ಅಣ್ಣ ತಮ್ಮ ಯಾಜ್ಜ್ಯ ತೆಕ್ಕುಂದ್ ಯಸ್ಟ್ರಾ ಬ್ಯಾರೆ ಆಗ್ಯಾರೆ

ಎರಡು ವರ್ಷ ಹಿಂದೆ ದೀಪಾವಳಿ ಹಬ್ಬಕ್ಕಾಗಿ ಊರಿಗೆ ಹೋಗಿದ್ದೆ, ಹಬ್ಬ ಮೂರು ದಿನ ಇರುವಾಗ ನನಗೆ ಸಾಗರಕ್ಕೆ ಹೋಗಬೇಕಾಗಿ ಬಂತು ಅವತ್ತು ಗುರುವಾರ ಸಾಗರದ ಸಂತೆ ಸಾಲದ್ದಕ್ಕೆ ಹಬ್ಬದ ಹಿಂದಿನ ಸಂತೆ ಆದ್ದರಿಂದ ಅದನ್ನ ಹಬ್ಸಂತೆ ಎಂದು ವಿಜೃಂಬಣೆಯಿಂದ ಆಚರಿಸುತ್ತಾರೆ.


ನಮ್ಮ ಹಳ್ಳಿಯ ಮುಗ್ಧಜನರು ಹಬ್ಬಗಳನ್ನ ಆಚರಿಸುವ ಮಜವೇ ಬೇರೆ ಎಷ್ಟೇ ಕಷ್ಟ ಇರಲಿ, ಬತ್ತದ ಬೆಳೆ ಇಲ್ಲದಿರಲಿ,ಅತಿವೃಷ್ಟಿ,ಅನಾವೃಷ್ಟಿ,ಭೂಕಂಪ,ಸಾಂಕ್ರಾಮಿಕರೋಗ ಏನೇ ಇರಲಿ ಹಳ್ಳಿಗರು ಹಬ್ಬ ಆಚರಿಸದೇ ಇರುವುದಿಲ್ಲ. ಯಾವ ರಿಸಿಷನ್ನೂ ಇವರ ಹಬ್ಬವನ್ನ ತಡೆಯುವುದಿಲ್ಲ. ಪೇಟೆಯವರಷ್ಟು ಖರ್ಚುಮಾಡದಿದ್ದರೂ ಅವರ ಮಟ್ಟಿಗೆ ಸಂಭ್ರಮದಿಂದಲೇ ಆಚರಿಸುತ್ತಾರೆ.ಮಜದ ಸಂಗತಿಯೆಂದರೆ ಅವರು ಹಬ್ಬಕ್ಕಿಂತ ಹಬ್ಬದ ಹಿಂದುಮುಂದಿನ ಕಾರ್ಯಕ್ರಮಗಳು, ಹಬ್ಬದ ಹಿಂದಿನ ವಾರ ಎಲ್ಲಿ ಸಂತೆ ಆದರೂ ಹೋಗಿಬರುವುದು, ಹಬ್ಬ ಆದಮೇಲೆ ವಾರಗಟ್ಟಲೇ ಕೆಲಸಕ್ಕೆ ರಜಾ ಮಾಡಿ ಸಿನಿಮಾ ನೋಡುವುದು,ತಿರುಗಾಡುವುದು ಹೀಗೆ ಜೀವನವನ್ನ ಪೂರ್ಣಪ್ರಮಾಣದಲ್ಲಿ ಅನುಭವಿಸುವವರು ಅವರೇ ಅನಿಸುತ್ತದೆ.



ನನಗೆ ಎಲ್ಲಾಕ್ಕಿಂತ ಹಿಡಿಸುವುದು ಅವರ ಭಾಷೆ,ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿ ಯ ಭಾಷೆ ನನ್ನನ್ನ ಮೊದಲು ಸೆಳೆಯುತ್ತದೆ. ತಕ್ಕಮಟ್ಟಿಗೆ ಅದನ್ನ ಕಲಿಯುವ ಪ್ರಯತ್ನ ಕೂಡಾ ಮಾಡುತ್ತೇನೆ.


ಹೀಗೆ ಸಾಗರಕ್ಕೆ ಹೊಗುವ ಬಸ್ಸು ಹತ್ತಿದೆ ಆಗಲೇ ಸುಮಾರು ನೂರುಜನ ಬಸ್ಸಿನಲ್ಲಿ ನಿಂತಿದ್ದರು ನನಗೆ ಕುಳಿತುಕೊಳ್ಳುವ ಅವಕಾಶ ಎಲ್ಲಿ ಎಂದು ತಿಳಿದು ಕಂಬ ಹಿಡಿದು ನಿಂತೆ ಅಷ್ಟರಲ್ಲಿ ಬಸ್ ಕಂಡಕ್ಟರ್ ಜನರನ್ನ ಸೀಳುತ್ತಾ ಮುಂದೆ ಕಳಿಸುತ್ತಾ ಹಿಂದೆ ಬಂದ ನನಗೆ ಟಿಕೆಟ್ ಕೊಟ್ಟವನೇ "ಹೆಗ್ಡೇರೆ ಕಂಬ ಹಿಡ್ಕು ನಿಲ್ಲಬಾಡ್ರಿ ಶಿಡ್ಲ್ ಹೊಡಿತೈತಿ ಮುಂದ್ ಹೊಗ್ರಿ" ಹಳೇ ಜೋಕ್ ಮಾಡಿದ ಕಷ್ಟ ಪಟ್ಟು ಅವನ PJ (poor joke) ಗೆ ನಕ್ಕು ಸ್ವಲ್ಪ ಮುಂದೆ ಹೋದೆ ಅದೃಷ್ಟವಷಾತ್ ನಮ್ಮ ಮುಂದಿನ ಊರಿನಲ್ಲಿ ಪರಿಚಯದವನೊಬ್ಬ ಇಳಿಯುವವನಿದ್ದ ಅವ ನನಗೆ ಸೀಟ್ ಬಿಟ್ಟುಕೊಟ್ಟು ಇಳಿದ. ಹೀಗೇ ನಾನು ಬಸ್ ನಲ್ಲಿ ನಡೆಯುವ ಮಾತುಕತೆ ಕೇಳುತ್ತಾ ಎಂಜಾಯ್ ಮಾಡುತ್ತಾ ಬೇಕಾದ್ದನ್ನ ಮನಸ್ಸಿನಲ್ಲಿ ರೆಕಾರ್ಡ್ ಮಾಡುತ್ತಾ ಕುಳಿತೆ. ಅಲ್ಲಿನ ಟಾಪಿಕ್ ಮಾತ್ರ ನನ್ನನ್ನ ಬೆರಗಾಗಿಸಿದ್ದವು. local ಗ್ರಾಮ ಪಂಚಾಯಿತಿ ಚುನಾವಣೆ ಯಿಂದ ಹಿಡಿದು ಅಮೇರಿಕದ ಅದ್ಯಕ್ಷ ಚುನಾವಣೆಯ ಯರೆಗೆ ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ ಮತುಕತೆ ನಡೆಯುತ್ತಿತ್ತು. ಮದ್ಯ ಮದ್ಯ ಕಂಡಕ್ಟರ್ ನ PJ ಗಳು "ಯಾರಿಗೇಡ್ಸ್ ಯಾರಿಗೇಡ್ಸ್" ಯಾರಿಗೆ ಟಿಕೆಟ್ಸ್ ಎಂದು ಕೇಳುವ ಹುಟ್ಟು ಅದು. ಬಸ್ ನಲ್ಲಿ ಕಾಲೇಜ್ ಹುಡುಗಿಯರು,ಪೇಟೇ ಜನ ಇದ್ದರೆ ಇವರದ್ದು ಸ್ವಲ್ಪ ಹೆಚ್ಚು.



ಕಾರಿನ ಸಸ್ಪೆನ್ನ್ಷನ್ ಬ್ಲೇಡ್ ಹಿಡಿದು ಹೊರಟ ಒಬ್ಬನನ್ನ ಇನ್ನೊಬ್ಬ "ಯಾಕಾ ಕನ್ದ್ಲೆ ಮಾಡ್ಸಕ್ ಪ್ಯಾಟಿಗ್ ಹೊಂಟೀಯನಾ ನಿಮ್ಮೂರಾಗ್ ಕುಲುಮೆ ಇಲ್ಲೇ"? (ಯಾಕೋ ಕತ್ತಿ ಮಾಡಿಸಲಿಕ್ಕೆ city ಗೆ ಹೊರಟಿದ್ದೀಯಾ ನಿಮ್ಮೂರಲ್ಲಿ work shop ಇಲ್ಲವಾ?)



"ಎಲ್ಲಾ ಮಾರಾಯಾ ನಮ್ಮೂರಾಗ್ ಕುಲುಮೇ ಆಚಾರಿ ಮಕ್ಳು ಯಾಜ್ಯ ತೆಕ್ಕುಂದು ಯಸ್ಟ್ರಾ ಬ್ಯಾರೆ ಆಗಿ ಡಿವೈಡ್ ಮಡ್ಕಿಂದಾರೆ ಕುಲುಮೆ ನಡ್ಸೋರೆ ಎಲ್ಲಾ ಹಂಗಾಗೈತಿ, ಹೆಗ್ಡೇರ್ ಒಂದು ಮುರ್ಕು ಬಿಲೋಡ್ ಕೊಟ್ಟುದ್ರೇ ಹಬ್ಸಂತ್ಯೆ ಮಾಡ್ಕುಂದು ಸಾಗರದಾಗ್ ಕುಲುಮಿಗ್ ಕೊಟ್ಟು ಬರನಾ ಅಂತ್ಯೇಳಿ ಹೊಂಟೇನಿ" (ನಮ್ಮೂರಲ್ಲಿ work shop owner ಮಕ್ಕಳು ಜಗಳ ಆಡಿಕೊಂಡು divide ಆಗಿದಾರೆ so ಪೇಟೆಗೆ ಹೋಗಿ shoping ಮಾಡಿ ಹಾಗೇ work shop ಗೆ ಕೊಟ್ಟು ಬರೋಣಾ ಅಂತ).




ಅಷ್ಟರಲ್ಲಿ ಇನ್ನಿಬ್ಬರ ಹಳೇಕಥೆ ಸುರುಳಿ ಬಿಚ್ಚಿಕೊಂಡಿತು." ಅಲ್ಲಲೇ ಈ ವರ್ಸ ಮಳೆ ಸಮಾ ಆಗ್ದೆ ಪಡ್ಪಾಟ್ಲ್ ಅಗ್ಯೋತು ಆದ್ರ್ ಮಳೆಹಬ್ಬದ ಹೊತ್ನ್ಯಾಗೆ ಮಳೆಯೇ ಬರ್ನಲ್ಲ ಕಡಿಕೆ ಗದ್ದೆ ಕಡ್ದು ಗೊಣಬೆ ಕಟ್ಟಿದೆವು ಮಳೆ ಹಿಡ್ಕ ಹೊಯ್ಯಾಕ್ ಹತ್ಗ್ಯಬಿಡ್ಬೊಕೇ ಮೆದೆ ಎಲ್ಲಾ ತೆಲ್ಕ್ಯಾಹೋಗಿ ಅಜ್ಜಮ್ಮನ ಕೆರಿಗ್ ಸೇರ್ಕ್ಯಬೊಕೇ?" ಒಬ್ಬ ಅಳಲು ತೋಡಿಕೊಂಡ.
"ಹೌದಾ ಮಾರಾಯ ನಮ್ದೂ ಹಂಗ್ಯೇ ಆಗೇತಿ ಬತ್ತೂ ಮುಗ್ಗಿ ಹೋತು ಬೆಳೆಹುಲ್ಲೂ ಸಿಗ್ನುಲ್ಲ, ಮ್ಯಾಲ್ನ್ ಮನೆ ರಾಮ ಈ ವರ್ಸ ಗೆದ್ದೇನೇ ಮಾಡ್ನುಲ್ಲ ಅಂವ ಕೆರೆಕೋಡಿಯಾಗೆ ಮೆದೆ ಉಕ್ಕು ಬಂದು ಎಲ್ಡ್ ಚೀಲ ಬತ್ತ ಮಾಡ್ಕಿಂದಾನೆ "




ಈತನ್ಮದ್ಯೆ ಹೆಗಡೇರು ಒಬ್ರು ತಮ್ಮ ಕಿತ್ತೊದ English ಮಾತನಾಡುತ್ತಾ ಬಿಟ್ಟಿ scope ತೆಗೆದು ಕೊಳ್ಳುತ್ತಿದ್ದರು.
"Road is full of buttons, no asker,no teller whose fathers not goes" ಆದರೆ ಅವರ ಮಾತನ್ನ ನನಗೆ ಹಿಡಿದುಕೊಳ್ಳಲು ಆಗಲೇ ಇಲ್ಲ. ಸಣ್ಣ ಬುದ್ದಿವಂತಿಗೆ ಮಾಡಿ ಅವರತ್ತ ಕುತೂಹಲದ ದೃಷ್ಟಿ ಬೀರಿದೆ ???!!!??? ಆಗ ಮತ್ತೆ ಬಂತಲ್ಲ ಅದೇ ಮಾತು
"Road is full of buttons, no asker,no teller whose fathers not goes" ಈ ಸಲ ರೆಕಾರ್ಡ್ ಮಾಡಿಕೊಂಡೆ ತತ್ ಕ್ಷಣ ಅದನ್ನ ಡೀ ಕೋಡ್ ಮಾಡಿದೆ "ರಸ್ತೆ ತುಂಬಾ ಹೊಂಡ ಗುಂಡಿಗಳು,ಹೇಳೂವವರಿಲ್ಲಾ ಕೇಳುವವರಿಲ್ಲ, ಯಾರಪ್ಪನ ಗಂಟು ಹೋಗಬೇಕು"


ಹೀಗೇ ಮಜ ತೆಗೆದುಕೊಳ್ಳುತ್ತಾ ಇರುವಾಗ ಸಾಗರ ಬಸ್ ಸ್ಟ್ಯಾಂಡ್ ಬಂತು ನನ್ನ ಕೆಲಸ ಎಲ್ಲಾ ಮುಗಿಸಿ ಒಂದು ಸ್ಟೀಲ್ ಪಾತ್ರೆ ಅಂಗಡಿಗೆ ಬಂದೆ. ಅಲ್ಲಿ ಒಬ್ಬ ಹೆಂಗಸು ಪಾತ್ರೆ ಕೊಳ್ಳುತ್ತಿದ್ದಳು ಅಂಗಡಿಯವನಲ್ಲಿ "ಇದೇ ಸೈಜಿಂದು ಚೂರು ದೊಡ್ಡದು ತೋರ್ಸ್ರೀ" ಎಂದಾಗ ಮಾತ್ರ ನಾ ಮೈ ಮೇಲೆ ಕವಳ ತುಪ್ಪಿಕೊಳ್ಳುವ ಪರಿಸ್ಥಿತಿಗೆ ಬಂದೆ.


ನಮ್ಮ ಸಾಗರ ಸೊರಬದ ಪ್ರದೇಶಗಳ ರೈತಾಪಿಜನರ ಭಾಷೆ,ಅದರಲ್ಲಿ ಮಜಮಜಾ ವಿಷಯಗಳನ್ನ ಇಲ್ಲಿ ನೆನಪಿದ್ದಷ್ಟು ಬರೆಯುವ ಪ್ರಯತ್ನ ಮಾಡಿದ್ದೇನೆ ಆದಷ್ಟು ಅದನ್ನ ಕಂಗ್ಲೀಷೀಕರಿಸಿದ್ದೇನೆ. ಅರ್ಥ ಆದರೆ ಒಮ್ಮೆ ನಕ್ಕು ಬಿಡಿ, ಸಿಟ್ಟುಬಂದರೆ ನನ್ನ (ಬ್ಲೋಗಿನ) ಹಣೇಬರಹಯೇ ಹೀಗೆ ಎಂದು ಸಿಟ್ಟನ್ನು ನುಂಗಿಕೊಳ್ಳಿ.



(ನಿನ್ನೆ ಯೀಕೆಂಡು ಇದ್ದು ರಾತ್ರಿ ಆದದ್ದು ಸ್ವಲ್ಪ ತಡವಾದ್ದರಿಂದ ಇವತ್ತು ಬೆಳಗಾಗಿದ್ದೂ ಒಂದು ತಾಸು ಲೇಟು ಬೆಳಿಗ್ಗೆ ಆಫೀಸಿಗೆ ಒಂದು ತಾಸು ಲೇಟು ಅದನ್ನು ಕಾಂಪನ್ಶಿಯೇಟ್ ಮಾಡಲು ಮಧ್ಯಾನಃ ಒಂದುತಾಸು ಬೇಗ ಹೊರಡಬೇಕು ಆದ್ದರಿಂದ ಈ ಬ್ಲೋಗನ್ನ ಇಲ್ಲಿಗೆ ಮುಗಿಸಿದ್ದೇನೆ.
ಇನ್ನು ಪುರುಸೊತ್ತಾದಾಗ ಒಮ್ಮೆ ಮಂಡ್ಯ,ಮೈಸೂರು,ಕೊಳ್ಳೇಗಾಲದ ಕಡೆ ಒಂದು ರೌಂಡು ಹೊಡೆಯೋಣ.)

Comments

ನಾಣು,
"ಇದೇ ಸೈಜಿಂದು ಚೂರು ದೊಡ್ಡದು ತೋರ್ಸ್ರೀ" ಹಹಹಾಹ...
ಚೆನ್ನಾಗಿತ್ತು...ಸಖತ್ ಮಜಾ ಇತ್ತು...
"ಆ ಮೂದೇವಿ", ಬಡೆತ್ತಾವು ಊರಿನ ಹಾಸ್ಯಕ್ಕೆ ಕಾಯುತ್ತ ಇದ್ದೀವಿ...
ಮಯೇಸಣ್ಣೋ ಟ್ಯಾಂಕ್ಯೂ ಯೇರಿಮಚ್ಚು,
ಊಂ ಕಣೇಳಿ ಓಗಾಮ ಟೇಮ್ ಸಿಕ್ದಾಗ ಆ ಐಕ್ಳನ್ನೂ ಮಾತಾಡ್ಸ್ಕೋಂಬರಾಮ ನೀವೂ ಬಂದೀರೇ?
ಟೀಕೀಟಿಲ್ಲ್ ದೆ ಎಲ್ಲೆಲ್ಲೋ ಒಯ್ದು ಬುಟ್ರಿ!! ಮಝಾ ಬಂತು.
navya said…
naanu bhavaya ur superb as usual e dialouges odakare nin sakath miss madkyandi sakath negiyadji. I remembered all those sweet memories wen v were together and enjoyed. I really miss u and those days :-(
@ Navya,
Thanks for remembering all those days, keep reading and commenting.
@ Jagadesh,
ಹೂಂ ಮುಂದಿನ ವಾರ ಮಂಡ್ಯ ಕಡೆ ಒಂದ್ ರೌಂಡ್ ಹೋಗೋಣ.
Ittigecement said…
ಮೂರ್ತಿ...

ವೀಕ್ಲಿ ಲೇಬರ್ ಪೇಯ್ಮೆಂಟು ಮಾಡಿ ಮನೆಗೆ ಬಂದಿದ್ದೆ...
ಸಿಕ್ಕಾಪಟ್ಟೆ ಬೋರ್‍ ಬಂದಿತ್ತು..

ಇದನ್ನು ಓದಿ ಹೊಟ್ಟೆ ತುಂಬಾ ನಕ್ಕು ಫ್ರೆಷ್ ಆದೆ...

ಒಟ್ಟೂ ಐದು ಸಾರಿ ಓದಿದೆ...
ಆ ಮಾತುಗಳ ಸೊಗಡನ್ನು ಮಸ್ತ್ ಎಂಜಾಯ್ ಮಾಡಿದೆ...

"ಯಾಜ್ಯಾ" ಬರ್ನಲ್ಲ..ಪಡ್ಪಾಟ್ಲು..ಇತ್ಯಾದಿ ಶಬ್ಧಗಳನ್ನು ಕೇಳದೆ ಬಹಳ ವರ್ಷಗಳೆ ಆಗಿಬಿಟ್ಟಿದ್ದವು...

ಇಂಥಹ ಲೇಖನ ಇನ್ನಷ್ಟು ಬರಲಿ...

ನಮ್ಮನ್ನೆಲ್ಲ ನಗಿಸಿದ್ದಕ್ಕೆ ನಿಮಗೆ..

ನಮೋನ್ನಮಹಃ.............!!
@ ಪ್ರಕಾಶಣ್ಣ,
ನಿಮ್ಮ ಆಶೀರ್ವಾದ ಇದ್ರೆ ಇಂತಹಾ ನೂರಾರು ಬರಹಗಳನ್ನ ಬರೆಯುವ ಸಾಹಸ ಮಾಡುತ್ತೇನೆ.
ಧನ್ಯವಾದಗಳು.
Anonymous said…
ಮೂರ್ತಿ ನಿನ್ನ ಬರಹ ಓದಿ ಎಮ್ಮನೇ ರಾಗು ನೆನಪಾದ. ಎನ್‌ಗೆ ಇದೆ ಭಾಷೇನ ಕನ್ನಡದಲ್ಲಿ ಚಾಟ್ ಮಾಡಿ ಕಾಟ ಕೊಡ್ತ್ಹಿದ್ನೋ !!! ಬಹಳ ಚೆನ್ನಾಗಿ ಇದ್ದು ..ಹಿಂಗೆ ಬರಿತ ಇರು !!
@ ಸುಮನತ್ತೆ,
ನನಗೆ ಈ ಭಾಷೆ ಬಾಲ್ಯದ ಒಡನಾಡಿ ಈಗಲೂ ನಮ್ಮ ಅಜ್ಜನ ಮನೆ ಕಡೆ ಈ ರೀತಿಯ ಮಾತನ್ನ ಒತ್ತಾಯವಾಗಿ ಆಡಿಸಿ ನಗುತ್ತಾರೆ.
ಮೆಚ್ಚಿದ್ದಕ್ಕೆ ಧನ್ಯವಾದಗಳು.
Unknown said…
ಬ್ರಾಂಬ್ರ ಹುಡ್ಗ ನಮ್ಮ ಆಡ್ಕ್ಯಳಕೆ ಹತ್ತೀಯೇ..? ಮಾಡ್ತಂವು ತಡಿ ನಿಂಗೆ , ಊರಿಗೆ ಬಾ ಉಕ್ ಉಕ್ಕ್ಂಡ್ ಹೊಡಿತಂವು.
ಮನಸು said…
super!! nagu tadilikke aglilla hahah mundina oorugala bhaaShe bagegina lekhana odalu kaayuttaliddeve..
ಮೂರ್ತಿ,
ತುಂಬಾ ರಸವತ್ತಾಗಿದೆ, ಬರವಣಿಗೆಯ ಶೈಲಿ ಇನ್ನು ಸುಂದರ , ತುಂಬಾ ನಗು ತರಿಸಿತು,
ಇನ್ನಷ್ಟು ಬರಹಗಳ ನೀರೀಕ್ಷೆಯಲ್ಲಿ
ಗುರು
@ ರಾಘುಮಾವ,
ಹಹಹ ಎಂತ ಮಾಡಕ್ಕಾಕೈತ್ರೀ ವಡೇರೇ ಅಪೀಸಿನ್ಯಾಗೆ ಬೈತಂಕ ಹೊತ್ತು ಕಳಿಬೋಕು ಅಂಗ್ಯಾಯ್ಗಿ ಬರ್ಕುಂತ ಕುಂತೇನಿ
ಪ್ರತಿಕ್ರಿಯೆಗೆ ಧನ್ಯವಾದಗಳು.
ಸುಗುಣಕ್ಕ,
ಓದಿ ನಕ್ಕಿದ್ದಕ್ಕೆ ಧನ್ಯವಾದಗಳು.
ಮುಂದಿನ ಟಾರ್ಗೆಟ್ ನಿಮ್ಮೂರೇ ಆದರೂ ಆಗಬಹುದು.
ಗುರು ಓದಿ ಪ್ರತಿಕ್ರಯಿಸಿದ್ದಕ್ಕೆ ಧನ್ಯವಾದಗಳು.
shivu.k said…
ಸರ್.

ಎಲ್ಲೆಲ್ಲೋ ಪ್ರಯಾಣ ಮಾಡಿಬಿಟ್ರಲ್ಲ...ಸರ್...

ಓದಿ ಸಕ್ಕತ್ ನಗು ಬಂತು....ಮತ್ತೆ ಮತ್ತೆ ಓದಬೇಕೆನ್ನಿಸಿತು...

ಧನ್ಯವಾದಗಳು.
ಇಂಥಾ ಭಾಷೆ ಕೇಳ್ದೆ ತುಂಬ ಕಾಲ ಆಗಿತ್ತು. ಕಣ್ಣಲ್ಲಿ ನೀರು ಬರೋಷ್ಟು ನಕ್ಕಿದ್ದಂತೂ ಸುಳ್ಳಲ್ಲ.
@ ಶಾಂತಲಾ ಅವರೆ ನನ್ನ ಬ್ಲೋಗೆಂಬ ಕಸದ ಬುಟ್ಟಿಗೆ ಸ್ವಾಗತ, ಮೊದಲ ಪ್ರತಿಕ್ರಿಯೆಗೆ ಧನ್ಯವಾದಗಳು.


ಹೀಗೇ ಬರುತ್ತಾ ಇರಿ ಬರೆಯುತ್ತಾ ಇರಿ.ಪುರುಸೊತ್ತಿದ್ದಾಗ ಒಮ್ಮೆ ನನ್ನ ಸದ ಬುಟ್ಟಿಯನ್ನ ಕೆದಕಿ ನೋಡಿ ನಿಮ್ಮ ಅಭಿರುಚಿಗೆ ತಕ್ಕ ಕಸಗಳು ಸಿಗಬಹುದು.

ಮುಂದಿನ ವಾರ ಮಂಡ್ಯ,ಮೈಸೂರು,ಕೊಳ್ಳೇಗಾಲದ ಕಡೆ ಒಂದು ಸುತ್ತು ಹಾಕಿ ಆಮೇಲೆ ಶಿರಸಿ ಸಿದ್ದಾಪುರ ಯಲ್ಲಾಪುರದ ಕಡೆ ಅತ್ತಿಗೆಯರನ್ನ ಮಾತನಾಡಿಸೋಣ.
ಶಿವು ಸರ್,
ಹಲವು ಶಬ್ಧಗಳು ನಿಮಗೆ ಅರ್ಥವಾಗದೇ ಇರಬಹುದು,ಕ್ಷಮೆ ಇರಲಿ.
ಪ್ರತಿಕ್ರಿಯೆಗೆ ಧನ್ಯವಾದಗಳು.
ಪ್ರಿಯ ಮೂರ್ತಿಯವರೆಏ, ತುಂಬಾ ಚೆನ್ನಾಗಿದೆ.

ಆದ್ರೆ ಅವರ ಮಧ್ಯೆ ಬದುಕುತ್ತಿರುವ ನಮ್ಮ ಪಾಡು ನರಕವಾಗಿದೆ

ಮಹರಾಯರೇ....!
Ramya said…
Hey naanu superb :)

As I am suffering from Aadrmalle habba he he he

all throughout ur blog I remembered this sentence he he he he
ಹ್ಹಾ ಹ್ಹಾ ಹ್ಹಾ
ಮ....ಸ್ತ್ ಐತ್ರಾ :-)
@ jitendra,
ನೀವು ಹೇಳುವುದು ನೂರಕ್ಕೆ ನೂರು ಸತ್ಯ.
@ ಪೂರ್ಣಿಮಾ ಅವರೆ,
ನನ್ನ ಬ್ಲಾಗಿಗೆ ಸ್ವಾಗತ ಪ್ರತಿಕ್ರಿಯೆಗೆ ಧನ್ಯವಾದ.
ಬರುತ್ತಾ ಇರಿ ಬರೆಯುತ್ತಾ ಇರಿ.
Anonymous said…
ಹ ಹ ಹ..'ಇದೆ ಸೈಜಿ೦ದು ಸ್ವಲ್ಪ ದೊಡ್ಡದು ತೋರ್ಸ್ರೀ..' ತುಂಬಾ ಚೆನ್ನಾಗಿದೆ ಜೋಕ್..ನಿಜ್ವಾಗಲೂ ನಮ್ಮ ಹಳ್ಳಿಯ ಮುಗ್ಧ ಜನರ ಭಾಷೆ ಎಷ್ಟು ಸೊಗಸಾಗಿರುತ್ತೆ ,,ಅಲ್ವಾ??
ಇದನ್ನು ಓದಿದ ಮೇಲೆ ನನಗೂ ಒಂದು ಪ್ರಸಂಗ ನೆನಪಾಗ್ತಾ ಇದೆ..
ಒಂದು ಚಲನಚಿತ್ರ ನೋಡಿ ಬಂದ ಹಳ್ಳಿ ಮುಗ್ಧನೊಬ್ಬ ಜೊತೆಗಿದ್ದವರ feedback ನಿಂದ ಪ್ರೇರಿತನಾಗಿ ತನ್ನ ಯಜಮಾನನ ಹತ್ತಿರ ಚಲನಚಿತ್ರದ ಬಗ್ಗೆ ವಿವರಣೆ ಕೊಡ್ತಾನೆ,,
" tory (story) ಏನೋ ಅಡ್ದಿಲ್ರ, ಆದ್ರೆ ಕಥೆ ಉಪ್ಯೋಗಿಲ್ಲ ವಡಿಯಾ.." ಅಂತ..

Popular posts from this blog

ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ ! :)

ಹುಚ್ಚು ಕೋಡಿ ಮನಸು 2

Farmville Application in Facebook