ಶೇಟ್ಟಿ ಪುಟ್ಟ ನಿಂದ Voip call ವರೆಗೆ.
ಮನೆಯಲ್ಲೇ ಅಡಿಗೆ ಮಾಡಿಬಿಡಬೇಕೆಂಬ ನಿರ್ಧಾರ ಮಾಡಿ ಸಂಜೆ ಮನೆಯಲ್ಲಿ ಕುಳಿತು ಇವತ್ತಿನ ಅಡಿಗೆಯ ಬಗ್ಗೆ ಯೋಚಿಸುತ್ತಿದ್ದೆ.
ಮೂರು ದಿನಗಳಿಂದ ರಜ ಅಗಿದ್ದು, ಶಾಮನೂ ಊರಿಗೆ ಹೋಗಿದ್ದರಿಂದ ಅಣ್ಣನ ಮನೆಯಲ್ಲೆ ಊಟ ವಸತಿ ಎಲ್ಲ ಮುಗಿಯುತ್ತಿತ್ತು.
ಅತ್ತಿಗೆಯ ಅಡಿಗೆ ಊಟ ಮಾಡಿ ಮಾಡಿ ಸೋಮಾರಿಯಾಗಿ ಬಿಟ್ಟಿದ್ದೆ. ಇವತ್ತು ಮನೆಯಲ್ಲಿ ಇರುವ ತರಕಾರಿ ಎಲ್ಲ ಖಾಲಿ ಮಾಡಬೇಕೆಂದು ಕೊಂಡು ಎಲ್ಲ ತರಾಕಾರಿ ಹೆಚ್ಚಿ ಇಟ್ಟು ಬೇಳೆ ಅನ್ನ ಕೊಕ್ಕರ್ ನಲ್ಲಿಟ್ಟು ಲ್ಯಾಪ್ ಟಾಪ್ ಓನ್ ಮಾಡಿದೆ.
ಒಂದು ಸಾರಿ ಇವತ್ತಿನ share market status,personal mails,ಮತ್ತೆ orkut Scraps ನೋಡಿ ಮುಗಿಸುವಷ್ಟರಲ್ಲಿ ಅರ್ದ ಘಂಟೆ ಕಳೆಯಿತು.ನನಗೆ ಬಂದ ಎಲ್ಲಾ ತರಲೆ Mail ಗಳೀಗೂ ಅಂತದ್ದೇ ತರಲೆ replay ಮಾಡಿ, orkut ನ ಹೊಸ ಫೊಟೊ ಗಳಿಗೆ ನನ್ನದೇ ಶೈಲಿಯ comment ಬರೆದು ಮುಗಿಸಿ ಅಮ್ಮನ ಹತ್ತಿರ ಕುಷಲೋಪರಿ (g chat ನಲ್ಲಿ) ಮುಗಿಸುವಷ್ಟರಲ್ಲಿ are you there? ಎಂಬ g chat ನ ಕರೆ ಬಂತು.
ಸ್ವಲ್ಪ ಉದ್ದವಾದರೂ ಇಷ್ಟೊತ್ತು ಬರೆದದ್ದು ಪೀಠಿಕೆ ಇನ್ನು ಮುಂದೆ ಬರೆಯುವುದು ವಿಷಯ!
ಕರೆ ಬಂದ ಕಡೆ ತಿರುಗಿ ನೋಡಿದರೆ ಅದು ನನ್ನ ಹೈಸ್ಕೂಲ್ ಸ್ನೆಹಿತನದ್ದು ಅವ ಇರುವುದು ಲಂಡನ್ ನ ಮೂಲೆಯಲ್ಲಿ,ನಾನು ಖತಾರೆಂಬ ಇನ್ನೊಂದು ಮೂಲೆಯಲ್ಲಿ, ಹಾಗಂತ ನಾವು ಆಡಿದ್ದು ಬೆಳೆದದ್ದು ನಮ್ಮ ಊರಿನಲ್ಲಿ "ಉದರನಿಮಿತ್ತಮ್ ಬಹುಕೃತ ವೇಷಮ್" ಎಂಬಂತೆ ಅವ ಓದು ಮುಗಿಸಿ ಕೆಲಸಕ್ಕಾಗಿ ಇಂಗ್ಲೆಂಡಿಗೆ ವಲಸೆ ಹೋದ ನಾನು ಓದು ನಿಲ್ಲಿಸಿ ಅವತಾರೀ ಪುರುಷ ನಾದೆ. ದೊಡ್ಡ ಸಾಧನೆ ಮಾಡಿದೆ ನೆಂದಲ್ಲ ಸಣ್ಣವನಿದ್ದಾಗ ಮಾಡುತ್ತಿದ್ದ ಕಿತಾಪತಿ ಯನ್ನೇ ಮುಂದುವರೆಸಿದೆ ಒಂದೇ ವ್ಯತ್ಯಾಸ ವೆಂದರೆ ಮೊದಲು ಸರಿ ಇದ್ದಿದ್ದನ್ನ ಹಾಳು ಮಾಡಿ ಬೈಸಿಕೊಳ್ಳುತ್ತಿದ್ದೆ ಈಗ ಹಾಳಾಗದಂತೆ ಉಪಯೋಗ ಯೊಗ್ಯವನ್ನಾಗಿ ಮಾಡಿ ಸಂಬಳ ತೆಗೆದುಕೊಳ್ಳುತ್ತೇನೆ. ಆದರೆ ನಾ ಹೇಳಲಿಕ್ಕೆ ಹೊರಟಿದ್ದು ಅದಲ್ಲ, ತಾಂತ್ರಿಕತೆ ಯ ಬೆಳವಣಿಗೆಯಿಂದಾಗಿ ಅಖಂಡ ವಿಶ್ವವೇ ಸಣ್ಣದಾಗಿರುವುದನ್ನ. ನನ್ನ ನೆನಪಿನ ಪ್ರಕಾರ ಈಗ್ಗೆ ಇಪ್ಪತೈದು ವರ್ಷಗಳ ಹಿಂದೆ ಕೆರೆಕೊಪ್ಪ ದಲ್ಲಿರುವ ನಮ್ಮ ಅಜ್ಜ 5 ಮೈಲಿ ದೂರದಲ್ಲಿರುವ ಹೊಸಬಾಳೆ ಯಲ್ಲಿರುವ ದೊಡ್ದಪ್ಪ ನಿಗೆ ಸಂದೇಶ ಕಳಿಸಬೇಕಾದರೆ ಒಂದು ಚೀಟಿಯನ್ನ ಬರೆದು ಶೆಟ್ಟಿ ಪುಟ್ಟನ ಕೈಲಿ ಕೊಟ್ಟು ಕಳುಹಿಸುತ್ತಿದ್ದರು.ಆ ಕಡೆಯಿಂದ ಯಾರಾದರೂ ಅಕ್ಕಿ ಮಿಲ್ಲಿಗಾಗಿ ಬರುವವರ ಕೈಲೋ ವಾರಕ್ಕೊಮ್ಮೆ ಹೋಗುವ ಪೊಸ್ಟ್ ಮನ್ ನ ಕೈಲೋ ಕೊಟ್ಟು ಕಳು ಹಿಸುವ ಪರಿಪಾಠವೂ ಇತ್ತು.ಈ ಕಡೆಇಂದ ಕೆರೆಕೊಪ್ಪದಲ್ಲಿದ್ದ ಜಾಣನವರ ಮನೆ ಕೋಣನ ಬಳಿಗಾಗಿ ಎಮ್ಮೆ ಹೊಡೆದು ಕೊಂಡು ಹೋಗುವವರ ಕೈಯಲ್ಲಿ ಕೊಟ್ಟು ಕಳುಹಿಸಿದ ನೆನಪೂ ಇದೆ. ದೂರದ ಊರುಗಳಿಗೆ ಟಪಾಲು,ತುರ್ತು ಸಂದೇಶಕ್ಕಾಗಿ ಟೆಲಿಗ್ರಾಂ ವ್ಯವಸ್ತೆ ಇತ್ತು ಅದೂ ಹಣವಂತರಿಗೆ ಮಾತ್ರ ನಂತರ ಪೋನು ಎನ್ನುವುದೊಂದು ಇದೆಯಂತೆ ಅದರಲ್ಲಿ ನಾವು ಎಲ್ಲಿಗೆ ಬೇಕಾದರೂ ಮಾತನಾಡ ಬಹುದಂತೆ ಆದರೆ ಅವರ ಮನೆಯಲ್ಲೂ ಆ ಪೋನು ಇರಬೇಕಾಗುತ್ತದೆ ಎಂಬ ಕೌತುಕದ ವಿಷಯ ಬಹಿರಂಗವಾಯಿತು.
ಬೆಂಗಳೂರಿಗೆ ಫೊನು ಮಾಡುವುದಾದರೆ ಸೊರಬದ ಎಕ್ಸ್ ಚೇಂಗಿಗೆ ಪೋನು ಮಾಡಿ ಬೆಂಗಳೂರಿನ ನಂಬ್ರ ಕೊಟ್ಟರಾಯಿತು ದಿನ ಒಪ್ಪತ್ತಿನೊಳಗೆ ಅವರು ಲೈನ್ ಸಿಕ್ಕಿದ ಕೂಡಲೆ ಕನೆಕ್ಟ್ ಮಾಡ್ತಾರಂತೆ ಒಮ್ಮೆ ಲೈನ್ ಸಿಕ್ಕಿದರೆ ಮೂರು ನಿಮಿಷ ಮಾತನಾಡಬಹುದು ಎಂದೆಲ್ಲಾ ಸ್ವಲ್ಪ ಬುದ್ದಿವಂತರೆನಿಸಿಕೊಂಡವರು ಹೇಳುವುದನ್ನ ಬಾಯಿಕಳೆದುಕೊಂಡು ನಾವು ಕೇಳಿದೆವು.ನಂತರ ಫ಼್ಯಾ಼ಕ್ಸ್,ಈಮೈಲ್ ಗಳೆಂಬ ಮಾಯಾಪ್ರಪಂಚದ ಸೃಷ್ಟಿ ನೋಡನೋಡುತ್ತಿದ್ದಂತೆ ಆಗಿ ಹೋಯಿತು.ಜೊತೆಯಲ್ಲಿ Radio TV ಗಳೆಂಬ ತಾಂತ್ರಿಕ ಉಪಕರಣಗಳು ಯಾಂತ್ರಿಕವಾಗಿ ನಮ್ಮ ಜೀವನನ್ನ ಸುಳಿವಿಲ್ಲದೇ ಆಕ್ರಮಿಸಿಕೊಳ್ಳ ತೊಡಗಿದವು. ನಂತರ ಬಂದದ್ದು ಮೊಬೈಲ್ ಫೋನೆಂಬ(ಅವತ್ತಿನ ಮಟ್ಟಿಗೆ ಐಷಾರಾಮೀ) ದೂರವಾಣಿ ಇವತ್ತು ಅದರ ಅವಸ್ಥೆ ಮನುಷ್ಯನಿಗಾದರೆ ದಿನಕ್ಕೊಮ್ಮೆ ನೇಣು ಹಾಕಿಕೊಳ್ಳುತ್ತಿದ್ದ ಅಷ್ಟು ಅಗ್ಗವಾಗಿ ಬಿಟ್ಟಿದೆ ಬಿಡಿ ಆ ಪ್ರಶ್ನೆ ಬೇರೆ. ಎಲ್ಲ ಉಪಕರಣಗಳೂ ಹಾಗೆಯೆ ಹೊಸತರಲ್ಲಿ ದೊಡ್ಡ ಸಂಬ್ರಮ ಬರಬರುತ್ತಾ ಮಕ್ಕಳಾಟಿಕೆ. ಮೊಬೈಲೆಂಬ ಮೊಬೈಲು ದಾಳಿ ಇಟ್ಟಾಗ ಅದರ ಬೆಲೆ 25000/- ಒಂದು ನಿಮಿಷಕ್ಕೆ 16/-out going 8/- incoming ಆ ಕಾಲದಲ್ಲಿ ನಮ್ಮ ನೆಂಟರಿಷ್ಟರ.ಸ್ನೇಹಿತರ ವಲಯದಲ್ಲಿ ಮೊದಲು ಮೊಬೈಲ್ ತಂದವ ನಮ್ಮ ಅಣ್ಣ.
ಈಗ್ಗೆ 7 ವರ್ಷಗಳ ಹಿಂದೆ ನಾನು ಮೊಬೈಲ್ ಕೊಳ್ಳುವಷ್ಟರ ಹೊತ್ತಿಗೆ ಅದರ ಬೆಲೆ 6000/-ಕ್ಕೆ ಬಂದಿತ್ತು. ಅಷ್ಟೇ ಅಲ್ಲ ಫುಟ್ ಪಾತ್ ಮೇಲೆ ಬೊಂಬೆ ಮಾರುವವನೂ ಒಂದು ಮೊಬೈಲ್ ಮಾಲಿಕ!
ತಾಂತ್ರಿಕತೆಯ ಮುಂದುವರಿಕೆ ಎಲ್ಲಿಯ ವರೆಗೆ ಎಂದರೆ ಕುಳಿತಲ್ಲಿಂದ ಪ್ರಪಂಚದ ಯಾವುದೇ ಮೂಲೆಯ ಮಾಹಿತಿ ಪಡೆದು ಅಲ್ಲಿಗೆ ಹೋಗುವುದರೊಳಗೇ ನಮ್ಮ ಊಟ,ವಸತಿ,ಓಡಾಟ ಗಳೆಲ್ಲದರ ವ್ಯವಸ್ತೆ ಯನ್ನ ಇಂಟರ್ ನೆಟ್,ಒನ್ ಲೈನ್ ಟ್ರಾನ್ಸ್ ಫರ್ ಗಳಂತಹ ತಂತ್ರ ಗಳನ್ನ ಬಳಸಿ ಮಾಡಿಕೊಳ್ಳಬಹುದಾಗಿದೆ.
VOIP ತಂತ್ರವನ್ನ ಬಳಸಿಕೊಂಡು ಕೇವಲ 80 ಪೈಸೆ ಪ್ರತಿನಿಮಿಷಕ್ಕೆ ಖರ್ಚಾಗುವಂತೆ ನಾನು ಇಲ್ಲಿಂದ ಭಾರತದ ಯಾವುದೇ ಸ್ಥಿರ ಅತವಾ ಸೆಲ್ಲ್ಯುಲಾರ್ ಫೋನ್ ಗಳಿಗೆ ಮಾತಾಡುತ್ತೇನೆ.(ಇದು ಮುಂದು ವರೆದರೆ ಕೆಲವು ದೂರ ಸಂಪರ್ಕ ಕಂಪನಿ ಗಳು ಹೊಟ್ಟೆಗಿಲ್ಲದೆ ಸಾಯ ಬೇಕಾಗುತ್ತದೆ ಯಾರಿಗೂ ಗೊತ್ತಿಲ್ಲ ಎಂದಲ್ಲ ನನ್ನಿಂದ ಗೊತ್ತಾಗುವುದು ಬೇಡ ಎಂಬ ಉದ್ದೇಶ ದಿಂದ ನಾನಿದನ್ನು ಯಾರಿಗೂ ಹೇಳಿಲ್ಲ ನೀವೂ ಹೇಳಬೇಡಿ) ಇಲ್ಲೇ ಕುಳಿತು ಬೆಂಗಳೂರಿನ ನನ್ನ Computer ನ್ನ ಬಳಸುವಷ್ಟು ಮುಂದುವೆರೆದಿರುವ ಪ್ರಕ್ರಿಯೆ ಆಗುವ ಖರ್ಚು ಕೇವಲ 5 ರಿಂದ 10 ರೂಪಾಯಿಗಳು. ಕೇವಲ 30 ವರ್ಷದ ಅವದಿಯಲ್ಲಿ ಆದ ಬದಲಾವಣೆಗಳನ್ನ ಅವಲೋಕಿಸುವ ನನಗೇ ಇಷ್ಟು ಆಶ್ಚರ್ಯ ಆಗುವಾಗ ಇತಿಹಾಸ ವನ್ನ ಬರೆದು ಭವಿಷ್ಯ ವನ್ನ ಹೇಳುವವರಿಗೆ ಏನಾಗಬೇಡ? ಮಾಹಿತಿ ತಂತ್ರಜ್ನಾನ ದ ಓಘ ದಲ್ಲೇ ಎಲ್ಲಾ ಕ್ಷೇತ್ರಗಳಲ್ಲೂ ಸಂಶೋದನೆಗಳು ನಡೆದರೆ ನಮ್ಮ ಮುಂದಿನ ಪೀಳಿಗೆ ಯವರು ಗಾಳಿಯಲ್ಲಿ ಹಾರುತ್ತಾ ಮಾನವ ನಿರ್ಮಿತ ಕೃತಕ ಗ್ರಹದಲ್ಲಿರುವ ಮಾವನ ಮನೆಗೆ ಹೋಗಿ ಬರಬಹುದು.
ಇಷ್ಟೆಲ್ಲ ಯಾಕೆ ಸ್ವಾಮೀ ನನಗೆ ಊರು ಬಿಟ್ಟು ಬರುವಾಗಿನ ಅಭಿಪ್ರಾಯ ಪೂರ್ಣ ಬದಲಾಗಿದೆ.ನಾನು ಎಲ್ಲರನ್ನೂ ಬಿಟ್ಟು ಬಂದೆ ಎನ್ನುವ ಭಾವನೆಯೇ ಬಾರದಷ್ಟು ಎಲ್ಲರೊಡನೆ ಮಾತನಾಡುತ್ತೇನೆ,ಚಾಟ್ ಮಾಡುತ್ತೇನೆ,ಈಮೈಲ್ ನ ಮೂಲಕ ಸಂಪರ್ಕದಲ್ಲಿದ್ದೇನೆ.
"ಮಾಹಿತಿ,ಶಿಕ್ಷಣ,ವಾಣಿಜ್ಯ,ಮನರಂಜನೆ,ಕಾಡುಹರಟೆ,ಎಲ್ಲದಕ್ಕೂ ಬಳಕೆಯಾಗುವ ಕಂಪ್ಯೂಟರ್ ಮತ್ತು ಇಂಟರ್ನೆಟ್ಟನ್ನ ಕಲಿಯುಗದ ಕಲ್ಪವೃಕ್ಷ ಎನ್ನೋಣವೇ ಅಥವಾ ಮದುವೆ,ಬಜ್ಜ,ಎಲ್ಲಾ ಸಮಯದಲ್ಲೂ ಬೇಕಾಗುವ ಗೋಮಯಕ್ಕೆ ಹೋಲಿಸೋಣವೇ ನೀವೇ ಹೇಳಿ"

Comments
ತಂತ್ರಜ್ನಾನ ಒಂದು ಶಕ್ತಿ....
ಉಪಯೋಗ ಬಹಳ..
ಹಾಗೆ ಅಪಾಯನೂ ಜಾಸ್ತಿ..
ಉಗ್ರರ ಕೈಗೆ ಸಿಕ್ಕ ಆದ ಅನಾಹುತ ನಮ್ಮ ಕಣ್ಣೆದುರಿಗೆ ಇದೆ...
ಹೀಗಾಗಿ ಇದು ಉಪಯೋಗಿಸುವವನ "ತಲೆಯನ್ನು" (ಮನಸು) ಅವಲಂಬಿಸಿದೆ...
ತುಂಬಾ ಸೊಗಸಾಗಿ ಬರಯಲು ಶುರು ಮಾಡಿದ್ದೀಯಾ..!
ಚಂದದ ಬರವಣಿಗೆಗೆ..
ಅಭಿನಂದನೆಗಳು...