ಕನಸಿನ ಬೆಲೆ
ಮುಕುಂದರಾಯರು ಆಸ್ಪತ್ರೆಯ ICU ನಲ್ಲಿ ತಮ್ಮ ಕೊನೆಯ ದಿನಗಳನ್ನ ಕಳೆಯುತ್ತಿದ್ದಾರೆ. ತಾವು ವಾಸವಾಗಿರುವ ಅನಾಥಾಶ್ರಮದ ಆಯಾ ಚಂದ್ರಿಕ ಹೊರಗೆ ಆತಂಕದಿಂದ ಕುಳಿತಿದ್ದಾಳೆ. ಪಾಳಿಯ ನರ್ಸ್ ಗಳು ತಮ್ಮ ದಿನನಿತ್ಯದ ಕೆಲಸದಲ್ಲಿ ನಿರತರಾಗಿದ್ದಾರೆ.ಡಾಕ್ಟರರ ತಂಡ ದಿನಕ್ಕೆರಡು ಬಾರಿ ಬೇಟಿನೀಡಿ ತಮ್ಮತಮ್ಮಲ್ಲೇ ಗುಸುಗುಟ್ಟಿಕೊಂಡು ಹೊರನಡೆಯುತ್ತಾರೆ.ಪರಿಸ್ಥಿತಿಯನ್ನ ಅರ್ಥಮಾಡಿಕೊಳ್ಳದಷ್ಟು ದಡ್ಡರಲ್ಲ ಮುಕುಂದರಾಯರು ಆದರೆ ಅವರ ಆ ನಿಸ್ಸಹಾಯಕ ಸ್ತಿತಿ ಅವರನ್ನ ಮತ್ತೂ ಸಾವಿನ ಬಳಿ ಎಳೆದೊಯ್ಯುತ್ತಿದೆ ಮನಸ್ಸಿನ ಬಂಡೆಗೆ ಹಳೆಯ ನೆನಪುಗಳೆಂಬ ಅಲೆಗಳು ಪುಂಕಾನುಪುಂಕವಾಗಿ ಅಪ್ಪಳಿಸುತ್ತಿವೆ.ಕಣ್ಣಲ್ಲಿ ನೀರು ಧಾರೆಯಾಗುತ್ತಿದೆ.
ಹಯವದನರಾಯರು ತುಮಕೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಮೊದಲನೇ ದರ್ಜೆಯ ಕ್ಲರ್ಕ್. ಪತ್ನಿ ಪ್ರಿಯಮ್ವಧ ಹಾಗು ಒಬ್ಬನೇ ಮಗ ಮುಕುಂದ ನೊಂದಿಗೆ ತುಮಕೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ.ಯಾವತ್ತೂ ದುರಾಸೆ ಪಡದ ಸಜ್ಜನರಾದ ಹಯವದನರಾಯರಿಗೆ ಬರುವ ಸರ್ಕಾರೀ ಸಂಬಳವಷ್ಟೇ ಜೀವನಾಧಾರ.ತಮ್ಮ ಪ್ರಾಯದಲ್ಲಿ ಕೊಂಡ ಹೀರೋ ಸೈಕಲ್ಲಿಗೆ ಎರಡು ವರ್ಶಕ್ಕೊಮ್ಮೆ ಟಯರ್ ಬದಲಿಸುತ್ತಾ ಸುಮಾರು 4 ಮೈಲಿಗಳಷ್ಟು ದೂರದ ತಮ್ಮ ಕಛೇರಿಗೆ ಹೋಗಿಬರುತ್ತಿದ್ದರು.ಕಟ್ಟುನಿಟ್ಟಿನ ಜೀವನ ರೂಡಿಸಿಕೊಂಡು ಊರಿನವರಿಗೆಲ್ಲ ಆದರ್ಶವ್ಯಕ್ತಿ ಯಾಗಿದ್ದರು.
ಮಗ ಮುಕುಂದನ ಇಂಜಿನಿಯರಿಂಗ್ ಗಾಗಿ ಅವನು ಹುಟ್ಟಿದಾಗಿನಿಂದಲೇ LIC ಕಟ್ಟುತ್ತಿದ್ದರು ಅವರ ಆಸೆಯಂತೆ ಮುಕುಂದ PUC ಯಲ್ಲಿ ಒಳ್ಳೆಯ ಫಲಿತಾಂಶ ಗಳಿಸಿ ಒಳ್ಳೆಯ ಕಾಲೇಜಿನಲ್ಲಿ BE ಸೀಟನ್ನೂ ಪಡೆದುಕೊಂಡ.ತಂದೆಯಂತೆ ಮುಕುಂದನೂ ಶ್ರದ್ದೆಯನ್ನ ಮೈಗೂಡಿಸಿಕೊಂಡು ಓದಿ BE ಮುಗಿಸಿದ.ಅವನ ಅಂತಿಮ ಪಲಿತಾಂಶ ಬರುವುದರೊಳಗೇ ಅವನಿಗೆ ಆಸ್ತ್ರೇಲಿಯದ ಕಂಪನಿಯೊಂದರಲ್ಲಿ ಕೆಲಸವೂ ಸಿಕ್ಕಿತ್ತು.
ಬಣ್ಣಬಣ್ಣದ ಕನಸು ಕಾಣುವ ವಯಸ್ಸಿನ ಮಗನ ಮಹತ್ವಾಕಾಂಶೆಯ ಮುಂದೆ ತಂದೆತಾಯಿಯರಿಗೆ ಮಗ ದೂರ ಹೋಗುವುದನ್ನು ತಡೆಯಲು ಆಗಲೇ ಇಲ್ಲ.
ಇಲ್ಲಿ ಜೀವನವಿಡೀ ಮೈ ಸವೆಸಿದ್ದಕ್ಕೆ ಸಾದಿಸಲಾದ್ದು ತುಮಕೂರಿನ ನ್ಯಾಯಾಂಗ ಬಡಾವಣೆಯಲ್ಲಿ ಒಂದು 30X40ರ ಸೈಟನ್ನ, ಮಗನ ಕಾಲಕ್ಕಾದರೂ ಅದರಲ್ಲೊಂದು ಗುಡಿಸಲು ಕಟ್ಟುವಂತಾಗಲಿ ಎನ್ನುವುದು ಹಯವದನರಾಯರ ಆಕಾಂಶೆಯಾಗಿತ್ತು.ಕಷ್ಟಪಟ್ಟು ಓದಿದ ಮಗನಿಗೆ ಅವನ ಯೋಗ್ಯತೆಗೆ ತಕ್ಕ ಸಂಬಳ ಸಿಗಬೇಕಾದರೆ ವಿದೇಶಕ್ಕೆ ಹೋಗುವುದೇ ಸರಿ ಎಂದು ತಮ್ಮತಮ್ಮಲ್ಲೇ ಸಮಾಧಾನ ಪಟ್ಟುಕೊಂಡು ಒಲ್ಲದ ಮನಸ್ಸಿನಲ್ಲಿಯೇ ಕಳುಹಿಸಲು ಮುಂದಾದರು. ಕೇವಲ ಎರಡು ವರ್ಷದ ಗುತ್ತಿಗೆ ಯಾದ್ದರಿಂದ ಅಷ್ಟರಲ್ಲಿ ಸ್ವಲ್ಪ ಹಣ ಉಳಿಸಿಕೊಂಡು ಹಿಂತಿರುಗಿ ಭಾರತದಲ್ಲೇ ನೆಲೆಯೂರುವ ಭರವಸೆ ಕೊಟ್ಟು ಮುಕುಂದ ಹೊರಟ.
ಸಾಫ್ಟ್ ವೇರ್ ಕ್ಷೇತ್ರದಲ್ಲಿ ಆಗತಾನೆ ಕ್ರಾಂತಿ ಆರಂಭವಾಗಿತ್ತು ಆ ಕ್ಷೇತ್ರದಲ್ಲಿ ಅಷ್ಟಾಗಿ ಇಂಜಿನಿಯರ್ ಗಳೂ ಇರದಿರುವ ಕಾರಣಕ್ಕಾಗಿ ಮುಕುಂದನಿಗೆ ಒಳ್ಳೆಯ ಸಂಬಳ ಮನೆ ಕಾರು ಹೀಗೆ ಎಲ್ಲ ತರದ ಸೌಲಬ್ಯಗಳನ್ನ ಕೊಟ್ಟು ಅವನಿಗೂ ಗೊತ್ತಾಗದಂತೆ ಆಸ್ಟ್ರೇಲಿಯ ಒಬ್ಬ ಭಾರತೀಯನನ್ನ ತನ್ನ ವಶಕ್ಕೆ ತೆಗೆದು ಕೊಂಡೇ ಬಿಟ್ಟಿತ್ತು.
ಇತ್ತ ಹಯವದನರಾಯರು ತಮ್ಮ ಸರ್ಕಾರೀಸೇವೆಯಿಂದ ನಿವೃತ್ತರಾಗಿ ಉಳಿಸಿದ ಅಷ್ಟು ಇಷ್ಟು ಹಣದಲ್ಲಿ ತಮ್ಮ ಸೈಟಿನಲ್ಲಿ ಒಂದು ಸಿಂಗಲ್ ಬೆಡ್ ರೂಮಿನ ಮನೆ ಕಟ್ಟಿ ಕೊಂಡರು.ಅಷ್ಟರಲ್ಲಿ ಮಡದಿ ಪ್ರಿಯಮ್ವಧ ಹಟಾತ್ತನೆ ಹೃದಯಾಗಾತದಿಂದ ತೀರಿಹೋದರು. ಮನೆಯ ಕಿಟಕಿಯಿಂದ ಹಿಡಿದು ಬಚ್ಚಲ ಮನೆಯ ನಲ್ಲಿಯ ವರೆಗೆ ಮುತುವರ್ಜಿಯಿಂದ ಆಯ್ಕೆಮಾಡಿ ನಿಂತು ತಮಗೆ ಬೇಕಾದಂತೆ ಕಟ್ಟಿಕೊಂಡ ಮನೆಯ ಗೃಹಪ್ರವೇಶ ದಲ್ಲಿ ಸಂಭ್ರಮಿಸುವ ಭಾಗ್ಯ ಆ ತಾಯಿಗೆ ಇಲ್ಲವಾಗಿತ್ತು. ತಾಯಿಯ ಅಂತಿಮದರ್ಶನಕ್ಕೂ ಬರದಷ್ಟು ಬರಲಾಗದಷ್ಟು ಕರ್ತವ್ಯನಿಷ್ಠೆ, ಕೆಲಸದ ಒತ್ತಡ ಮುಕುಂದರಾಯರಿಗೆ ಇತ್ತು ಆದರೆ ತಾಯಿಯ ಅಂತಿಮವಿಧಿಗಾಗಿ ಹಣಕಳುಹಿಸುವುದನ್ನು ಮರೆಯಲಿಲ್ಲ.
ಶ್ರೀಮಂತ ದೇಶದ ಐಷೋರಾಮೀ ವಿಲ್ಲಾದಲ್ಲಿ ಬದುಕುವ ಮುಕುಂದನಿಗೆ ಅಪ್ಪ ಕಷ್ಟಪಟ್ಟು ಉಳಿಸಿದ ಹಣದಲ್ಲಿ ಕಟ್ಟಿದ ಸ್ವಂತ ಮನೆಯ ಗೃಹಪ್ರವೇಶ ದಲ್ಲಿ ಪಾಲ್ಗೊಳ್ಲಬೇಕೆನ್ನುವುದು ಅನಿವಾರ್ಯ ಎನಿಸಲೇ ಇಲ್ಲ.
ಮುಕುಂದನಿಗೆ ಜೀವನ ಒಂದು ಹಂತಕ್ಕೆ ಬಂದಾಯಿತು ಇನ್ನು ಒಂದು ಮದುವೆ ಆದರೂ ಆಗಬಹುದು ಎನಿಸುವಾಗ ಕಂಡಿದ್ದು ತನ್ನ ಸಹೋದ್ಯೋಗಿ ಕ್ಲಾರಾ. ಅವಳಿಗೂ, ಅವಳ ಮನೆಯವರಿಗೂ ಬುದ್ದಿವಂತ, ವಿದ್ಯಾವಂತ ಮತ್ತು ಹಣವಂತ ಮುಕುಂದ ಒಪ್ಪಿಗೆಯಾದ್ದರಲ್ಲಿ ಆಶ್ಚರ್ಯವಿಲ್ಲ.
ಆದರೆ ಜೀವನ ಅತಿಮುಖ್ಯ ನಿರ್ಧಾರ ತೆಗೆದು ಕೊಳ್ಳುವಾಗ ಯಾರಿಗೂ ಮುಕುಂದನ ಏಳಿಗೆಗೆ ಪ್ರತ್ಯಕ್ಷ ಕಾರಣರಾದ ಹಯವದನರಾಯರ ನೆನಪಾಗದೇ ಇದ್ದದ್ದು ಮಾತ್ರ ಆಶ್ಚರ್ಯ. ಮಾತುಕಥೆ ನಡೆದ ಮುಂದಿನ ಭಾನುವಾರವೇ ಚರ್ಚಿನಲ್ಲಿ ಶ್ವೇತವಸ್ತ್ರದಾರಿ ಜೋಡಿಯ ಉಂಗುರ ಬದಲಾವಣೆ ಪ್ರಕ್ರಿಯೆ ನಡೆದೇ ಹೋಯಿತು.
ಇತ್ತ ದೂರವಾಣಿಯ ಮೂಲಕ ವಿಷಯವನ್ನೆಲ್ಲ ತಿಳಿದುಕೊಂಡ ರಾಯರ ಮನಸ್ಸಿನ ದುಗುಡ ತನ್ನ ಜೀವನದ ಅತೀ ಸಂತೋಷದ ದಿನ ಅನುಭವಿಸುತ್ತಿರುವ ಮುಕುಂದನಿಗೆ ಎಲ್ಲಿ ಕಾಣಿಸಬೇಕು?
ಜೀವನದ ಸೂಕ್ಷ್ಮವನ್ನ ಅರ್ಥಮಾಡಿಕೊಂಡ ಹಯವದನ ರಾಯರು ಆದಷ್ಟು ತಮ್ಮ ಸಮಾನದುಃಖಿ ಮಿತ್ರರೊಟ್ಟಿಗೆ ಕೊನೆಯದಿನ ಕಳೆಯುವ ನಿರ್ಧಾರ ದಲ್ಲಿ ದಿನಕಳೆಯ ತೊಡಗಿದರು.ಅಷ್ಟರಲ್ಲಿ ಕುಲದೀಪಕನಿಂದ ತಾನು ಊರಿಗೆ ಬರುತ್ತಿರುವ ಸುದ್ದಿ ಬಂತು.ಇಷ್ಟು ವರ್ಷಗಳ ನಂತರ ತನ್ನ ಹೆಂಡತಿ ಮಕ್ಕಳೊಟ್ಟಿಗೆ ಮರಳುತ್ತಿರುವ ಸುದ್ದಿ ರಾಯರಿಗೆ ಸಂತೋಷ ತಂದರೂ ಈ ಸುಖ ಕೇವಲ ಒಂದೋ ಎರಡೋ ತಿಂಗಳಿನದ್ದು ಎಂದು ತಿಳಿದಾಗ ನಿರ್ಲಿಪ್ತರಾದರು.
ಬಂದ ಮಗ,ಸೊಸೆ,ಮೊಮ್ಮಕ್ಕಳನ್ನ ಪ್ರೀತಿಯಿಂದ ನೋಡಿಕೊಂಡು ಅವರಿಂದ ಏನನ್ನೂ ನಿರೀಕ್ಷಿಸದೆ ನಗುನಗುತ್ತಾ ಕಳಿಸಿಕೊಟ್ಟರು. ಅದೇಕೋ ಮಗನನ್ನ ಏರ್ ಪೋರ್ಟ್ ವರೆಗೆ ಬಿಟ್ಟುಬಂದ ರಾಯರಿಗೆ ಒಂಟಿತನ ಬಹಳವಾಗಿ ಕಾಡಿತ್ತು.ಮರೀಚಿಕೆಯಾದ ಮಗ,ಸೊಸೆ,ಮಮ್ಮಕ್ಕಳು ಬಹಳ ಕಾಡಿದರು.ಅರ್ದದಾರಿಯಲ್ಲಿ ಅಗಲಿ ಸ್ವಾರ್ತಿಯಾದ ಮಡದಿ ನೆನಪಾದಳು ಎದೆನೋವಿನ ಅನುಭವವಾಯಿತು.ಯಾವತ್ತೂ ಯಾವುದೇ ಅವಲಂಬನೆ ಇಲ್ಲದೆ ಬದುಕಿದ ಸ್ವಾಭಿಮಾನಿಗೆ ಅದೇರಾತ್ರಿ ಕೊನೆಯದಾಯತು.ಎಂದಿನಂತೆ ಬೆಳಿಗ್ಗೆ ವಾಕಿಂಗ್ ಗಾಗಿ ಕರೆಯಲು ಬಂದ ಮಿತ್ರರಿಗೆ ಆಘಾತ ಕಾದಿತ್ತು.
ತನ್ನ ನಾಲ್ಕುದಿನಗಳ ಸಿಂಗಪುರ್,ಮಲೇಶಿಯಾ ಪ್ರವಾಸದ ನಂತರ ಮನೆಗೆ ಬಂದ ಮುಕುಂದರಾಯರಿಗೆ ಸುದ್ದಿ ಸಿಗುವ ಹೊತ್ತಿಗೆ ತಡವಾಗಿ ಹೋಗಿತ್ತು.ತಕ್ಷಣ ಸುದ್ದಿ ಸಿಕ್ಕಿದ್ದರೆ ಬಂದು ಅಂತಿಮ ದರ್ಶನ ಮಾಡುತ್ತಿದ್ದೆ ಎಂದು ಹನಿ ಕಣ್ಣೀರಿಟ್ಟು ಒಂದು ಹೂಗುಚ್ಚವನ್ನ ಕಳುಸಿಸಿ ಕೊಟ್ಟರು.
ಹೀಗೆ ಹಲವು ವತ್ಸರಗಳನ್ನ ಯಾಂತ್ರಿಕವಾಗಿ ಕಳೆದ ಮುಕುಂದನಿಗೆ ತಂದೆತಾಯಿಯರ ನೋವು ತಿಳಿದದ್ದು ಓದಲೆಂದು ಹೊದ ತನ್ನ ಸ್ವಂತ ಮಗ ಅಮೇರಿಕದಲ್ಲೇ ಬಿಳಿಚರ್ಮದ ಹುಡುಗಿಯನ್ನ ಮದುವೆಯಾದ ಸುದ್ದಿ ತಿಳಿದಾಗ,ಇಲ್ಲಿ ಮಗಳು ದಿನಕ್ಕೊಬ್ಬ ಬಾಯ್ ಫ್ರೆಂಡ್ ಗಳ ಜೊತೆ ಡೇಟಿಂಗೆಂದು ತಿರುಗಾಡುವುದನ್ನು ನೋಡುವಾಗ.
ತನ್ನ ತಪ್ಪಿನ ಅರಿವಾದ ಮುಕುಂದರಾಯರು ತಮ್ಮ ಕೊನೆ ದಿನಗಳನ್ನ ತನ್ನಪ್ಪ ತನಗಾಗಿ ಕಟ್ಟಿದ ಮನೆಯಲ್ಲಿ ಕಳೆಯಲು ನಿರ್ದರಿಸಿದರು.ಮಗ ಮಗಳನ್ನ ತನ್ನೊಟ್ಟಿಗೆ ಭಾರತಕ್ಕೆ ಕರೆದೊಯ್ಯುದು ಅಸಾದ್ಯ ಎನ್ನುವುದನ್ನು ತಿಳಿದ ಮುಕುಂದರಾಯರು ಕೈಹಿಡಿದ ಹೆಂಡತಿಯನ್ನು ಮನವೊಲಿಸಲು ಮುಂದಾದರು.ಹೇಗೋ ಚತುರೋಪಾಯದಿಂದ ಹೆಂಡತಿಯನ್ನ ಕರೆದುಕೊಂಡು ತುಮಕೂರಿನ ತನ್ನ ಮನೆಯಲ್ಲಿ ಯಥಾರ್ತದ ನೆಮ್ಮದಿ ಜೀವನ ನಡೆಸಹತ್ತಿದರು.ಭಾರತದಲ್ಲಿಯೇ ಹುಟ್ಟಿ ಬೆಳೆದ ಮುಕುಂದರಾಯರಿಗೇ ಮತ್ತೆ ಭಾರತ ನೆನಪಾಗಲು ಇಷ್ಟು ವರ್ಷ ಬೇಕಾದರೆ ಹುಟ್ಟಿನಿಂದಲೇ ಐಷೊರಾಮದಲ್ಲಿ ಬೆಳೆದ ಕ್ಲಾರಾಳಿಗೆ ಭಾರತ ಹೇಗೆ ಒಗ್ಗೀತು? ಭಾರತದಲ್ಲಿ ಒಂದು ವರ್ಷ ಕಳೆದವಳು ಮಗಸೊಸೆಯರೊಟ್ಟಿಗೆ ಹೋಗಿ ನೆಲೆಯಾದಳು.
ಮಾಡಿದ್ದುಣ್ಣೋ ಮಹರಾಯ ಎನ್ನುವಂತೆ ಮುಕುಂದರಾಯರು ತಮ್ಮ ಹಣ ಆಸ್ತಿಯನ್ನೆಲ್ಲ ಅನಾಥಾಶ್ರಮಕ್ಕೆ ಕೊಟ್ಟು ಅದೇ ಅನಾಥಾಶ್ರಮ ಒಂದು ಮೂಲೆ ಹಿಡಿದರು.ಮತ್ತೊಬ್ಬ ಅನಾಥ ಹೆಣ್ಣುಮಗಳು ಚಂದ್ರಿಕ ಇವರ ಯೊಗಕ್ಷೇಮ ನೋಡಿಕೊಳ್ಳಲು ಮುಂದಾದಳು.
ಮಾನಸಿಕಯಾಗಿ ದಿನದಿಂದ ದಿನಕ್ಕೆ ಜರ್ಜರಿತರಾದ ಮುಕುಂದ ರಾಯರು ಒಂದುದಿನ ಅಕ್ಷರಶಃ ಹಾಸಿಗೆ ಹಿಡಿದರು.ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ತಿಂಗಳಿಗೊಮ್ಮೆ ಆಸ್ಪತ್ರೆಗೆ ಹೋಗಿ ಎರಡು ದಿನ ಇದ್ದು ಬರುವುದು ರೂಡಿಯಾಯಿತು.
ಹೀಗೆ ಮಗನ ಪಾರಕಾಯುತ್ತಾ ದಿನಕಳೆದ ತಂದೆತಾಯಿಯರ ನಿರಾಸೆ,ತಂದೆಯಾಯಂದಿರು ಕೇವಲ ಜನ್ಮಕೊಡಲು ಸೀಮಿತ ಎಂದು ಭಾವಿಸುವ ಮಕ್ಕಳು,ತಂದೆಯ ಕಷ್ಟ ಸುಖಗಳಿಗೆ ನಿಸ್ವಾರ್ಥದಿಂದ ಹೆಗಲುಕೊಡುವ ಅವರ ಸ್ನೇಹತರು,ಕೈಹಿಡಿದು ಜೀವನ ನಡೆಸ ಬೇಕಾದವಳು ಬಿಟ್ಟು ಮಗನೊಟ್ಟಿಗೆ ಹೋಗುವ ಹೆಂಡತಿ ಹೀಗೆ ಮುಕುಂದರಾಯರ ಯೋಚನೆಗಳ ಓಘಕ್ಕೆ ಕಡಿವಾಣ ಬಿದ್ದದ್ದು ಆಯಾ ಚಂದ್ರಿಕ ತಲೆಸವರುತ್ತಾ ’ಅಂಕಲ್’ ಎಂದಾಗ.
ಅವರ ನೋವು ದುಮ್ಮಾನ ಗಳನ್ನ ಕ್ಷಣಮಾತ್ರದಲ್ಲಿ ಅರ್ಥಮಾಡಿಕೊಳ್ಳಬಲ್ಲ ಚತುರೆ ಚಂದ್ರಿಕಾ ಹುಸಿಮುನಿಸಿನಿಂದ ’ಅಂಕಲ್ ಎಷ್ಟುಬಾರಿ ಹೇಳಲಿ ನಾನು ಹಳೆಯದನ್ನ ನೆನಪಿಸಿಕೊಂಡು ಕೊರಗಬೇಡಿ ಎಂದು ಆಗಿದ್ದಾಯಿತು ಈಗ ನೀವು ನಿಮ್ಮ ಮನೆಯಲ್ಲೇ ಇದ್ದೀರಿ ಆದಷ್ಟು ಬೇಗ ಗುಣಮುಖರಾಗಿ ಆಶ್ರಮದ ಮಕ್ಕಳಿಗೆ ಕಂಪ್ಯೂಟರ್ ಹೇಳಿಕೊಡುವಿರಿ ಈಗ ಒಳ್ಳೆ ಮಗುವಿನಂತೆ ಊಟ ಮಾಡಿ’ ಎಂದಾಗ ತನ್ನ ತಾಯಿತಂದೆಯರನ್ನ,ಮಕ್ಕಳನ್ನ,ಗುರುವನ್ನ,ಸ್ನೇಹಿತೆಯನ್ನ ಅವಳಲ್ಲಿ ಕಾಣುತ್ತಾರೆ.
ತಂದೆತಾಯಿಯರು ಯಾರೆಂದೇ ತಿಳಿಯದ ಈ ಪುಟ್ಟ ಹುಡುಗಿ ತನ್ನ ಜೀವನವನ್ನ ಕಂಡುಕೊಂಡ ರೀತಿ ರಾಯರನ್ನ ಮತ್ತಷ್ಟು ದಿನ ಬದುಕುವಲ್ಲಿ ಪ್ರೇರೀಪಿಸುತ್ತಿತ್ತು. ಬದುಕಿದಷ್ಟು ದಿನ ಸ್ವಾಭಾವಿಕವಾಗಿ ನಗುವಂತೆ ಮಾಡುತ್ತಿತ್ತು.
ವಿದಿಯಾಟದ ಮುಂದೆ ಯಾರಮಾತೂ ನಿಲ್ಲುವುದಿಲ್ಲ ತಮ್ಮ ದಿನಗಳನ್ನ ಎಣಿಸುತ್ತಿರುವ ರಾಯರಿಗೆ ಮಾನಸಿಕಬಲ ಕೊಡುವುದಷ್ಟೇ ಚಂದ್ರಿಕಾಳ ಅಥವಾ ಅವಳಂತೆ ಇರುವ ನುರಾರು ಆಯಾಗಳ ಕೆಲಸವಾಗಿತ್ತು.
ಮಹಾತ್ವಾಕಾಂಕ್ಷೆ,ಕನಸುಗಳನ್ನು ಹೊತ್ತು ಬದುಕುಪ್ರಾರಂಭಿಸಿದ ಮುಕುಂದರಾಯರಿಗೆ ತಮ್ಮ ಕೊನೆಯುಸಿರೆಳೆದದಾಗ ಉಳಿದದ್ದು ನೂರಾರು ಅನಾಥರ ಕಂಬನಿ,ಎರಡು ಹೂಬೊಕ್ಕೆಗಳು.
(ಇದು ಕಳೆದವಾರ ಬಂದ ಈಮೈಲ್ ಒಂದರ ಪ್ರೇರಣೆಯಿಂದ ಬರೆದ ಕಥೆ ನಿಮ್ಮ ಅಭಿಪ್ರಾಯಗಳು ಇನ್ನೊಂದು ಕಥೆಗೆ ಪ್ರೇರಣೆಯಾಗಬಹುದು)

Comments
istu serious aagi bareda kathe!!
I think as children, if v are not with our parents, v will not b expecting our children to b with us!!
badukina ondu nagna satya vanna thereditta ninage 'shahabhas!!!'
ಇನ್ನು ಕಥೆಯಲ್ಲಿನ ನೀತಿ ತುಂಬಾ ಚೆನ್ನಾಗಿದೆ ಎಲ್ಲರೂ ಅರಿಯಬೇಕಾದ್ದು..
ಧನ್ಯವಾದಗಳು....ಮತ್ತೊಂದು ಕಥೆ ಬರಲಿ ಬೇಗ.