ಹುಚ್ಚು ಕೋಡಿ ಮನಸ್ಸು


"ಹುಚ್ಚು ಕೋಡಿ ಮನಸ್ಸು ಈ ಹದಿನಾರರ ವಯಸ್ಸು" ಎನ್ನುವ ಹಾಡು ಜೀವನದ ಸಂತೋಷದ ಕ್ಷಣ ಅನುಭವಿಸಿದ ಮರುಕ್ಷಣ ನೆನಪಾಗುವುದು. (ಕೋಡಿಯೋ ಕೋಳಿಯೋ ನೆನಪಾಗುತ್ತಿಲ್ಲ)
ದುರಾದೃಷ್ಟಕ್ಕೆ ನಾವು ಸಂತೋಷದ ಕ್ಷಣ ಅನುಭವಿಸುತ್ತುರುವಾಗ ಅಥವಾ ಅಂತಹಾ ಭ್ರಮೆ ಯಲ್ಲಿದ್ದಾಗ ಹಿಂದಿದ್ದವರು ಮೂರು"......." ವಯಸ್ಸಾದರೂ ಇನ್ನೂ ಮಂಗಾಟ ಬಿಟ್ಟಿಲ್ಲ ಎನ್ನುತ್ತಿರುತ್ತಾರೆ. ನನ್ನ ಮನಸ್ಥಿತಿ ಇದೇ ನೋಡಿ ಸ್ವಾಮಿ ನಗುತ್ತಾ,ಸಾದ್ಯವಾದಷ್ಟು ನಗಿಸುತ್ತಾ ಕಾಲ ಕಳೆಯುವುದು. ನೇರವಾಗಿ ಆಕ್ಷೇಪಿಸಿದವರಿಗೆ ಅಷ್ಟೇ ನೇರವಾಗಿ ಉತ್ತರಿಸುವುದರಿಂದ ನನ್ನ ಬಗ್ಗೆ ಗೊತ್ತಿರುವವರು ಕೊಚ್ಚೆಗೆ ಕಲ್ಲು ಎಸೆಯುವ ಮೂರ್ಖತನ ಮಾಡುವುದಿಲ್ಲ,ಹಿಂದಿನಿಂದ ಆಡಿಕೊಳ್ಳುವವರ ಬಗ್ಗೆ ನನಗೆ ಕನಿಕರ ಇರುವುದರಿಂದ ನಿರ್ಲಿಪ್ತ ಧೋರಣೆ ತಾಳುತ್ತೇನೆ. ಆದರೆ ಹದಿನಾರೆರಡಲೆ ಆದರೂ ಮನಸ್ಥಿತಿ ಬದಲಾಗದಿರುವುದರ ಬಗ್ಗೆ ಉತ್ತರವನ್ನೂ "ಸಂತೋಷಪಡುವ ಮನಸ್ಸಿಲ್ಲದಿರುವವರು ಯಾಕೆ ನಮ್ಮ ಜೊತೆ ಸೇರಬೇಕು? ನೋಡಿ ಸ್ವಾಮಿ ನಾವಿರೋದೆ ಹೀಗೆ"ಎಂದು. ಉದ್ದಟ ತನದ್ದೇ ಕೊಡುವುದು ಅನಿವಾರ್ಯ ವಾಗಿದೆ.
ಮೊನ್ನೆ ಅಣ್ಣನ ಸ್ನೇಹಿತರ ಮಗನ ಬರ್ತ್ ಡೇ ಗೆ ಹೋದಾಗಲೂ ಇಂತಹುದೇ ಪರಿಸ್ಥಿತಿ ಮಕ್ಕಳಿಗಾಗಿ ತಂದಿದ್ದ ಫ್ಯಾನ್ಸಿ ಐಟಮ್ಸ್ ಮಕ್ಕಳಿಗೆ ಕೊಟ್ಟು ಉಳಿದದ್ದು ನನ್ನಿಂದ ಮೊದಲ್ಗೊಂಡು ಸುಮಾರು ನಲವತ್ತರ ವರೆಗಿನ ಹುಚ್ಚುಕೋಡಿಗಳ ಮನಸ್ಸನ್ನ ಅಲಂಕರಿಸಿತ್ತು ಸ್ವಲ್ಪ ದೈರ್ಯ ಇದ್ದವರ ತಲೆ,ಮುಖವನ್ನೂ ಆಕ್ರಮಿಸಿತ್ತು.ಎಲ್ಲೇ ಆಗಲಿ ನನ್ನ ಹಿಂದೆ ಇಂತದ್ದೊಂದು ಪಟಿಂಗರ ತಂಡಯೊಂದಿರುತ್ತಿತ್ತು. ನಾವು ತಂಡ ಸಮೇತ ಹೊರಟೆವೆಂದರೆ ಹಿಂದೆ ಒಂದು ಸಮಿತಿ ನಮ್ಮ ಚರ್ಯೆಗಳನ್ನ ಗಮನಿಸಲು ನಿರ್ಮಾಣ ವಾಗುತ್ತದೆ ಮಾರುತಿಯ (ಮೂರುತಿ) ತಂಡದ ಕಣ್ಣು ಇವತ್ತು ಯಾರ ತೋಟದ ತೆಂಗಿನ ಮರದ ಮೇಲೋ ಎಂದು ವ್ಯಂಗ್ಯ ವಾಡಿದವರೂ ಇದ್ದಾರೆ.ಹಾಗಂತ ಅವರಿಗೆ ಲಿಗಾಡಿತನದ ಈರ್ಷೆ ಇಲ್ಲವೆಂದಲ್ಲ ಸಮಾಜಕ್ಕಾಗಿ ಬದುಕುವ ಅನಿವಾರ್ಯತೆಗೆ ಕಟ್ಟು ಬಿದ್ದವರು ಪಾಪ ಅವರಿಗೆ ಅಂದು ಏನು ಪ್ರಯೋಜನ ಹಾಗಂತ ನಾವು ಅಂತವರನ್ನೂ ಬಿಟ್ಟವರಲ್ಲ, ಕಾರ್ಯದ ಮನೆಯಲ್ಲಿ ಕೊನೆಯ ದಿನ ಮದ್ಯಾನ್ಹದ ಮೇಲೆ ಇವತ್ತು ರಾತ್ರಿ ಭಂಗಿಪಾನಕದ ಕಂಬಳ ಎನ್ನುವ ಗುಲ್ಲೆಬ್ಬಿಸಿ ಬಿಡುವುದು ಬೆಳಿಗ್ಗೆ ಇಂದ ನಮ್ಮನ್ನ ಬೈದ ಸೋ ಕಾಲ್ಡ್ ಗಂಬೀರಿಗಳು ರಾತ್ರಿ ಎಲ್ಲ ಮಲಗಿದ ಮೇಲೆ ನಮ್ಮನ್ನ ಹುಡುಕುವುದು ನಾವು ಅವರ ಪರಿಸ್ಥಿತಿ ನೋಡಿ ಮಜ ತೆಗೆದು ಕೊಳ್ಳುವುದು. ಎಲ್ಲಿಯವರೆಗೆ ಎಂದರೆ ನಾವು ತಮ್ಮ ತಂಗಿ ಎಲ್ಲ ಸೇರಿ ನಮ್ಮಣ್ಣನ ಮದುವೆಗೆ ಉಡುಗೊರೆ ಕೊಟ್ಟರೂ ಅದರಲ್ಲೇನೋ ಇದೆ ಅದನ್ನು ನಮ್ಮಿಂದಲೇ ಬಿಚ್ಚಿಸಬೇಕೆನ್ನುವಷ್ಟರ ವರೆಗಿನ ಮಾತುಗಳು ಕೇಳಿ ಬರುತ್ತಿದ್ದವು. ಹಿಂದಿನ ಘಟನಾವಳಿಗಳನ್ನ ಅವಲೋಕಿಸಿದವರಿಗೆ ಆ ವಾಸನೆ ಬಂದರೆ ತಪ್ಪಲ್ಲ ಬಿಡಿ.
ಫೋನಿನಲ್ಲಿ ಚಿಟ್ಟಾಣಿ ಅಜ್ಜನ ಸ್ವರದಲ್ಲಿ ಮಾತನಾಡಿ ಅಮ್ಮನನ್ನ ಯಾಮಾರಿಸುವುದು,ಮಲಯಾಳಿ ಪೀಟರನಾಗಿ ನವ್ಯಳನ್ನ ಬಕರಾ ಮಾಡುವುದು,ಕೋಟಾ ಮಾಣಿಯಾಗಿ ಸವಿತತ್ತೆಯೊಂದಿಗೆ ಮಾತನಾಡಿ ಬೈಸಿಕೊಂಡಿದ್ದು,ರಮ್ಯ,ರಂಜುರನ್ನ ಆಟ ಆಡಿಸಿದ್ದು, ರಾಮಣ್ಣನನ್ನ ತಂದ ಹೊಸ ಗಾಡಿಯನ್ನೇ ತಿರುಗಿ ಷೋರೂಮಿಗೆ ಕೊಡಲು ಹೊರಡುವಂತೆ ಮಾಡಿದ್ದು,ಚಾಟ್ ನಲ್ಲಿ ಕಾವ್ಯಳನ್ನ ರೆಗಿಸುವುದು ಹೀಗೆ ತಮಾಷೆಯ ಹೆಸರಿನಲ್ಲಿ ಮಾಡಿದ ಹ............ಟ್ ಗಿರಿ ಯ ಪಟ್ಟಿ ದೊಡ್ದದಿದೆ. ಉಗ್ಗರ,ನಮ್ಮೂರಿನ ದೀವನಾಯಕರ.ನಮ್ಮ ಚಿಟ್ಟಾಣಿ ಅಜ್ಜನ ಮಾತುಗಳನ್ನಾನುಕರಣೆ ಮಾಡುವುದು ನನಗೆ ಬಲು ಇಷ್ಟದ ಕೆಲಸ. ಸೋಟೆ ಹರುಕರ ಮಾತನ್ನಾಡಿದಾಗ ಕೆಲವರು ಗೊಳ್ಳನೆ ನಕ್ಕು ಮೈ ಮೇಲೆ ಕವಳ ತುಪ್ಪಿಕೊಂಡ ಗಟನೆಗಳೂ ಇವೆ.
ನನ್ನ ಪರಿಚಯದ ಯಾರೇ ಆಗಲಿ ನಾಣು ಒಬ್ಬ ಇದ್ದಿದ್ದರೆ............ ಎನ್ನುವಷ್ಟು ವಿದೂಷಕ ನನ್ನಲ್ಲಿ ಅಡಗಿದ್ದಾನೆ.
ನಾನು ಅಂತ ಅಲ್ಲ ಸ್ವಾಮಿ ಇವತ್ತು ಎನ್ನುವುದನ್ನ ಪೂರ್ಣ ಪ್ರಮಾಣದಲ್ಲಿ ಅನುಭವಿಸಬೇಕು ಎನ್ನುವ ಧೊರಣೆಯವರ ಮನಸ್ಥಿತಿಯೇ ಹಾಗೆ.ಹಾಗಂತ ನಾಳಿನ ಯೊಚನೆ ಇಲ್ಲವೆಂದಲ್ಲ ನಾಳೆಗಾಗಿ ಇಂದನ್ನೂ ಅನುಭವಿಸದೆ,ಕೂಡಿಟ್ಟ ಹಣದ ಸಮೇತ ಬ್ಯಾಂಕೇ ಮುಳುಗಿದ ಉದಾಹರಣೆಗಳಿಲ್ಲವೇ ? ಮಕ್ಕಳ ಸುಖಕ್ಕಾಗಿ ಒಳ್ಳೆ ಬಟ್ಟೆಯನ್ನ ಕೂಡಾ ಹಾಕದೆ ಉಳಿಸಿದ್ದನ್ನ ಮಗರಾಯ ಅಪ್ಪನ ಕುರುಗೋಡ್ ಪಂಚೆ ಒಂದನ್ನ ಬಿಟ್ಟು ಎಲ್ಲವನ್ನೂ ನುಂಗಿ ನೊಣೆದ ಕಥೆ ಕೇಳಿಲ್ಲವೇ? ನಾಳೆ ಯನ್ನ ಕಂಡವರ್ಯಾರು ಸ್ವಾಮಿ ಇಂದನ್ನಾದರೂ ನಮಗೆ ಬೇಕಾದಂತೆ ಬದುಕೋಣ. ಇಂತಹಾ ತುಂಟ ಮನಸ್ಸು ಎಲ್ಲರಲ್ಲೂ ಇರುತ್ತದೆ ಆದರೆ ತಾನು ಗಂಭೀರ ಮನುಷ್ಯ ಎನ್ನುವ ಭ್ರಮೆಯ ಪ್ರಭಾವ ಎಷ್ಟಿರುತ್ತದೆ ಎಂದರೆ ಎಲ್ಲವನ್ನೂ ಹತೋಟಿಯಲ್ಲಿಡುತ್ತದೆ. ಸುಮಾರು ಅರವತ್ತರ ಆಸುಪಾಸಿನವರು ಮಕ್ಕಳೊಂದಿಗೆ ಮಕ್ಕಳಾಗುವವರನ್ನೂ ನೋಡಿದ್ದೇನೆ.ಹದಿನೈದರ ಮಡಿವಂತರನ್ನೂ ನೋಡಿದ್ದೇನೆ.ಅಭಾವ ವೈರಾಗ್ಯದಿಂದ ಇದನ್ನೆಲ್ಲ ಸಹಿಸದೆ ಸಿಡಿಮಿಡಿ ಗೊಳ್ಳುವ ಅತೃಪ್ತ ಆತ್ಮಗಳಿಗೂ ಕೊರತೆ ಇಲ್ಲ. ನಗುವಿನಲ್ಲಿ ರೋಗನಿರೋಧಕ ಶಕ್ತಿ ಇದೆಯಂತೆ ಎನ್ನುವ ವೈಜ್ನಾನಿಕ ತತ್ವ ವನ್ನೆಲ್ಲ ಸಾದಿಸುವಷ್ಟರವನಲ್ಲ ನಾನು ಆದರೆ ನಾನು ಕಂಡು ಕೊಂಡ ಒಂದೇ ಸತ್ಯವೆಂದರೆ ಮಾನಸಿಕ ಆರೋಗ್ಯ ಮುಪ್ಪನ್ನ ದೂರವಿಡುತ್ತದೆ, ಹಲಾವಾರು ಕಾಯಿಲೆಗಳನ್ನ ಕೊಲ್ಲುತ್ತದೆ.
ಯಾರು ಏನೇ ಅಂದರೂ ನಮಗೆ ಬೇಕಾದಂತೆ ಬದುಕುವವ ಎಲ್ಲಾ ದೃಷ್ಟಿಇಂದಲೂ ಸುಖಿ ಏನಂತೀರಿ?

Comments

Unknown said…
ಖಂಡಿತಾ ಒಳ್ಳೆಯ ಬರಹ. ಆದರೆ ಒಂದು ವಿಷಯ ನಗುತ್ತಾ ನಗಿಸುತ್ತಾ ಹಾಗಿದ್ದ ನಮಗೆ ಎಲ್ಲವೂ ಸರಿಯಿದ್ದರೂ ಇದ್ದಕ್ಕಿದ್ದಂತೆ ಇವೆಲ್ಲಾ ಬೇಡದ್ದು, ಅಂತ ಅನ್ನಿಸಲು ಶುರುವಾಗಿಬಿಡುತ್ತದೆ. ಅದಕ್ಕೆ ಒಂದಿಷ್ಟು ವಯಸ್ಸಾಗಬೇಕು. ಹೆಂಡತಿ "ಮಳ್ಳ ಹರಿಯಡಿ" ಎಂದು ಗದರುವಂತಾಗಬೇಕು. ಮಕ್ಕಳು ಥೂ ಸುಮ್ನಿರು ಅಪ್ಪ ಅನ್ನುವಂತಾಗಬೇಕು. ಆಗ ಗಂಭೀರತೆ ತನ್ನಿಂದ ತಾನೆ ಬಂದುಬಿಡುತ್ತದೆ. ಮತ್ತು ನಾವು ಮಾಡುತ್ತಿದ್ದ ಕಿತಾಪತಿಯನ್ನು ಬೇರೆಯವರು ಮಾಡಿದಾಗ ಏಯ ಸ್ವಲ್ಪ ಗಂಭೀರವಾಗಿ ಇಪ್ಪದು ಕಲೀರಿ ಎನ್ನುವ ಮಾತೂ ಕೂಡ. ಅದಕ್ಕೆ ಒಂದಿಷ್ಟು ಕಾಲ ಬರಬೇಕಷ್ಟೆ
ಮನಸು said…
ಚೆನ್ನಾಗಿದೆ ಹೀಗೆ ಬರಿತಾ ಇರಿ
Ha ha ha Raaghu maava
adu noorakke nooru nija!!!!!!!!!!!!!!!
Ittigecement said…
ಜವಾಬ್ದಾರಿ ಬಿದ್ದ ಮೇಲೆ ಗಂಭೀರತೆ ಬಂದು ಬಿಡುತ್ತದೆ ಅನ್ನುವದು ಸುಳ್ಳು..

" ಹುಟ್ಟು ಗುಣ ಸುಟ್ಟರೂ ಹೋಗಲ್ಲ " ಅಂತ ಗಾದೇನೆ ಇದೆ...

ಎಲ್ಲಾ ಅವರವರ ಭಾವಕ್ಕೆ...
ಸ್ವಭಾವಕ್ಕೆ...
ಅಲ್ಲವಾ..?
Ramya said…
Very good writting

point Murthy: Body has age not Soul, keep the soul inside young !!! so do wat you u like to do age is just a number!!!

keep up the good work Boy!
Unknown said…
Nanga sannakke yidhya heli nanglunnella yelneer yilsakke bittikki hogi ninga mathra maja maadthidhre.. yidhu bahala anyaaya..

Popular posts from this blog

ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ ! :)

ಹುಚ್ಚು ಕೋಡಿ ಮನಸು 2

Farmville Application in Facebook