ತಾಯಿಬ್ ಓಕೆ ಮಾಫಿ ಮೆಷ್ಕಿಲ್.

ಸಬಾನ್ ಕೀ ಫ಼ಾಲಕ್ ಕುಲ್ಲು ತಮಾಮ್ ? ಇದು ನಮ್ಮ ಸದ್ಯದ ಕುಶಲೋಪರಿಯ ವೈಖರಿ. ಮೊದಲು ನಮಗೆ ಮಾತನಾಡಲು ಅವಕಾಶ ಸಿಕ್ಕರೆ ಇಲ್ಲವಾದರೆ ಅವರು ಕೇಳಿದ್ದಕ್ಕೆ ಹಂದುಲ್ಲಾಹ್ ಎನ್ನುವುದು. ಇದೇನಿದು ಕತಾರಿಗೆ ಹೊದ ಮೇಲೆ ಇವನಿಗೆ ಹೆಚ್ಚಾಗಿ ಹೋಯಿತೆ? ಎಂದು ಯೋಚಿಸಿದರೆ ಆಶ್ಚರ್ಯ ಇಲ್ಲ. ತಿನ್ನುವ ಅನ್ನದ ಋಣ ತೀರಬೇಕಾದರೆ ಇವೆಲ್ಲ ಮಾಡಬೇಕಾಗುತ್ತದಂತೆ.
ಅಂದ ಹಾಗೆ ಇವತ್ತಿನ ಬ್ಲೊಗು ಅರಬ್ಬಿ ಭಾಷೆಯ ಮೇಲೆ (ನನಗನಿಸಿದ್ದು ಮಾತ್ರ).

ಸಾವಿರಗಟ್ಟಲೆ ಮೈಲಿಗಳ ದೂರ ಬಂದು ಇಲ್ಲಿಯ ಭಾಷೆಯ ಬಗ್ಗೆ ಕನಿಷ್ಟ ಕಲ್ಪನೆ ಕೂಡಾ ಇಲ್ಲದೆ ಭಂಡಧೈರ್ಯ ಮಾಡಿ ಇಲ್ಲಿಯ ಜನರ ನಡುವೆ ಬದುಕುವುದು ಸುಲಭದ ವಿಷಯವಲ್ಲ.ಹಾಗಂತ ನಾನೊಬ್ಬನೇ ಕಡಿದು ಗುಡ್ದೆ ಹಾಕಿದ್ದೇನೆ ಎಂದಲ್ಲ. ಇಡೀ ಕೇರಳ ರಾಜ್ಯವೇ ಇಲ್ಲಿ ನೆಲೆಗೊಂಡಿದೆ. ಹಾಗಂತ ಇಲ್ಲಿ ಅರಬ್ಬೀ ಮಾತನಾಡದೆ ಇದ್ದರೆ ದೇಶಭ್ರಷ್ಟ ಮೊಕದ್ದಮೆ ಹಾಕುವುದಿಲ್ಲ.ಆದರೂ ಅರಬ್ಬೀ ಮಾತನಾಡಿದರೆ ನಿಜವಾದ ಮರ್ಯಾದೆ ಸಿಗುತ್ತದೆ.ಎಲ್ಲಿಯೇ ಹೋದರೂ ಅಲ್ಲಿಯ ಭಾಷೆ ಕಲಿಯುವ ಹುಚ್ಚು ನನಗೆ ಮೊದಲಿಂದಲೂ ಇದ್ದುದರಿಂದ ಈಗ ಅರಬ್ಬೀ ಭಾಷೆಯ ಮೇಲೆ ನಮ್ಮ ಅದ್ಯಯನ ಪ್ರಹಾರ ಪ್ರಾರಂಭವಾಗಿದೆ.
ಅನೀವಾರ್ಯ ಬೇರೆ ಆಸಕ್ತಿ ಬೇರೆ ನನಗೆ ಎರಡನೆಯದು.ಬೆಂಗಳೂರಿನಲ್ಲಿದ್ದಾಗ ಮಲಯಾಳಂ ಅನಿವಾರ್ಯ ವಾಗಿದ್ದರಿಂದ ತಕ್ಕಮಟ್ಟಿಗೆ ಕಲಿತೆ ಅದು ಇಲ್ಲಿ ಒಪ್ಪತ್ತಿನ ಊಟಕ್ಕೆ ದಾರಿಯಾಗಿದೆ ಏಕೆಂದರೆ ಹೋಟೆಲ್ ಗಳಲ್ಲಿ ಇರುವ ಮಾಣಿ ಗಳೆಲ್ಲಾ ಕುಟ್ಟಿಗಳೇ. ಇಲ್ಲಿ ಆಸಕ್ತಿಗಾಗಿ ಅರಬ್ಬೀ ಕಲಿಯತೊಡಗಿದ್ದೇನೆ.ಯಾವುದೇ ಭಾಷೆಯನ್ನ ಕಲಿಯಬೇಕಾದರೆ ಮೊದಲು ಕುಶಲೋಪರಿ, ನಂತರ ಹೆಚ್ಚು ಬಳಸಲ್ಪಡುವ ಶಬ್ದಗಳು, ನಂತರ ಕೆಟ್ಟಬೈಗುಳಗಳು ನಮ್ಮನ್ನ ಆಕರ್ಶಿಸುತ್ತವೆ.ನನ್ನ ಮೊಬೈಲ್ ಸಂಖ್ಯೆಯನ್ನು ಅರಬಿಕ್ ನಲ್ಲಿ ಹೇಳುವಷ್ಟನ್ನ ಈಗಾಗಲೇ ಅಭ್ಯಾಸ ಮಾಡಿಕೊಂಡಿದ್ದೇನೆ. (ಸಿತ್ತಾ ತಲ್ಲತ್ತಾ ತಿಸ್ಸಾ ಕಂಸಾ ವಾಹಿದ್.................)
ಆದರೆ ವಿಪರ್ಯಾಸದ ವಿಷಯವೆಂದರೆ ಬಳಸುವ ಶೈಲಿ,ಉಚ್ಛಾರ ಬೇರೆ ಬೇರೆ ಆದರೂ ಕನ್ನಡದಲ್ಲಿ ಬಳಸಲ್ಪಡುವ ಎಷ್ಟೋ ಶಬ್ದಗಳು ಅರಬ್ಬಿಯಲ್ಲಿದ್ದು, ಅದೇ ಅರ್ಥ ಕೊಡುತ್ತವೆ. ಉದಾ:-ತರ್ಜುಮೆ,ಸೀದಾ........................................
ಹಿಂದಿ ಶಬ್ಧಗಳಂತೂ ಲೆಕ್ಕವಿಲ್ಲದಷ್ಟು ಬಳಕೆಯಲ್ಲಿವೆ.ಉದಾ:-ಜಲ್ದೀ,ಸೀದಾ,ಮಜ಼್ಬೂತ್, ಹೀಗೆ ಪಟ್ಟಿ ಬೆಳೆಯುತ್ತವೆ.
ಈಜಿಪ್ಟ್ ಮೂಲದ ನನ್ನ ಡ್ರೈವರನಿಗೆ ನಾನು ಕಲಿತ ದಿನದ ಹೊಸ ಹೊಸ ಶಬ್ದಗಳ ಬಾಣ ಬಿಟ್ಟಂತೆ ಎಲ್ಲಿಲ್ಲದ ಆನಂದ! ಚಪ್ಪಾಳೆ ತಟ್ಟಿ ವೇರಿ ಗೂದ್,ವೇರಿ ಗುದ್ ಎನ್ನುತ್ತಾ ಮಾಡುವ ಕೆಲಸವನ್ನೇ ಮರೆಯುತ್ತಾನೆ. ತೊಳೆದಿಟ್ಟ ಯಜ್ನೇಶ್ವರ ನಿಗೆ ನಾನು "ಶೂ ಮುದೀರ್ ಕೀ ಫ಼ಾಲಕ್" ( ಏನು ಯಜಮಾನರೇ ಹೇಗಿದ್ದೀರಿ) ಎಂದರೆ ಅಮೇರಿಕಾದ ಅದ್ಯಕ್ಷ ಚುನಾವಣೆ ಗೆದ್ದಷ್ಟೇ ಸಂಭ್ರಮ.ತಡವಾಗಿ ಹೋಗಿ ಅವನನ್ನ ಕಾಯಿಸಿದ ಸಿಟ್ಟನ್ನೂ ಮರೆತು ನನ್ನ ಪ್ರಶ್ನೆಗೆ "ಗುದ್ ಗುದ್" ಎನ್ನುತ್ತಾ ಹೊರಡುತ್ತಾನೆ.ಅದೃಷ್ಟ ವಶದಿಂದ ನನ್ನ ಡಿವಿಷನ್ನಿನಲ್ಲಿ ಇರುವ ಆರು ಜನರಲ್ಲಿ ನಾಲ್ವರು ಅರಬ್ಬಿಗಳು ಒಬ್ಬ ಫಿಲಿಫಿನಿ ಆದ್ದ್ರಿಂದ ನನಗೆ ಅರಬ್ಬೀ ಕಲಿಯಲು ಯಾವ ವಿಶ್ವವಿದ್ಯಾನಿಲಯಕ್ಕೂ ಹೋಗಬೇಕಾಗಿಲ್ಲ. ಆದರೆ ಅವರು ತಮ್ಮ ತಮ್ಮಲ್ಲಿ ಮಾತಾಡಿಕೊಂಡರೂ ನನ್ನ ವಿಷಯ ಇರಬಹುದೇ ಎನ್ನುವ ಅನುಮಾನ ಬಿಟ್ಟರೆ ಕಲಿಯಲಿಕ್ಕೆ ಪೂರಕ ವಾತಾವರಣ ವಿರುತ್ತದೆ.
ಮಾಫಿ ಮೌಜೂದ್,ಮಾಫಿ ಮುಶ್ಕಿಲ್,ಮಜ಼್ಬೂತ್,ಕೀ ಫಾಲಕ್.ಹಮ್ದುಲ್ಲಾಹ್,ಬುಕ್ರಾ, ಬಾಹದ್ ಬುಕ್ರಾ, ಫೀ, ಇವೇ ಮುಂತಾದ ಶಬ್ದಗಳು ನನಗೇ ತಿಳಿಯದಂತೇ ಉಚ್ಚರಿಸಲ್ಪಟ್ಟಿರುತ್ತದೆ. ಒಟ್ಟಿನಲ್ಲಿ "known about so many things master in nothing" ಅಥವಾ ಅಮ್ಮನ ಭಾಷೆಯಲ್ಲಿ ಹೇಳುವುದಾದರೆ "ಎಲ್ಲ ಬಿಟ್ಟ ಮಗ ಬಂಗಿ ನೆಟ್ಟ" ಎಂದಂತೆ ಕನ್ನಡವನ್ನೇ ಸುದ್ದವಾಗಿ ಬರೆಯಲು ಬಾರದ ನಾನು ಅರಬ್ಬೀ ಕಲಿಯಲು ಹೊರಟಿದ್ದೇನೆ.
ಇನ್ ಶಾಲ್ಲಾಹ್ ಎರಡು ವರ್ಷ ದ ಅವದಿ ಮುಗಿಯುವಷ್ಟರಲ್ಲಿ ಅರಬ್ಬಿ ಒಬ್ಬನಿಗೆ ಅರ್ಥ ಆಗುವಷ್ಟಾದರೂ ಕಲಿತರೆ ಬಂದ ಆಳ್ಲೆಕ್ಕ ಗಿಟ್ಟಿದಂತೆ.
ಜನ ಆಟದ ಮಳ್ಳು ಎಂದು ಆಡಿಕೊಳ್ಳುವುದಕ್ಕೂ ಅದು ಆಗುವುದಕ್ಕೂ ಸರಿಯಾಗಿದೆ ನೋಡಿ, ನನಗೆ ಇಲ್ಲಿಯ ಜನಗಳನ್ನ ನೋಡುವಾಗ ನೆನಪಾಗುವುದು ಶನೀಶ್ವರ ಮಹಾತ್ಮೆ ಪ್ರಸಂಗದ ಸಾಹೇಬನ ಮಾತುಗಳು "ಅರೇ ನಮ್ದೂಕಿ ಘೋಡಾ ಅರಬೀ ದೇಸ್ ಕ ಘೋಡಾ" "ಜನ ಮರುಳೋ ಜಾತ್ರೆ ಮರುಳೋ" ನೀವೇ ಹೇಳಿ.



Comments

Unknown said…
ha ha ha
super writing
prajavani said…
ತಾಯ್ನಾಡು ತಾಯಿಭಾಷೆ, ತಾಯಿ ತವರು ತಂಗಿ ಹೀಗೆ ತಕಾರಾದಿ ಶಬ್ದ್ಗಗಳು ಲಭ್ಯವಿಲ್ಲದಾಗ ಕಾಡುತ್ತವೆ. ಉತ್ತಮ ಶೈಲಿಯ ಬರಹ ಮೂಡಿಬಂದಿದೆ. ಅಲ್ಲಲ್ಲಿ ಕೆಲತಪ್ಪುಗಳು ನುಸುಳಿದ್ದರೂ ಹಿಂದಿನಗಿಂತ ಬಹಳ ಸುಧಾರಿಸಿದೆ.
ಧನ್ಯವಾದಗಳು ರಾಘುಮಾವ!
Ittigecement said…
ಚೆನ್ನಾಗಿ ಬರೆಯುತ್ತೀರಿ. ನಾನೂ ಕೂಡ ಕತಾರ್ ನಲ್ಲಿ ಇದ್ದೆ ೪ ವರ್ಷ. GULF HOUSING CONSTRUCTION ಕಂಪನಿಯಲ್ಲಿ. ಸುಂದರವಾದ ದೇಶ. ಆದ್ರೆ ಒಂಟಿತನ ಬಹಳ ನನಗೆ ಕಾಡಿತ್ತು. ನೀವು ಹೇಗಿದ್ದೀರ್‍ಆ?
ದನ್ಯವಾದಗಲು ನಿಮ್ಮ ವಸ್ತುನಿಷ್ಟ ವಿಮರ್ಶೆ ನನಗೆ ಬೆರಳ ಶಕ್ತಿಯಾಗಲಿ.
ನನ್ನ ಅಣ್ಣ ಅತ್ತಿಗೆ ಇಲ್ಲೆ ಇದ್ದಾರೆ ಸೊ ನನಗೆ ಒಂಟಿತನದ ತೊಂದರೆ ಇಲ್ಲ. ನಿಮ್ಮ ಹಳೆ ಕಂಪನಿ ನಮ್ಮ ಕ್ಲೈಂಟ್.
ನಿಮ್ಮ ಮೈಲ್ ಐಡಿ ಕೊಡಿ.
Ramya said…
Hey Awesome kano

Over all I will give you 10/10

1. Writting is very good
2. Technique to learn Language is very good.
3. There is something called as Beginner's luck but ninna yella Blogs super...
All the very best keep writting

- Your friend!!!
Ittigecement said…
ನಂಗೆ ನೀವು ಯಾರು ಅಂತ ಗೊತ್ತಾಜಿಲ್ಲೆ. ನನ್ನ ಈಮೇಲ್

kash531@gmail.com
kash531@rediff.com

plz keep in touch
Anonymous said…
vallaahi kvais..haluva..:):)

Popular posts from this blog

ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ ! :)

ಹುಚ್ಚು ಕೋಡಿ ಮನಸು 2

Farmville Application in Facebook