ಯಕ್ಷಗಾನ ಮತ್ತು ನಾನು


ಅಂತೂ ಎಲ್ಲರ ನಿರೀಕ್ಷೆಯ ತಲೆಬರಹದ blog ಬರೆಯಲಿಕ್ಕೆ ಕುಳಿತಾಗಿದೆ.ಇದರ ಬಗ್ಗೆ ಎಲ್ಲಿಂದ ಪ್ರಾರಂಭಿಸಬೆಕೆಂಬ ಜಿಜ್ನಾಸೆ ಇದ್ದರೂ ಬರೆಯಲೇಬೇಕಾದದ್ದು ಬಹಳಷ್ಟಿದೆ.
ಯಕ್ಷಗಾನಕ್ಕೂ ನನಗೂ ಇರುವ ನಂಟು ಹುಟ್ಟಿದಾಗಿನಿಂದ (ಯಕ್ಷಗಾನವೋ ನಾನೋ ಗೊತ್ತಿಲ್ಲ). ತಾಯಿಯ ಮನೆಯಿಂದ ಅಷ್ಟು,ಮನೆ ಅಜ್ಜನಿಂದ ಅಷ್ಟು ಎಂದು ಹಿಡಿದ ಹುಚ್ಚು ಎಲ್ಲಿಯವರೆಗೆ ಅಂದರೆ ಒಂದು ಆಟ ನೊಡಲು 2500/- ಗಳಷ್ಟು ಖರ್ಚು ಮಾಡುವಷ್ಟರ ವರೆಗೆ ಬಂದು ತಲುಪಿತ್ತು. ಖರ್ಚು ಬೆರೆಯವರು ಮಾಡುವುದರಿಂದ ನನಗೆ ಆಟ ಕಂಡಿದ್ದೇ ಲಾಭ. ಆದರೂ ನನಗೇ ಹೆಚ್ಚು ಅನಿಸುವಷ್ಟು ಹುಚ್ಚು ಹಿಡಿಸಿಕೊಂಡಿದ್ದೆ.ನನ್ನ ಬಗ್ಗೆ ಯಾವುದೇ ಚರ್ಚೆ ಪ್ರಾರಂಭವಾದರೂ ಶುರು ಆಗುವುದೇ ಆಟದ ಸುದ್ದಿಯಲ್ಲಿ ಹಾಗಂತ ನಾನು ಹಾಗೆ ಯಕ್ಷಗಾನದ ಸುದ್ದಿ ಪ್ರಾರಂಭವಾದರೆ ಮೈಮರೆಯುತ್ತಿದ್ದೆ. ಕಡೆಕಡೆಗೆ ಯಾವುದೆ ಮಂಡನೆ,ಖಂಡನೆಗೆ ಉದಾಹರಣೆಯೂ ಯಕ್ಷಗಾನದ್ದೇ ಆಗಿರುತ್ತಿತ್ತು ಪೂರಕವೆಂಬಂತೆ ಸ್ನೆಹಿತವಲಯವೂ ಸಮಾನ ಆಸಕ್ತಿಯದ್ದಾಗಿತ್ತು.ಸಮಾನ ಆಸಕ್ತಿಯವರೇ ಸ್ನೇಹಿತರಾಗುತ್ತಿದ್ದರು ಎಂದೂ ಹೇಳಬಹುದು."ಏನೋ ಮರಾಯ ನಿನ್ನ ಗಾಡಿ ಕೋಟ ಶಿವಾನಂದನ ಚಂಡೆ ಹಂಗೆ ಶಬ್ದ ಮಾಡ್ತಲೋ" ಎಂದು ಮಾತಾಡುತ್ತೇನೆ ಎನ್ನುವುದು ನನ್ನ ಮೆಲಿನ ವಿಡಂಬನೆಯ ಒಂದು ಉದಾಹರಣೆ.ಕಂಪನಿ ಕೆಲಸದ ಮೇಲೆ ಮೈಸೂರಿಗೆ ಹೊರಟು ನಿಂತರೆ ಯಾವ ಮೆಳದ ಆಟ ಎಂದು ಅಮ್ಮ ರೇಗಿಸಿ ಬೈಸಿಕೊಂಡಿದ್ದೂ ಇದೆ. ಮಾತನ್ನೇ ಆಡದ ಕಡವಿನಮನೆ ಪುಟ್ಟಜ್ಜ ಆಟದ ಸುದ್ದಿಯಾದರೆ ನಾಣು ವನ್ನ ಕೇಳಿ ಪೂರ್ಣ ಮಾಹಿತಿ ಸಿಗುತ್ತದೆ ಎಂದು ತಮಾಷೆ ಮಾಡುವಷ್ಟು ನನ್ನನ್ನು ನಾನು ಯಕ್ಷಗಾನೀಕರಿಸಿಕೊಂಡಿದ್ದೆ. ಅಂತು ಧರ್ಮಕರ್ಮ ಸಂಯೋಗದಿಂದ ಸದ್ಯಕ್ಕೆ ಸ್ವಲ್ಪ ದೂರವಾಗಿದ್ದೇನೆ. ನಮ್ಮ ರಾಘು ಮಾವ ಹೇಳುವಂತೆ ಪ್ರತೀ ಗಧಾಯುದ್ಧ ದಲ್ಲೂ ಕೌರವನೇ ಸಾಯುತ್ತಾನಾದರೂ, ನೋಡುವ ಮಜವೇ ಬೇರೆ (ಆಗಿತ್ತು). ಯಕ್ಷಗಾನ ನಡೆಯುವ ದಿನ, ಸ್ಥಳದಿಂದಾದಿಯಾಗಿ ಎಲ್ಲ ಮಾಹಿತಿಗಾಗಲೀ, ಪ್ರವೇಶಪತ್ರ ಕ್ಕಾಗಲೀ, ಕೊನೆಯ ಪಕ್ಷ ಆಟ ಮಾಡಿಸುವನ ಬಟವಾಡೆಯ ಹಣದ ಕಂಬರ್ತಿಯ ವ್ಯವಸ್ತೆಗಾಗಲೀ ನನ್ನ ಬಳಕೆಯಾಗುತ್ತಿತ್ತು. ಕಲಾವಿದರ ಬಳಗವಾಗಲೀ, ವ್ಯವಸ್ತಾಪಕರ ಕಡೆಯಿಂದಾಗಲೀ ಒಳ್ಳೆಯ ಗೌರವ ಇರುವ ಕಾರಣ ಗೊತ್ತಾಗಬೆಕಾದರೆ ನನ್ನ ಕಾರ್ ಮಾರಬೇಕಾಯಿತು.
ತಕ್ಕಮಟ್ಟಿಗೆ ತಾಳ,ಸಾಹಿತ್ಯ,ಪ್ರಸಂಗಗಳ ಪರಿಚಯ ಇರುವುದರಿಂದಲೋ ಏನೋ ರಂಗಸ್ಠಳದ ವರೆಗೂ ನನ್ನ ವ್ಯಾಪ್ತಿ ಬೆಳೆಯಿತು ನೋಡ ನೋಡುತ್ತ ಹವ್ಯಾಸಿ ಮೇಳಕ್ಕೆ ಸಾಕಾಗುವಷ್ಟರ ಮಟ್ಟಿಗೆ ಮದ್ದಲೆಗಾರನೂ ಆದೆ ಸಹೃದಯೀ ಮಿತ್ರ ಅಮೃತನ ಸಹಾಯ,ಮಾರ್ಗದರ್ಶನ ದಿಂದ ರಂಗಸ್ಠಳದಲ್ಲೆಲ್ಲೂ ಮರ್ಯಾದೆ ಹೋಗುವ ಪ್ರಮೇಯ ಬರಲಿಲ್ಲ. ಕಲಾವಿದರ ಹೊಸ ಮನೆಯ ನಲ್ಲಿಯ ಆಯ್ಕೆ,ನೆಂಟರಿಷ್ಟರಿಗೆ ಬೆಂಗಳೂರಿನಲ್ಲಿ ಕೆಲಸ,ಆಟದ ರಂಗಮಂದಿರ ದ ವ್ಯವಸ್ತೆ,ಇವೆಲ್ಲವೂ ನನ್ನ ಕಲಾಸೇವೆಯ ಹೆಸರಿನಲ್ಲಿ ನಡೆಯುತ್ತಿತ್ತು.ಲಾಭಕ್ಕಾಗಿ ಬಳಸಿ ಕೊಂಡವರೇ ಹೆಚ್ಚಾದರೂ ಆತ್ಮೀಯತೆ ಇಂದ "ಒಮ್ಮೆಮನೆಗೆ ಬನ್ನಿ" ಎಂದವರೂ ಇದ್ದಾರೆ, ಮಾಡಿದ ಅಳಿಲು ಸೇವೆಗೆ ಧನ್ಯತೆ ಇಂದ ಕೈ ಮುಗಿದ ಹೄದ್ವಿಶಾಲ ಕಲಾವಿದರೂ ಇದ್ದಾರೆ. ಆಟದ ಚೌಕಿಯಲ್ಲಿ ಒಮ್ಮೆಯಾದರೂ ನನ್ನ ನೆನಪು ಮಾಡಿಕೊಳ್ಳುವಷ್ಟು ಕಲಾವಿದರಿಗೆ ಹತ್ತಿರವಾಗಿ ಬಿಟ್ಟಿದ್ದೆ. ಆದರೆ ಈಗ ತಪ್ಪಿದ ಕೊಂಡಿ ನನ್ನನ್ನು ಶಾಶ್ವತ ವಾಗಿ ಯಕ್ಷಗಾನದಿಂದ ದೂರ ವಿಡುವುದರಲ್ಲಿ ಅನುಮಾನವೇ ಇಲ್ಲ. ಯಕ್ಷಗಾನದಿಂದ ಹೊಟ್ಟೆ ತೊಂಬುವುದಿಲ್ಲ ಎಂದು ಉಪದೇಶ ಕೊಟ್ಟವರೆಲ್ಲರೂ ಒಳಗೊಳಗೇ ಸಂತೋಷ ಪಡುವುದನ್ನ ಗಮನಿಸುತ್ತಿದ್ದೇನೆ. ಅವನೊಬ್ಬ ಇದ್ದಿದ್ದರೆ ಈ ಸಂದರ್ಭದಲ್ಲಿ........ ಎನ್ನುವ ಮಾತೂ ಕೇಳಿಸುತ್ತಿದೆ. ನನ್ನ ಸಮಾಧಾನಕ್ಕಗಿಯೋ,ರಂಜನೆಗಾಗಿಯೋ, ಕ್ಲಬ್ಬು ಪಬ್ಬು ಸಿನಿಮಾ ಗಳಂತಹ ಗೀಳಿಗೆ ಬೀಳದೆ ಯಕ್ಷಗಾನವನ್ನ ಆರಿಸಿಕೊಂಡ ಸಮಾಧಾನವಿದೆ.ನೀನಿಲ್ಲದಿದ್ದರೂ ಯಕ್ಷಗಾನ ನಡೆಯುತ್ತಿದೆ ನೀ ಹುಟ್ಟುವುದಕ್ಕಿಂತ ಮೊದಲೂ ಇತ್ತು ನಿನ್ನ ನಂತರವೂ ಇರುತ್ತದೆ ಎನ್ನುವ "ಕೊನೆಯ ಮಾತು ತನ್ನದಾಗಿಸಿಕೊಳ್ಳಬೆಕೆನ್ನುವ"ಚಟವಿರುವವರಿಗೆ ಉತ್ತರಿಸಬೇಕು ಅನ್ನಿಸುವುದಿಲ್ಲ. ಒಟ್ಟಿನಲ್ಲಿ ಸಂಪೂರ್ಣ ಬದಲಾದ ಜೀವನ ಶೈಲಿಯನ್ನ ಅನುಸರಿಸಿದ ನನಗೆ ಈಗ ಕಿವಿಯಲ್ಲಿ ಗುನುಗುನಿಸುವುದು ಕೇಶವಣ್ಣನ ಮದ್ಯಮಾವತಿ ತ್ರಿವುಡೆಯ ಈ ಸಾಲು
ನೋಡಿನಿರ್ಮಲ ಜಲಸಮೀಪದಿ ಮಾಡಿಕೊಂಡರು ಪರ್ಣಶಾಲೆಯ
ರೂಡಿಪಾಲರು ಪಂಚವಟಿಯ ಕಾಡಿನೊಳಗೆ.

Comments

Unknown said…
Nangu Yakshagaanakku Yenne Shige kayi aadhru saha e nin article oodidh mele naanu yake swalpa aa kade muka maadlaga annuatha yidhu. Any way i think its ine of the best Blogs from you. Keep writing.....
Unknown said…
ಆಟದ ಚೌಕಿಯಲ್ಲಿ ಒಮ್ಮೆಯಾದರೂ ನನ್ನ ನೆನಪು ಮಾಡಿಕೊಲ್ಲುವಷ್ಟು ಕಲಾವಿದರಿಗೆ ಹತ್ತಿರವಾಗಿ ಬಿಟ್ಟಿದ್ದೆ.

ಅಕ್ಷರ ಅಚಾನಕ್ಕಾಗಿ ತಪ್ಪಾಗಿದ್ದರು ಎಂತಹ ಅದ್ಬುತ ಅರ್ಥ ಕೊಟ್ಟಿದೆ. ಇನ್ನು ನೀನು ಬೆಂಗಳೂರಿಗೆ ಬಂದಾಗ ಬೇಕಷ್ಟು ಆಟ ನೋಡು ಬೇಕಷ್ಟು ವಿಮರ್ಷೆ ಮಾಡು ಆ ನಿನ್ನ ವಿಮರ್ಷೆಗೆ ಉತ್ತಮ ವ್ಯಾಲ್ಯೂ ಖಂಡಿತ. ಈ ಪ್ರಪಂಚದಲ್ಲಿ ಕುಬೇರನ ಪಾತ್ರ ದುಡ್ಡಿದ್ದವರು ಮಾಡಬೇಕು. ಇಲ್ಲದಿದ್ದರೆ ಬಣ್ಣ ಅಳಿಸಿದ ಮೇಲೆ ನಾಯಿ ಪಾಡು. ಹಬ್ಬದ ರಷ್ ಇದ್ದಾಗ ಬೆಂಗಳೂರು ಸಾಗರ ಬಸ್ಸಿನ ಡ್ರೈವರ್ ರಾತ್ರಿ ಒಂಥರಾ ದೇವರಂತೆ ಕಾಣುತ್ತಾನೆ. ಸಾಗರಕ್ಕೆ ನಮ್ಮ ಇಳಿಸಿ ಅವನು ಕೂತು ಕೂತು ನೆರಿಗೆಯಾದ ಪ್ಯಾಂಟ್ ನಲ್ಲಿ ಮಂಗನ ಅಂಡಿನಂಥಾದ ಅಂಡನಲ್ಲಿ ಜೀವದ ಮೂಲ ತುರಿಸುತ್ತಾ ನಡಕೊಂಡು ಹೋಗುತ್ತಾನಲ್ಲ ಆವಾಗ ಅವನು ಯಾರಿಗೆ ಬೇಕು?. ಯಕ್ಷಗಾನದಿಂದ ನೀನು ಇರಬಾರದು ನಿನ್ನಿಂದ ಯಕ್ಷಗಾನವಿದ್ದರೆ ಚೆನ್ನ. ಇಲ್ಲದಿದ್ದರೆ ನಮ್ಮಂತಹ ಅಬ್ಬೆಪಾರಿ ಗತಿ.
@RaguMaava
I've decided not to react for any comments regarding this blog.
nanage yaksha gaana arthane agolla putta
ಹೋಗ್ಲಿ ಬಿಡಿ ನಾ ಇನ್ನೊಂದಿನ "ವೀರಗಾಸೆ" ಯ ಬಗ್ಗೆ ಬರಿತೀನಿ.

Popular posts from this blog

ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ ! :)

ಹುಚ್ಚು ಕೋಡಿ ಮನಸು 2

Farmville Application in Facebook