ಮತ್ತೆ ಬಂದೆ ತಮಾಷೆ ಮಾಡಲು.
ಸುಮಾರು ಎರಡು ತಿಂಗಳುಗಳಿಂದ ಬ್ಲಾಗ್ ಲೋಕದಕಡೆ ಬರಲೇ ಆಗುತ್ತಿರಲಿಲ್ಲ. ಅಫೀಸಿನಲ್ಲಿ ಸ್ವಲ್ಪ ಕೆಲಸದ ಒತ್ತಡ,ಮದುವೆಯ ತಯಾರಿ, ಮದ್ಯದಲ್ಲಿ ಒಂದುವಾರದ ಬೆಂಗಳೂರು ಪ್ರವಾಸ, ಹೀಗೆ ಹಲವಾರು ಕಾರಣಗಳಿಂದ ಮನಸ್ಸು ಹೇಳಿದಲ್ಲಿ ನಿಲ್ಲುತ್ತಿರಲಿಲ್ಲ, ಬೇಡವೆಂದಲ್ಲಿ ಹೋಗದೆ ಇರುತ್ತಿರಲಿಲ್ಲ. ವರ್ತಮಾನದ ಉದಾಹರಣೆ ಕೊಡುವುದಾದರೆ Task manager ಕೂಡ not responding ಆದಂತಾಗಿತ್ತು. ಹೊಸ ಬ್ಲಾಗ್ ಬರೆಯುವುದು ಹಾಗಿರಲಿ ಅಪ್ಡೇಟ್ ಆದ ಬ್ಲಾಗ್ಗಳನ್ನ ಓದಿ ಪ್ರತಿಕ್ರಿಯಿಸಲೂ ಆಗದ ಸ್ತಿತಿಯಲ್ಲಿದ್ದೆ. ಈತನ್ಮದ್ಯೆ ನಮ್ಮ ಇಟ್ಟಿಗೆ ಸಿಮೆಂಟು ಪ್ರಕಾಶಣ್ಣ ಹಾಗು ಛಾಯಾ ಕನ್ನಡಿ ಶಿವು ಸರ್ ರ ಪುಸ್ತಕ ಬಿಡುಗಡೆ ಕೂಡಾ ಆಯಿತು ಅವರಿಗೆ ಅಭಿನಂದನೆ ಹೇಳುವ ಸೌಜನ್ಯಕ್ಕೂ ಕೊರತೆ ಯಾಗಿ ಬಿಟ್ಟಿತ್ತು. ಅದರ ಜೊತೆ ಯಕ್ಷಗಾನದಲ್ಲಿ ನಾನು ಅರಾಧಿಸುವ ಮೇರು ಕಲಾವಿದ ಕೆರೆಮನೆ ಮಹಾಬಲ ಹೆಗಡೆ ಯವರು ದಿವಂಗತರಾದರು ಅವರಿಗೆ ಎರಡು ಸಾಲಿನ ಶ್ರದ್ದಾಂಜಲಿ ಬರೆಯಲೂ ಆಗದ ಸ್ತಿತಿಯಾಗಿ ಬಿಟ್ಟಿತ್ತು. ಸುಮಾರು ಒಂದು ವರ್ಷದಿಂದ ಬ್ಲಾಗಿಗರ ಸಮುದ್ರದ ಒಂದು ಹನಿಯಾಗಿ, ಬರವಣಿಗೆಯ ಲೋಕದಲ್ಲಿ ನನ್ನದೇ ಸಣ್ಣ ಬಳಗವನ್ನ ಸೃಷ್ಟಿಸಿ ಕೊಂಡಿದ್ದೆ ಆದರೆ ಒಮ್ಮೊಮ್ಮೆ ಯೋಚಿಸಿದರೆ ಇದೆಲ್ಲದರಿಂದ ದೂರವಾಗಿಬಿಡುವ ಆತಂಕ ಕಾಡತೊಡಗಿತ್ತು. ಎರಡು ತಿಂಗಳುಗಳಿಂದ ಜೀವನದಲ್ಲಾದ ಬದಲಾವಣೆಗಳು (ಅನ್ನುವುದಕ್ಕಿಂತ ಬೆಳವಣಿಗೆಗಳು ಎನ್ನುವುದೇ ಸರಿಯಾಗಬಹುದು.) ಇದಕ್ಕೆಲ್ಲಾ ಕಾರಣ ಇರಬಹುದು.
ಆದರೆ ಕೆಲವು ದಿವಸ ಗಳಿಂದ ಸ್ನೇಹಿತರ ಒತ್ತಾಯ ಮತ್ತೆ ಬರೆಯಲು ಪ್ರಚೋದಿಸುತ್ತಿದೆ.
ಈಗ ಎಲ್ಲವನ್ನೂ ರಿಫ್ರೆಶ್ ಮಾಡಿಕೊಂಡು ಮತ್ತೆ ಬರೆಯಬೇಕು ಅನ್ನಿಸುತ್ತಿದೆ ಆದರೆ ಮುಂದಿನ ಸಮಸ್ಯೆ ಬರೆಯುವುದಾದರೆ ಏನನ್ನ ಎನ್ನುವುದು ? ಬೇಸರ ಕಳೆಯಲು ಬರೆದ ಬ್ಲಾಗ್ ಬೇರೆಯವರಿಗೆ ಬೇಸರ ತರಿಸಬಾರದು ಎನ್ನುವ ಕಾರಣಕ್ಕಾಗಿ ಈ ಎರಡು ತಿಂಗಳು ಏನನ್ನೂ ಬರೆಯಲಿಲ್ಲ ಎನ್ನುವ ಸಮಾಧಾನ ನನಗೆ ನಾನೇ ಮಾಡಿಕೊಂಡು, ತಿಳಿಯಾದ ಮನಸ್ತಿತಿಯಲ್ಲಿ ಮತ್ತೆ ಬರೆಯಲು ಕುಳಿತಿದ್ದೇನೆ. ನೋಡೋಣ ಇನ್ನೆರಡು ದಿನಗಳಲ್ಲಿ ಒಂದು ಬ್ಲಾಗನ್ನ ಪೊಸ್ಟ್ ಮಾಡಲಾಗುತ್ತದೆಯೇ ಎಂದು !!!!!!!

Comments
ನಿಮ್ಮ ಬ್ಲಾಗ್ ನೋಡದೆ ಬಹಳ ದಿನ ಆಗಿತ್ತು
ಪುನಃ ನಿಮ್ಮ ಬ್ಲಾಗ್ ನೋಡಲು ಕಾತರದಿಂದ ಕಾಯುತ್ತಿದ್ದೇನೆ
ನಿಮ್ಮ ಹೊಸ ಬ್ಲಾಗ್ ಪೋಸ್ಟಗಾಗಿ ಕಾಯುತ್ತಿದ್ದೇವೆ. :)
ಮತ್ತೆ ಬರೆಯಲಿರುವ ಹೊಸ ಬ್ಲಾಗ್ ಪೋಸ್ಟ್ ಗೆ All the best.. :)
ಬರೆಯುತ್ತಾ ಇರು.....ಅಜಾದ್ ಮಾಮ ಹೇಳಿದ ಹಾಗೆ ಆಮೇಲೆ ಗೊತ್ತಲ್ಲ......
ಧನ್ಯವಾದಗಳು ನಿಮ್ಮೆಲ್ಲರ ಪ್ರತಿಕ್ರಿಯೆಯೇ ನನ್ನ ಬರವಣಿಗೆಗೆ ಸ್ಪೂರ್ತಿ.
ಮೊದಲ ಪ್ರತಿಕ್ರಿಯೆಗೆ ಧನ್ಯವಾದ ಹೀಗೇ ಬರುತ್ತಾ ಇರಿ ಬರೆಯುತ್ತಾ ಇರಿ.
anta kelaku helakare "taNangane"(hope you know the speciality of this word if not ask Srivatsa) Pratyaksha aaadyalooo :)
super welcome back
ಧನ್ಯವಾದಗಳು.