಕಾನಿಗ್ ಹೋಗೂ ರಾಸ್ತಾದಾಗಾ ಸರಿ ಹೋದನ್ರೀ"
ಚಿತ್ರಕ್ಕರ ನಂ ಕನ್ನಡ ಬಾಸೆ -೨ ಬ್ಲೊಗ್ ಓದುತ್ತಾ ಇದ್ದಾಗ ನನಗೂ ಹಲವಾರು ತಮಾಷೆಯ ಪ್ರಸಂಗಗಳು ನೆನಪಾದವು ಚಿತ್ರಕ್ಕರಿಗೆ ಪರಿಕಲ್ಪನೆಯನ್ನ ಕದ್ದ ಅಪವಾದ ಹೊರಿಸಬೇಡಿ ಎಂದು ವಿನಂತಿಸಿ ಕಾಮೆಂಟ್ ಹಾಕಿ ನನ್ನ ಬೆರಳುಗಳ ಲಟಿಗೆ ತೆಗೆದು ಸಿದ್ದನಾದೆ.
ಕನ್ನಡ ಒಂದೇ ಭಾಷೆಯಲ್ಲಿ ಪ್ರಾಂತ್ಯಗಳಿಗನುಗುಣವಾಗಿ ಬೇರೆ ಬೇರೆ ಅರ್ಥ ಕೊಡುತ್ತದೆ ಇಂತಹಾ ಹಲವಾರು ನಗೆ ಸನ್ನಿವೇಷಗಳು ನನ್ನ ನಿತ್ಯದ ಜೀವನದಲ್ಲಿ ನಡೆಯುತ್ತವೆ ಕೆಲವನ್ನ ಇಲ್ಲಿ ಬರೆಯುತ್ತಿದ್ದೇನೆ.
ಸುಮಾರು ಹತ್ತು ವರ್ಷಗಳ ಹಿಂದೆ ನನ್ನ ಅಣ್ಣನ ಟ್ರಾನ್ಸ್ ಪೊರ್ಟ್ ವ್ಯವಹಾರವನ್ನ ನೋಡಿಕೊಳ್ಳಲೆಂದು ನಾನು ಗುಲ್ಬರ್ಗಾದಲ್ಲಿದ್ದೆ.
ಅಲ್ಲಿ ಒಂದು ಫ್ಯಾಕ್ಟರಿಯಲ್ಲಿನ ಸರಕನ್ನ ಸಾಗಿಸುವ ಗುತ್ತಿಗೆ ಅಣ್ಣನದಾಗಿತ್ತು. ಮ್ಯಾನೆಜರ್ ಗಳು ಹಾಗು ಹೆಚ್ಚಿನ ಕೆಲಸಗಾರರು ಬೆಂಗಳೂರು ಹಾಗು ಮಡಕೇರಿಯವರಾಗಿದ್ದರಿಂದ ನನಗೂ ಪ್ಯಾಕ್ಟರಿಯಲ್ಲಿ ಕ್ವಾರ್ಟರ್ಸ್ ಹಾಗು ಮೆಸ್ ನ ಅನುಕೂಲ ಒದಗಿಸಿ ಕೊಟ್ಟಿದ್ದರು. ಅಲ್ಲಿ ನಮ್ಮ ಡ್ರೈವರ್ ಗಳು ಹಾಗು ಫ್ಯಾಕ್ಟರಿಯ ದಿನಗೂಲಿ ಕೆಲಸವರು ಸ್ಥಳೀಯರೆ ಇರುತ್ತಿದ್ದರು ಅವರ ಭಾಷೆಯನ್ನ ಬೆಂಗಳೂರಿನ ಹುಡುಗರು ಆಡಿಕೊಳ್ಳುತ್ತಿದ್ದರು.ಅವರು ಮಾತನಾಡುವ ಕನ್ನಡದಲ್ಲಿ ಮರಾಠಿ ತೆಲುಗು ಹಾಗು ಹಿಂದಿ ಶಬ್ಧಗಳ ಬಳಕೆ ಹೇರಳವಾಗಿತ್ತು ಮತ್ತೆ ಅರ್ಥ ಆದರೆ ಕೇಳಲು ಮಜವಾಗಿರುತ್ತಿತ್ತು.
"ರಾಸ್ತಾಬಿ ಬಕ್ಕಳ್ ಕರಾಬ್ ಅದಾರೀ ಬ್ರೇಕ್ ಬೀ ಕಮ್ಜೋರ್ ಅದಾರೀ ಹಳ್ಳಗ್ ಹೋಬೆಕಾತದ್ರೀ" ಹೀಗೆ ನಮ್ಮ ಡ್ರೈವರ್ ಗಳು ಟ್ರಿಪ್ ಮುಗಿಸಿ ತಡವಾಗಿ ಬಂದದ್ದರ ಕಾರಣ ಕೊಡುತ್ತಿದ್ದರು ಅದರ ಅರ್ಥ ( ನಮ್ಮ ಕಂಗ್ಲೀಷ್ ನಲ್ಲಿ) "ರಸ್ತೆ ತುಂಬಾ ಹಾಳಾಗಿದೆ ಬ್ರೇಕ್ ಕೂಡಾ ವೀಕ್ ಇದೆ ಸ್ಲೋ ಆಗಿ ಹೋಗಬೇಕಾಗುತ್ತದೆ" ಎಂದು.
ಅವರ ಸಂಖ್ಯೆ ಗಳೂ ಹಾಗೆ ಪೂರ್ಣ ಮರಾಠೀ ಮಯವಾಗಿರುತ್ತವೆ, ಅವರು ಐವತ್ತು, ನೂರು, ನೂರೈವತ್ತು, ಇನ್ನೂರನ್ನ, ಕ್ರಮವಾಗಿ ಪನ್ನಾಸ್ಸ್, ಷಂಬರ್, ದೇಡ್ಸೀ,ದೋನ್ಸೀ ಎಂದು ಹೇಳಿದ್ದನ್ನ ಅರ್ಥ ಮಾಡಿಕೊಳ್ಳುವಾಗ ನನಗೆ ತಿಂಗಳು ಗಳೇ ಹಿಡಿದವು.
ಫ್ಯಾಕ್ಟರಿ ಯಿಂದ ಬೆಂಗಳೂರಿಗೆ ಕಾಲ್ ಮಾಡಬೇಕಾದರೆ ನಾವು ಹತ್ತಿರದ STD ಬೂತ್ ಗೆ ಕಾಲ್ ಮಾಡಿ ಕಾನ್ಫರೆನ್ಸ್ ಕಾಲ್ ತೆಗೆದುಕೊಳ್ಳಬೇಕಾಗುತ್ತಿತ್ತು. ರಾತ್ರಿ ಮಲಗುವಾಗ ಕಾಲ್ ಮಾಡುವ ರೂಡಿಯ ಹುಡುಗರು ಬೆಂಗಳೂರಿನ ನಂಬರ್ ಕೊಟ್ಟ ತಕ್ಷಣ STD ಬೂತ್ ನವ ಸ್ವಲ್ಪ ವೈಟ್ ಮಾಡಿ ಎಂದು ಹೇಳಲು "ಜರಾ ನಿಂದರ್ರೀ"ಎನ್ನುತ್ತಿದ್ದ "ನಿಲ್ಲ್ಲೋದಿಕ್ಕೆಲ್ಲಾ ಆಗಲ್ಲ ನಾವೀಗ ಮಲ್ಗಿದೀವಿ" ಎಂದು ಅವರನ್ನ ರೇಗಿಸುತ್ತಿದ್ದೆವು "ಹಂಗಲ್ರೀ ಸರ್ರಾ ಜರಾ ಧಾಮ್ರೀ" ಎಂದಾಗ ಮತ್ತೆ ಅರ್ಥವಾಗದ ಭಾಷೆ ಯ ಬಳಕೆ ನಮ್ಮನ್ನ ನಗುವಂತೆ ಮಾಡುತ್ತಿತ್ತು.
ಫ್ಯಾಕ್ಟರಿಯಲ್ಲಿ ಒಬ್ಬ ಮೂಕನಿದ್ದ ಪಾಪ ಅವನಿಗೆ ಎಷ್ಟು ಚಿಕಿತ್ಸೆ ಕೊಡಿಸಿದರೂ ಮಾತು ಬಂದಿರಲಿಲ್ಲವಂತೆ, ಸಾಲದ್ದಕ್ಕೆ ಅವನಿಗೆ ಮೂಗ ಎನ್ನುವ ಅನ್ವರ್ಥವೇ ಅಂಕಿತವೂ ಹೌದು. ಹೀಗಿರುವಾಗ ಅವ ಎರಡುದಿನದಿಂದ ಕೆಲಸಕ್ಕೆ ಬಂದಿರಲಿಲ್ಲ ಸೂಪರ್ವೈಸರ್ ಕೇಳಿದರೆ "ಮೂಕ ಸರಿ ಹೋದನ್ರೀ" ಎಂದರು ನಮಗೆಲ್ಲಾ ಆಶ್ಚರ್ಯ ಅವನ ಇಪ್ಪತ್ತನೇ ವಯಸ್ಸಿನಲ್ಲಿ ಸರಿಹೋದನೇ? ಮಾತನಾಡುವಂತಾದನೇ? ಹೇಗೆ ಯಾವ ಡಾಕ್ಟರ್ ಹತ್ತಿರ ತೋರಿಸಿದರು ಹೇಗೆ ಸರಿಹೋದ ಎಂದೆಲ್ಲಾ ಕೇಲಿದೆವು.
"ಇಲ್ರಿ ನಿನ್ನಿ ಮುಂಜಾಳೆ ಮಯ್ಯಾಗ್ ಅರಾಮಿರ್ಲಿಲ್ರೀ ದವಾಕಾನಿಗ್ ಕರ್ಕೊಂಡು ಹೋಗೋ ರಾಸ್ತಾದಾಗ ಸರಿ ಹೋದನ್ರೀ" ಬೇಸರದ ಮುಖ ಮಾಡಿ ಅವನ ಸ್ನೇಹಿತರು ಹೇಳಿದರು. ಇದ್ಯಾಕ್ರೋ ಖುಷಿ ಪಡುವ ವಿಷಯಕ್ಕೆ ಇಷ್ಟು ಬೇಜಾರಾಗಿದೀರಿ? ಮತ್ತೆ ಅವ ಕೆಲಸಕ್ಕೆ ಯಾಕೆ ಬರಲಿಲ್ಲಾ? ಎಂದು ಸ್ವಲ್ಪ ಸಿಟ್ಟಿನಲ್ಲಿ ಕೇಳಿದಾಗ "ಹಿಂಗ್ಯಾಕ್ರೀ ಸರ್ರಾ ಅವ ನಿನ್ನಿ ಮೂಂಜಾಳಿನೇ ಸರಿಹೋದನ್ರೀ ನಾವು ನಿನ್ನಿ ಚಂಜಿಗ್ ಹೋಗಿ ಮಣ್ಣ್ ಮಾಡಿ ಬಂದೇವ್ರೀ ಮತ್ತ ಹ್ಯಾಂಗ್ ಕೆಲ್ಸಕ್ಕ್ ಬರ್ತಾನ್ರೀ" ಎಂದರು.
ಸರಿಹೋದ ಎನ್ನುವ ಶಬ್ಧದ ಅರ್ಥ ತೀರಿ ಹೋದ ಎನ್ನುವುದು ಗೊತ್ತಾತಾಗ ನಾವೆಲ್ಲಾ ತಲೆತಿರುಗಿ ಬೀಳುವಂತಾಗಿತ್ತು.
ಎಲ್ಲಕ್ಕಿಂತಾ ನಗೆತರಿಸುವ ವಿಷಯ ಅವರ ಮುಗ್ದತನದ್ದು ಓದು ಬರಹ ಇಲ್ಲದ ಅವರ ಪ್ರಪಂಚಜ್ನಾನ ಅಷ್ಟಕ್ಕಷ್ಟೇ ಸಿನಿಮಾ,ಹಾಗು ನಾಟಕದ ಪಾತ್ರಗಳನ್ನೂ ನಿಜ ಎಂದು ನಂಬುತ್ತಿದ್ದರು ಅಲ್ಲಿ ಬರುವ ಪಾತ್ರಗಳ ಹೆಸರನ್ನ ಅದರ ಗುಣ ಹಾಗು ಮನಸ್ತಿತಿಗೆ ಹೊಂದುವ ನಮ್ಮ ಹುಡುಗರಿಗೆ ಇಡುತ್ತಿದ್ದರು.ಮಳ್ಳ ಜಮಾದಾರ,ದೇಸಾಯಿ ಮಾಸ್ತರ್ರ,ಕಾಟ್ರಿ ಕೂಟ್ರಿ ಎಂದೆಲ್ಲಾ ಅದರ ಹಿಂದಿನ ಮರ್ಮ ತಿಳಿಯಲು ನಾವೂ ಆ ನಾಟಕವನ್ನ ನೋಡಬೇಕಾಗುತ್ತಿತ್ತು.
ಒಂದು ಪ್ರಾಂತ್ಯದ ಭಾಷೆಯನ್ನ ಇನ್ನೊಂದು ಭಾಷೆಯವರು ಆಡಿಕೊಳ್ಳುವುದು ಹೊಸದೇನಲ್ಲ ಗುಲ್ಬರ್ಗದಲ್ಲಿದ್ದಾಗ ನಾವು ಸಂಜೆ ವಾಲಿಬಾಲ್ ಆಡುತ್ತಿದ್ದೆವು ಹೆಚ್ಚಾಗಿ ಫ್ರಂಟ್ ಲೈನ್ ನಲ್ಲಿ ಆಡುತ್ತಿದ್ದ ನಾನು ಎದುರಿನವನ ಸ್ಮಾಷನ್ನ ಪ್ರಿಡಿಕ್ಟ್ ಮಾಡಿ "ಥರ್ಡ್ ಲೈನ್ ನಲಿ ಬಿತ್ತು" ಎಂದು ಕೂಗುತ್ತಿದ್ದೆ. ಅದಕ್ಕೆ ಮಡಕೇರಿ ಹುಡುಗರು ನಗುತ್ತಿದ್ದರು ನನಗೆ ಸುಮಾರು ದಿನದವರೆಗೆ "ಬಿತ್ತು" ಶಬ್ಧಕ್ಕೆ ಮಡಕೇರಿಯಲ್ಲಿ ಕೆಟ್ಟ ಅರ್ಥ ಇದೆ ಎಂದು ತಿಳಿದೇ ಇರಲಿಲ್ಲ.
ಇಂತಹಾ ಹಲವಾರು ಘಟನೆ ಗಳು ನಮ್ಮ ನಿಮ್ಮ ಜೀವನದಲ್ಲಿ ನಡೆಯುತ್ತಿರುತ್ತದೆ. ನೆನಪಾದಾಗಲೆಲ್ಲಾ ಅದನ್ನ ಬರೆಯುತ್ತಿರುತ್ತೇನೆ.
ನನಗೆ ನಗೆ ತರಿಸಿದ "ಸಂದರ್ಭ" ನಿಮ್ಮನ್ನೂ ನಗಿಸಬೇಕೆಂದಿಲ್ಲ ಆದರೆ ಸಿಟ್ಟು ತರಿಸದಿದ್ದರೆ ಸಾಕು ಏನಂತೀರಿ?
(ಇಂತಹಾ ಬರಹಗಳನ್ನ ಬರೆಯಲು "ಇಟ್ಟಿಗೆ ಸಿಮೆಂಟು" ಪ್ರಕಾಶಣ್ಣನೇ ಸ್ಪೂರ್ತಿ ನಾ ಹಾಳಾಗಿದ್ಡೇನೆ ಅನಿಸಿದರೆ ಪ್ರಕಾಶಣ್ಣ ನನ್ನ ತರಾಟೆಗೆ ತೆಗೆದು ಕೊಳ್ಳಿ)

Comments
ಚಲೋ ಬರೆದೀಯಲ್ಲಾ ಮಾರಾಯ.....ನಗು ತಡಿಯಲಿಕ್ಕ ಆಗಲಿಲ್ಲ್ ನೋಡ್...
ನಿಮ್ ಕಡೆ ಕವಳ ಅಂದ್ರೆ ನಮ್ಮ ಬೆಂಗಳೂರ್ ಕಡೆ "ಕವಳ ತಾಯಿ" ಗೊತ್ತಲ್ಲ..ಹಂಗ್ ತಿಳ್ಕೊತಾರೆ..
ಇಲ್ಲಿ ಒಬ್ರು ಟಿವಿ ಹಾಕು ಅಂತ ಹೇಳೋಕೆ ಟಿವಿ ಹಚ್ಚು ಅಂತಾರೆ...ಎನ್ ಅದೂ ಬೆಂಕಿನ ಹಚ್ಚೊಕೆ....
ಬರೀತಾ ಇರು....ಪ್ರಕಾಶಣ್ಣನ ತರಹ ಹಹಹಹಹಾ...
ದನ್ಯವಾದಗಳು.
ಭಾರಿ ಬರಿದಿರ್ರಿ, ಹಿಂಗ ಬರಿತ ಇರ್ರಿ, ನಾವು ಓದ್ಕೊತಿವಿ,
ನಾ ಬರೀತಾರಿ ನೀವೂ ಹಿಂಗೇ ಬಂದು ಓದ್ತಾ ಇರ್ರೀ.
ನಗು ಬರುವ ಹಾಗೆ ಬರೆದಿದ್ದೀಯಾ...
"ಕೋತಿ ತಾನೂ ಹಾಳಾಗಿದ್ದಲ್ಲದೆ...
ವನವನ್ನೂ ಕೆಡಿಸಿತ್ತಂತೆ.."
ಇಲ್ಲಿ ಕೋತಿ ನೀನೇಯೆನೋ ಅಂತ ಅನುಮಾನ...
ಪ್ರಕಾಶ್ ಇರಲಿಕ್ಕಿಲ್ಲ...
ನಿನ್ನ ಬರಹ ಓದಿ ನಾವೆಲ್ಲ ನಕ್ಕೂ , ನಕ್ಕೂ ಸುಸ್ತಾಗಿದ್ದೇವೆ...
ಆಶಾ ಪ್ರಕಾಶ್.
ನಿಮ್ಮ ಮೊದಲ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮ್ಮಂತ ಬರಹಗಾರರು ಓದಿ ಒಪ್ಪಿಕೊಂಡರೆ ಅದು ನನಗೆ ರಾಷ್ಟ್ರಪ್ರಶಸ್ತಿಗೆ ಸಮಾನ.
ನಿಮ್ಮ ಸಲಹೆ ನನ್ನನ್ನು ಹವ್ಯಕ ಭಾಷೆಯ ಬಗ್ಗೆ ಬರೆಯುವಲ್ಲಿ ಯೋಚಿಸುವಂತೆ ಮಾಡುತ್ತಿದೆ.
ಹೀಗೇ ಬರುತ್ತಾ ಇರಿ ಬರೆಯುತ್ತಾ ಇರಿ.
ನನ್ನ "ಕಸದಬುಟ್ಟಿಗೆ" ಸ್ವಾಗತ ಪ್ರತಿಕಿಯೆಗೆ ಧನ್ಯವಾದ.
"ನರನ ನೋಯೆಸೆ ಮುರಹರ ಬರುವನು ದಿಟ"
ಫ್ರಕಾಶಣ್ಣ ನ ಬಗ್ಗೆ ಬರೆದದ್ದಕ್ಕೆ ನೀವು ನನ್ನ ಬ್ಲೋಗ್ ಗೆ ಬರುವಂತಾಯಿತು.
ನನ್ನ ಎಲ್ಲಾ ಬರಹಗಳಿಗೂ ಪ್ರಕಾಶಣ್ಣನೇ ಸ್ಪೂರ್ತಿ ಅವರು ನನ್ನ ಮೊದಲ ಬರಹದಲ್ಲಿ ಏನನ್ನೋ ಗುರುತಿಸಿ ಬೆನ್ನು ತಟ್ಟಿದ್ದರಿಂದಲೇ ನಾ ಮುಂದುವರೆಸುವಂತಾಯಿತು ಇಲ್ಲದಿದ್ದರೆ ನನ್ನ ಮೊದಲ ಬರಹವೇ ಕೊನೆಯದಾಗುತ್ತಿತ್ತು.
ಹೀಗೇ ಬರುತ್ತಾ ಇರಿ ಬರೆಯುತ್ತಾ ಇರಿ.
ಪ್ರತಿಕ್ರಿಯೆಗೆ ಧನ್ಯವಾದಗಳು.
"ನಿಮ್ಮನು ನೋಡಿ ನಾನು ನಕ್ಕರೇ ಊರೇ ನಗುವುದು ನಾನು ಬಿದ್ದರೆ" ಅದಕ್ಕೆ ಹಾಗೆಲ್ಲಾ ಮಾಡಲ್ಲ.
Thanks for the visit and comments.
keep reading and keep commenting.
ನೀವು ಹೇಳುವುದು ಸರಿ.
ಹೀಗೇ ಬರುತ್ತಾ ಇರಿ ಬರೆಯುತ್ತಾ ಇರಿ.
ನನ್ನ ಬ್ಲಾಗೆಂಬ ಕಸದ ಬುಟ್ಟಿಗೆ ಸ್ವಾಗತ ಹಾಗು ಮೊದಲ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮ್ಮ ಮಾರ್ಗದರ್ಶನ ಹಾಗು ಸಲಹೆ ಹೀಗೇ ಇರಲಿ.
ನಿಮ್ಮ ಬರಹದಲ್ಲಿ ಪ್ರತ್ಯೇಕತೆ ಇದೆ...
ಯಾರನ್ನೂ ಕಾಪಿ ಮಾಡುವದಿಲ್ಲ...
ಒಮ್ಮೆ ಇಲ್ಲಿಗೆ ಬಂದರೆ ಭಾವ ಪೂರ್ಣ ಲೆಖನ ಸಿಗುತ್ತದೆ..
ನನಗೆ ನಿಮ್ಮ ಹಾಸ್ಯ ಬರಹಗಳು ಇಷ್ಟ...
ಮಂಗನಿಂದ ಮಾನವ ...
ಹಾಗಾಗಿ ಕೋತಿಗೂ ಮನುಷ್ಯರಿಗೂ ಹತ್ತಿರದ ಬಾಂಧವ್ಯ...
ಹಾಗಾಗಿ ಬೇಸರ ಪಡುವ ಅಗತ್ಯವಿಲ್ಲ...
ಅಂತೂ....ಕೃಷ್ಣನ ಕೈಯಲ್ಲಿ ಚಕ್ರ ಹಿಡಿಸಿದೆ ಅನ್ನು...! ಭೇಷ್...!
ಧನ್ಯವಾದಗಳು. "ಹೂವ ತರುವವನ ಮನೆಗೆ ಹುಲ್ಲು ಹೊರುವ" ಇದು ಕೃಷ್ಣನ ಮೇಲಿನ ಮಾತು.
ಭಕ್ತರ ಅಭೀಷ್ಟವನ್ನ ಈಡೇರಿಸಲು ಕ್ರಿಷ್ಣ ಕೈಯಲ್ಲಿ ಚಕ್ರ ಹಿಡಿದ ಅಷ್ಟೇ.