ಕಾಂಗರೂ ಎಂದರೆ ತೆರಿಯಾದು ಸ್ವಾಮಿ !
ಮೊನ್ನೆ ಯಾವುದೋ ಕಾರಣಕ್ಕೆ ನನ್ನ ಮ್ಯಾನೇಜರ್ ನ ರೂಮಿನೊಳಗೆ ಹೋದೆ ಅಲ್ಲಿ ಮೂರೂ ಮ್ಯಾನೇಜರ್ ಗಳೂ ಕುಳಿತು ನಗುತ್ತಿದ್ದರು. ನಾನು ಆಶ್ಚರ್ಯದ ಮುಖ ಮಾಡಿ ನಿಂತಾಗ ನನ್ನ ಜನರಲ್ ಮ್ಯನೆಜರ್ ವಿವರಣೆಗೆ ತೊಡಗಿದ.
ನಿನಗೆ ಕಾಂಗರೂ ಗೊತ್ತೆ?
ಹೂಂ ಕೇಳಿದ್ದೇನೆ TV ಯಲ್ಲಿ ನೋಡಿದ್ದೇನೆ.
ಅದಕ್ಕೆ ಆ ಹೆಸರು ಹೇಗೆ ಬಂತು ಎನ್ನುವುದು ತಿಳಿದಿದೆಯೇ?
ಇಲ್ಲ.
ಆಸ್ತ್ರೇಲಿಯಾದಲ್ಲಿ ಮೊದಲು ಈ ಪ್ರಾಣಿ ಕಂಡು ಬಂತು ಯುರೋಪಿನ ಯಾತ್ರಿಗಳು ಆ ವಿಚಿತ್ರ ಪ್ರಾಣಿಯನ್ನ ನೋಡಿ ಅದೇನೆಂದು ಕೇಳಿದಾಗ ಸ್ಥಳೀಯರು ಕಾಂಗರೂ ಎಂದರು ನಂತರ ಅದೇ ಹೆಸರು ಶಾಶ್ವತವಾಯಿತು. ಎಂದ ಅದಕ್ಕೆ ನನ್ನದೇ ಶೈಲಿಯಲ್ಲಿ "ಈ ವಿಷಯಕ್ಕಾಗಿ ನೀವುಗಳು ನಗುತ್ತಿರುವುದಾದರೆ ನಾನೂ ನಗುತ್ತೇನೆ ಎಂದೆ" ಕಾಳೆಳೆಯುವ ಉತ್ಸಾಹದಲ್ಲಿ.
ಅದಕ್ಕವನು ಇಲ್ಲ ಅದು ಹಾಗಲ್ಲ ಆಸ್ಟ್ರೇಲಿಯಾದ ಭಾಷೆಯಲ್ಲಿ ಕಾಂಗರೂ ಎಂದರೆ "ನನಗೆ ಅರ್ಥವಾಗಲಿಲ್ಲ"ಎಂದು ಅರ್ಥ ಎಂದ ಆಗ ನನಗೆ ನಗು ಬಂತು ನಮ್ಮ "ತೆರಿಯಾದು ಸ್ವಾಮಿ" ಕಥೆ ನೆನಪಾಯಿತು ನಾನೂ ನಕ್ಕೆ.
ಅಷ್ಟರಲ್ಲಿ ನಮ್ಮ ಇನ್ನೊಬ್ಬ ಮ್ಯಾನೆಜರ್ ಯಾವುದೋ ಕೆಲಸದ ವಿಷಯವಾಗಿ ಏನೋ ಕೇಳಿದ ನಾನು ತಡಮಾಡದೆ ಕಾಂಗರೂ!!!!!!!!!!!!!! ಎಂದೆ ಅಲ್ಲಿ ಇದ್ದವರೆಲ್ಲ ಬಿದ್ದು ಬಿದ್ದು ನಕ್ಕರು.
ಇದನ್ನ ಬರೆಯುತ್ತಾ ನನಗೆ ನನ್ನ ಹೈಸ್ಕೂಲಿನಲ್ಲಿ ನಡೆದ ಘಟನೆ ನೆನಪಾಯಿತು.
ನಮ್ಮ ಕನ್ನಡ ಕ್ಲಾಸ್ ಟೆಸ್ಟ್ ಒಂದರಲ್ಲಿ ಲೋಪಸಂದಿಗೆ ಉದಾಹರಣೆ ಕೊಡಿ ಎಂದ ಪ್ರಶ್ನೆಯೊಂದಕ್ಕೆ ನಾನು ದ್ವಂದ್ವಾರ್ಥ ಬರುವ ಶಬ್ಧ "ಗೊತ್ತಿಲ್ಲ" ಎಂದು ಬರೆದಿದ್ದೆ. ಆ ಟೆಸ್ಟ್ ಪೇಪರ್ ಕೊಡುವಾಗ ನಮ್ಮ ಕನ್ನಡ ಪಂಡಿತರು ಸಮಯಪ್ರಜ್ನೆ,ಪ್ರತ್ಯುತ್ಪನ್ನಮತೀತ್ವ ಎಂದೆಲ್ಲಾ ತಲೆಗೆ ಹೋಗದ ದೊಡ್ಡ ದೊಡ್ದ ಶಬ್ದ ಗಳನ್ನ್ನೆಲ್ಲ ಬಳಸಿ ಬೈದಿದ್ದರು.
ನನ್ನ ಉತ್ತರ ಸರಿಯೋ ತಪ್ಪೋ ಈವತ್ತಿನ ತನಕ ಗೊತ್ತಾಗಲಿಲ್ಲ ??????????????

Comments
ಕಾಂಗರೂ ಪದದ ಅರ್ಥ ಗೊತ್ತಿರಲಿಲ್ಲ. ಮಾಹಿತಿಯಂತಿರುವ ಈ ಲೇಖನ ಓದಿ ನಗು ಬಂತು...
ಗೊತ್ತು + ಇಲ್ಲ = ಗೊತ್ತಿಲ್ಲ .
ಲೋಪ ಸಂಧಿ ಆಗಿರ ಬಹುದು ಮಾರಾಯಾ..!
ನಗು ತರಿಸಿದ್ದಕ್ಕೆ ವಂದನೆಗಳು...
@ ಶಿವು ಸರ್ ಧನ್ಯವಾದಗಳು.
@ ಸೈದ್ ಧನ್ಯವಾದಗಳು.
@ ಪ್ರಕಾಶಣ್ಣ ಆಗಿರಬಹುದು ಆದರೆ ಅವತ್ತು ಅದನ್ನ ಹೇಳಲೇ ಇಲ್ಲೆ ಪಂಡಿತರು ಧನ್ಯವಾದಗಳು.