Happy New Year!!!!!!!!!!!!!!!!!!!!!!!!!!!!!!

ಮೊಟ್ಟ ಮೊದಲನೆಯದಾಗಿ ಸರ್ವರಿಗೂ ಹೊಸವರ್ಷದ ಶುಭಾಶಯಗಳು.ನೊಡ ನೋಡುತ್ತಿದ್ದಂತೆ ಮತ್ತೊಂದು ವರ್ಷ ಕಳೆದೇಹೋಯಿತು.
ವರುಷ ನೂರಾಯುಷ್ಯವು ಅದರೊಳಗಿರುಳು ಕಳೆದೈವತ್ತು|
ವಾರ್ದಕ್ಯ ಬಾಲ್ಯ ಕೌಮಾರದಲಿ ಮೂವತ್ತು||
ಎಂಬಂತೆ ಇದು ನನಗೆ 30ನೆಯ ಹೊಸ ವರ್ಷ ಆಟ ಆಡುತ್ತಾ,ನೋಡುತ್ತಾ ಜೀವನದ ಅರ್ದ ಆಯುಷ್ಯ ಕಳೆದೇ ಹೋಯಿತು.ಯಾವುದೇ ಸಾಧನೆ ಇಲ್ಲದೇ ಅರ್ದ ಆಯುಷ್ಯವನ್ನ ಕಳೆದ ಬಗ್ಗೆ ವಿಷಾದ ಒಂದು ಕಡೆಗಾದರೆ, ಗೆದ್ದ,ಸಂಪಾದಿಸಿದ,ಅದಾಗಿ ಸೇರಿಕೊಂಡ ಸ್ವಲ್ಪದ ಬಗ್ಗೆ ಅಲ್ಪತೃಪ್ತಿ ಇದೆ.
ಯಾರದ್ದೋ ಆದ ಹೊಸವರ್ಷದ ಆಚರಣೆಯನ್ನ ನಾಚಿಕೆ ಇಲ್ಲದೆ ನಮ್ಮದಾಗಿಸಿ ಕೊಂಡು ಸಂಭ್ರಮ ಪಡುವವರಲ್ಲಿ ನಾನು ಮೊದಲಿಗನೂ ಅಲ್ಲ ನನ್ನಿಂದಾಗಿ ಇದು ಕೊನೆಯಾಗುವುದೂ ಇಲ್ಲ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಒಂದು ವಾರದ ಮುಂಚಿನಿಂದ ಹೊಸ ವರ್ಷಾಚರಣೆಯ ಕಾರ್ಯಕ್ರಮದ ಬಗ್ಗೆ ಮಾತುಕತೆ ನಡೆದು ಕೊನೆಗೆ ಯಾವುದೂ ಫಲಿಸದೇ ಹೋದಾಗ ನಾನು ಶ್ಯಾಮ ಮನೆಯಲ್ಲೇ ಆಚರಿಸುವ ನಿರ್ದಾರಕ್ಕೆ ಬರಬೇಕಾಯಿತು.
E-mail, SMS Phone ಗಳಲ್ಲಿ ಶುಭಾಶಯಗಳನ್ನ ತಿಳಿಸಿ ಊಟ ಮಾಡಿ ಮಲಗುವಾಗ ಸುಮಾರು ಮೂರು ಗಂಟೆ ಆಗಿರ ಬಹುದು. ಆಗ ನನ್ನ ಹಿಂದಿನ ಹೊಸ ವರ್ಷಾಚರಣೆಗಳ ಸಿಹಿ,ಕಹಿ ಅನುಭವಗಳ ನೆನಪಿನ ಬುತ್ತಿ ತೆರೆದುಕೊಂಡಿತು.
1996 ರಲ್ಲಿ ಬೆಂಗಳೂರಿಗೆ ಬರುವ ವರೆಗೆ ನನ್ನ ಡಿಸೆಂಬರ್ 31 ಗಳು ಪ್ರಸಾರ ಕಪ್ಪು ಬಿಳುಪು ಆಗಿದ್ದವು. ಅದರ ನಂತರ ಪ್ರತೀವರ್ಷವೂ ಹೊಸ ಹೊಸ ಅನುಭವಗಳನ್ನೇ ಕೊಡತೊಡಗಿದವು.
ದಿನ ಬೆಳಗಾದರೆ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಈ ರಸ್ತೆಗೆ ಬಾರದಂತೆ ಮಾಡಪ್ಪಾ ಎಂದು ದೇವರಲ್ಲಿ ಮೊರೆ ಹೋಗುವ M G Raod ಗೆ ಡಿಸೆಂಬರ್ 31 ರಂದು ಹೋಗುವ ಮಜವೇ ಬೇರೆ ಪೋಲೀಸರ ಒದೆ ತಿಂದು ಮರುದಿನ ಒದ್ದಾಡುವ ನೋವೇ ಬೇರೆ.
ಹೊಸ ವರ್ಷದ ಈಸ ಹೆಚ್ಚಾಗಿ ಲೆಕ್ಕತಪ್ಪಿ ಕುಡಿದು ಕರುಳನ್ನು ಹೊರಹಾಕಿ ಮರುದಿನ ಯಾರಿಗೂ ಮುಖ ತೋರಿಸದಷ್ಟು
ಜಿಗುಪ್ಸೆ ಬಂದವರನ್ನು ಕಂಡಾಗ ವರ್ಷದ ಮೊದಲದಿನವೇ ಇವನಿಗೆ ಹೀಗಾದರೆ ಇನ್ನು ಇಡೀ ವರ್ಷ ಇವನನ್ನು ಕಾಪಡುವ ಶಕ್ತಿ ದೇವರಿಗಿರಲಪ್ಪಾ ಎನಿಸುತ್ತದೆ. ಉಬ್ರಮೆ ಹೆಚ್ಚಾಗಿ ಯಡ್ಡಾದಿಡ್ಡೀ ಯಾಗಿ ವಾಹನ ಓಡಿಸಿ ತಮ್ಮ ಕೊನೆಯ ಹೊಸವರ್ಷ ಆಚರಿಸಿ ಕೊಂಡವರ ಬಗ್ಗೆ ಕೇಳಿ ಆದ ಮನಸ್ಸಿನ ಭಾರ ಇಳಿಯಲು ಕೆಲವು ವರ್ಷ ಬೇಕಾಗಿತ್ತದೆ.ಮುಂದಿನ ವರ್ಷ ದಿಂದ ಮನೆಯಲ್ಲಿ ಶಿಸ್ತಾಗಿ
ಊಟ ಮಾಡಿ ಮಲಗಿ ಬಿಡ ಬೇಕೆನ್ನುತ್ತದೆ. ಮುಂದಿನ ಡಿಸೆಂಬರ್ 20 ರ ವರೆಗೂ ಅದೇ ಮನಸ್ತಿತಿ ಇರುತ್ತದೆ ನಂತರ ಯಥಾಪ್ರಕಾರ!!!!
ಕಳೆದ ನಾಲ್ಕು ವರ್ಷಗಳಿಂದ ಒಬ್ಬರಲ್ಲಾ ಒಬ್ಬ ನೆಂಟರ ಮನೆಗಳಲ್ಲೇ ಸೇರಿ ಆನಂದಿಸಿದ ಅನುಭವ ಗಳನ್ನ ಮರೆಯಲಾಗುತ್ತಿಲ್ಲ.
ಹಲವಾರು ಯಶಸ್ವೀ Party ಗಳಿಗೆ ನಾನೇ ಪವಿಪ್ರ ತೊಟ್ಟದ್ದೂ ಇದೆ. ಒಟ್ಟಿನಲ್ಲಿ ಪ್ರತೀ ಹೊಸ ವರ್ಷ ಹೊಸ ಹೊಸ ಅನುಭವಗಳನ್ನೇ ಕೊಡುತ್ತಾ ಬಂದಿದೆ.
ವಿ ಸೂ- ಈಸ ಎಂಬ ಶಬ್ದದ ಅರ್ಥ ಗೊತ್ತಿದ್ದವರಿಗೆ ಹೇಗೂ ಆಯಿತು ಇಲ್ಲದಿದ್ದವರಿಗಾಗಿ ಅದರ ಅರ್ಥ ಇನ್ನಿಲ್ಲದ ಸಂತೋಷ ಎಂದಿಟ್ಟು ಕೊಳ್ಳೋಣ.
ಬಂದಿತೊಂದು ಹೊಸ ವರ್ಷ,
ತರಲಿ ಎಲ್ಲರ ಬಾಳಲ್ಲೂ ಹರ್ಷ
ನೋವುಗಳಿಗಾಗಲಿ ಅಂತ್ಯದ ಸ್ಪರ್ಷ
ಸುರಿಯಲಿ ಸಂತಸದ ವರ್ಷ.

Comments

Unknown said…
ಜೀವನದಲ್ಲಿ ನೀನು ಬಹುವಾಗಿ ಸಾಧಿಸಿದ್ದೀಯ.(ಅಂಬಾನಿ ಯಷ್ಟು ಅಲ್ಲದಿದ್ದರೂ ಅಂಬಾ..ನಿ ಅಷ್ಟು) ನೀ ಅಲ್ಲಿಗೆ ಹೋದಮೇಲೆ ಬೆಂಗಳೂರು ಸ್ಪಿರಿಟ್ ಕಡಿಮೆಯಾಗುವಷ್ಟು.
happy New Year.
ಧನ್ಯವಾದಗಳು ರಾಘುಮಾವ,
Ittigecement said…
ಮೂರ್ತಿ...

ಹೆಚ್ಚಿಗೆ ತಲೆ ಕೆಡಿಸಿ ಕೊಳ್ಳಬೇಡಿ...

ಜೀವನ ಹೇಗೆ ಬರುತ್ತದೊ ಹಾಗೆ ಸ್ವೀಕರಿಸುವದು ಬುದ್ಧಿವಂತರ ಲಕ್ಷಣ"

ಚಂದದವಾಗಿ ಬರೆದಿದ್ದೀರಿ...

ಹೊಸ ವರ್ಷದ ಶುಭಾಶಯಗಳು...
Unknown said…
hosa vrasha bantu hotu ...1 varsha jaasti aatu namge aste..aadru aa raatri friends jote kaleyoo majane bere...just a change in life!

Popular posts from this blog

ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ ! :)

ಹುಚ್ಚು ಕೋಡಿ ಮನಸು 2

Farmville Application in Facebook