ಕರ್ವಾ ಎಂಬ ಮರೀಚಿಕೆ.






ಮೇಲೆ ರಣ ಬಿಸಿಲು, ಕೆಳಗೆ ಕಾದ ಮರಳು,ಬಗಲಲ್ಲಿ ಬಾರದ ಲ್ಯಾಪ್ ಟೊಪ್ ಬ್ಯಾಗು, ಸಾಲದ್ದಕ್ಕೆ ಡ್ರೈವರ್ ರಜ.
ಟ್ಯಾಕ್ಸಿ ಕಾದು ಕಾದು ಸಾಕಾದಾಗ ಮುತ್ತುಮಾವನ ಚುಟುಕ ನೆನಪಾಯಿತು.
"ಬೆಂಗಳೂರಿನ ಸಿಟಿ ಬಸ್ಸುಗಳೆಂದರೆ ಕಷ್ಟಗಳಿದ್ದಂತೆ ಮಗನೆ|
ತಿಳಿಸಿ ಬಾರವವು ಬಂದರೆ ಒಂದರ ಹಿಂದೊಂದು ಬರುವವು ಮಗನೆ||"


ಅಂದ ಹಾಗೆ ನಾ ಇವತ್ತು ಬರೆಯಲಿಕ್ಕೆ ಹೊರಟಿರುವುದು ಖತಾರೆಂಬ ಮರಳುಗಾಡಿನ ಸರ್ಕಾರೀ ಸ್ವಾಮ್ಯದ "ಕರ್ವಾ"
ಟ್ಯಾಕ್ಸಿ ಯ ಬಗ್ಗೆ.
"ಕರ್ವಾ" ಇದು ಖತಾರಿನ ಸರ್ಕಾರೀ ಸಾರ್ವಜನಿಕ ಸಂಚಾರೀ (ಅ)ವ್ಯವಸ್ತೆ. ಇಲ್ಲಿ ಇದು ಬೇಕಾಗಿರುವುದು ಸ್ವಂತ ಕಾರಿಲ್ಲದವರಿಗೆ ಅಥವಾ ನನ್ನಂತೆ ಬಂದ ಹೊಸತರಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆವುವ ವರೆಗೆ ಮಾತ್ರ ಯಾವುದೇ ಅರಬ್ಬೀ ಇದನ್ನ ನಂಬಿಕೊಂಡಿಲ್ಲ.
ತೊಂದರೆ ಆಗುವುದು ನಮ್ಮಂತವರಿಗೆ ಆದ್ದರಿಂದ ದೊಡ್ಡತಲೆ ಗಳು ಇದರಬಗ್ಗೆ ತಲೆ ಕೆಡಿಸಿ ಕೊಂಡಿಲ್ಲ.
ಹಾಗಂತ ನಿಮಿಷಕ್ಕೊಂದು ಚೋರೀ ಟ್ಯಾಕ್ಸಿ (ಪ್ರೈವೇಟ್ ಟ್ಯಾಕ್ಸಿ) ಗಳಿದ್ದರೂ ಹೆಸರೇ ಹೇಳುವಂತೆ ಕಾನೂನುಬಾಹಿರ ವಾದ್ದರಿಂದಲೋ,ಬಿಲ್ಲ್ ಸಿಗದೇ ಅದನ್ನ ಕೈಇಂದ ಕೊಡಬೇಕಾಗಿರುವುದರಿಂದಲೋ ಏನೋ ಅದರಲ್ಲಿ ಹೋಗಲು ಮನಸ್ಸು ಒಡಂದಡುವುದಿಲ್ಲ.
ಹಾಗಂತ ಕಾನೂನು ಬಾಹಿರವಾದದ್ದನ್ನ ಮಾದಲೇ ಇಲ್ಲ ಎಂದಲ್ಲ ಸುಮಾರು 8 ವರ್ಷ ಗಳ ಕಾಲ DL ಇಲ್ಲದೇ ಕಾರು ಓಡಿಸಿದ್ದೇನೆ.
ಯಾವುದೇ ಕ್ರೆಡಿಟ್ ಕಾರ್ಡ್ ನಲ್ಲೂ ಸರಿಯಾದ ಮಾಹಿತಿ ಕೊಟ್ಟಿರಲಿಲ್ಲ.ಆದರೆ ಈ ದೇಶದಲ್ಲಿ ಕಾನೂನು ಅಂದರೆ law ಗೆ ಸಮಾನ ವಂತೆ ಆದ್ದರಿಂದ ದೈರ್ಯ ಸಾಕಾಗುವುದಿಲ್ಲ. ಇದು ನನ್ನೊಬ್ಬನ ಅರಣ್ಯರೋದನ ಅಲ್ಲ ಇಲ್ಲಿ ಸ್ವಂತ ವಾಹನ ಇಲ್ಲದವರೆಲ್ಲರ ಅಳಲು. ಸುಮಾರು 4 ತಾಸು ಟ್ಯಾಕ್ಸಿಗಾಗಿ ಕಾದದ್ದೂ ಇದೆ. ನೂರುಗಟ್ಟಲೆ ಕಕ್ಕಿದ್ದೂ ಇದೆ.
ಒಟ್ಟಿನಲ್ಲಿ ಇಲ್ಲಿ ಎಲ್ಲವೂ ಇದೆ ಆದರೆ ಯಾವುದೂ ಇಲ್ಲ ಎನ್ನುವ ಪರಿಸ್ತಿತಿ no asker no teller whose fathers knot gose (ಕನ್ನಡದಲ್ಲಿ ತರ್ಜುಮೆ ಮಾಡಿ ಓದಿ) ಎನ್ನುವಂತಾಗಿ ಬಿಟ್ಟಿದೆ.

Comments

Unknown said…
ನಾಣು
ಮುತ್ತುಮಾವನ ಮುಕ್ತಕ ತಪ್ಪಾಗಿ ಬರದ್ದೆ. ಸರಿ ಏನು ಅಂತ ಎನಗೂ ನೆನಪಿಲ್ಲೆ.
ಒಟ್ನಲ್ಲಿ ಕಾಶಿಗೋದ್ರು ಶನೀಶ್ವರ ಬಿಡ ಎಂಬಂತೆ ಆಯ್ದು ಅಂತ ಅಲ್ದಾ..?. ಬೆಗ್ನೆ ಡ್ರೈವಿಂಗ್ ಲೈಸೆನ್ಸ್ ತಗ
Ittigecement said…
ಮೂರ್ತಿ...

ನಾನು ಕತಾರ್ ನಲ್ಲಿದ್ದಾಗ.. "ಡ್ರೈವಿಂಗ್" ಲೈಸೆನ್ಸ್.. ಬಹಳ ಕಷ್ಟ ಪಟ್ಟು ಸಿಕ್ಕಿತ್ತು...

ನಾನಿದ್ದಾಗ.. ಟ್ಯಾಕ್ಸಿ ಸಮಸ್ಯೆ ಅಷ್ಟಾಗಿ ಇರಲಿಲ್ಲ...

ಜಲ್ದಿ ಲೈಸೆನ್ಸ ತಗೊ ಮಾರಾಯಾ..!

ಇದ್ದುದನ್ನು ಇದ್ದ ಹಾಂಗೆ ಹೇಳಿದ್ದೀಯಾ..

ಅಭಿನಂದನೆಗಳು...
@Raagu maava
ille adu BMTC bussina bagge ne iddiddu
Unknown said…
adu houdu
adare nee bareda hage ille adu. svalpa ere taraha iddu
@ Raghu maava naanu oodiddalla yaaroo helid keliddu ninna hatra adara copy idre nodi helu.
ಮನಸು said…
ಕುವೈತ್ನಲ್ಲು ಸಹ ಲೈಸೆನ್ಸ್ ಸಿಗೋದೆ ಕಷ್ಟ ಅದು ಸಿಕ್ಕರೆ ಪಾರ್ಟಿ ಮಾಡ್ತಾರೆ ಎಲ್ಲಾ ಹಹಹ MBBS ಪಾಸು ಮಾಡಿದ ಹಾಗೆ ಆಗುತ್ತೆ ಲೈಸೆನ್ಸ್ ಸಿಕ್ಕರೆ.

ಬೇಗ ಲೈಸೆನ್ಸ್ ತಗೊಳ್ಳಿ ಅದು ಇಲ್ಲ ಅಂದ್ರೆ ತುಂಬಾ ಕಷ್ಟ.... ನಾನು ಈಗ ತಗೋತಾ ಇದ್ದೀನಿ ಇಸ್ಥಿಮಾರ (L L) ಸಿಕ್ಕಿದೆ.DL ಗೆ ಪ್ರಯತ್ನ ಪಡ್ತಾ ಇದ್ದೀನಿ...
Unknown said…
Lastige_________maavan dialogue haaki bittidhyalo..( yav mava antha public alli beda. Adhu nange Murthyannange gothagthu..)
ನಾಣು, ಇಲ್ಲಿ ತನಕ ನಾನು ಇಂಡಿಯಾ ನಲ್ಲಿ driving ಲೈಸೆನ್ಸ್ ತಗೊಂಡಿಲ್ಲ Vacation ಹೋದಾಗ ಬೈಕ್ ಕಾರ್ ಎಲ್ಲಾ ಓಡಿಸೋಧೆ.....ನಮ್ಮ ದೇಶ ಅಲ್ವಾ .....ಬೇಗ ಲೈಸೆನ್ಸ್ ತಗೋ ...ಸಾಬರ ದೇಶ ದಲ್ಲಿ ಸ್ವಲ್ಪ ಕಷ್ಟ
Obtaining a car driving license is very tough at Gulf countries and it is almost equivalent to doing “Doctorate” of India. In fact at the year 2003 I had attended 72 Training Classes of Emirate Driving Institute and got my UAE Driving License on my fourth attempt.

Of course total expense for me was AED4200 and may be because I was then 42 Years old.

It is my observation, compared to UAE, it is easier to get Driving License here at Qatar

P.Ramachandra, Ras Laffan- Qatar
g.mruthyunjaya said…
ನನ್ನ ಮುಕ್ತಕದ ಬಗ್ಗೆ ಶ್ರೀಶಂ ಮತ್ತು ನಿನ್ನ ಮಧ್ಯೆ ನಡೆದ ಸಂಭಾಷಣೆಯನ್ನು ನೋಡಿ ಮೂಗು ತೂರಿಸುತ್ತಿದ್ದೇನೆ. ಶ್ರೀಶಂ ಹೇಳಿದ್ದು ಸರಿ. ಬೀಚಿಯವರ ಜೋಕನ್ನಾಧರಿಸಿದ ಅದರ ಸರಿಯಾದ ರೂಪ ಹೀಗಿದೆ.

"ಬೆಂಗಳೂರಿನ ಸಿಟಿ
ಬಸ್ಸುಗಳೆಂದರೆ
ಕಷ್ಟಗಳಿದ್ದಂತೆ ಮಗನೆ.
ತಿಳಿಸಿ ಬಾರವು ಅವು
ಬಂದರೆ ಒಂದರ
ಹಿಂದೊಂದು ಬರುವವು ಒಡನೆ!"

ಅಂದಹಾಗೆ ಶ್ರೀಶಂ 'ರಾಮೇಶ್ವರಕ್ಕೆ ಹೋದರೂ..' ಎಂದು ಹೇಳಿದ್ದು ನನ್ನ ಮುಕ್ತಕವನ್ನು ಕುರಿತಂತಲ್ಲ ತಾನೆ! :)
ಧನ್ಯವಾದಗಳು ಮುತ್ತುಮಾವ.
Unknown said…
Last week test ittala entaatu??
suddi helde party mugisi bitya enta kathe?