ಹೀಗೊಂದು ವಾಕಿಂಗಾಯಣ


ಎರಡು ವಾರಗಳಿಂದ ಕೆಲಸದ ಒತ್ತಡ ದಿಂದಾಗಿ ಬ್ಲೊಗ್ ಸ್ಪೊಟ್ ನ ಕಸದ ಬುಟ್ಟಿ ತುಂಬಲಾಗಿರಲಿಲ್ಲ ಇವತ್ತು ಸಂಜೆ ವಾಕಿಂಗ್ ಮುಗಿಸಿ ಬಂದಾಗ ಮೈಮನಸುಗಳು ಸ್ವಲ್ಪ ಹಗುರಾಗಿ, ಒಳಗಿನ ಬರಹಗಾರ ಉಮೇದಿನಲ್ಲಿದ್ದಾನೆ.ಅಂದ ಹಾಗೆ ನಮ್ಮ ಬಹುದಿನದಿಂದ ನೆನೆಗುದಿಯಲ್ಲಿದ್ದ ವಾಕಿಂಗ್ ಪ್ರೊಜೆಕ್ಟ್ ಅಂತೂ ಇಂತೂ ಶುರುವಾಯಿತು. ಪ್ರತಿದಿನ ಸಂಜೆ ಒಂದು ತಾಸು ಬೆವರು ಹರಿಸುವ ಸಂಕಲ್ಪ ಮಾಡಿ ಆಗಿದೆ. ನಿರಂತರತೆಯ ನಿರ್ಭಂದ ನಮಗೆ ನಾವೇ ಹಾಕಿಕೊಂಡಿದ್ದರಿಂದ ಎಷ್ಟು ದಿನ ನಡೆಯುತ್ತದೆ ನೋಡಬೇಕಾಗಿದೆ.

ಲೆಕ್ಕಾಚಾರ ಇಲ್ಲದೆ ಹಾಳು ಮೂಳು ತಿಂದು ಯಡ್ಡಾದಿಡ್ಡಿ ಮೈ ಬೆಳೆಸಿಕೊಂಡು ಪ್ರಾಯಶ್ಚಿತ್ತಕ್ಕಾಗಿ ಪಾರ್ಕ್ ಗಳಲ್ಲಿ ಕ್ಯಾನವಾಸ್ ಬೂಟು ಸವೆಸುವರನ್ನ ನೋಡಿ ಆಡಿ ಕೊಂಡಿದ್ದರ ಶಾಪಯೋ ಎಂಬಂತೆ ನನಗೂ ಈಗ ವಾಕಿಂಗ್,ವ್ಯಾಯಾಮ ಗಳಂತಹ ಕೃತಕ ಶ್ರಮ ಅನಿವಾರ್ಯ ವಾಗಿದೆ. (ಈಗ ಮೈ ಬರುವುದಕ್ಕೆ ಕಾರಣ ಅಹಾರ ದಲ್ಲಿನ ಕೊಬ್ಬು,ದೈಹಿಕ ಶ್ರಮ ಇಲ್ಲದಿರುವುದು ಎಂದು ತಿದ್ದುಪಡಿ ಮಾಡಿಕೊಳ್ಳಬೆಕಾಗಿದೆ.) ಒಂದು ಸಂತೋಷದ ವಿಷಯವೆಂದರೆ ನನ್ನ ರೂಮ್ ಮೆಟ್ ಶ್ಯಾಮ ನಿಗೂ ಅದೇ ಸಮಸ್ಯೆ ಆಗಿರುವುದು.ಇಬ್ಬರೂ ತಿನ್ನುವುದು ಅದೇ ಅಕ್ಕಿ ಅದ್ದರಿಂದ ಸ್ವಾಬಾವಿಕ ವಾಗೆಯೇ ಅವನಿಗೂ ಮೈವಜ್ಜೆ ಆಗಿದೆ. ಅವನು ನನಗಿಂತ ಸ್ವಲ್ಪ ನಿಷ್ಟೆ ಇರುವವನಾದ್ದರಿಂದ ದಿನವೂ ಅವನ ಉಮೇದಿ ಇಂದ ನಾನೂ ಒಂದಷ್ಟು ಬೂಟು ಸವೆಸುತ್ತಿದ್ದೇನೆ.ಪ್ರತಿ ಪ್ರೊಜೆಕ್ಟ್ ಗಳಂತೆ ಈ ಪ್ರೊಜೆಕ್ಟಿಗೂ ಬೇಕಾಗುವ ಪರಿಕರಗಳ ಸಂಗ್ರಹವಾಗಿದೆ. ನಿನ್ನೊಟ್ಟಿಗೆ ವಾಕಿಂಗಿಗೆ ಬರಬೇಕಾದರೆ ಟ್ರ್ಯಾಕ್ ಸೂಟ್ ಕೊಳ್ಳಲಿಕ್ಕೆ ನನ್ನ ಜೊತೆ ಬಾ ಎಂದು ವರಾತ ಶುರುವಿಟ್ಟುಕೊಂಡೆ ಅವನ ಕಾರಿನಲ್ಲಿಯೇ ಹೋಗಿ ಟ್ರ್ಯಾಕ್ ಸೂಟ್ ಕೊಂಡಾಯಿತು.ಹಾಳಾಗಿ ಹೊಗಲಿ ಪಾಪ ಎಂದೋ,ವಾಕಿಂಗಿಗೆ ಒಂದು ಜೊತೆ ಆಯಿತು ಎಂಬ ಮೂಡ ನಂಬಿಕೆಯಿಂದಲೋ,"ದಯೆಯೇ ಧರ್ಮದ ಮೂಲ" ಎಂದ ಸಿದ್ದಾಂಥ ಕ್ಕೊಳಪಟ್ಟೋ ನನ್ನ ಜೊತೆ Lulu Hypermarket ಗೆ ಬಂದ.

ಇನ್ನೇನು ನಾಳೆ ಬೆಳಿಗ್ಗೆಇಂದ ಶುರುವಾಗಿಯೇ ಹೋಯಿತೆಂಬಷ್ಟರಲ್ಲಿ, “ಮತ್ತೆ ಬಂದುದು ವಿಘ್ನ” ಎಂಬಂತೆ ಹೊಸ ವಿಚಾರ ತಲೆ ಕೊರೆಯಲು ಶುರುವಾಯಿತು.ಬೆಳಿಗ್ಗೆ ನಾವು ಜೀವದ ಹಂಗುತೊರೆದು ಶಕ್ತಿ ಮೀರಿ ಎದ್ದರೂ 5 ಗಂಟೆಗೆ ಏಳಬಹುದು ತಯಾರಾಗಿ ಹೋಗುವಷ್ಟರಲ್ಲಿ ನಮ್ಮೂರಿನ ಸೂರ್ಯನಿಗೆ ಅದೂ ಸೂಮಾರು 10 ಗಂಟೆ ಚಾ ಕುಡಿಯುವ ಸಮಯ ಆದ್ದರಿಂದ ಬಿಸಿಲಿನಲ್ಲಿ ನಡೆದು ಒಂದಕ್ಕೆರಡು ಮಾಡಿ ಕೊಳ್ಳುವುದು ಬೇಡ. ಮುತ್ತುಮಾವ ಅವರ Gulf Experience ನಿಂದ ಹೇಳಿದ್ದಾರೆ ಆದಷ್ಟು ಬಿಸಿಲನ್ನು avoid ಮಾಡು ಎಂದು ಬಿಸಿಲಿನಲ್ಲಿ ವಾಕಿಂಗಾದರೆ ನಾ ಇಲ್ಲ ಎಂದು ದೊಡ್ದವರ ಹೆಸರು ಹೇಳಿ ಅಂತೂ ಮತ್ತೆರಡು ದಿನ ಮುಂದೆ ಹಾಕಲಿಕ್ಕೆ ಕಾರಣ ಹುಡುಕಿಕೊಂಡೆ. ಆದರೂ ತ್ರಿವಿಕ್ರಮಾವತಾರಿಯಾದ ಶ್ಯಾಮ ಮೂರನೆಯದಿನ ಸಂಜೆ ಬೇಗನೆ ಬಂದು ಹುಂ ವಾಕಿಂಗು ಎಂದ ಅಂತೂ ಇವ ಬಿಡುವವನಲ್ಲ ಎಂದು ತಯಾರಾಗಿ ಹೊರಟೆ ಒಂದು ದಿನ ವಾಕಿಂಗ್ ಮುಗಿಸಿ ಬಂದು ಕನ್ನಡಿಯ ಮುಂದೆ ನಿಂತವನಿಗೆ ನಿಜವಾದ ಆಶ್ಚರ್ಯ ಕಾದಿತ್ತು. ಹೆಜ್ಜೇನು ಕಡಿದ ಮುಕದಂತಿದ್ದ ನಾನು ಚಟ್ಟಿದ ಮಾವಿನ ಮಿಡಿಯಂತೆ ಕಂಡೆ.

ಕೇಳಿದ್ದಕ್ಕೆ ಶ್ಯಾಮ ಅಪರೂಪಕ್ಕೆ ಮೈಯಲ್ಲಿ ಬೆವರು ಹರಿಸಿದ್ದೀಯ ಹಾಗಾಗಿ ಬಾಡಿ ಬಸವಳಿದಿದ್ದೀಯ ಸ್ನಾನ ಮಾಡಿ ಊಟ ಮಾಡಿ ಮಲಗು ಎಂಬ ಅನುಭವಾಮೃತ ಸುರಿಸಿದ ನನಗೂ ಹೌದು ಅನಿಸಿತು ಸ್ನಾನ ಮುಗಿಸಿ ಮಡಿಯಲ್ಲಿ ಒಂದು omlet ಮಾಡಿಕೊಂಡು ಊಟ ಮಾಡಿ ಮಲಗಿದೆ.(ಈ omlet ನ ಸುದ್ದಿ ಒಂದು ಹೊಸಬಾಳೆ ದೊಡ್ಡಮ್ಮ ನಿಗೆ ಹೇಳಬೇಡಿ ಅವಳು ಕೊಡಬೇಕೆಂದಿರುವ ಮನೆ ಬಾಗಿಲ ತೋಟ ಕೈ ತಪ್ಪಿ ಹೋಗುತ್ತದೆ.) ಅಮ್ಮನ ಭಾಷೆ ಯಲ್ಲಿ ಹೇಳುವುದಾದರೆ ದಿಂದಿಗೆ ತಲೆ ಕೊಟ್ಟಿದ್ದು ಮಾತ್ರ ಗೊತ್ತಿತ್ತು ನಿದ್ದೆ ಬಂದದ್ದೋ ಎಚ್ಚರ ತಪ್ಪಿದ್ದೋ ಗೊತ್ತಾಗಲಿಲ್ಲ.

ಅವತ್ತು ಮಾತ್ರ ಕನಸಿನಲ್ಲಿ ನಮ್ಮ ಹೊಟ್ಟೆ ತುಂಬಲು ನೇಗಿಲು ಹಿಡಿದು ಊಳುತ್ತಿರುವ ರೈತ,ಬಂದುಕು ಹಿಡಿದು ಗಡಿಕಾಯುವ ಸೈನಿಕ, ಮುಂತಾದ ಕರ್ಮಯೊಗಿಗಳೇ ಬಂದಿದ್ದರು.ಮದ್ಯರಾತ್ರಿ ಅರೆ ಬರೆ ಎಚ್ಚರವಾಗಿ ಹೊರಳಲು ನೋಡುತ್ತೇನೆ ಇಡೀ ಮೈ ಯನ್ನ ಕಟ್ಟಿಹಾಕಿದಂತಹಾ ಅನುಭವ ಸಂಜೆ ವಾಕಿಂಗ್ ಮಾಡುವಾಗ ಬಗ್ಗಿದ್ದೆ ಆಗ ಬೆನ್ನಿನಲ್ಲಿ ಕಳಕ್ ಎಂದಿತ್ತು ಬಾಳಮಾಡಿ ಯಾವುದೋ ಕಮ್ಯುನಿಕೇಷನ್ ಕೇಬಲ್ ಕಟ್ ಆಗಿ ಹೊರಳ ಬೇಕು ಎನ್ನುವ ಕಮಾಂಡ್ ಮೆದುಳಿನಿಂದ ಸ್ಪೈನಲ್ ಕಾರ್ಡ್ ಗೆ ಹೋಗಲೇ ಇಲ್ಲ ಎಂಬ ಭ್ರಮೆಗೊಳಗಾಗಿ ಪೂರ್ಣ ಎಚ್ಚರಾದೆ ಆಗ ಗೊತ್ತಗಿದ್ದು ಮೈ ಕೈ ಎಲ್ಲ ತುಂಬ ನೋವು ಎಂದು. ಅಷ್ಟು ಗೊತ್ತಾದಾಗಿಂದ ಮಾಮೂಲಿನಂತೆ ಮತ್ತೆ ನಿದ್ದೆ. ಮರುದಿವಸ ದೇಹದ ಯಾವುದೆ ಅವಯವಗಳೂ ಹೇಳಿದ ಮಾತು ಕೇಳುವುದಿಲ್ಲ ಕಪ್ಪು ಬಟ್ಟೆ ಹಿಡಿದು ಸತ್ಯಾಗ್ರಹನಿರತರಾದಂತೆ ಭಾಸವಾಗತೊಡಗಿತ್ತು. ವಾಕಿಂಗೂ ಬೇಡ ಎಂತದ್ದೂ ಬೇಡ ಬದುಕ್ಕಿದ್ದರೆ ಬೇಡಿ ತಿಂದೇನು ಅನ್ನುವ ತೀರ್ಮಾನಕ್ಕೆ ಬಂದೆ ಆದರೆ ಸಂಜೆ ಆಗುವಷ್ಟರಲ್ಲಿ ಮತ್ತೆ ಮಾಮೂಲಿನಂತಾಗಿ ವಾಕಿಂಗಿನ ಉಮೇದಿ ಬಂತು. ಈಗ ಎಲ್ಲ ಸರಿಯಾಗಿದೆ ತೀರಾ ಶ್ಯಾಮನಷ್ಟು ಓಡದಿದ್ದರೂ ಕಳ್ಳ ಬೀಳಿತ್ತಾ ಒಂದೆರಡು ರೌಂಡು ಮುಗಿಸುತ್ತೇನೆ.

ಏನೋ ಎರಡು ದಿನ ನಾಲ್ಕು ಹೆಜ್ಜೆ ನಡೆದದ್ದಕ್ಕಾಗಿ ದೊಡ್ಡ ಗುಡ್ಡ ಕಡಿದವನಂತೆ ಆಡುತ್ತಿದ್ದಾನೆ ಎಂದಿರಾ? ತೊಂದರೆ ಇಲ್ಲ ನನ್ನ ಹಳೇ ಕ್ಲೈಂಟ್ ದೊಡ್ಡ ಸೊಫ಼್ಟ್ ವೇರ್ ಕಂಪನಿ CEO ಅರ್ ಕೆ ಮಿಶ್ರ ಡ್ರೈವರ್ ರಜ ಹಾಕಿದ ದಿನ 25 km ಕಾರು ಓಡಿಸಿ ಕೊಂಡು ಬಂದ ಸಾಹಸ ಗಾತೆ ಯನ್ನ ತಾಯಿ,ಹೆಂಡತಿ ಯರ ಮುಂದೆ ಹೇಳಿದಾಗ ಅವರು ಅಬ್ಬಾ ಎಂದು ಉದ್ಗರಿಸಿದ್ದನ್ನ ನೋಡಿದಾಗ, ಸುಮಾರು 40 km ಹಳೇ ಬುಕಣಾದ TVS suzuki ಓಡಿಸಿ ಕೊಂಡು ಹೋಗಿ 3 ನಿಮಿಷದ break down attend ಮಾಡಿದ ನನಗೂ ಹಾಗೇ ಅನಿಸಿತ್ತು.

ದೇಶದ ಕ್ರೀಡಾ ಪ್ರತಿನಿಧಿ ಗಳೂ, ಜಾಹಿರಾತು ಗಳಿಂದ ಹಣಮಾಡ ಹೊರಟಿರುವ ಮೊಡೆಲ್ ಗಳೂ, ನಮ್ಮಂತಹಾ ಸೋಮಾರಿಗಳ ಉದರ ಪೋಷಣೆ ಗಾಗಿ ದುಡಿಯುವ ಕೃಷಿಕರೂ, ನಮ್ಮ ಕ್ಷಣಿಕ ನೆಮ್ಮದಿಗಾಗಿ ತಮ್ಮಪ್ರಾಣವನ್ನೂ ಲೆಕ್ಕಿಸದೆ ನಮಗೆ ಬೆನ್ನು ಮಾಡಿ ನಿಂತ ಸೈನಿಕರ ಶ್ರಮದ ಮುಂದೆ ನಮದೆಂತಹ ಶ್ರಮ ಬಿಡಿ.

ಅಂತೂ ಬಾಹ್ಯ ಸೌಂದರ್ಯದ ಬೆನ್ನು ಹತ್ತಿ (ಯಾಕೋ ಗೊತ್ತಿಲ್ಲ) ಸಂಜೆ ಒಂದು ತಾಸು ಬೆವರು ಸುರಿಸ ಹೊರಟಿರುವ ನನಗೆ ಅನಿಸಿದ್ದು ಹೀಗೆ

"ಮೈಬಾರ ಹರಣಾರ್ತಾಯ ವಾಕಿಂಗಾಮಿ ದಿನೇ ದಿನೆ"


Comments

Unknown said…
nice blog,y cant u start writtting some books,like naanu kanda bharatha,,,,,
ಹ ಹ ಹ ಒಳ್ಳೆಯ ಸಲಹೆ ಆದರೆ ನನಗಿಂತ ಆಳವಾಗಿ ಭಾರತವನ್ನ ನೊಡಿದವರಿದ್ದದ್ದರಿಂದ ನನ್ನ ಬರಹ ನಿಜವಾಗಲೂ ಕಸದಬುಟ್ಟಿ ಯನ್ನೇ ಸೇರುತ್ತದೆ.
Ittigecement said…
This comment has been removed by the author.
Ittigecement said…
ತುಂಬಾ ಚಂದವಾಗಿ ವಿವರಿಸಿದ್ದೀರಿ...
ನಿರೂಪಣೆ ಸರಳವಾಗಿದೆ, ಓದಿಸಿಕೊಂಡು ಹೋಗುತ್ತದೆ..
ನಾನೂ ಕೂಡ ಇಂತಹ ವಿಫಲ ಪ್ರಯತ್ನ ಆಗಾಗ ಮಾಡುತ್ತಿರುತ್ತೇನೆ.
ಮಡದಿ ಎಬ್ಬಿಸಿದಾಗ"ಬೆಚ್ಚಗೆ ಚಾದರ ಎಳೆದು" ಕಲ್ಪನೆಯಲ್ಲೆ walking ಹೋಗುತ್ತಿದ್ದೇನೆ ಕಣೆ , disturb ಮಾಡಬೇಡ " ಹೇಳಿದಾಗ
"ಹಾಗದರೆ "ತೂಕ ಕೂಡ ಕಲ್ಪನೆಯಲ್ಲೇ ಇಳಿಯುತ್ತದೆ ಬಿಡಿ" ಅಂದಿದ್ದು ನೆನಪಾಗುತ್ತದೆ..
ಧನ್ಯವಾದಗಳು..
Unknown said…
ok ok sagali sagali hosatu hosatu sagali
Anonymous said…
Murty,, nijavaagloo idu nande kathe..:(
Unknown said…
ನಿಜವಾಗಲೂ ಕಿಂಗಾಯಣವೇ..

Popular posts from this blog

ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ ! :)

ಹುಚ್ಚು ಕೋಡಿ ಮನಸು 2

Farmville Application in Facebook