Farmville Application in Facebook
ಬೇಡದ ಕೆಲಸಕ್ಕೆ ಸಮಯ ಹೇಗಾದರೂ ಸಿಗುತ್ತದಂತೆ, ಸಿಕ್ಕಸಮಯ ಹೇಗಂದರೆ ಹಾಗೆ ಕಳೆಯುವಾಗಿನ ಸುಖ ಮತ್ತೆಲ್ಲೂ ಸಿಗದಂತೆ.
ಗಾಳಿ ನೀರು ಅಹಾರ ನಿದ್ರೆ ಮುಂತಾದ ಮೂಲಭೂತ ಸೌಕರ್ಯ ಗಳಿದ್ದರೆ ಎಲ್ಲಿ ಬೇಕಾದರೂ ಬದುಕಬಹುದಂತೆ, ಇವತ್ತಿನ ಜ಼ಾಮಾನದಲ್ಲಿ ಲ್ಯಾಪ್ ಟಾಪು ಹಾಗೂ ಇಂಟರ್ ನೆಟ್ ಗಳೂ ಸೋ ಕಾಲ್ಡ್ ಮೂಲಭೂತ ಸೌಕರ್ಯಗಳ ಪಟ್ಟಿಯಲ್ಲಿ ಸೇರಿಕೊಂಡಿದೆಯಂತೆ.
ಮೈಲ್ ಅಂತೆ,ಚಾಟ್ ಅಂತೆ ಬ್ಲಾಗ್ ಅಂತೆ,ಟ್ಯೂಬ್ ಅಂತೆ, ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ಸಾವಿರಾರು ಹೊತ್ತುಕಳೆಯುವ ದಾರಿಯಂತೆ.
ಸುಮಾರು 3 ವರ್ಷಗಳಿಂದ ನನಗೂ ಹಿಡಿದ ಈ ಇಂಟರ್ ನೆಟ್ ಎಂಬ ಗೀಳು ಇವತ್ತು ಇಂಟರ್ನೆಟ್ ಇಲ್ಲದಾ ಬಾಳು, ಪ್ರಾಣಿಗಳಿಗಿಂತಾ ಕೀಳು ಎನ್ನುವಷ್ಟು ನನ್ನನ್ನ ಆಕ್ರಮಿಸಿದೆ.
ಆರ್ಕೂಟ್, ಫೇಸ್ ಬುಕ್,ಬ್ಲಾಗ್ ಸ್ಪಾಟ್ ಗಳಿಂದ ನೂರಾರು ಹಳೆಯ ಸ್ನೇಹಿತರನ್ನ ಪ್ರತಿದಿನ ಸಂಪರ್ಕದಲ್ಲಿಟ್ಟುಕೊಳ್ಳುವಂತೆ ಮಾಡಿದೆ, ಸಾವಿರಾರು ಹೊಸ ಸ್ನೇಹಿತರನ್ನ ಕೊಟ್ಟಿದೆ. ಅನಾನುಕೂಲತೆಗಳನ್ನು ಹೊರತು ಪಡಿಸಿ ಹೇಳುವುದಾದರೆ ಪ್ರಪಂಚವನ್ನ ಬಹಳ ಸಣ್ಣದಾಗಿಸಿದೆ.
voip caal, mail,chat,online banking and online share trading ಹೀಗೆ ಹಲವಾರು ಪ್ರಯೋಜನ ಗಳನ್ನ ಪಡೆದುಕೊಂಡ, ಹಾಗೆಯೇ ಬೇಡದ (ಕೆಲವರಿಗೆ) gaming,timepassing,ಮುಂತಾದವಕ್ಕೂ ಬಳಕೆಯಾಗುವ ಇಂಟರ್ ನೆಟ್ ನನಗಂತೂ ಬಿಡಲಾಗದ ಬಂಧು ವಾಗಿದೆ.
ಉದ್ದ ಪೀಟಿಕೆಯ ನಂತರ ಸಂಕ್ಷಿಪ್ತ ವಾಗಿ ವಿಷಯ ಹೇಳುವುದಾದರೆ, ಮೊದಮೊದಲು mail,chat,orkuting gaagi ಇಂಟರ್ ನೆಟ್ಟನ್ನ ಹಿಡಿದುಕೊಂಡ ನಾನು ಬರಬರುತ್ತಾ ಶೇರ್ ಟ್ರೇಡಿಂಗ್ ಗೂ ಬಳಸಿ ಕಳೆದವರ್ಷ ಯಾವುದೇ logic ಇಲ್ಲದೆ ಕೇವಲ ಭಂಡ ದೈರ್ಯದ ಬಲದಿಂದ stocks ಕೊಂಡು ನಾಕೆಂಟಾಣೆ ಹಣ ಬಾಚಿದ್ದೆ.
ಇನ್ನು ಎಲ್ಲಾ ಮುಗಿದಮೇಲೆ ಆರ್ಕೂಟ್ ನಲ್ಲಿ teen patti ಎನ್ನುವ game ಬೆಳಗಿನ 5 ಗಂಟೆಯ ವರೆಗೆ ಆಡಿ, ಅಮ್ಮ ಎದ್ದು ಬಾಗಿಲಿಗೆ ನೀರುಹಾಕಲು ಹೊರಟಾಗ ಬೈದು ಮಲಗಿಸಿದ್ದೂ ಇದೆ. ಬಹಳ ಬೇಗ ಬೇಜಾರಾಗಿ,ಅಲ್ಲಿಂದ gamezer ಎನ್ನುವ ಸೈಟ್ ನಲ್ಲಿ pool ಆಡುವ ಹುಚ್ಚು ಹಿಡಿಸಿಕೊಂಡೆ ಅದೂ ಸುಮಾರು 4-5 ತಿಂಗಳು ನಡೆಯಿತು. ಇದೀಗ ಒಂದುವಾರದಿಂದ ಎಲ್ಲಾ ಬಿಟ್ಟು ಬಂಗಿ ನೆಡುವ ಕೆಲಸ ಶುರುವಿಟ್ಟು ಕೊಂಡಿದ್ದೇನೆ.
ಅಂದರೆ facebook ನಲ್ಲಿ ಹುಡುಕುತ್ತಿದ್ದಾಗ ಸಿಕ್ಕಿದ farmVille ಎನ್ನುವ ಹೊಸ application. ಕೃಷಿಗೆ ಸಂಬಂಧ ಪಟ್ಟ ಒಂದು ಆಟ ಸಮಯ ಇದ್ದರೆ ಒಮ್ಮೆ ನನ್ನ ತೋಟಕ್ಕೆ ಬೇಟಿ ಕೊಡಿ
http://apps.facebook.com/onthefarm/index.php?giftCow=not_owned%3Acow_pink×tamp=1255527647&frHost=1574554693
ನನ್ನ ತೋಟಕ್ಕೆ"Ever otla farm"ಎಂದು ಹೆಸರಿಟ್ಟಿದೇನೆ.
ಅಪ್ಪಟ ಕೃಷಿಕ ನಂತೆ ದಿನಕ್ಕೆರಡು ಸಲ ತೋಟಕ್ಕೆ ಬೇಟಿ ನೀಡಿ ಬೆಳೆದ ಪಸುಲನ್ನು ಕೊಯ್ಯುವುದು ಮತ್ತೆ ನೆಲ ವನ್ನ ಊಳಿ ಹೊಸ ಬೀಜವನ್ನ ಬಿತ್ತುವುದು.ಅದು ಪಸುಲು ಬರುವ ವರೆಗೆ ಕಾಯುವುದು ಹೀಗೆ ಉದ್ಯೋಗ ಇಲ್ಲದ ಬಡಗಿಯ ಕೆಲಸ ಎನ್ನುವುದು ಬೇರೆ ಪ್ರಶ್ನೆ ಆದರೆ ಹೊತ್ತು ಕಳೆಯಲು ಒಳ್ಳೆಯ ಸಾಧನ.(ನನಗೆ, ನನ್ನಂತವರಿಗೆ)
ಬಾಲ್ಯದಲ್ಲಿ ತೋಟದಲ್ಲಿ ಬಿದ್ದ ಅಡಿಕೆ ಹೆಕ್ಕಿಕೊಂಡು ಬರುವುದೂ ಇಲ್ಲವಾಗಿತ್ತು ದೊಡ್ಡಪ್ಪನ ಒತ್ತಾಯಕ್ಕೆ ತೋಟದ ವರೆಗೆ ಹೋಗಿ ಕಾಟಾಚಾರಕ್ಕೆ ಒಂದು ಚೀಲ ಅಡಿಕೆ ಹೆಕ್ಕಿಬರುತ್ತಿದ್ದವ ನಾನು. ನಂತರ ಅದೇ ದೊಡ್ಡಪ್ಪನ ಕಣ್ಣು ತಪ್ಪಿಸಿ ಕವಳ ಹಾಕಲು ಅದೇ ತೋಟಕ್ಕೆ ಹೋಗುತ್ತಿದ್ದೆ ಬಿಡಿ ಆ ಪ್ರಶ್ನೆ ಬೇರೆ.
ನಾ ಆಡುವುದನ್ನ ನೋಡಿ ಕೇಳಿ ನನ್ನ ಪ್ರಭಾವಲಯದ 7-8 ಜನ ಇದೇ ಕೆಲಸ ಶುರು ಮಾಡಿ ಕೊಂಡಿದ್ದಾರೆ ನಯಾಪೈಸೆಯ ಪ್ರಯೋಜನ ಇಲ್ಲದ ಇಂತದ್ದನ್ನೆಲ್ಲಾ ಯಾಕೆ ಬ್ಲಾಗ್ ನಲ್ಲಿ ಹಾಕಿ ನಮ್ಮ ಸಮಯವನ್ನೂ ಹಾಳು ಮಾಡುತ್ತೀಯಾ ಎಂದು ಬೈಯ್ಯುತ್ತಿದ್ದೀರಾ ? 5 ನಿಮಿಷ ಪುರುಸೊತ್ತು ಮಾಡಿಕೊಂಡು ಒಮ್ಮೆ ನೋಡಿ ಒಂದು ವಾರದ ನಂತರ ನೀವೂ ಹೊತ್ತಿಗೆ ಸರಿಯಾಗಿ ಮನೆಗೆ ಹೋಗಬೇಕು ಹಸು ಕರೆಯುವುದಿದೆ (ಹಾಲು ಹಿಂಡುವುದಿದೆ) ಎನ್ನುತ್ತೀರಿ.
ಬಂದವರು ನನ್ನ ತೋಟದಲ್ಲಿ ಹಾಕಿದ ಫಲಕ ಗಳನ್ನೆಲ್ಲಾ ಓದಿ ಮುಖದಲ್ಲಿ ನಗೆ ತಂದುಕೊಳ್ಳಲು ಮರೆಯದಿರಿ ಮರೆತು ನಿರಾಷರಾಗದಿರಿ.
ಉಪಯುಕ್ತ ಮಾಹಿತಿ ಕೊಡಲು ಸಾವಿರಾರು ಜನ ಇದ್ದಾರೆ ಸ್ವಾಮಿ ಇಂತಹಾ ಸಾವಿರಾರು, ಕಾಸು ಕರ್ಚಿಲ್ಲದೆ ಹೊತ್ತು ಕಳೆವುವ ಸಲಹೆ ಕೊಡುವ ಸಮಯ ಎಷ್ಟು ಜನರಿಗಿರುತ್ತದೆ ಏನಂತೆರೀ????????????????????

Comments
ಮಾಹಿತಿ ಉಪಯುಕ್ತಾನೇ......ಅದ್ರೆ ಲಿಂಕನ್ನು ನಮ್ಮ ಆಫೀಸಿನಲ್ಲಿ ಓಪನ್ ಮಾಡಲು ಆಗಲಿಲ್ಲ...ಇಲ್ಲಿ ಫೇಸ್ ಬುಕ್ಕಿಗೆ ಬೆಂಕಿಗೋಡೆ ಆಕಿ ಬಿಟ್ಟವರೇ...
ಚೆನ್ನಾಗಿ ಬರೆದಿದ್ದೀಯಾ....ಇನ್ನು ಎಷ್ಟೊಂದಕ್ಕೆ ಉಪಯೋಗಿಸಿದ್ದೀಯಾ ಇಂಟರ್ನೆಟ್ ಅದೂ ಬರೆದಿಲ್ಲ.....
ಉತ್ತಮ ಮಾಹಿತಿಗೊಂದು ಸಲಾಮ್....
ನಾನು ಒಮ್ಮೆ ಬಿಡುವು ಮಾಡಿಕೊಂಡು ನೀವು ಹೇಳೀದನ್ನೆಲ್ಲಾ ನೋಡುತ್ತೇನೆ. ಮತ್ತೆ ಈಗ ನನಗೆ ಇಂಟರ್‍ನೆಟ್ ಇಲ್ಲದಿದ್ದಲ್ಲಿ ಅವತ್ತಿನ ನನಗೆ ವಿಚಿತ್ರವಾಗಿರುತ್ತದೆ...
ಉಪಯುಕ್ತ ಮಾಹಿತಿ,
ಊಟ ಬಿಟ್ಟಾದರೂ ಬದುಕಬಹುದು, ಇಂಟರ್ನೆಟ್ ಇಲ್ಲದೆ ಇರಲು ಸಾದ್ಯವೇ ಇಲ್ಲ ಎನ್ನುವಷ್ಟು ನಾವು ದಾಸರಾಗಿದ್ದೇವೆ,
ಇದೊಂದು ನಿಜಕ್ಕೂ ಮಾಯಾಲೋಕ
ಇನ್ನೂ ತೋಟ, ಗದ್ದೆ ಆಟ ಆಡಲೇ ಹೋದ್ರೆ ಮುಗತ್ತು ಕೆಲ್ಸಾ..ಒಂದಿನ ನೆಟ್ ಇಲ್ಲೇ ಅಂದ್ರೆ ಹುಚ್ಚು ಹಿಡ್ದಾನ್ಗೆ ಆಗ್ತು..
ಒಳ್ಳೆಯ ಮಾಹಿತಿಗಾಗಿ ಧನ್ಯವಾದ..