ತಮಸೋಮಾ ಜ್ಯೋತಿರ್ಗಮಯ

ರಾತ್ರಿ ಊಟ ಮಾಡುತ್ತಿದ್ದಾಗ ಈ ಬ್ಲೊಗಿನ ಮೊಳಕೆ ಒಡೆಯತೊಡಗಿತು ಸ್ವತಃ ಮಾಡಿದ ಅಡುಗೆ ಬ್ಲೊಗಿನ ಹುರುಳಾಯಿತು.ಹಸಿವು ಎನ್ನುವುದು ಮನುಷ್ಯನನ್ನು ಎಷ್ಟು ಕೆಳಮಟ್ಟಕ್ಕೆ ಕೊಂಡೊಯ್ಯುತ್ತದೆ ನೋಡಿ,ಅಮ್ಮ ಆರೂಗ್ಯ ಸರಿ ಇಲ್ಲದೆ ಹಾಸಿಗೆ ಹಿಡಿದಾಗ ಕೂಡ ಅಡಿಗೆ ಮಾಡಿದವನಲ್ಲ ನಾನು. ಈಗ ಅಡಿಗೆ ಮನೆಯಲ್ಲಿ ಸಂಜೆ ನಮ್ಮ "ಹಾಸ್ಯಾಸ್ಪದ ಪಾಕೋತ್ಸವ".(ಗತ್ಯಂತರವಿಲ್ಲದೇ ಅಲ್ಲ) ಮನೆಇಂದ ಹೊರಬಿದ್ದರೆ ಪ್ರಪಂಚದ ಎಲ್ಲ ಪ್ರದೇಶಗಳ ಖಾದ್ಯ ಸಿಗುತ್ತದಾದರೂ ಮನೆ ಅಡುಗೆಯ ರುಚಿ ಅಲ್ಲೆಲ್ಲಿ? ನಿನ್ನೆ ಮಾಡಿದ ಬೀಟ್ರೂಟ್ ಪಲ್ಯ ದೊಡ್ಡಮ್ಮನ ಕೈಅಡುಗೆಯಷ್ಟೇ ರುಚಿಯಾಗಿಬಿಟ್ಟಿತ್ತು(by mistake!).ಸ್ವಲ್ಪ ಉಳಿದದ್ದು ದಂಡ ಆಗುತ್ತದೆ ಎಂದು ಅದನ್ನ ಖಾಲಿ ಮಾಡಿ ಮಾಡಿ ಹೀಗೆ ದಪ್ಪಾಗಿದ್ದೀಯ ಎಂದು ಅಮ್ಮನನ್ನ ರೇಗಿಸುತ್ತಿದ್ದೆ ಆದರೆ ಕಾಲಚಕ್ರ ತಿರುಗಲು ಬಹಳ ಸಮಯ ಹಿಡಿಯಲೇ ಇಲ್ಲ ಎನ್ನುವುದಕ್ಕೆ ನನ್ನ ಕೈಗಡಿಯಾರ ಬಿಗಿಯಾದದ್ದೇ ಸಾಕ್ಷಿ.
ಅಬ್ಬ! ತಕ್ಕಮಟ್ಟಿಗೆ ಅಡುಗೆ ಮಾಡಲು ಕಲಿತಾಯಿತು,ಬಟ್ಟೆ ತೊಳೆಯುವುದು ಅಬ್ಯಾಸವಾಗಿದೆ,ಇನ್ನು ಮದುವೆ ಆದರೂ ಬದುಕಬಹುದು ಎಂಬ ದೈರ್ಯ ಬಂದಿದೆ.
ಅಂದ ಹಾಗೇ ನಾಳೆ ದೊಡ್ಡಬ್ಬ ಹೊಸಬಾಳೆಯಲ್ಲಿ ನನ್ನ ಪಾರ ಕಾಯುವ ಹುಡುಗರಿಗೆ ಈ ವರ್ಷ ನಿರಾಸೆ ಖಂಡಿತ.
ಪ್ರತಿವರ್ಷದಂತೆ ಮಧ್ಯಾಹ್ನದ ಊಟವಾದ ಕೂಡಲೆ ಗುರಿಗಾಯಿ ಒಡೆಯುವವರಿಗೆ ಅಡಿಕೆ ಕಂಬ,ಗುರಿಗಾಯಿ ಗುಂಡು,ಮೆಟ್ಟಿನ ಅಳತೆ, ಹಣಕಾಸಿನ ಲೆಕ್ಕಾಚಾರದ ವ್ಯವಸ್ತೆ ಮಾಡಿಕೊಟ್ಟು ನಮ್ಮ ಮೂರು ಗುಂಡಿನ ಆಟ ಶುರು ಮಾಡುವುದಕ್ಕೆ ನಾನಿಲ್ಲ.ವರ್ಷಕ್ಕೊಮ್ಮೆ ಭಲೀಂದ್ರ ನನ್ನ ನೆನಪು ಮಾಡಿಕೊಳ್ಳುವಂತೆ ಬಾಲವೃದ್ದರಾದಿಯಾಗಿ ನನ್ನನ್ನೂ ನೆನಪು ಮಾಡಿಕೊಳ್ಳುತ್ತಾರೆ.ನನ್ನ ನೆನಪಿನ ಪ್ರಕಾರ ಇದೇ ಮೊದಲ ದೀಪಾವಳಿ ನಾನು ಊರಲ್ಲಿ ಇರದಿರುವುದು. ಹಬ್ಬ ತಪ್ಪಿದರೂ ಹೋಳಿಗೆ ತಪ್ಪದು ಎಂಬಂತೆ ದೊಡ್ಡಬ್ಬದ ಲೆಕ್ಕದ ಜುಗಾರಿ ಗಾಗಿ ಈ ವರ್ಷ ನಮ್ಮ ಶೇರು ಮಾರುಕಟ್ಟೆ ಯವರು ವ್ಯವಸ್ತೆ ಮಾಡಿ ಕೊಟ್ಟಿದ್ದಾರೆ ವಾತಾವರಣವೂ ಅನುಕೂಲಕರವಾಗಿದೆ ಅಲ್ಲಾಗಿದ್ದಿದ್ದರೆ ನೂರಿನ್ನೂರು ರೂಪಾಯಿಯಲ್ಲಿ ಮುಗಿಯುತ್ತಿದ್ದ ಜುಗಾರಿಯ ಬೆಲೆ ಇಲ್ಲಿ ಸಾವಿರದ ಲೆಕ್ಕದಲ್ಲಿ ನಡೆಯುತ್ತದೆ. (ಗೊಂಡಾಲ್ಯೋಮಾ ಸೆನ್ಸೆಕ್ಸಮಯ).

ಅಂತೂ ದೀಪಾವಳಿಯ ಕಡುಬು, ಹೋಳಿಗೆ,ಗುರಿಗಾಯಿ,ಗುಂಡಾಲೆ ಎಲ್ಲವನ್ನೂ ನೆನಪು ಮಾಡಿಕೊಳ್ಳುತ್ತಾ ನಾವೇ ತಯಾರಿಸಿದ ನಳಪಾಕ ವನ್ನು ನಾವೆ ಹೊಗಳಿಕೊಳ್ಳುತ್ತಾ ದಂಡ ಆಗದಂತೆ ಖಾಲಿ ಮಾಡುತ್ತಾ ಪ್ರತಿದಿನವೂ ಬೆಳಗಿನ ವಾಕಿಂಗ್ ನ ಪ್ರಾರಂಬೋತ್ಸವ ವನ್ನು ಮುಂದೂಡುತ್ತಾ ಅಂದಿನ ರಾತ್ರಿ ಊಟ ಮುಗಿಸುತ್ತಿದ್ದೇವೆ.

ಇನ್ಷಾಲ್ಲಾಹ್ ಮುಂದಿನ ವರ್ಷವಾದರೂ ದೊಡ್ಡಬ್ಬಕ್ಕೆ ಊರಿನಲ್ಲಿರು ವಂತಾಗಲಿ.

Comments

Unknown said…
ha ha ha super

jai shereshvari
prajavani said…
ತಮಸೋಮಾ ಜ್ಯೋತಿರ್ಗಮಯ ಎಂದಾಗಬೇಕು.ಇನ್ನು ಕೆಲವು ತಪ್ಪುಗಳು ನುಸುಳಿವೆ
@ Prajaavaani
Thanks a lot for your valuable comment and suggestions.
I will make sure that this will be taken care in the future.
Unknown said…
Neenobne alla. Yee suttu yaru habbake yirle. Naanu, Niranjana, Paapya, Puttu.....Naanu life alli first time "DODDABBA" mis madkyatha yidhi..Bahushya nam kaala muguttu kaanthu.. Keeli kai na nam next generation avrige koda kaala banthana antha annusthu..Noda next habbakkaru yellaru sigakke aagtha antha......

Popular posts from this blog

ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ ! :)

ಹುಚ್ಚು ಕೋಡಿ ಮನಸು 2

Farmville Application in Facebook