ಹ್ಯಾಪಿ ವ್ಯಾಲೈಂಟೈನ್ಸ್ ಡೇ!!!

"My bounty is as boundless as the sea,
My love as deep; the more I give to thee,
The more I have, for both are infinity

ಇದೇನಿದು ದೊಡ್ಡ ದೊಡ್ದ ಶಬ್ದ ಗಳನ್ನೆಲ್ಲ ಸೇರಿಸಿ ವಾಕ್ಯ ರಚಿಸುವಷ್ಟು ಇವ ಎಲ್ಲಿ ಕಲಿತ ಎಂದು ಯೋಚಿಸಿದಿರ? ಸರಿ ಇದು ನಾ ಬರೆದಿದ್ದಲ್ಲ ಪುಣ್ಯಾತ್ಮ ಶೇಕ್ಸ್ ಫಿಯರ್ ರೋಮಿಯೋ ಜ್ಯುಲಿಯೆಟ್ ನಾಟಕದಲ್ಲಿ ಬರೆದದ್ದು. ಮುಂದೆ ಕಾಮೆಂಟ್ ಮಾಡಿ ಅದರ ಅರ್ಥ ಕೇಳಬಾರದೆಂಬ ದು(ದೂ)ರಾಲೋಚನೆ ಇಂದ ನಾ ಇದನ್ನ ಅಲ್ಲಿಂದ ಕದ್ದು ಬಟ್ಟಿ ಇಳಿಸಿದ ವಿಷಯ ಮೊದಲೇ ಹೇಳಿದ್ದೇನೆ ಇಷ್ಟಾದಮೇಲೂ ಅರ್ಥವನ್ನ ಕೇಳಿಯೇ ಕೇಳ್ತೀರಿ ಎಂದಾದರೆ ಅವ ಬರೆದದ್ದನ್ನ ಹುಡುಕಿ ತೆಗೆದ ನನಗೆ ಅದರ ಅರ್ಥ ಹುಡುಕುವುದು ಕಷ್ಟ ಅಲ್ಲ.

ತಲೆ ತಿಂದಿದ್ ಸಾಕು ವಿಷಯ ಹೇಳು ಎಂದು ಬೈಕೊಳ್ಳುವ ಮೊದಲು ಹೇಳಿಬಿಡುತ್ತೇನೆ Happy valentine's day.
New year day ಅಂತೆಯೇ ಇದೂ ಕೂಡ ನಮ್ಮದಲ್ಲದ ಆಚರಣೆ ಇಂತಹಾ ನಮ್ಮದಲ್ಲದ ಎಷ್ಟೋ ಆಚರಣೆ ಗಳನ್ನ ನಮ್ಮದಾಗಿಸಿಕೊಂಡ ಕೀರ್ತಿಗೆ ನಾವು ಪಾತ್ರರು. ಮೊದಮೊದಲು ಕೇವಲ coffe day ಸಂಸ್ಕೃತಿ ಚಾಲ್ತಿಯಲ್ಲಿರುವ ದೊಡ್ದ ನಗರಗಳಲ್ಲಿ ಮಾತ್ರ ಆಚರಿಸುತ್ತಿದ್ದ ಈ ವ್ಯಾಲೆಂಟೈನ್ಸ್ ಡೇ ಈಗ ಹಳ್ಳಿಗಳಲ್ಲಿ ಕೂಡ ಆಕ್ರಮಿಸಿ ಕೊಳ್ಳತೊಡಗಿದೆ.
ಹೊಸದಾಗಿ ಕಾಲೇಜಿಗೆ ಸೇರಿದ ಹುಡುಗ ಹುಡುಗಿಯರು ಫೆಬ್ರುವರಿ 14 ರಂದು ಹಸಿರು ಬಟ್ಟೆ ಧರಿಸಿ ಹೋಗುವುದನ್ನ ಗಮನಿಸಿದ್ದೇನೆ.ಅವರಲ್ಲಿ ಈ ಆಚರಣೆಯ ಗುಟ್ಟು,ಉದ್ದೇಶ,ಇದರ ಇತಿಹಾಸ ಎಲ್ಲ ಕೇಳಿ ಕೆಟ್ಟ ಹುಡುಗನಾಗಿದ್ದೇನೆ. ಬಿಡಿ ನಾಟಕ ಮಾಡಿ ಒಳ್ಳೆಯವನಾಗಿ ಆತ್ಮವಂಚನೆ ಮಾಡಿಕೊಳ್ಳುವುದಕ್ಕಿಂತ ನೇರವಾಗಿ ಗೊತ್ತಿದ್ದದ್ದನ್ನ ಹೇಳಿ ಗೊತ್ತಿಲ್ಲದಿದ್ದನ್ನ ಕೇಳಿ ಕೆಟ್ಟವನಾದರೆ ಆತ್ಮ ತೃಪ್ತಿ ಇದೆ.



ಮೊನ್ನೆ ವ್ಯಾಲೇಂಟೈನ್ ಡೇ ಆಚರಣೆಗಾಗಿ ದೂರದ ಲೆಬನಾನ್ ಗೆ ಹೊರಟಿರುವ,ಮುಂದಿನ ತಿಂಗಳು ಮದುವೆ ಮಾಡಿಕೊಳ್ಳಲಿರುವ ನನ್ನ ಸಹೋದ್ಯೋಗಿ ಒಬ್ಬನನ್ನ ಕಿಚಾಣಿಸುವ ಸಲುವಾಗಿ ಅದೇ ಪ್ರಶ್ನೆ ಕೇಳಿದೆ ಎಲ್ಲರ ಎದುರಿನಲ್ಲಿ ಕೇಳಿದ್ದರಿಂದ ತಬ್ಬಿಬ್ಬಾಗಿ ಹೋದ ಅವ ಪ್ರಾಮಾಣಿಕ ವಾಗಿ ಅಪ್ಪನೆಟ್ಟ ಆಲದ ಮರ ನಾನೂ ನೆರಳು ಪಡೆಯುತ್ತೇನೆ ಎಂದ ಅರ್ಥದಲ್ಲಿ ಹೇಳಿದ. ಆಗ ಅವನಿಗೆ ನನ್ನ ಹೀರೋಯಿಸಂ ತೋರಿಸುವ ಸಲುವಾಗಿ ನಾಳೆ ಇದರ ಬಗ್ಗೆ ಪುರುಸೊತ್ತಿದ್ದಾಗ ಕೇಳು ಹೇಳುತ್ತೇನೆ ಅಂದೆ ಆದರೆ ನನಗೇನು ಗೊತ್ತು ಅವನಿಗೆ ಹೇಳಿಕೊಡುವುದಕ್ಕೆ ಮಣ್ಣಂಗಟ್ಟಿ!!!!!.
ಆದರೂ ಬಿಡಲಿಲ್ಲ ಒಬ್ಬ ರೋಮನ್ ಕ್ಯಾತೊಲಿಕ್ ಸ್ನೇಹಿತನನ್ನ ಕೇಳಿದೆ ಅವ ಈ ದಿನದ ಆಚರಣೆಯ ಬಗ್ಗೆ ವ್ಯಾಲೆಂಟೈನ್ಸ್ ಡೇ ಇದು ಸ್ನೇಹಿತರಿಗೆ ಪ್ರೇಮಿಗಳಿಗೆ ಸಕ್ಕರೆ ಅಚ್ಚು,ಹೂವು,ಉಡುಗೊರೆ,ಗ್ರೀಟಿಂಗ್ ಕಾರ್ಡ್ ಇವುಗಳನ್ನ ವಿನಿಮಯ ಮಾಡಿಕೊಳ್ಳುವ ಒಂದು ಹಬ್ಬ ಎಂದ ಹಾರಿಕೆ ಉತ್ತರ ಕೊಟ್ಟು ಹೊರಡುವುದರಲ್ಲಿದ್ದ ಅವನನ್ನ ತಡೆದು ಇಷ್ಟೇ ಆದರೆ ಕೌ... ಅಮ್ಮಮ್ಮನಿಗೂ ಗೊತ್ತು ನನಗೆ ಅಷ್ಟು ಸಾಕಾಗುವುದಿಲ್ಲ ಅದರ ಬಗೆಗೆ ಒಂದು ಉಪನ್ಯಾಸಕ್ಕಾಗುವಷ್ಟನ್ನಾದರೂ ಹೇಳು ಎಂಬ ವರಾತ ಶುರುವಿಟ್ಟೆ. ದೀಪಾವಳಿಯ ದಿನ ರಜೆ ತೆಗೆದುಕೊಂಡಾಗ ನನ್ನನ್ನ ದೀಪಾವಳಿಯ ಹಿನ್ನೆಲೆ ಕೇಳಿ ತಲೆ ತಿಂದಿದ್ದ ಸೇಡು ತೇರಿಸಿಕೊಳ್ಳುವ ಅವಕಾಶಕ್ಕಾಗಿ ಕಾಯುತ್ತಿದ್ದ ನನಗೆ ಮುಖ ಅರಳಿಸುವ ಸಂದರ್ಭ ಸುಸಂಪನ್ನವಾಗಲು(ಕೃಪೆ SPB)ಬಹಳ ದಿನ ಬೇಕಾಗಲಿಲ್ಲ.ಅವ ಅರ್ದ ಗಂಟೆ ಸಮಯ ತೆಗೆದುಕೊಂಡು ಹೋದವ ಒಂದು ಲಘು ಟಿಪ್ಪಣಿಯೊಂದಿಗೆ ಬಂದೇ ಬಿಟ್ಟ ನಾನು ದೀಪಾವಳಿಯ ಬಗ್ಗೆ ವಿವರಿಸಿದಷ್ಟಲ್ಲದಿದ್ದರೂ ಅವ ವಿವರಿಸಿದ್ದನ್ನ,ನನಗೆ ಅರ್ಥ ಆದಷ್ಟನ್ನ ಇಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ.ಪುರಾಣಕ್ಕೆ ಪ್ರಶ್ನೆ ಕೇಳಬಾರದಂತೆ ಕೆಳಗಿನ ಬರವಣಿಗೆಯ ಬಗ್ಗೆ ಯಾವುದೇ ಪ್ರಶ್ನೆಗಳನ್ನೂ ಕೇಳಬಾರದಾಗಿ ಓದುಗದೊರೆಗಳಲ್ಲಿ(ಕೃಪೆ ರವಿ ಬೆಳಗೆರೆ.)ವಿನಂತಿ.
ಮರುದಿನ ಊರಿಗೆ ಹೊರಟ ಪ್ರೇಮಿಗೆ ಕಥೆಹೇಳಿ ಹೀರೋವೂ ಆದೆ ಹಿ ಹಿ ಹಿ.....

ಕೆಲವು ಇತಿಹಾಸಕಾರರ ಪ್ರಕಾರ ಸೇಂಟ್ ವ್ಯಾಲೆಂಟೈನ್ ಎಂಬವನು ಮೂರನೆಯ ಶತಮಾನದಲ್ಲಿ ರೋಮನ್ ನ ಒಬ್ಬ ಪೂಜಾರಿ ಆಗಿನ ಚಕ್ರವರ್ತಿ ಕ್ಲಾಡಿಯಸ್ ನ ಕಾನೂನಿನ ವಿರುದ್ದವಾಗಿ ಯುವಕ ಸೈನಿಕರ ಮದುವೆ ಮಾಡಿಸಲು ಹೋಗಿ ಶಿಕ್ಷೆಗೆ ಗುರಿಯಾದವ.
ಇನ್ನು ಕೆಲವರು ಹೇಳುವಂತೆ ರೋಮನ್ ನಲ್ಲಿ ಕ್ರಿಸ್ಚಿಯನ್ ಕೈದಿಗಳನ್ನ ಸೆರೆ ಬಿಡಿಸುವ ಪ್ರಯತ್ನದ ಆಪಾದನೆ ಗಾಗಿ ಮರಣದಂಡನೆಗೆ ಗುರಿಯಾದವ.
ಸೆರೆಮನೆಯಲ್ಲಿ ವ್ಯಾಲೈಂಟೈನ್ ತನ್ನ ಪ್ರೇಯಸಿಯಾದ ಜೈಲರ್ ಒಬ್ಬನ ಮಗಳಿಗೆ ಮೊದಲ ವ್ಯಾಲೆಂಟೈನ್ ಗ್ರೀಟಿಂಗನ್ನ ಬರೆದ ಎನ್ನುವುದು ಮತ್ತೆ ಕೆಲವರ ನಂಬಿಕೆ ಒಟ್ಟಿನಲ್ಲಿ ಆ ಭಾವನೆ ಇಂದಿಗೂ ಉಳಿದಿದೆಯಂತೆ.
ಸುಮಾರು ಕ್ರಿಪೂ 270 ರಲ್ಲಿ ಪ್ರಾರಂಭವಾದ ಈ ಆಚರಣೆ ಫೆಬ್ರುವರಿ ತಿಂಗಳ ಮದ್ಯದಲ್ಲಿ ವ್ಯಾಲೆಂಟೈನ್ ನ ಮರಣದ ದಿನವನ್ನ ವ್ಯಾಲೆಂಟೈನ್ಸ್ ಡೇ ಎಂದು ಆಚರಿಸುತ್ತಾರೆ ಎಂದು ನಂಬಿದವರೂ ಇದ್ದರೆ.
ಪುರಾತನ ರೋಮ್ ನಲ್ಲಿ ಫೆಬ್ರುವರಿಯನ್ನ ಶುದ್ದತೆಯ ತಿಂಗಳು ಎಂದು ಆಚರಿಸುತ್ತಾರೆ ಈ ಅವಧಿ ಯಲ್ಲಿ ಮನೆಯನ್ನ ಶುದ್ದಗೊಳಿಸಿ ಉಪ್ಪು ಹಾಗೂ Spelt ಎಂಬ ಧಾನ್ಯವನ್ನ ಸಿಂಪಡಿಸುವ ಸಂಪ್ರದಾಯ ಇದೆಯಂತೆ.ಹಾಗೆಯೆ ಫೆ-15 ರಂದು Faunus ಎಂಬ ರೋಮನ್ ನ ಕೃಷಿಯ ದೇವರ ಹಬ್ಬವೂ ಇದ್ದು ಆ ಹಬ್ಬದಲ್ಲಿ ರೋಮನ್ ನ ಹೆಣ್ಣು ಮಕ್ಕಳು ತಮ್ಮ ಹೆಸರುಗಳನ್ನ ಚೀಟಿಯಲ್ಲಿ ಬರೆದು ಒಂದು ದೊಡ್ಡ ಪಾತ್ರೆ ಯಲ್ಲಿ ಹಾಕಿರುತ್ತಾರಂತೆ ಅಲ್ಲಿಗೆ ಬರುವ ಯುವಕರು ಅದರಲ್ಲಿ ಒಂದು ಚೀಟಿಯನ್ನ ಆರಿಸಿಕೊಂಡು ಅದರಲ್ಲಿ ಬಂದ ಹೆಸರಿನ ಹೆಣ್ಣಿನೊಟ್ಟಿಗೆ ಆ ವರ್ಷ ಕಳೆಯಲು ಸಿದ್ದರಾಗುತ್ತಾರಂತೆ ಇಂತಹಾ ಸಂಬಂಧ ಹೆಚ್ಚಾಗಿ ಮದುವೆಯೊಂದಿಗೆ ಕೊನೆಗೊಳ್ಳುವ ಪ್ರಕ್ರಿಯೆ ರೂಡಿಗೆ ಬಂತೆನ್ನಲಾಗಿದೆ.
ಇನ್ನು ಫ್ರಾನ್ಸ್ ಹಾಗು ಇಂಗ್ಲೆಂಡ್ ಗಳಲ್ಲಿ ಫೆಬ್ರುವರಿ ತಿಂಗಳು ವಂಶಾಭಿವೃದ್ದಿಯ ಸಲುವಾಗಿ ಪಕ್ಷಿಗಳ ಮಿಲನ ಋತು ಪ್ರಾರಂಭ ಅಗುತ್ತದಂತೆ ಅದು ಫೆ- 14 ರಂದು ಆಚರಿಸಲ್ಪಡುವ so called ಪ್ರೇಮಿಗಳ ದಿನದ ಸ್ಪೂರ್ತಿಯಾಗಿರ ಬಹುದು.
ಗ್ರೇಟ್ ಬ್ರಿಟನ್ ನಲ್ಲಿ ಇದು ಪ್ರಾರಂಭವಾದದ್ದು ಹದಿನೇಳನೆಯ ಶತಮಾನದಲ್ಲಿ ಪ್ರೇಮಿಗಳು ತಮ್ಮ ಪ್ರೀತಿಯನ್ನ ನೇರವಾಗಿ ವ್ಯಕ್ತ ಪಡಿಸುವುದನ್ನ ಸಮಾಜ ಉತ್ತೇಜಿಸದ ಕಾಲದಲ್ಲಿ ಗ್ರೇಟಿಂಗ್ ಕಾರ್ಡ್ ಗಳ ಮೂಲಕ ವ್ಯಕ್ತ ಪಡಿಸಲಾಗುತ್ತಿತ್ತು.

ಅಮೇರಿಕದಲ್ಲಿ ಹದಿನೇಳನೆಯ ಶತಮಾನದಲ್ಲಿ ಪ್ರಾರಂಭವಾದ,ಕೈಯಲ್ಲಿ ಮಾಡಿದ ಕಾರ್ಡ್ ಗಳ ವಿನಿಮಯ 1840 ರಲ್ಲಿ ಮೊದಲ ಕಮರ್ಶಿಯಲ್ ಕಾರ್ಡ್ mother of valentine ಎಂದು ಕರೆಸಿಕೊಂಡಿರುವ ಈಸ್ಟರ್-ಎ-ಹೌಲೆಂಡ್ ರಿಂದ ನಿರ್ಮಿಸಲ್ಪಟ್ಟಿತು ಎನ್ನಲಾಗಿದೆ ಇದಕ್ಕಾಗಿ ರೀಲ್ ಲೇಸ್,ರಿಬ್ಬನ್ ಮತ್ತು ಬಣ್ಣ ಬಣ್ಣದ ಚಿತ್ರಗಳನ್ನು ಬಳಸಲಾಗಿದೆಯಂತೆ.
ಕೆಲವು ಮೂಲಗಳ ಪ್ರಕಾರ 1400 ರಲ್ಲಿ ತಯಾರಿಸಲ್ಪಟ್ಟ ಅತೀ ಹಳೆಯದೆನ್ನಲಾದ ವ್ಯಾಲೆಂಟೈನ್ ಕಾರ್ಡ್ ಬ್ರಿಟಿಷ್ ಮ್ಯೂಸಿಯಂ ನಲ್ಲಿದೆಯಂತೆ.

ಏನೇ ಇರಲಿ ಪ್ರತಿಯೊಂದು ಆಚರಣೆ ಗಳಿಗೂ ಆಯಾ ಪ್ರದೇಶಗಳಿಗನುಗುಣವಾಗಿ ಮೂಲಕಾರಣ ಇದ್ದೇ ಇದೆ ಇಂತಹಾ ಅನೇಕ ನಮ್ಮದಲ್ಲದ ಆಚರಣೆಗಳನ್ನ ನಾವು ಅವರಿಗಿಂತ ಅಚ್ಚುಕಟ್ಟಾಗಿ ಆಚರಿಸಿಕೊಂಡು ಬಂದಿದ್ದೇವೆ.ಆಕ್ಷೇಪಿಸಿ ಬೈಸಿಕೊಳ್ಳುವ ಗೋಜಿಗೆ ಹೋಗದೇ ಇರುವುದೇ ಒಳ್ಳೆಯದು.ಇನ್ನೂ ಕೇಳಿದರೆ ನಿನಗೆ ಅಭಾವ ವೈರಾಗ್ಯ ಎಂದರೂ ಕೊನೆಯ ಮಾತು ನಿಮ್ಮದಾಗಿ ಹೋಗುತ್ತದೆ.

ಒಟ್ಟಿನಲ್ಲಿ ಅಪ್ಪ ನೆಟ್ಟ ಆಲದ ಮರದಲ್ಲಿ ನೆರಳು ಪಡೆಯುವರಿಗೆ ಇಷ್ಟು ಮಾಹಿತಿ ಸಾಕಾಗಬಹುದು ಇದನ್ನು ಒಮ್ಮೆ ಓದಿಕೊಂಡು ಬೇಕಾದರೆ ಫೆ-14 ರಂದು ಬಿಂದಾಸಾಗಿ ರೈತ ಸಂಘದ ಸದಸ್ಯರಾಗಿ.ಇನ್ನು ಹೆಚ್ಚು ಪ್ರತಿರೊದ ವ್ಯಕ್ತವಾದರೆ ಶೇಕ್ಸ್ ಫಿಯರ್ ನ ಸಹಾಯ ಪಡೆಯಿರಿ ಸ್ವಲ್ಪ ಹಳೇ ತಲೆ ಎದುರಾಗಿ ನಿಂತರೆ ನಮ್ಮ ಪುರಾಣದ ಉದಾಹರಣೇ ಕೊಡಿ ರುಕ್ಮಿಣಿ,ಶಕುಂತಲೆ,ಯರ ಸುದ್ದಿ ನೆನಪು ಮಾಡಿಕೊಡಿ ಅದಕ್ಕೂ ಬಗ್ಗದಿದ್ದರೆ ಅಂಬೆ,ದಾಕ್ಷಾಯಿಣಿ ಯರ ಹೆಸರು ಹೇಳಿ ಹೆದರಿಸಿ ಒಟ್ಟಿನಲ್ಲಿ ನೀವು ಮೆಚ್ಚಿದವನ(ಳ)ನ್ನ ಕೈಹಿಡಿದು ಸುಖವಾಗಿರಿ.(ನಿಮ್ಮ ನಿರೀಕ್ಷೆಗೆ ಅವನೊ ಅಥವಾ ಅವಳೋ ಸ್ಪಂದಿಸಿ ಸಮಜೀವನ ಸಾಗಿಸಬಲ್ಲರು ಎಂಬ ನಂಬಿಕೆ ನಿಮಗಿದ್ದರೆ ಮಾತ್ರ).

ಇಷ್ಟೆಲ್ಲ ಹೇಳುವ ನೀನು ಈ ವಿಷಯದಲ್ಲಿ ಸಾದಿಸಿದ್ದೇನು? ಎಂದು ಕೇಳಬೇಡಿ ನೂರಾರು ಸುಖಾಂತ್ಯದ ಸಾವಿರಾರು ದುರಂತದ ಪ್ರೇಮ ಪ್ರಕರಣಗಳನ್ನ ಹತ್ತಿರದಿಂದ ನೊಡಿದ್ದೇನೆ,ಅವರ ಜೊತೆಯಲ್ಲಿ ಹನಿ ಕಣ್ಣೀರಿಟ್ಟಿದ್ದೇನೆ ಆದರೆ ಅನುಭವ ದಲ್ಲಿ ನಾನು ಇನ್ನೂ LKG.
ಹೊಟ್ಟೆಗೆ ಹಿಟ್ಟಾಯಿತು ಇನ್ನು ಜುಟ್ಟಿಗೊಂದು ಮಲ್ಲಿಗೆ ಹೂವು ಬಾಕಿ ಅನ್ನುವಷ್ಟರಲ್ಲಿ ಪರದೇಶಿಯಾದೆ(ಖಾತಾರಿಗೆ ಬಂದೆ) ಧರ್ಮ ಕರ್ಮ ಸಂಯೋಗದಿಂದ ಗ್ರಹಚಾರ ಕೆಟ್ಟ ಹುಡುಗಿ ಯೊಬ್ಬಳು ಸಿಕ್ಕಿದರೆ ಮದುವೆಯಾದ ಮೇಲೆ ಒಂದೇ ಸಾರಿ ಕಳೆದ(ಕಳೆದುಕೊಂಡ)ಅಷ್ಟೂ ಪ್ರೇಮಿಗಳದಿನ ಗಳನ್ನೂ ಆಚರಿಸು ಆಲೋಚನೆಯಲ್ಲಿದ್ದೇನೆ.
ಅಂದ ಹಾಗೆ ಎರಡುವರ್ಷಗಳ ಹಿಂದೆ ನಾನೂ ಫೆ-14 ರಂದು ಹಸಿರು ವಸ್ತ್ರ ಧರಿಸಿದ್ದೆ ಅಷ್ಟೇ ಅಲ್ಲ ಹಾಸಲೂ ಹೊದೆಯಲೂ ಹಸಿರು ಬಣ್ಣದ್ದೇ ಆಗಿತ್ತು.ಹೇಗೆ ಅಂದರೆ ಅದರ ಎರಡು ದಿನ ಮುಂಚೆ ನಾನು ಮಾರಣಾಂತಿಕವಾಗಿ ಅಪಘಾತಕ್ಕೊಳಗಾಗಿದ್ದೆ ಮುರಿದ ಬಲ ಬುಜದ ಮೂಳೆಗೆ ಸ್ಟೀಲ್ ಪ್ಲೇಟ್ ಹಾಕಿ ಮಲಗಿಸಿದ್ದರು ಪ್ರೆಮಿಗಳ ದಿನ ಸಾಯುವ ವರೆಗೆ ನೆನಪಿಟ್ಟು ಕೊಳ್ಳುವಷ್ಟು ನೋವು ಕೊಟ್ಟಿತ್ತು ಆ ಘಟನೆ. ಫೆ-14 ರಂದು ಹಗಲ ಪಾಳಿಯ ನರ್ಸ್ ಕಲ್ಪನ ಬಂದು ಹಾರ್ಟ್ ಬೀಟ್ ನೊಡಿದವಳು ’ಏನ್ರೀ ಇವತ್ ಹಾರ್ಟ್ ಬೀಟೇ ಇಲ್ಲ ಎಲ್ಲಿ ಕಳಿಸಿದೀರ ಎಂದು ತಮಾಷೆ ಮಾಡಿದ್ದಳು.
ಪ್ರೆಮಿಸಿದವರನ್ನ ಮದುವೆಯಾಗಿ ಸುಖದಿಂದ ಇರುವವರಿಗೂ,ಹಿರಿಯರ ಮಾತಿಗೆ ಕಟ್ಟು ಬಿದ್ದೋ,ಜಾತಿ ಅಂತಸ್ತುಗಳ ಅಂತರದಿಂದಲೋ ಪ್ರೇಮಕ್ಕೆ ಕೊಳ್ಳಿ ಇಟ್ಟು ಬೇರೆಯವರೊಟ್ಟಿಗೆ ಸುಖಿಗಳಾಗಿರುವವರಿಗೂ,ಪ್ರೇಮವನ್ನ ವ್ಯಕ್ತ ಪಡಿಸಲಾಗದೆ ಚಡಪಡಿಸುತ್ತಿರುವ ಅತೃಪ್ತ ಆತ್ಮಗಳಿಗೂ, ಬುದ್ದಿಬೆಳೆಯುವ ಮೋದಲೇ ಪ್ರೇಮ ಅಂಕುರಿಸಿ ಪ್ರವಾಹದ ವಿರುದ್ದ ಈಜುವ ಹಟಕ್ಕೆ ಬಿದ್ದು ಈಜುವ ಶಕ್ತಿ ಇಲ್ಲದೆ ಜೀವ ಉಳಿಸಿಕೊಳ್ಳಲು ಕೈಕಾಲು ಬಡಿಯುತ್ತಿರುವವರಿಗೂ,ವರ್ಷಕ್ಕೊಬ್ಬರಂತೆ ಪ್ರೇಮಿಗಳನ್ನ ಬದಲಾಯಿಸಿ ಹೊಸ ಹೊಸ gift ಗಳನ್ನ ಪಡೆಯುವ ಕ್ರಿಯಶೀಲೆಯರಿಗೂ,ನಿಜವಾದ ಪ್ರೇಮದ ಅರ್ಥ ತಿಳಿದು ಬದುಕುತ್ತಿರುವ ಆದರ್ಶ ಪ್ರೇಮಿಗಳಿಗೂ, ಮುಂದೆ ಪ್ರೇಮಿಸಬೇಕೆಂದಿರುವವರಿಗೂ,ಒಟ್ಟಿನಲ್ಲಿ ನನ್ನ ಬ್ಲೊಗ್ ಓದುಗರೆಲ್ಲರಿಗೂ Advanced valentine's day
ಎಷ್ಟೋ ವರ್ಷಗಳ ಹಿಂದೆ ನನ್ನ ಸ್ನೇಹಿತೆಯೊಬ್ಬಳನ್ನ ರೇಗಿಸುವ ಸಲುವಾಗಿ ಒಂದು ಕೆಟ್ಟ ಕವಿತೆಯನ್ನ ಕಟ್ಟಿ ಹೇಳಿದ್ದೆ ಈಗ ಅದನ್ನ ಇಲ್ಲಿ ಬರೆದು ಮೂರ್ಖತನದ ಪರಮಾವದಿ ಪಲುಪುವ ಪ್ರಯತ್ನ ಮಾಡುತ್ತಿದ್ದೇನೆ.(ವಿವರಣೆ ನನ್ನ ಎರಡನೆಯ ಬ್ಲೊಗ್ ನಲ್ಲಿದೆ)
"ನೀನಿಲ್ಲದಾ ಈ ಬಾಳು
ಬೀದಿನಾಯಿಗಿಂತ ಕೀಳು||
ಯಾರಲ್ಲಿ ಹೇಳಿಕೊಳ್ಳಲಿ ಈ ನನ್ನ ಗೋಳು|
ಯಾರನ್ನೂ ಬಿಡದ ಪ್ರೇಮದ ಗೀಳು||
ನಿನ್ನ ಪ್ರೀತಿಯಲ್ಲಿ ಹುಚ್ಚನಾಗುವ ಮೊದಲು
ದಾರಿಹೋಕರ ಮೇಲೆ ಕಲ್ದಾಳಿ ಎಸಗುವ ಮೊದಲು
ಅಂಗಿ ಗುಂಡಿಗಳನ್ನೆಲ್ಲ ಪಟಪಟನೆ ಹರಿದು ಕೊಳ್ಳುವ ಮೊದಲು
ತಲೆ ಕೆದರಿಕೊಂಡು ಹ್ಯಾತ್ನ ಗುಟ್ಟುವ ಮೊದಲು
ನನ್ನ ಪವಿತ್ರ ಪ್ರೀತಿಯನ್ನ ಅರ್ಥ ಮಾಡಿಕೊ
ನನ್ನ ಪುಟ್ಟ ಕಾಣಿಕೆಯನ್ನ ಒಪ್ಪಿಸಿಕೊ
ನನ್ನನ್ನೊಮ್ಮೆ ಬಾಚಿ ತಬ್ಬಿಕೊ.

Comments

Ittigecement said…
ಮೂರ್ತಿ...

ಇತ್ತೀಚೆಗೆ ಚಂದವಾಗಿ ಬರೆಯುತ್ತಿರುವೆ ಮಾರಾಯಾ...!

ಪಳಗುತ್ತಿರುವೆ...

ನನಗೆ ಎಲ್ಲದಕ್ಕಿಂತ...
ಕವನ ಬಹಳ .. ಬಹಳ ಇಷ್ಟವಾಯಿತು...

ನಿನಗೂ ಪ್ರೇಮಿಗಳ ದಿನದ" ಶುಭಾಶಯ ಹೇಳಲೇ..?

ಪ್ರೇಮಿ ಸಿಕ್ಕಿದ ವಿಷಯ ಹೇಳು ಮಾರಾಯಾ..!

ಚಂದವಾದ ಲೆಖನ..

ಅಭಿನಂದನೆಗಳು...
ಧನ್ಯವಾದಗಳು ಪ್ರಕಾಶಣ್ನ,
ಮನಸು said…
ಚೆನ್ನಾಗಿದೆ ನಿಮ್ಮ ಬರಹ........ ಪ್ರೇಮಿ ಇದ್ದರೆ ನಿಮಗೆ ಶುಭಾಶಯ ತಿಳಿಸುತ್ತೇನೆ, ಬೇಗ ಹುಡುಕಿ ಆಮೇಲೆ ಮಿಕ್ಕಿದ್ದು ಹ ಹ .......
Unknown said…
murthy lekhana tumbaa channagi mudi bandu...Best of luck!! mundina sari valentine's day grand aagi celebrate mado hage agli!
ಜಯಕ್ಕ ಧನ್ಯವಾದಗಳು,
ನಿಮ್ಮ ಆಶೀರ್ವಾದ ನನ್ನ ಬೆರೆಳ ಶಕ್ತಿಯಾಗಲಿ.
ನಿಮ್ಮ ಹರಕೆ ನನ್ನ ದಡ ಸೇರಿಸಲಿ.
ನಿಮ್ಮ ಪ್ರೀತಿಯ ಕಿವಿಹಿಂಡುವಿಕೆ ಸದಾ ಇರಲಿ.
Unknown said…
Moorthy anna college days ondhe alla, yiglu saha Valentine's andhe yeno onthara. Life alli first time Valentine's day na college aldhe horagade celeberate maadtha yidhi..But nee bardhidhu noodire experience yildhe bardhidhu antha nambadhu kasta. Nangeno doubt.......yenaru viseasha??????
Super murthy, nice to read, keep wiritng
This comment has been removed by the author.
Nannu,
naanaa reethiya premigalanu chennagi thilisidhiya......bega ninannu preethisuva amarapremi sigali...
Amarapremigalige feb 14th mathra alla varusha ella valentines day ne...
Good writing....keep it up

Popular posts from this blog

ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ ! :)

ಹುಚ್ಚು ಕೋಡಿ ಮನಸು 2

Farmville Application in Facebook