ಧರ್ಮ ಜಿಜ್ನಾಸೆ.
ನಾನಿರುವ ದೇಶದಲ್ಲಿ ಈಗ ರಮದಾನ್ ಪ್ರಾರಂಭವಾಗಿದೆ ಹಗಲು ಹೊತ್ತಿನಲ್ಲಿ ಆಹಾರಸೇವನೆ ನಿಶಿದ್ದ ಆದರಿಂದ ಆಫೀಸಿನ ಸಮಯದಲ್ಲೂ ಬದಲಾವಣೆಯಾಗಿದೆ.ಅವರು ಉಪವಾಸ ಮಾಡುವುದಲ್ಲದೇ ನಮ್ಮನ್ನೂ ಆ ಪುಣ್ಯದಲ್ಲಿ ಭಾಗಿಗಳಾಗಿ ಮಾಡಲು ಹೊರಡುತ್ತಾರೆ.ನಮ್ಮ ಧರ್ಮದ ಎಷ್ಟೋ ಆಚರಣೆಗಳನ್ನೇ ಕೈಬಿಟ್ಟು ನಾಸ್ತಿಕರಾಗುತ್ತಿರುವ ನಮಗೆ ಆ ಧರ್ಮದ ಆಚರಣೆ ಉಪವಾಸ ಮಾಡಿಸೀತೆ? ಏನೇ ಇರಲಿ ಮದ್ಯಾನ್ಹ 3 ಘಂಟೆಗೆಲ್ಲಾ ಮನೆಸೇರಿ ಬಿಡುತ್ತೇನೆ.ಹೊಟ್ಟೆಗೊಂದಿಷ್ಟು ವ್ಯವಸ್ತೆ ಮಾಡಿಕೊಂಡು ಮಲಗಿದರೆ ಸಂಜೆಯಾದರೂ ಆದೀತು ಮರುದಿನ ಬೆಳಿಗ್ಗೆಯಾದರೂ ಆದೀತು.ಬ್ರಹ್ಮಚಾರಿಗಳ ನಡುವೆ ಬದುಕುವ ನನ್ನಂತ ಬ್ರಹ್ಮಚಾರಿಗೆ ಬದುಕಲು ಒಂದಿಷ್ಟು ಆಹಾರ ಅಫೀಸಿನಲ್ಲಿ ತಲೆಗೊಂದಿಷ್ಟು ಕೆಲಸ ಸಿಕ್ಕಿದರೆ ಸಾಕು.ಮನೆಗೆ ಬಂದರೆ ಹೆಚ್ಚು ಸಮಯ ನಿದ್ರಾವಸ್ಥೆಯಲ್ಲಿಯೇ ಕಳೆದು ಹೋಗುತ್ತದೆ. ಸಂಜೆ ಹೊರಗೆ ಸುತ್ತಾಡೋಣ ವೆಂದರೆ ತಾಪಮಾನ 52ಡಿಗ್ರಿ,ತೇವಾಂಶ 90% ಹೀಗೆಲ್ಲಾ ಇದ್ದು ರೂಮಿನಲ್ಲಿ ಕುಳಿತು ಚಾಟಿಗೆ ಯಾರೂ ಸಿಗದಿದ್ದಾಗ ನಿದ್ದೆಯ ಮೊರೆ ಹೋಗುವುದು ರೂಡಿ.
ಹೀಗೆ ದಿಲೀಪನ ಜೊತೆ ಚಾಟ್ ಮಡುತ್ತಿದ್ದಂತೆ ಒಂದು ಧರ್ಮಜಿಜ್ನಾಸೆ ತಲೆ ಕೊರೆಯಲು ಶುರುವಾಯಿತು.
ನಮ್ಮ ಧರ್ಮದಲ್ಲಿ ಇರುವಂತೆ ಗ್ರಹಗತಿ,ಜಾತಕ,ಪಂಚಾಂಗ ಅನ್ಯಮತೀಯರಲ್ಲೂ ಇರಬಹುದೇ? ಅಥವಾ ನಮ್ಮ ಹುಟ್ಟಿದ ತಾರೀಕು,ಸಮಯ ನೋಡಿ ಜಾತಕ ಬರೆಯುವಂತೆ ಅವರದ್ದೂ ಬರೆಯಬಹುದೇ? ಬರೆದರೆ ಅದು ಸರಿ ಇರಬಹುದೇ ಎಂಬಿತ್ಯಾದಿ ಗಳು ತಲೆಯಲ್ಲಿ ಕೊರೆಯುತ್ತಿವೆ.
ಒಂದೇ ಸೂರ್ಯ ಒಂದೇ ಚಂದ್ರ ಗ್ರಹಗಳು ಒಂದೇ ಆದಾಗ,ಸೂರ್ಯ,ಚಂದ್ರ ಹಾಗು ಗ್ರಹಗಳ ಚಲನೆಯ ಲೆಕ್ಕಾಚಾರದ ಮೇಲೆ ಮನುಷ್ಯನ ಭವಿಷ್ಯ ನಿರ್ಧಾರ ವಾಗುತ್ತದೆ ಎಂದಾದ ಮೇಲೆ ಎಲ್ಲಾ ಧರ್ಮದವರದ್ದೂ ಜಾತಕ ಇರಲೇ ಬೇಕು.ಎಲ್ಲಕ್ಕಿಂತ ಹೆಚ್ಚಾಗಿ ನನ್ನ ತಲೆ ಕೊರೆಯುತ್ತಿರುವ ವಿಷಯ ಚೌತಿಯ ದಿನ ಚಂದ್ರನನ್ನ ನೋಡಿದರೆ ಅಪವಾದ ಬರುತ್ತದೆ ಎನ್ನುವುದು ವಿಚಿತ್ರ ಎನಿಸುವ ವಿಷಯವೆಂದರೆ, ನಮ್ಮಲ್ಲಿ ಇವತ್ತು ಗಣೇಶ ಚೌತಿ ಇವತ್ತು ಚಂದ್ರನನ್ನ ನೋಡಿದರೆ ಅಪವಾದ ಬರುತ್ತದಂತೆ. ಹಾಗಾದರೆ ಮುಸ್ಲಿಮರಿಗೆ ಇದು ಪವಿತ್ರ ರಮದನ್ ಹಬ್ಬ ಸೂರ್ಯೊದಯಕ್ಕೆ ಮೊದಲು ಊಟ ಮಾಡಿದವರು ಮತ್ತೆ ಊಟ ಮಾಡುವುದು ಚಂದ್ರನನ್ನ ನೋಡಿದಮೇಲೆ.ಹಾಗಾದರೆ ಅವರೆಲ್ಲರಿಗೂ ಅಪವಾದ ಬರುತ್ತದೆಯೆ?
ಬಂದರೆ ಅವರು ಶಮಂತಕೋಪಾಕ್ಯಾನ ಕೇಳುತ್ತಾರೆಯೆ? ಎಂಬುತ್ಯಾದಿ ಪ್ರಶ್ನೆಗಳು ತಲೆ ಕೊರೆಯುತ್ತಿದೆ.
ಇಂತಹಾ ಜಿಜ್ನಾಸೆಗಳು ಹುಟ್ಟುವುದು ನನನೇ ಮೊದಲೇನಲ್ಲ ಇದರ ವಿವರಣೆ ಹಲವಾರು ಕಡೆ ಉಲ್ಲೇಕಿಸಲ್ಪಟ್ಟಿರಬಹುದು. ಓದುವ ಅಬ್ಯಾಸ ಗಳನ್ನ ಚಿಕ್ಕಂದಿನಲ್ಲೇ ಬಿಟ್ಟಿರುವುದರಿಂದ ಪ್ರಶ್ನೆ ಹುಟ್ಟಿದ ಮರುಕ್ಷಣ ಹೀಗೆ ಗೊತ್ತಿದ್ದವರಲ್ಲಿ ತಿಳಿದು ಕೊಳ್ಳುವುದು ನನ್ನ ರೂಡಿ.ತಿಳಿದವರು ಹೇಳಬಹುದೆಂದ ನಂಬಿಕೆ ಇಂದ ಇಲ್ಲಿ ಬರೆದಿದ್ದೇನೆ ಅಭಿಪ್ರಾಯಕ್ಕಾಗಿ ಕಾಯುತ್ತೇನೆ.

Comments
ನಾವು ಇವತ್ತು ಚಂದ್ರನನ್ನು ನೋಡಿದರೆ ಅಪವಾದ, ಆದೇ ಅವರು ನೋಡಿಯೇ ಉಪವಾಸ ಮುರಿಯುವುದು!
ಒಂದು ಉತ್ತಮ ಪ್ರಶ್ನೆಯನ್ನು ಕೇಳಿಬಿಟ್ಟಿದ್ದೀರಿ.
ಇದಕ್ಕೆ ನಾನು ತುಂಬಾ ಯೋಚಿಸಿದೆ. ಉತ್ತರ ಸಿಗಲಿಲ್ಲ. ಆದ್ರೆ ನನಗನ್ನಿಸಿದ್ದು. ಈ ಆಚರಣೆಗಳೆಲ್ಲಾ ನಮ್ಮ ದೇಹ ಮತ್ತು ಮನಸ್ಸಿನ ಶುದ್ಡಿಗೆ ಅನ್ನುವುದಂತು ಗೊತ್ತಾಯಿತು. ಅದಕ್ಕೆ ಸಮಯ ಹಾಗು ಸ್ಥಳ ಬೇರೆ ಬೇರೆಯಾಗಿರಬಹುದು...
ಧನ್ಯವಾದಗಳು.
ಪ್ರತಿಕ್ರಿಯೆಗೆ ಧನ್ಯವಾದಗಳು,
ಸಮಯ ಹಾಗು ಸ್ಥಳ ಬೇರೆ ಬೇರೆ ಆದರೆ ಇಲ್ಲಿ ಹಬ್ಬವನ್ನ ಆಚರಿಸುವ ಸಮಯ ದಿನಗಳೂ ಬದಲಾಗಬಹುದು ಅಲ್ಲವೇ?
ಭಾರತದಲ್ಲಿನ ರಾಹುಕಾಲ,ಗುಳಿಕಕಾಲ,ಯಮಗಂಡ ಕಾಲಗಳು ಇಲ್ಲಿ (ಬೇರೆ ದೇಶದಲ್ಲಿ) ಬೇರೆ ಯಾಗಲೇಬೇಕಾಗುತ್ತವೆ ಅಲ್ಲವೇ?
ಮೂಲ ಒಂದೇ ಎನ್ನೋ ಅಂಶ ನಮ್ಮನ್ನು ಎಲ್ಲೋ ಒಂದು ಕಡೆ ಸೇರಿಸುತ್ತೆ ಎನ್ನೋದು...ಅಲ್ಲವೇ..ನಿರಾಕಾರನನ್ನು ಪೂಜಿಸುವ ಮತ್ತು ಅದಕ್ಕೊಂದು ಆಕಾರವನ್ನು ನೀಡುವ ಎರಡು ವಿಭಿನ್ನ ಪದ್ಧತಿಗಳು, ಮೂಲ ಉದ್ದೇಶ ಮನಸ್ಸಿಗೆ ಶಾಂತಿ, ಎಲ್ಲ ಕೇಳುವುದೂ ಅದೆ ತಾನೇ. ನಿಮ್ಮ ಕುತೂಹಲ ಸ್ವಾಭಾವಿಕ. ನನ್ನ ಬ್ಲಾಗಿಗೂ ಬನ್ನಿ ಒಮ್ಮೆ, ನಾವು ಬ್ಲಾಗಿಗಳಲ್ಲಿ ಮುವರು ಕುವೈತಿನಲ್ಲಿದ್ದೇವೆ, ಮನಸು, ಸವಿಗನಸು ಮತ್ತು ನಾನು (ಜಲನಯನ, ಭಾವ ಮಂಥನ ಮತ್ತು science & share ನನ್ನ ಬ್ಲಾಗ್ ಗಳು)
ಪುಷ್ಪ ಮಾಲಾನುಸಂಘೇನ ಸೂತ್ರಂ ಶಿರಸಿ ಧಾರ್ಯತೆ|
ಮೊದಲ ಪ್ರತಿಕ್ರಿಯೆಗೆ ಧನ್ಯವಾದಗಳು.
ಹೀಗೆ ಬರುತ್ತಾ ಇರಿ ಬರೆಯುತ್ತಾ ಇರಿ.
ಬರೆದ ವಿಷಯ ನಿಮಗೆ ಬೇಸರ ತಂದಿದ್ದರೆ ಕ್ಷಮಿಸಿ.
ನನಗೂ ಈ ಪ್ರಶ್ನೆ ಕಾಡುತ್ತೆ ಕೆಲವು ಸಾರಿ...ನೆನ್ನೆ ಚಂದ್ರನನ್ನು ನಾವಿಬ್ಬರೊ ನೋಡಿಬಿಟ್ಟೆವು. ಆಮೇಲೆ ಕಥೆ ಕೇಳಿದೆವು....
ಚೆನ್ನಾಗಿ ಬರೆದಿದ್ದೀಯಾ......ಬರೀತಾ ಇರು ಮಹರಾಯ......ಎನ್ ಬೇಕಾದರೂ ಬರೆಯಬಹುದು ನೀನು ಯಾಕೆಂದ್ರೆ ನಿನ್ನ ಬ್ಲಾಗ್ ಹೆಸರು ಹಾಗೆ ಇದೆ
ನಿನ್ನೆ ನನ್ನ ತಮ್ಮನ ಜೊತೆ ಹರತುತ್ತಿದ್ದಾಗ(chat)ಈ ವಿಷಯ ಹೊಳೆಯಿತು ತಕ್ಷಣ ಅದನ್ನೇ ಬರೆದೆ(ಎಂದಿನಂತೆ)
ಜಲನಯನ ಸರ್ ಪ್ರತಿಕ್ರಿಯೆ ಬಂದಾಗ ಮಾಡಿದ ಮಾಡಿದ ತಪ್ಪಿನ ಅರಿವಾಯಿತು ಅವರಲ್ಲಿ ಕ್ಷಮೆಕೋರಿದೆ.
ಮುಂದೆ ಇಂತಹಾ ಸೂಕ್ಷ್ಮ ವಿಷಯಗಳನ್ನ ಬರೆಯುವಾಗ ಜಾಗ್ರತೆ ವಹಿಸುತ್ತೇನೆ.
Nice topic to discuss,
But I would Suggest you read God's Debris by Scott Adams which entirely deals about such conversation...
Its an Ebook, I strogly recommend this to all fellow readers :)
happy writting
Nice topic to Discuss with,
But I guess you should read God's Debris by Scott Adams for most of the answers :)
Its an ebook I recommend this to fellow readers who have the same doubts lingering in their mind
Happy writting
ಧನ್ಯವಾದಗಳು.
@ ಮೃತ್ಯುಂಜಯರೆ,
ಧನ್ಯವಾದಗಳು.
@ Ramya,
thanks for your suggestion and i will go through the Ebook that you mentioned.
ತುಂಬಾ ರಸವತ್ತಾಗಿದೆ ನಿಮ್ಮ ನಿರೂಪಣೆ,
ಹೀಗೆಯೇ ಬರೆಯುತ್ತಿರಿ
ಧನ್ಯವಾದಗಳು.