ಹುಟ್ಟುಹಬ್ಬದ ಶುಭಾಷಯ
ನನ್ನ ಮೊದಲ ಬ್ಲೋಗ್ ಓದಿ "ನಾನೂ ಖತಾರ್ನಲ್ಲಿ ನಾಲ್ಕು ವರ್ಷ ಇದ್ದೆ"ಎಂದು ತಮ್ಮನ್ನು ಪರಿಚಯಿಸಿಕೊಂಡ ಪ್ರಕಾಶ ಹೆಗಡೆ ಎಂಬ ಅಪರಿಚಿತ ಕೇವಲ ಒಂದು ವರ್ಷದಲ್ಲಿ ನನ್ನ ಎಲ್ಲ ಕೆಲಸಗಳಲ್ಲಿ ಬೆನ್ನು ತಟ್ಟುವ ಅಣ್ಣನಾದ, ಹಿತವಾದ ಹಾಸ್ಯದಿಂದ ಕಾಲೆಳೆಯುವ ಸ್ನೇಹಿತನಾದ, ಬಾವನೆಗಳಿಗೆ ಸ್ಪಂದಿಸುವ ಆತ್ಮೀಯನಾದ, ಹಾಗು ನನ್ನ ಹಲವಾರು ಬರಹಗಳಿಗೆ ಸ್ಪೂರ್ತಿಯಾದ.
ವೃತ್ತಿಯಲ್ಲಿ ಸಿವಿಲ್ ಕಾಂಟ್ರಾಕ್ಟರ್ ಆದ ಪ್ರಕಾಶಣ್ಣ ಒಬ್ಬ ಉತ್ತಮ ಚಾಯಾಗ್ರಾಹಕ, ಬರಹಗಾರ ಹೀಗೆ ಹಲಾವಾರು ಪ್ರವೃತ್ತಿ ಗಳನ್ನ ಮೈಗೋಡಿಸಿಕೊಂಡ ಒಬ್ಬ ನನಗಿಂತ ಹಿರಿಯ ಸ್ನೇಹಿತನ್ನ ಪಡೆದ ಬಗ್ಗೆ ನನಗೆ ನಿಜವಾದ ಹೆಮ್ಮೆ ಇದೆ.
ಇವತ್ತು ಪ್ರಕಾಶಣ್ಣನ 19 ನೆಯ ಹ್ಯಾಪಿ ಬರ್ಥಡೇ. ಬ್ಲಾಗ್ ನಲ್ಲಿ ಮೊದಲ ಪರಿಚಯವಾದ ಪ್ರಕಾಶಣ್ಣನಿಗೆ ಬ್ಲಾಗ್ ನ ಮೂಲಕವೇ ಹುಟ್ಟುಹಬ್ಬದ ಶುಭಾಷಯಗಳನ್ನ ತಿಳಿಸುವ ಯೋಚನೆ ಮಾಡಿದ್ದೇನೆ.

ಕುಟುಂಬದೊಟ್ಟಿಗೆ ಸುಖ ಸಂತೋಷದಿಂದ ನೂರುಕಾಲ ಬಾಳಿ ಸಾವಿರಾರು ಉತ್ತಮ ಬ್ಲಾಗುಗಳನ್ನು ಬರೆಯುವಂತಾಗಲಿ ಎಂದು ಎಲ್ಲ ಬ್ಲಾಗ್ ಮಿತ್ರರ ಪರವಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ.
ಜನ್ಮದಿನದ ಶುಭಾಷಯಗಳು ಪ್ರಕಾಶಣ್ಣ.
Comments
ಎನಪ್ಪ ಪ್ರಕಾಶಣ್ಣನ ವಯಸ್ಸು ಕಡಿಮೆ ಮಾಡಿ ಬಿಟ್ಟಿದ್ದೀಯ.....
ಬದಲಾಹಿಸಬೇಡ ಹಾಗೆ ಇರಲಿ....
೧೯ ರ ಹರೆಯ ಚಿಗುರು ಮೀಸೆ ಪ್ರಕಾಶಣ್ಣನಿಗೆ ಜನ್ಮದಿನದ ಶುಭಾಷಯಗಳು......