ಮಿ||ಬಕರ
"ಎಲ್ಲಾ ಬಿಟ್ಟ ಮಗ ಬಂಗಿನೆಟ್ಟ" ಅನ್ನೋ ಹಾಗೆ ಫಿನಾನ್ಸಿಯಲ್ ಇನ್ಫ್ಲೇಷನ್ ನಿಂದ ಕೆಲಸ ಕಳಕೊಂಡು ಸರ್ಕಸ್ ಕಂಪನಿ ಸೇರಿಕೊಂಡ ಅಂದುಕೊಂಡಿರ? ಅಲ್ಲ ಮೇಲಿನ ಫೋಟೊ ಸರ್ಕಸ್ ನೊಡಲು ಹೊಗಿ ಜೊಕರ್ ಗಳಿಂದ ಬಕರಾ ಆಗಿದ್ದು.
ಜೀವನದಲ್ಲಿ ಇಲ್ಲಿಯ ವರೆಗೆ ಬೇರೆಯವರಿಗೆ ತರಾವರೀ ತಮಾಷೆಯ ಟೋಪಿ ಹಾಕುತ್ತಿದ್ದ ನಾನು ಖತಾರ್ ಗೆ ಬಂದು ಬಣ್ಣ ಬಣ್ಣದ ಟೋಪಿ ಹಾಕಿಸಿಕೊಂಡ ಕಥೆ ಹೇಳುವ ಮೊದಲು ನಾ ಹಾಕಿದ ತರಾವರಿ ಟೋಪಿಗಳ ಬಗ್ಗೆ ಹೇಳಬೇಕಾಗಿದೆ.ಈ ಹಿಂದೆ ಹುಚ್ಚು ಕೋಳಿ ಮನಸು ಬ್ಲೊಗ್ ನಲ್ಲಿ ಬರೆದಂತೆ ನಾ ಫೋನ್ ಮಾಡಿ ಜನರನ್ನ ಬಕರ ಮಾಡಿದ್ದು ಲೆಕ್ಕವಿಲ್ಲ. ಮಳಯಾಳಿ ಪೀಟರ್ ನ ಹಾಗೆ ಮಾತನಾಡಿ ಒಬ್ಬರನ್ನ,ಚಿಟ್ಟಾಣಿ ಅಜ್ಜನ ಸ್ವರ ತೆಗೆದು ಒಬ್ಬರನ್ನ, ಕೋಟ ಶಿವಾನಂದನಾಗಿ ಇನ್ನೊಬ್ಬರನ್ನ,ಹೋಂಡ ಶೋರೂಂ ನವನ ಸ್ವರದಲ್ಲಿ ಇನ್ನೊಬ್ಬರನ್ನ, ಹೀಗೆ ಪಟ್ಟಿ ಬೆಳೆಯುತ್ತದೆ. ಆದರೆ ಕಾಲಚಕ್ರ ತಿರುಗಿ ನಾನು 25 ಜನರ ಕಿಕ್ಕಿರಿದ ಜನಸ್ತೋಮದ ಮದ್ಯೆ ಕುರಿ ಆಗಲು ಬಹಳ ದಿನ ಹಿಡಿಯಲೇ ಇಲ್ಲ.
ನಡೆದದ್ದು ಇಷ್ಟೆ......... ಮೊನ್ನೆ ಗುರುವಾರ ಕತಾರ್ ನ ಹಯಾತ್ ಪ್ಲಾಝಾ ದಲ್ಲಿ ರಶ್ಯನ್ ತಂಡದವರಿಂದ ಸರ್ಕಸ್ ಇದೆ ಎಂದು ತಿಳಿದು ಬಂತು ಶುಕ್ರವಾರ ವಾರದ ರಜ ಆಗಿದ್ದರಿಂದ ರಾತ್ರಿ 8 ಗಂಟೆಯ ಶೋ ಗೆ ಹೋಗಿ ಕುಳಿತೆವು ರಶ್ಯನ್ ಸುಂದರಿಯರು ಸೂರಿನಿಂದ ಇಳಿಬಿಟ್ಟ ಬಟ್ಟೆಗೆ ಜೋತುಬಿದ್ದು ಅದನ್ನ ಮೈಮೇಲೆ ಸುತ್ತಿಕೊಳ್ಳುತ್ತಾ ಮೇಲೆ ಹೋಗಿ ಒಮ್ಮೆಲೇ ಹಗ್ಗವನ್ನ ಬಿಟ್ಟು ತಿರುಗುತ್ತಾ ನೆಲದ ಹತ್ತಿರದ ವರೆಗೂ ಬಂದು ನಮ್ಮ ಎದೆಯನ್ನ ಝಲ್ ಎನಿಸುತ್ತಾ ತಮ್ಮ ಸುಂದರ ಬಳುಕುವ ಸಿಂಹಕಟಿ ಯಿಂದ ನಾನಾರೀತಿಯ ಸರ್ಕಸ್ ಮಾಡುತ್ತಾ ನಮ್ಮನ್ನ ಮೈಮರೆಯುವಂತೆ ಮಾಡಿದ್ದರು. ಈ ತನ್ಮದ್ಯೆ ಅವರು ಮುಂದಿನ item ಗೆ ತಾಯಾರಾಗುವ ವರೆಗೆ ಜೋಕರಿ ಗಳಿಬ್ಬರು ಬಂದು ತಮ್ಮ ಚೇಷ್ಟೆ ಗಳಿಂದ ನಮ್ಮನ್ನು ತಾರಕದಲ್ಲಿ ನಗುವಂತೆ ಮಾಡುತ್ತಿದ್ದರು.ಮದ್ಯೆ ಮದ್ಯೆ ಪ್ರೇಕ್ಷಕರ ಬದಿಯಿಂದ ಮಕ್ಕಳನ್ನ ಕರೆದು ಅವರಿಟ್ಟಿಗೆ ಮ್ಯಾಜಿಕ್ ಗಳನ್ನ ಮಾಡಿ ರಂಜಿಸುತ್ತಿದ್ದರು.
ಅದರಲ್ಲಿ ಒಂದು ಹಗ್ಗ ಎಳೆದು ಹಿಡಿಯುವ Item ಗೆ ಸ್ವಲ್ಪ ದೊಡ್ದವರನ್ನ ಬಲಿಷ್ಟರನ್ನ ಕರೆದರು ಸಭೆಯ ಮದ್ಯದಿಂದ ಒಬ್ಬ ಅರಬ್ಬಿ ಬಂದು ನಿಂತ ಇನ್ನೊಂದು ಕಡೆ ಹಗ್ಗ ಹಿಡಿಯಲು ಯಾರೂ ಹೋಗಲು ತಯಾರಾಗದ್ದರಿಂದ ಅನಿವಾರ್ಯವಾಗಿ ನಾನು ಹೋಗಿ ನಿಲ್ಲಬೇಕಾಯಿತು. ಮೊದಲೇ ಬಲಿಷ್ಟರನ್ನ ಕರೆಯುತ್ತಿದ್ದಾರೆ ಅಲ್ಲದೇ ಎದುರು ಬದಿ ನಿಂತವ ದನತಿನ್ನುವ ಧಡೂತಿ ಅರಬ್ಬಿ ನಾನು ತಡೆದೇನಾ ಎಂದ ಅನುಮಾನದಿಂದಲೇ ಹೊಗಿ ಹಗ್ಗಹಿಡಿದದ್ದಾಯಿತು.ನಮ್ಮನ್ನ ಹಗ್ಗ ಎಳೆದು ಹಿಡಿಯುವಂತೆ ಹೇಳಿದ ಜೋಕರಿಗಳಿಗೆ ನಮ್ಮ ಶಕ್ತಿ ಸಾಲದು ಎನಿಸಿತೋ ಏನೋ ಎಂಬಂತೆ ನಟಿಸಿ ಇನ್ನಿಬ್ಬರನ್ನ ಕರೆದರು ಆಗ ಒಂದು ಕಡೆಯಿಂದ ಶ್ಯಾಮ ಬಂದು ನಿಂತ ನನ್ನ ಬದಿ ಒಬ್ಬ ನೇಪಾಳಿಯನ್ನ ಎಳೆತಂದಾಯಿತು.
ಹಿಂದೊಮ್ಮೆ ಇದೇ ರೀತಿ ನನ್ನ ಸ್ನೇಹಿತನೊಬ್ಬ ಅವನ ಮಿತ್ರನ ಫೋನ್ ನಿಂದ ಒಂದು prerecorded ಹೆಣ್ಣಿನ ಧ್ವನಿಯನ್ನ ಹಾಕಿ ನನ್ನನ್ನ ಪೆಗ್ಗು ಬೀಳಿಸಿದ್ದ.ಅವತ್ತು ಬೆಳಿಗ್ಗೆ ಆಫೀಸಿಗೆ ಹೊಗುವ ಗಡಿಬಿಡಿಯಲ್ಲಿ ತಿಂಡಿ ತಿನ್ನುತ್ತಿದ್ದ ನಾನು ಕಾಲ್ ಬಂದ ತಕ್ಷಣ ಸ್ಪೀಕರ್ ಫೋನ್ ಆನ್ ಮಾಡಿ ಮೇಜಿನ ಮೇಲಿಟ್ಟೆ.ಆ ಕಡೆಯಿಂದ ಹೇಗಿದ್ದೀರ ಏನು ನನ್ನ ಮರೆತೇಬಿಟ್ಟಿರಾ ಎಂದೆಲ್ಲಾ ಮಾತನಾಡ ತೊಡಗಿದಾಗ ಅಮ್ಮ ನನ್ನನ್ನ ಅಪಾರಾಧಿಯಂತೆ ಗುರಾಯಿಸುತ್ತಿದ್ದಳು. ಅವತ್ತು ಅಮ್ಮನ ಎದುರು ನನ್ನ ಅವಸ್ಥೆ ಯಾರಿಗೂ ಬೇಡದ ಸ್ಥಿತಿ ತಲಿಪಿತ್ತು.
ನನ್ನಿಂದ ಬಕರಾ ಆದ ಯಾರ ಶಾಪವೋ ಏನೋ ನಾನೂ ಆಗಾಗ ನಾಮ ಬಳಿದ ಕುರಿಯಾಗುತ್ತೇನೆ.
ಹೀಗೆ ಸಾವಿರಾರು ಬಕರಾ ಮಾಡುವ strategy ಗಳು ನನ್ನಲ್ಲೇ ಇದ್ದರೂ, TV ಗಳಲ್ಲಿ ಇಂಥಹಾ ನೂರಾರು ಸನ್ನಿವೇಶಗಳನ್ನ ನೋಡಿದ್ದರೂ ಆ ಕ್ಷಣದಲ್ಲಿ ಏನೂ ತೋಚದೇ ಬಕರಾ ಅಗಿದ್ದನ್ನ ಪ್ರಾಮಾಣಿಕ ವಾಗಿ ಒಪ್ಪಿಕೊಳ್ಳಬೇಕು.
(ಬೇರೆಯವರಿಂದ ಗೊತ್ತಾದರೆ ಹೋಗುವ ಮರ್ಯಾದೆಯ ಪ್ರಮಾಣ ಹಚ್ಚು ಆದ್ದರಿಂದ ನಾನೇ ಮೊದಲು ಹೇಳಿಕೊಂಡು ಬಿಟ್ಟಿದ್ದೇನೆ ಹಿ ಹಿ ಹಿ)
Comments
ತುಂಬಾ ರಸವತ್ತಾಗಿ ಬರೆದಿದ್ದೀರಿ...
ನೀವು ಅನುಭವಿಸಿದ ಆಕ್ಷಣಗಳನ್ನು..
ಆ ಪ್ಲಾಝಾ.. ತುಂಬಾ ದುಬಾರಿಯಲ್ಲವೇ?
ನಾನು ಒಮ್ಮೆ ಹೋಗಿದ್ದ ನೆನಪು..
ನಿಮ್ಮ ಬ್ಲಾಗಿನಲ್ಲಿ.. ಕತಾರ್ ದೇಶದ ಪರಿಚಯ ಮಾಡಿಕೊಡಿ..
ದೋಹಾ, ರಾಸಲಾಫಾನ್.. ಬೀಚು, ಸ್ಟೇಡಿಯಮ್.. ಇತ್ಯಾದಿ..
ಫೋಟೊ ಸಂಗಡ..
ಸುಂದರವಾದ ದೇಶ ಅದು..
ಚಂದವಾದ ಲೇಖನ..
ವಂದನೆಗಳು..
ನೀವು ಎಲ್ಲರನ್ನು ಬಕರ ಮಾಡಿದ ವಿಚಾರಗಳು ಚೆನ್ನಾಗಿವೆ...ಸರ್ಕಸ್ ಜೋಕರ್ ಕತೆ ಚೆನ್ನಾಗಿದೆ.....ಮತ್ತು ನಿಮ್ಮ ಅನುಮತಿಯಿಲ್ಲದೆ ನಿಮ್ಮ ಹಿಂಬಾಲಿಸುತ್ತಿದ್ದೇನೆ...ಥ್ಯಾಂಕ್ಸ್....
ನನ್ನ ಬ್ಲೊಗೆಂಬ ಕಸದ ಬುಟ್ಟಿಗೆ ಸುಸ್ವಾಗತ,
ನನ್ನ ಬ್ಲೊಗ್ ಟೈಟಲ್ ಮತ್ತು ಪೊಸ್ಟ್ ಟೈಟಲ್ ಎರಡೂ ಅಂಥದ್ದೆ ಆಗಿದ್ದರಿಂದ ತೊಂದರೆ ಇಲ್ಲ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಪ್ರಕಾಶಣ್ಣ,
ಆ ಪ್ಲಾಜ಼ಾ ಕೊಳ್ಳುವವರಿಗೆ ಮಾತ್ರ ದುಬಾರಿ ಹಿ ಹಿ ಹಿ
ದೋಹಾ ದೇಶದ ಪರಿಚಯ ಲೇಖನದ ಬಗ್ಗೆ ಯೋಚಿಸುವಂತಿದೆ ಧನ್ಯವಾದಗಳು.
ಶಿವು ಸರ್,
ಹಿಂಬಾಲಕರಲ್ಲ ಮಾರ್ಗದರ್ಶಕರು ಎಂದು ಮೊದಲೇ ಹೇಳಿದ್ದೇನೆ.
ನಿಮ್ಮಂತವರ ವಸ್ತುನಿಷ್ಟ ಅಬಿಪ್ರಾಯಗಳು ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ,ತಿದ್ದಿಕೊಳ್ಳುವ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು.
ನೀವು ಬಕರ ಆದ ಕಥೆ ಬಹಳ ಸ್ವಾರಸ್ಯಕರವಾಗಿದೆ. ಹೀಗೆ ನಿಮ್ಮ ಬಕರ ಕಥೆ ಮುಂದುವರಿಸಿ,
ಒಳ್ಳೆಯ ಬರಹ
ಮಂಜಣ್ಣನಿಗೆ ಅವತ್ತೇ ಕೇಳಿದ್ದೆ ಸರ್ಕಸ್ಗೆ ಎಲ್ಲ ಯಾವಾಗ ಸೇರಿದ್ರಿ ಅಂತ.... ಇನ್ನು ಅಲ್ಲೋಗಿ ಬಕರ ಆಗಿದ್ದು ಬಹಳನೇ ಚೆನ್ನಾಗಿದೆ...
ಹ ಹ ಹ ಹ ಬಕರ ನಾಣು.......
lekhana thumba thumba chennagide...
ಧನ್ಯವಾದಗಳು.
ಸುಗುಣಕ್ಕ,
ಧನ್ಯವಾದಗಳು.
ನವ್ಯ,
"ಮಾಡಿದ್ದುಣ್ಣೋ ಮಹರಾಯ"
ಸೋಮಣ್ಣ,
ನನ್ನ ಬ್ಲೋಗಿಗೆ ಸುಸ್ವಾಗತ,ಪ್ರತಿಕ್ರಿಯೆಗೆ ಧನ್ಯವಾದಗಳು.
ಹೀಗೇ ಬರುತ್ತಿರಿ,ಬರೆಯುತ್ತಿರಿ.
ರಸವತ್ತಾಗಿದೆ ನಿಮ್ಮ ಬರಹ...
ನನಗೂ ಪೂರ್ತಿ ಓದುವವರೆಗೂ ಆ ಜೋಕರ್ ಗಳು ಏನು ಮಾಡಬಹುದೆಂದು ಗೊತ್ತಾಗಲಿಲ್ಲ. ನಿಮ್ಮ ಜೊತೆ ನಾನೂ ಬಕರ ಆದೆ...
ಎಲ್ಲಾ ಹಬ್ಬಕೂ ಒಬ್ಬಟ್ಟು ಮಾಡೋಕೆ ಹಾಗೋಲ್ಲ .....ಚೆಂದದ ಲೇಖನ ...ಪರವಾಗಿಲ್ಲ ಬುಧಿವಂತರು ಬಕರ ಹಾಗ್ತಾರೆ ...