ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗಿ


ಒಬ್ಬನೇ ಕುಳಿತು ಹೊತ್ತು ಹೋಗದಿದ್ದಾಗ ಬರೆದ ಸಾಲುಗಳು ಕೆಲವರ ಗಮನ ಸೆಳೆದದ್ದಂತೂ ಸತ್ಯ.ಯಾವತ್ತೂ ಭಾವನೆಗಳಿಗೆ ಬುದ್ದಿ ಕೊಡದ ಆದಷ್ಟು ನಗುತ್ತಾ, ನಗಿಸುತ್ತಾ ಇದ್ದವ ಏಕಾಏಕಿ ಈ ರೀತಿ ಬರೆದದ್ದಕ್ಕೋ ಏನೊ ಕೆಲವರ ಕಣ್ಣನ್ನೂ ತುಂಬಿಸಿದೆ,ಕೆಲವರನ್ನು ಗಾಬರಿಗಿಳಿಸಿದೆ.ನಾನು ಮೊದಲ ಬಾರಿಗೆ ದೂರದ ಊರಿನಲ್ಲಿ ಇರುವುದು ಇದಕ್ಕೆ ಕಾರಣವಾಗಿರ ಬಹುದು.ಒಟ್ಟಿನಲ್ಲಿ ಹೀಗೆ ನನ್ನನ್ನು ನಾನು ಬರೆಯಲು ತೊಡಗಿಸಿ ಕೊಂಡಿರುವುದು ನನಗಂತೂ ಸಮಾಧಾನ ತಂದು ಕೊಟ್ಟಿದೆ.ಓದಿದವರೆಲ್ಲರೂ ಉತ್ತೇಜನಾತ್ಮಕ ಅಭಿಪ್ರಾಯ ಗಳನ್ನ ತಿಳಿಸಿರುವುದು ಮತ್ತೊಂದು ಬರವಣಿಗೆಗೆ ಸ್ಪೂರ್ತಿಯಾಗಿದೆ.ಆದರೆ ಬರೆವುವ ವಿಷಯ ಗಂಭೀರವಲ್ಲದ,ನಗಿಸದಿದ್ದರೂ,ಬೆಸರ ತರುವಂತದ್ದಾಗಿರದಂತೆ ಎಚ್ಚರ ವಹಿಸಬೆಕಾಗಿದೆ.ಅದಕ್ಕಾಗಿಯೇ Title ಬದಲಾಯಿಸಿದ್ದೇನೆ. ವಾರಕ್ಕೊಂದಾದರೂ Blog post ಮಾಡುವ ತೀರ್ಮಾನ ಕೈಗೊಂಡಿದ್ದೇನೆ.ಯಾವುದೇ ಕೈಗೊಂಡ ಕೆಲಸವನ್ನು ಪೂರ್ಣ ಮುಗಿಸಿದ ದಾಖಲೆ ನನ್ನದ್ದಿಲ್ಲ. ಈ ವಾಲ್ಮೀಕಿ ಅವತಾರ ಎಷ್ಟು ದಿನ ನಡೆದೀತು ನೊಡಬೆಕಾಗಿದೆ.ಯಾವುದೇ ಸಾಹಿತ್ಯ ಸ್ಪರ್ದೆಗೆ ಹೋಗುವ ಯೋಚನೆ ಸದ್ಯಕ್ಕಿಲ್ಲವಾದ್ದರಿಂದ ಈ ಬಾಲ ಭಾಷೆಯನ್ನ "ಓದುಗದೊರೆ"(ಕ್ರುಪೆ-ರವಿ ಬೆಳಗೆರೆ)ಸಹಿಸಿ ಕೊಳ್ಲಬೇಕಾಗಿದೆ.ನನ್ನ ಸಮಾದಾನಕ್ಕಾಗಿ ಬರೆದಿರುವುದರಿಂದ ನಾನೊಬ್ಬನೇ ಓದುಗನಾದರೂ ಬರೆದದ್ದಕ್ಕೆ ಸಾರ್ತಕತೆ ಇದೆ.ಬರೆಯುವಲ್ಲಿನ ನನ್ನ ಮೂರ್ಖತನಕ್ಕೆ ನಕ್ಕರೂ,ನಗಿಸುವ ಯೋಗ್ಯತೆ ನನ್ನ ಶಬ್ದ ಗಳಿಗಿದ್ದರೂ,ನಾನೂ ಬರೆದದ್ದಕ್ಕಾಗಿ ನಕ್ಕರೂ ಸಮರ್ಥಿಸಿ ಕೊಳ್ಳಬಲ್ಲಂತಹ ಹಣೆಬರಹ (ತಲೆಬರಹ) ಕೊಟ್ಟಿದ್ದೇನೆ. ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗಿ.....................................

Comments

Popular posts from this blog

ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ ! :)

ಹುಚ್ಚು ಕೋಡಿ ಮನಸು 2

Farmville Application in Facebook