ಎಸ್ ಎಮ್ ಎಸ್ ಮಾಡಿದ ಅವಾಂತರ
ಇದು ಹರೀಶ್ ಆಡೂರರ ಈ ಕನಸು.ಕಾಮ್ ನಲ್ಲಿ ಪ್ರಕಟವಾದ ನನ್ನ ಮೊದಲ ಬರಹ ಅದನ್ನ ಇಲ್ಲಿ ಮತ್ತೆ ಪ್ರಕಟಿಸಿದ್ದೇನೆ.
"Hay I am Sreekanth, am doing ma 5th sem of BE in Malnad eng clg Hasan, may I know about you? can we be friends?"
ಸರಿಸುಮಾರು 5 ವರ್ಷಗಳ ಕೆಳಗೆ ಒಂದು sms ಬಂತು ಮೊಬೈಲ್ ಎಸ್ ಎಮ್ ಎಸ್ ಗಳ ಉಛ್ರಾಯ ಸ್ತಿತಿಯ ಕಾಲ ಆಗ SMS ಗಳಿಂದ ಹುಡುಗಿಯರಿಗೆ ಕಾಳು ಹಾಕುವವರು,ತಮ್ಮ ಬ್ಯುಸಿನೆಸ್ ನೆಟ್ ವರ್ಕ್ ಬೆಳೆಸುವವರು,ಸ್ನೇಹಿತರು,ನಮ್ಮಂತಹ ತರ್ಲೆಗಳು ದಿನದ ಹಲವಾರು ಘಂಟೆ ಗಳನ್ನ ತಮ್ಮ ಹೆಬ್ಬೆರಳು ಊದಿಸಿಕೊಳ್ಲಲು ಶ್ರಮಿಸುತ್ತಿದ್ದರು.
ಯಾರೋ ಕಳಿಸಿದ ಫಾರ್ವರ್ಡೆಡ್ ಮೆಸೆಜನ್ನ ನಮ್ಮವರಿಗೆ ಕಳಿಸಿ ಸ್ಕೋಪ್ ತೆಗೆದು ಕೊಳ್ಳುತ್ತಿದ್ದೆವು ಆದರೆ ನನಗೆ ಮೆಸೆಜಿಂಗ್ ಎಂದರೆ ಸ್ವಲ್ಪ ಅಲರ್ಜಿ ಇತ್ತು ಬಿಲ್ ಕಂಪನಿ ಕಟ್ಟುತ್ತಿದ್ದದ್ದರಿಂದ ಕಾಲ್ ಮಾಡಿ ಬಿಡುತ್ತಿದ್ದೆ.ಇಂತಹ ನೂರಾರು ಮೆಸೆಜುಗಳನ್ನ ನೋಡದೆಯೇ ಅಳಿಸಿ ಹಾಕುತ್ತಿದ್ದೆ.
ಅವತ್ತು ರಾತ್ರಿ ಮಲಗಿ ನಿದ್ರೆ ಬಾರದೆ ಉರುಳುತ್ತಿದ್ದಾಗ ಮೆಸೆಜ್ ಕಳಿಸಿದ ಶ್ರೀಕಾಂತ ನನಗೆ ಹಣೆಯಲ್ಲಿ ಉದ್ದ ನಾಮ,ಕುತ್ತಿಗೆಯಲ್ಲಿ ಕಾಕಡಾ ಹೂವಿನ ಹಾರ ಹಾಕಿಸಿಕೊಂಡು ಕತ್ತಿ ಹಿಡಿದ ಕರಿ ದಡಿಯನ ಪಕ್ಕ ನಿಂತ ಬಖರಾ ನಂತೆ ಕಂಡ.
ಅವನ್ನನ್ನ ಸ್ವಲ್ಪ ಆಟ ಆಡಿಸುವ ಆಲೋಚನೆ ಮಾಡಿದೆ.
"hey Am Sruti E&C engineer working for Honeywell nice talking to you"
ಅವ ನನ್ನ ಆಫರ್ ಲೇಟರ್ ಕೇಳಲಿಕ್ಕಿಲ್ಲ ಎನ್ನುವ ಧೈರ್ಯದ ಮೇಲೆ ಮೆಸೆಗ್ ಬಿಸಾಕಿದ್ದೆ.
ಅಷ್ಟಾದ ಮೇಲೆ ಅವತ್ತು ಸುಮಾರು ಇಪ್ಪತೈದು ಮೆಸೆಜ್ ಗಳು ಆಚೆ ಈಚೆ ಆಗಿದ್ದವು. ಮರುದಿನದಿಂದ ಗುಡ್ ಮಾರ್ನಿಂಗ್,ಗುಡ್ ಈವಿನಿಂಗ್,ಗುಡ್ ನೈಟ್ ಹ್ಯಾಪಿ ವೀಕೆಂಡ್ ಮೆಸೆಜ್ ಬರಲಾರಂಭಿಸಿತ್ತು. ನನಗೆ ಪುರುಸೊತ್ತು,ಮೂಡು ಇದ್ದಾಗ ಮಾತ್ರ ರಿಪ್ಲೈ ಮಾಡುತ್ತಿದ್ದೆ. ಹೀಗೆ ಸುಮಾರು ಒಂದು ವರ್ಷವೇ ಕಳೆದು ಹೋಗಿತ್ತು ದಿನಕ್ಕೆ ಏನಿಲ್ಲ ವೆಂದರೂ ಐದು ಮೆಸೆಜ್ ಬರುತ್ತಿತ್ತು ಕೊನೆಕೊನೆಗೆ ನಾನು ಅವನಿಗೆ ರಿಪ್ಲೈ ಮಾಡುವುದನ್ನೇ ಬಿಟ್ಟು ಬಿಟ್ಟಿದ್ದೆ ಆದರೆ ಅವನ ಶ್ರದ್ಧೆ ಸ್ವಲ್ಪವೂ ಕಡಿಮೆ ಆಗದಂತೆ ಮೆಸೆಜ್ ಕಳಿಸುತ್ತಿದ್ದ.
ಕೊನೆಗೊಂದು ದಿನ ನನ್ನ ಮೊಬೈಲ್ ಹ್ಯಾಂಡ್ ಸೆಟ್ ಬದಲಾಯಿಸಿದೆ ಮೊಬೈಲ್ ಬದಲಾಯಿಸುವ ಬರದಲ್ಲಿ ಅವನ ನಂಬರ್ ಕೂಡಾ ದಾರಿಯ ಮೇಲೆ ಬಿದ್ದಿತ್ತು. ಬಂದ ಅವನ ಮೆಸೆಜ್ ಗಳನ್ನೆಲ್ಲಾ ಬರುವ ಎಲ್ಲಾ ಜಂಕ್ ಮೆಸೆಜ್ ಗಳ ಜೊತೆ ನೋಡದೇ ಡಿಲೀಟ್ ಮಾಡುತ್ತಿದ್ದೆ.
ಒಂದು ದಿನ ನನ್ನ ಮೊಬೈಲ್ ಗೆ ತಿಳಿಯದ ಒಂದು ನಂಬರ್ ನಿಂದ ಕರೆ ಬಂದಿತ್ತು "hello can I speak to Sruthi ?"
ಒಂದು ವರ್ಷವೇ ಕಳೆದು ಹೋಗಿದ್ದರಿಂದ ನನಗೆ ಹೀಗೊಂದು ನಡೆದಿತ್ತು ಎನ್ನುವುದೂ ಮರೆತಿದ್ದೆ.ಯಾರೂ ಇಲ್ಲ ಈ ನಂಬರ್ ನಾನು 5 ವರ್ಷಗಳಿಂದ ಬಳಸುತ್ತಿರುವುದಾಗಿಯೂ ನನಗೆ ಆ ಹೆಸರಿನವರ ಪರಿಚಯ ಇಲ್ಲ ಎಂದೂ ಹೇಳಿ ಕಟ್ ಮಾಡಿದೆ. ಆದರೆ ಪುಣ್ಯಾತ್ಮ
ಬೇರೆ ನಂಬರ್ ಗಳಿಂದ ಮತ್ತೆ ಮೆಸೆಗ್ ಮಾಡಲು ಶುರು ಮಾಡಿದ ತನ್ನ ಪರಿಚಯವನ್ನ ಮತ್ತೆ ಬುಡದಿಂದ ಶುರುಮಾಡಿದ.
"Hay I am Sreekanth, I am completing ma BE in Malnad eng clg Hasan, you might have forgotten me"
ನಾನು "hehe I am soo sorry then how are you?"
ಎಂದೆ ಪಾಪ ಆಗಲೂ ನಾನು ಶೃತಿ, ಅವ ನನಗೆ ಕಾಳು ಹಾಕುತ್ತಿದ್ದ ಎನ್ನುವುದು ನೆನಪಾಗಲೇ ಇಲ್ಲ.
ಹೀಗೆ ಮತ್ತೆ ಅವ ತ್ರಿವಿಕ್ರಮಾವತಾರಿಯಾಗಿ ಮೆಸೆಜ್ ಗಳನ್ನ ಕಳಿಸ ತೊಡಗಿದ.
ಒಂದು ದಿನ ತಾನು ಕೊನೆಯ ಸೆಮಿಸ್ಟರ್ ಪ್ರೋಜೆಕ್ಟ್ ಗಾಗಿ ಬೆಂಗಳೂರಿಗೆ ಬರುವುದಾಗಿಯೂ honeywell ಪ್ರೋಜೆಕ್ಟ್ ಕೊಡಿಸು ಎಂದು ಕೇಳಿಕೊಂಡ ತನ್ನ ಬಯೋಡೇಟಾ ಮತ್ತು ಕಾಲೇಜಿನ ಲೆಟರ್ ನನ್ನ ಮೈಲ್ ಐಡಿ ಗೆ ಕಳಿಸಿರುವುದಾಗಿಯೂ ತಿಳಿಸಿದ.
ಪ್ರೊಜೆಕ್ಟ್ ಸಿಗದಿದ್ದರೂ ಒಮ್ಮೆ ನಿಮ್ಮನ್ನ ಭೇಟಿ ಮಾಡುವುದಾಗಿ ಹೇಳಿದ.
ನಾನು ಕೆಲಸ ಮಾಡುತ್ತಿದ್ದುದು honeywell ನ channel partners ಕಂಪನಿ ಯಾಗಿದ್ದರಿಂದ ಅಲ್ಲಿ ಪ್ರೊಜೆಕ್ಟ್ ಟ್ರೈನೀ ಗಳನ್ನ ತೆಗೆದು ಕೊಳ್ಳುತ್ತಾರೆ ಎಂದು ಪತ್ತೆ ಮಾಡಿದೆ ನಾನು ಅವನಿಗೆ ಪ್ರೊಜೆಕ್ಟ್ ಕೊಡಿಸುವ ಬಗ್ಗೆ ಯೋಚಿಸುತ್ತಿದ್ದೆ ಆದರೆ ಅವ ನನ್ನನ್ನ ಹುಡುಗಿ ಎಂದು ತಿಳಿದು ಕೊಂಡಿದ್ದ ಎನ್ನುವ ಸುಳಿವೂ ಕೂಡಾ ಸಿಗದಷ್ಟು ನಾನು ಮರೆತಿದ್ದೆ.
ಅವನಿಗೆ ಸುಳ್ಳಿನ ಮಾಲೆ ಹಾಕಿ ಹರಕೆಯ ಕುರಿಯನ್ನಾಗಿಸಿ ಕತ್ತಿ ಮಸೆಯುತ್ತಿದ್ದಾಗ open ಮಾಡಿ ಕೊಟ್ಟ ಮೈಲ್ ಐಡಿ "sruthi.kamat@---------.com" ನನಗೆ ನೆನಪೇ ಆಗಲಿಲ್ಲ.
ನನ್ನ ದಿನಬಳಕೆಯ ಮೈಲ್ ಗಳನ್ನ ನೋಡಿ ಅವನ ಜಾತಕ ಸಿಗದಿದ್ದಾಗ ತಪ್ಪು ವಿಳಾಸಕ್ಕೆ ಕಳಿಸಿರಬಹುದು ಎಂದು ಸುಮ್ಮನಾದೆ.
ಮರುದಿನ "ಗೂಡ್ ಮಾರ್ನಿಂಗ್ ಮೈಲ್ ಚೆಕ್ ಮಾಡಿದಿರಾ?" ಎನ್ನುವುದರಿಂದ ಶುರುವಾಯಿತು ಅವನ ವರಾತ. ಇಲ್ಲ ಸ್ವಲ್ಪ ಬ್ಯುಸಿ ಆಗಿದ್ದೆ ಎಂದು ಯಥಾಪ್ರಕಾರದ ಕಾರ್ಪೊರೇಟ್ ಲೆವೆಲ್ಲಿನ ಸುಳ್ಳು ಹೇಳಿದೆ.
ರಾತ್ರಿ ಮಲಗಿದಾಗ ನಿದ್ರೆ ಬಾರದಾಗ ಜಂಕ್ ಮೆಸೆಜ್ ಗಳನ್ನ ಓದಿ ಡಿಲೀಟ್ ಮಾಡುವ ಅಬ್ಯಾಸ ಇದ್ದದ್ದರಿಂದ ಅವನ ಎಲ್ಲಾ ಮೆಸೆಜ್ ಗಳನ್ನ ನೋಡಿ ಡಿಲೀಟ್ ಮಾಡಿದೆ. ಪ್ರೇಮಕ್ಕೆ ಕಣ್ಣಿಲ್ಲ ಮತ್ತೆ ಕಣ್ಣು ಬೇಡ ಎನ್ನುವ ಮಾತಿನಂತೆ ಅದೇ ಕ್ಷಣದಲ್ಲಿ ಅವನ ಮೆಸೆಜ್ ಬಂತು
"ಊಟ ಆಯಿತಾ ನಿದ್ದೆ ಮಾಡ್ತಾ ಇದ್ದೀರಾ?" "ಹುಮ್ ಊಟ ಮಾಡಿ ಮಲಗುವ ತಯಾರಿಯಲ್ಲಿದೇನೆ ಹುಮ್ ಅಂದ ಹಾಗೆ ನಿಮ್ಮ ಪ್ರೋಜೆಕ್ಟ್ ಬಗ್ಗೆ ನನ್ನ ಸ್ನೇಹಿತನೊಡನೆ ಮಾತಾಡಿದ್ದೇನೆ" "ನಿಮ್ಮೊಟ್ಟಿಗೆ ಒಮ್ಮೆ ಮಾತಾಡ ಬೇಕು ಯಾವಾಗ ಫ್ರೀ ಇರ್ತೀರ?" "ನಾನು ಈಗ ಓದ್ತಾ ಇದ್ದೇನೆ ಈಗ ನೀವು ಫ್ರೀ ಇದ್ರೆ ಈಗಲೇ ಮಾಡ್ತೇನೆ. "ಇಲ್ಲ ಬೇಡ ನಾನೇ ಮಾಡ್ತೇನೆ" (ಬಿಲ್ ಕಟ್ಟುವುದು ಕಂಪನಿ ನನ್ನ ಐಟಮೈಸ್ಡ್ ಬಿಲ್ ಚೆಕ್ ಮಾಡುವುದು ನನ್ನ ಮಾವನ ಮಗ ಯಾರಪ್ಪನ ಗಂಟು ಹೋಗಬೇಕು)
"ಓಕೆ"
ಮನೆಯಿಂದ ಹೊರಗೆ ಕಾಂಪೋಂಡ್ ಮೇಲೆ (ಹಲವಾರು ಇಂತಹಾ ಸಮಾಜ ಸೇವೆ ನಡೆಯುವುದು ಅದೇ ಕಾಂಪೋಂಡ್ ಮೇಲೆಯೇ ಅಮ್ಮ ಗುರಾಯಿಸುವ ವರೆಗೂ ಅಲ್ಲಿ ನಂತರ ಟೆರೇಸ್ ಮೇಲೆ) ಹೋಗಿ ಕಾಲ್ ಮಾಡಿದೆ.
ಪುಣ್ಯಾತ್ಮ ಎರಡನೆಯ ರಿಂಗ್ ಆಗಲೂ ಪುರುಸೊತ್ತು ಕೊಡದೇ "hello" ಅಂದ.
"ಹಾಯ್ ಶ್ರೀಕಾಂತ್ ಹೇಗಿದ್ದೀರಿ?"
ಗಂಡಸಿನ ಸ್ವರ ಕೇಳಿ ಅವ ತಬ್ಬಿಬ್ಬಾದ ಎನ್ನುವುದು ನನಗೆ ತಿಳಿದರೂ ಕಾರಣ ಗೊತ್ತಾಗಲಿಲ್ಲ.
ಸಕಲ ಕುಷಲೋಪರಿಯ ನಂತರ ಪ್ರಾಜೆಕ್ಟ್ ಬಗ್ಗೆ ಮಾತನಾಡಿ ಫೋನೀಟ್ಟೆ.
ಮರುದಿನದಿಂದ ಅವನ ಮೆಸೆಜ್,ಕಾಲ್ ಯಾವುದೂ ಇಲ್ಲ ನಾನೂ ಸುಮ್ಮನಾದೆ.
ಅದಾದ ನಂತರ ಒಂದು ಭಾನುವಾರ ನನ್ನ gmail ಸೆಂಟ್ ಐಟಮ್ ನಲ್ಲಿ "sruthi.kamat@---------.com" ಗೆ ಫಾರ್ವರ್ಡ್ ಮಾಡಿದ ಕೆಲವು ತಮಾಷೆಯ ಮೈಲ್ ಗಳು ಕಣ್ಣಿಗೆ ಬಿದ್ದವು ಆಗ ನನಗೆ ಎರಡು ವರ್ಷಗಳ ಹಿಂದೆ ಕ್ರಿಯೇಟ್ ಮಡಿದ ಮೈಲ್ ಐಡಿ ನೆನಪಾಗಿ ಅದನ್ನ ತೆರೆದು ನೋಡಿದೆ ನನ್ನ ಎಲ್ಲಾ ಫೇಕ್ ಐಡಿಗಳ ಪಾಸ್ವರ್ಡ್ fake*123 ಇದ್ದಿದ್ದರಿಂದ ಮೈಲ್ ಬೋಕ್ಸ್ ಸುಲಭವಾಗಿ ತೆರೆದು ಕೊಂಡಿತು ಅದರಲ್ಲಿ ಶ್ರೀಕಾಂತ ನಂತವರಿಗೆ ಕೆಳಿಸಿದ ಅಂತವರಿಂದ ಬಂದ ಮೈಲ್ ಗಳೇ ತುಂಬಿದ್ದವು. ಆಗ ನನಗೆ ಎಲ್ಲವೂ ನೆನಪಾಯಿತು. ಪಾಪ ವರ್ಷಗಟ್ಟಲೇ ಕನಸು ಕಟ್ಟಿಕೊಂಡಿದ್ದ ಅವನ ಪರಿಸ್ಥಿತಿ ಯೋಚಿಸಿ ಮರುಕ ಹುಟ್ಟಿತು.
ನಂತರ ಕೆಲಸದ ಒತ್ತಡ,ಖತಾರ್ ನಲ್ಲಿ ಕೆಲಸ ಹೀಗೆ ಹಲವಾರು ಕಾರಣಗಳಿಗೆ ನನ್ನೊಳಗಿನ ತರ್ಲೆ ಮನುಷ್ಯ ಮುದುಕನಾಗಿ ಹೋದ.
ಆದರೆ ಬೇಸರ ವಾದಾಗಲೆಲ್ಲಾ ಶೃತಿಯ ಹೆಸರಿನ ಮೈಲ್ ಐಡಿ ತೆರೆದು ನೋಡುವುದನ್ನ ಮರೆಯಲಿಲ್ಲ.
ಮೊನ್ನೆ ಬೇಸರ ಕಳೆಯಲು ಮೈಲ್ ಐಡಿ ತೆರೆದು ಮೈಲ್ ಗನ್ನ ಓದುತ್ತಿದ್ದೆ.
ಮತ್ತೆ ಶ್ರೀಕಾಂತನ ಮೈಲ್ ಜೊತೆಗೆ PDF ನ attachment ಇತ್ತು.
"ನಮಸ್ಕಾರ ನಾನು ಶ್ರೀಕಾಂತ,
ಅವತ್ತು ನಿಮ್ಮೊಟ್ಟಿಗೆ ಕೊನೆಯ ಭಾರಿ ಮಾತನಾಡಿದ ನಂತರ ತುಂಬಾ ನಾಚಿಕೆ ಯಾಯಿತು ಓದುವ ವಯಸ್ಸಿನಲ್ಲಿ ಬೇಡದ ಪ್ರೀತಿ ಪ್ರೇಮ ತುಂಬಿಕೊಂಡಿದ್ದ ನನಗೆ ಒಂದು ಪಾಠ ಕಲಿಸಿಕೊಟ್ಟಿರಿ. ಸುಮಾರು ಒಂದು ವರ್ಷ ನಿಮ್ಮ ಅಂದರೆ ಶೃತಿಯ ಬಗ್ಗೆ ಕನಸು ಗಳನ್ನ ಕಟ್ಟಿ ಕೊಂಡಿದ್ದೆ. ನನಗಿಂತ ಸುಮಾರು ಎರಡು ವರ್ಷ ದೊಡ್ದವರಾದ ಶೃತಿಯನ್ನ ಪ್ರೀತಿಸಿದ್ದದ್ದನ್ನೆಲ್ಲ ನೆನೆಸಿಕೊಂಡರೆ ಈಗ ನಗು ಬರುತ್ತದೆ.
ಏನೇ ಇರಲಿ ಈಗ ನಾ ಮೈಲ್ ಮಾಡಿದ ವಿಚಾರ ಅದಲ್ಲ. ನಾನು ಈಗ ಆಸ್ಟ್ರೇಲಿಯಾದಲ್ಲಿ ಒಂದು ಎಲೆಕ್ರ್ಟಾನಿಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ,ನನ್ನ ಮದುವೆ ಇದೇ ಜನವರಿ 16 ಕ್ಕೆ ತೀರ್ಥಹಳ್ಳಿಯ ಹುಡುಗಿಯ ಮನೆಯಲ್ಲಿ ಇದೆ ನೀವು ಕಂಡಿತಾ ಕುಟುಂಬದೊಟ್ಟಿಗೆ ಬರಬೇಕು ನಿಮ್ಮನ್ನ ಒಮ್ಮೆ ನೋಡಬೇಕು ಎನ್ನುವುದು ನನ್ನ ಹೆಂಡತಿ ಆಗುವವಳ ಆಸೆ.
ಇದು ಅವನ ಮೈಲ್ ನ ಸಾರಾಂಶ ಪಕ್ಕಾ ಟೆಕ್ಕಿಯೊಬ್ಬನ english ನಲ್ಲಿತ್ತು ಅರ್ಥ ಆದದ್ದನ್ನ ಭಾಷಾಂತರಿಸಿದ್ದೇನೆ.
" wish you a happiest married life and forgive me if you can"
ಎಂದು ಒಂದು ಸಾಲಿನ ಮೈಲ್ ಬರೆದು ಕುಳಿತೆ.

Comments
innumele ee email id use madabedi amele nimmaakege bytare hahaha
ಅಂತೂ ಅಡಿಸಿದಿರ ಅವನನ್ನು
ಶೈಲಿ ತುಂಬಾ ಚೆನ್ನಾಗಿದೆ
ಬಹಳ ನಗು ಬಂತು
ಸಂಕ್ರಾಂತಿಯ ಶುಭಾಶಯಗಳು
ಎಷ್ಟು ಮೈಲ್ ಐಡಿ ಇಟ್ಟಿದ್ದೀಯ ಮಾರಾಯ.....
ನೀನು ಯಾರಿಗೂ ಗಾಳ ಹಾಕಿಲ್ವ....
ಯಾಕೆ ಈಗ ಬ್ಲಾಗ್ ಬರೆಯುತ್ತಿಲ್ಲ...ಬರೆಯುತ್ತಾ ಇರಪ್ಪ...
ಚೆನ್ನಾಗಿತ್ತು...
ಹೀಗೇ ಬರುತ್ತಾ ಇರಿ ಬರೆಯುತ್ತಾ ಇರಿ.