ಶಂಭಜ್ಜರಿಗೆ ಅಂತಿಮ ನಮನ

ಬೆಳಿಗ್ಗೆ 6-30 ಕ್ಕೆ ಮಿತ್ರರಾದ A N ಹೆಗಡೆಯವರ ಫೋನ್ ಕಾಲ್ ಬಂತು ಅಷ್ಟು ಹೊತ್ತಿನಲ್ಲಿ ಕರೆ ಬಂದದ್ದನ್ನ ನೋಡಿದರೆ ಏನೋ ಆಗಬಾರದ್ದು ಆಗಿದೆ ಎಂದು ತರ್ಕಿಸುತ್ತಾ ಫೊನ್ ತೆಗೆದರೆ ಅದು ನಿಜವಾಗಿತ್ತು.ಯಕ್ಷಗಾನದ ಧೀಮಂತ ಚೇತನ ಕೆರೆಮನೆ ಶಂಭು ಹೆಗಡೆಯವರು ತೀರಿ ಹೋದರು ಎಂಬ ವಿಷಯವನ್ನು ವಿಷಾದದ ದ್ವನಿಯಲ್ಲಿ ಹೇಳಿದರು.ಶಂಭು ಹೆಗಡೆಯವರಂತ ಮೇರುಸದೃಷರ ಅಕಾಲಿಕ ಮರಣದ ವಾರ್ತೆ ನನ್ನಂತಹಾ ಅಪ್ಪಟ ಯಕ್ಷಗಾನ ಅಭಿಮಾನಿಗೆ ಅಘಾತ ಮಾಡದೇ ಉಳಿಯಲಿಲ್ಲ.

ಸದಾ ಅದ್ಯಯನ ಶೀಲರಾದ ಅವರು ಸುಮಾರು ನಾಲ್ಕಕ್ಕೂ ಹೆಚ್ಚು ದಶಕಗಳ ಕಾಲ ಯಕ್ಷಗಾನ ರಂಗಸ್ಥಳವನ್ನು ಆಳಿ,ಅನುಭವಿಸಿ,ಯಕ್ಷಗಾನದ ಎಲ್ಲ ವಿಭಾಗಗಳಲ್ಲೂ ಅಭಿನಯಿಸುವ,ವಿಮರ್ಶಿಸುವ,ನಿರ್ದೇಶಿಸುವ ಸಮರ್ಥರು.ತಂದೆ ಶಿವರಾಮ ಹೆಗಡೆ ಯವರ ಕಾಲದಿಂದ ನಡೆಸಿಕೊಂಡು ಬಂದ ಇಡುಗುಂಜಿಮೇಳಕ್ಕೆ ಹೊಸ ರೂಪ ಕೊಟ್ಟು ಹಲವಾರು ಪಾತ್ರಗಳನ್ನ ತಮ್ಮದೇ ಕಲ್ಪನೆಯಲ್ಲಿ ಜೀವ ಕೊಟ್ಟು ಅನುಕರಣೀಯರೂ,ಅನುಸರಣೀಯರೂ ಆದವರು.

ಯಕ್ಷಗಾನಕ್ಕೆ ಅವರ ಮುಂದಿನ ಪೀಳಿಗೆಗೆ ಹಲವಾರು ಕೊಡುಗೆಗಳನ್ನ ಕೊಟ್ಟ ಧೀಮಂತ.ಯಕ್ಷಗಾನ ಹಾಗು ಜಾನಪದ ಅಕಾಡಮಿಯ ಅದ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು ಹಲಾವಾರು ಪ್ರತಿಭಾನ್ವಿತ ಕಲಾವಿದರನ್ನ ಗುರುತಿಸಿ ಪುರಸ್ಕರಿಸಿದ್ದಾರೆ.
”ಮಡದಿ ಜಾನಕಿ ಮೊದಲೇ ಪೂದಳು"”ನೋವುನಲಿವುಳಿಂದ ಕೂಡಿದ ಜೀವನವ ಕಂಡಾಯ್ತು" ಎಂಬ ಪದ್ಯಗಳಿಗೆ ಶಂಬಜ್ಜರ ನಿರ್ಯಾಣದ ರಾಮ ತನ್ನ ಜೀವನ ವನ್ನ ಅವಲೋಕಿಸುವಾಗ ಸಭೆಯಲ್ಲಿದ್ದವರಲ್ಲಿ ಕಣ್ನೀರಿಡದವರಿಲ್ಲ,”ಗಳಿಗೆ ಸೈರಿಸು ಪಾರ್ಥ" ಎಂಬ ಕರ್ಣನ ಪದ್ಯಕ್ಕೆ ಕರುಣಾರಸ ಧಾರೆ ಯಾಗಿ ಹರಿಯುತ್ತಿತ್ತು."ಬಿಟ್ಟೆ ರಾಜ್ಯವ ಕೊಟ್ಟೆ ಕೋಶವ" ಎಂದು ಸರ್ವವನ್ನೂ ಗುರು ವಿಶ್ವಾಮಿತ್ರರ ಪಾದಕ್ಕರ್ಪಿಸಿ ಹೆಂಡತಿ ಮಗನ ಸಹಿತ ರಾಜ್ಯ ಬಿಟ್ಟು ಹೊರಡುವ ಹರಿಶ್ಚಂದ್ರನ ಪಾತ್ರ ವನ್ನ ನೋಡಿದ ಯಾವುದೇ ವ್ಯಕ್ತಿ ಅವರ ಅಭಿಮಾನಿಯಾಗದೇ ಇರಲಾರ.

ಶಂಭು ಹೆಗಡೆಯವರು ವೃತ್ತಿ ಯಕ್ಷಗಾನ ದಿಂದ ನಿವೃತ್ತ ರಾಗುತ್ತಾರಂತೆ ಎಂಬ ಸುದ್ದಿ ತಿಳಿದು ಕಳೆದ ವರ್ಷ ಅವರ ಹರಿಶ್ಚಂದ್ರನನ್ನು ನೋಡಲು ಬೆಂಗಳೂರಿನಿಂದ ಸಂಪಕಂಡಕ್ಕೆ ಹೋಗಿ ಬಂದ ನನಗೆ ಅದೇ ವೇಷವೇ ಕೊನೆಯದಾಗಿ ಹೋಯಿತು.

ಜಾತಸ್ಯ ಮರಣಂ ದೃವಂ
ಎಂಬಂತೆ ಸಾವು ಯಾರನ್ನೂ ಬಿಡದೇ ಕೊಂಡೊಯ್ಯುತ್ತದೆ ಆದರೆ ಶಂಬಜ್ಜರದ್ದು ಇನ್ನೂ ಬದುಕಿ ಇರಬೇಕಾದ ವಯಸ್ಸು.

ಆದರೆ ಅವರಿಗೆ ಬಂದ ಸಾವನ್ನ ನೋಡಿದ ನಮಗೆ ಅವರ ಬದುಕಿನ ಸಾರ್ತಕತೆಯ ಅರಿವಾಗುತ್ತದೆ.
ತಲೆಮಾರು ಗಳಿಂದ ನಡೆಸಿ ಕೊಂಡುಬಂದ ಮೇಳದ ಅಧಿಷ್ಟಾಪಕ ದೇವರಾದ ಇಡುಗುಂಜಿ ಮಹಾ ಗಣಪತಿಯ ಸನ್ನಿಧಿಯಲ್ಲಿ,ತಮ್ಮ ಹಾಗು ತಮ್ಮನ್ನ ನಂಬಿದ ಹಲವಾರು ಕುಟುಂಬಗಳ ಎರಡು ಹೊತ್ತಿನ ಊಟಕ್ಕೆ ದಾರಿಯಾದ ಯಕ್ಷಗಾನ ರಂಗಸ್ಥಳದಲ್ಲಿ,ಅವರಿಗೆ ಬಹಳ ಹೆಸರು ತಂದು ಕೊಟ್ಟ ರಾಮನ ಪಾತ್ರದಲ್ಲಿ, ಅವರ ಕೊನೆ ಕ್ಷಣ ಕಳೆದ ಅವರಿಗೆ ಇದು ಸಾಯುಜ್ಯ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.

ಎನುತ ಸರಯೂ ನದಿಯಲಿಳಿದನು,ಶೇಷ ಮುಳುಗಿಗು ವಿಷೇಷ...
ಎಂದು ರಾಮನಿರ್ಯಣ ವನ್ನ ಉಪಸಂಹರಿಸುತ್ತಿದ್ದ ಯಕ್ಷಗಾನದ ಧೀಮಂತ ಚೇತನವೊಂದು ಇಂದು ತನ್ನ ಪರ್ವದ ಕೊನೆಕಂಡಿತು.

ತಮ್ಮ ನಿಷ್ಟುರತೆ,ನೇರನುಡಿ,ಸಜ್ಜನಿಕೆ,ಧಕ್ಷತೆ ಮೆರೆದ ಯಕ್ಷಗಾನದ ಅನರ್ಘ್ಯ ರತ್ನಕ್ಕೆ ನಮ್ಮ ಅಂತಿಮ ನಮನ ಸಲ್ಲಿಸೋಣ.

Comments

ಮನಸು said…
ಮೂರ್ತಿ ನಿಮ್ಮ ಲೇಖನದ ಮೂಲಕ ಶಂಭು ಹೆಗಡೆಯವರ ಬಗ್ಗೆ ತಿಳಿಯಿತು... ನನಗೆ ಹೆಚ್ಚು ಯಕ್ಷಗಾನ ಬಗ್ಗೆ ಅರಿವು ಆಗಲೀ ಮನವೂ ಅಗಲಿ ಇಲ್ಲ ಆದರು ಅಂತಹ ದಿಗ್ಗಜರನ್ನು ಕಳೆದುಕೊಂಡರೆ ಕಲೆಗೆ ಕುಂದು ಬರುತ್ತದೆ..
ಮೂರ್ತಿಯವರೇ, ಕಲೆಗಾಗಿ ಜೀವವನ್ನೇ ಮುಡಿಪಾಗಿಟ್ಟ ಶಂಭು ಹೆಗಡೆಯವರ ವ್ಯಕ್ತಿತ್ವ ಅನೇಕ ವರ್ಷಗಳ ಕಾಲ ನೆನಪಿನಲ್ಲಿ ಉಳಿಯುವಂತದ್ದು. ಅವರ ಅಕಾಲಿಕ ಮರಣ ಯಕ್ಷ ಲೋಕಕ್ಕೆ ಹೊಡೆದ ಆಘಾತವೇ ಸರಿ, ಆ ಇಡಗುಂಜಿ ಮಹಾಗಣಪತಿ ಅವರ ಕುಟುಂಬಕ್ಕೆ ಇದನ್ನು ಸಹಿಸಿಕೊಳ್ಳುವ ತಾಳ್ಮೆ ಕೊಡಲಿ ಎಂಬ ಪ್ರಾರ್ಥನೆ ಮಾತ್ರ ನಮ್ಮದು. ಇ ಸಂಧರ್ಭದಲ್ಲಿ ಸಂಧರ್ಬ್ಹೊಚಿತವಾಗಿ ಶಂಬಜ್ಜನ ಬಗ್ಗೆ ಬರೆದಿದ್ದಕ್ಕೆ ಧನ್ಯವಾದಗಳು.
ವ್ಯಕ್ತಿ ಸಾಯಬಹುದು ಆದರೆ ಕಲೆಗೆ ಸಾವಿಲ್ಲ, ಕಲೆ ನಿತ್ಯ ನಿರಂತರ ಹರಿಯುವ ನೀರಿನಂತೆ. ಇನ್ನೊಬ್ಬ ಶಂಭು ಹೆಗ್ಡೆ ಬೇಗನೆ ಹುಟ್ಟಿ ಬರಲಿ ಎಂಬ ಆಶಯ ಸಮಸ್ಟ್ ಯಕ್ಷ ಪ್ರಿಯರದು.
ಸದಾ ನಿಮ್ಮವ
- ಗುರು ಬಬ್ಬಿಗದ್ದೆ
ಮನಸು said…
ಮೂರ್ತಿ ಮನವೋ ಇಲ್ಲ ಎಂದೇಳಿದ್ದನ್ನು ತಪ್ಪಾಗಿ ತಿಳಿಯಬೇಡಿ,

ನಮಗೆ ಯಕ್ಷಗಾನದ ಬಗ್ಗೆ ಗಂಧವೇ ಇಲ್ಲ, ನಿಮ್ಮ ಲೇಖನ ನೋಡಿ ಮನೆಯಲ್ಲಿ ಅದಕ್ಕೆ ಸಂಬಂದಿಸಿದ ಕೆಲವು ಲೇಖನ ನೋಡಿದೆ... ನಿಮ್ಮ ಲೇಖನ ಆ ದಾರಿಗೆ ತರಿಸಿ ಅಲ್ಪಸ್ವಲ್ಪ ತಿಳಿದುಕೊಂಡಂತಾಯಿತು ಧನ್ಯವಾದಗಳು.
ಧನ್ಯನಾದೆ ಸುಗುಣಕ್ಕ,
ಧನ್ಯವಾದಗಳು ಗುರು.
ಯಕ್ಷಗಾನದ ಗಂಧಗಾಳಿಯೂ ಗೊತ್ತಿಲಾದ ನನ್ನಂತಹ ಒಬ್ಬ ಸಾಮಾನ್ಯ ವ್ಯಕ್ತಿಗೂ ಅವರ ವೀರ ಮರಣ ನೋವುಂಟು ಮಾಡಿದೆ .ಅವರನ್ನೆಲ್ಲೋ ದೂರದಿಂದ ನೋಡಿದ ನೆನೆಪು ಅದು ಯಾವುದೊ ಜನಭರಿತ ಮದುವೆ ಮನೆಯಲ್ಲಿ ಆದರು ಅವರು ನನ್ನ ಮನಸ್ಸಿನಲ್ಲಿದ್ದಾರೆ ಯಾವಾಗಲು ಇರುತ್ತಾರೆ..
RK Rajarama said…
ನಿನ್ನ ಲೇಖನ ತುಂಬಾ ಅತ್ಯುತ್ತಮವಾಗಿ ಮನಸ್ಸಿಗೆ ಮುಟ್ಟುವಂತಿದೆ. ಭಾಷೆಯಲ್ಲಿ ಬಹಳ ಸುಧಾರಣೆಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. keep up the good work.
Unknown said…
ಹೌದಪ್ಪ ಯಕ್ಷಗಾನ ಅಭಿಮಾನಿಗಳಿಗೆ ದುರಂತದ ಸುದ್ಧಿ.
ಶಂಭು ಹೆಗಡೆ ಮತ್ತೆ ಹುಟ್ಟಿ ಬರಲಿ
ಧನ್ಯವಾದಗಳು ರಾಜ್ಮಾವ.

Popular posts from this blog

ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ ! :)

ಹುಚ್ಚು ಕೋಡಿ ಮನಸು 2

Farmville Application in Facebook