ಹೇಳೂಕಾತ್ತಿಲ್ಲೆ ಅನುಭವಿಸೂಕ್ ತೀರೂದಿಲ್ಲೆ
ಮದ್ಯಾಹ್ನ ಆಫೀಸಿನಿಂದ ಹೊರಟೆ ಕಾರ್ ಸ್ಟಾರ್ಟ್ ಮಾಡುವಷ್ಟರಲ್ಲಿ ನಮ್ಮ ಅಫೀಸ್ ಬಿಲ್ಡಿಂಗ್ ನ ಸೆಕ್ಯೂರಿಟಿ ಮುಕುಂದ ಓಡುತ್ತಾ ನನ್ನ ಕಾರಿನ ಹತ್ತಿರ ಬಂದ.
"ಒಡಿಯ್ನೆ ಕಾರ್ನಿಷ್ ಕಡೆ ಹ್ವಾಪ್ದಾದ್ರೆ ನನ್ನ ಅಲ್ಲಿ ಬಿಡೂಕಾತ್ತಾ" ಕೇಳಿದ ಸರಿ ಬಾ ಅಂದೆ.ನಾನು ಡ್ರೋಪ್ ಕೊಡದಿದ್ದರೆ ಆ ಉರಿಬಿಸಿಲಿನಲ್ಲಿ ಸುಮಾರು ಆರು ಕಿಲೋಮೀಟರ್ ಅವ ನಡೆಯುವವನಿದ್ದ ಪಾಪ ನಾನು ಹೋಗುವುದು ಬೇರೆ ಕಡೆಯಾದರೂ ಅವನನ್ನ ಬಿಟ್ಟು ಹೋಗುವ ನಿರ್ದಾರ ಮಾಡಿದೆ.
ಉಡುಪಿ ಕಡೆಯ ಮುಗ್ದ ಹುಡುಗನಿಗೆ ನನ್ನ ಕಂಡರೆ ಸ್ವಲ್ಪ ಸಲುಗೆ.ತನ್ನ ಬಿಡುವಿನ ವೇಳೆಯಲ್ಲಿ ನಮ್ಮ ಆಫೀಸನ್ನೂ ಸ್ವಚ್ಚ ಮಾಡಿ ಸ್ವಲ್ಪ ಮಟ್ಟಿಗೆ ಮೇಲ್ಕರ್ಚಿನ ವ್ಯವಸ್ಥೆ ಮಾಡಿಸಿಕೊಟ್ಟಿದ್ದೆ. ಅಷ್ಟೇ ನಿಯತ್ತಿನ ಹುಡುಗ ಕಷ್ಟವಾನಿ ಆದ್ದರಿಂದ ನಾನೂ ಅವನನ್ನ ನಂಬಿ ಸಣ್ಣ ಪುಟ್ಟ ಕೆಲಸ ಮಡಿಸಿಕೊಳ್ಳುತ್ತಿದ್ದೆ,ಎರಡು ದಿನಕ್ಕೊಮ್ಮೆ ನನ್ನ ಕಾರು ತೊಳೆದು ಕೊಡುತ್ತಿದ್ದ.
ಸ್ವಲ್ಪ ತಲೆತಿನ್ನುವ ಸ್ವಭಾವ ಇದ್ದಿದ್ದರಿಂದ ನಾ ಅವನಿಂದ ತಪ್ಪಿಸಿಕೊಂಡು ತಿರುಗಾಡುವುದೇ ಹೆಚ್ಚು.ಕಾರಲ್ಲಿ ಕುಳಿತವನಿಗೆ ಆದಷ್ಟು ಮಾತನಾಡಲು ಅವಕಾಶ ಕೊಡದೇ ಯಕ್ಶಗಾನದ ಸಿಡಿ ಹಾಕಿದ್ದರೂ ಪುಣ್ಯಾತ್ಮ "ಓಹೋ ಭಾಗ್ವಂತ್ರು ಗಣಪತಿ ಭಟ್ರಲ್ದೇ" ಅಂದ.ಹೌದು ನಿನಗೂ ಯಕ್ಷಗಾನದ ಆಸಕ್ತಿ ಇದೆಯೇ ಅಂದೆ.
"ಹೌದೆ ನಾ ಊರಾಗಿಪ್ಪಾಗ ಆಟ ಕಾಂತಿದ್ನೆ ಇಲ್ಲಿ ಎಂತ ಮಾಡುದು ಹೇಳಿ ಯಂತಾಮಾಡೂಕಾತ್ತಿಲ್ಲೆ,ದುಡ್ಡು ಒಂದು ಸಿಕ್ಕುತ್ತು ಅಂಬ್ದು ಬಿಟ್ರೆ ಹೊತ್ತು ಕಳೂದೇ ಕಷ್ಟವೇ !!ಎಂತ ಮಾಡೂಕಾತ್ತು ಹೇಳೂಕಾತ್ತಿಲ್ಲೆ ಅನುಭವಿಸೂಕ್ ತೀರೂದಿಲ್ಲೆ" ಹೇಳಿ ಶುರುಮಾಡಿಯೇ ಬಿಟ್ಟ. ಈ ಬೈಕಲ್ಲಿ,ಕಾರಲ್ಲಿ ಜೊತೆಗೆ ಹೋಗುವವರು,ಕಟ್ಟಿಂಗ್ ಶಾಪ್ ನವರು ನಮಗೆ ಸಂಬಂಧ ಪಡದ ವಿಷಯಗಳನ್ನೋ, ಅವರ ಗೋಳನ್ನೋ ಹೇಳಿ ಕೊಳ್ಳಲು ಶುರುಮಾಡಿದರೆ ಮೈಎಲ್ಲಾ ಉರಿಯುತ್ತದೆ. ನಮದೇ ಹಾಸಿ ಹೊದೆಯುವಷ್ಟು ಇರುವಾಗ ಇವನದ್ದೊಂದು ಕಥೆ. ಒಟ್ಟು ನನ್ನ ಪರಿಸ್ತಿತಿಯೂ "ಎಂತ ಮಾಡೂಕಾತ್ತು ಹೇಳೂಕಾತ್ತಿಲ್ಲೆ ಅನುಭವಿಸೂಕ್ ತೀರೂದಿಲ್ಲೆ" ಆಗಿಹೋಯಿತು.
ಹೇಗಾದರೂ ಮಾಡಿ ವಿಷಯಾಂತರ ಮಾಡುವ ಸಲುವಾಗಿ "ಕಾರ್ನಿಷ್ ನಲ್ಲಿ ಎಲ್ಲಿ ಹೊಗಬೇಕು" ಕೇಳಿದೆ.
"ಅಲ್ಲೆ ಸಮುದ್ರದಂಡೆ ಮೇಲೆ ಬಿಡೀನಿ ಅಲ್ಲೆ ಒಂದ್ ಕಟ್ಟೆಮೇಲೆ ಸಂಜೆ ಆಪೂತಂಕ ಕೂಕಂತೆ ಎಂತಮಾಡೂಕಾತ್ತು"
"ಅಯ್ಯೋ ಈ ರಣಬಿಸಿಲಿನಲ್ಲಿ ಯಾಕೆ ಅಲ್ಲಿ ಹೋಗಿ ಕೂರುತ್ತೀಯೆ ರೂಮಿನಲ್ಲಿ ತಣ್ಣಗೆ ಮಲಗ ಬಾರದೇ ಅದೂ ಬೇರೆ ಹ್ಯುಮಿಡಿಟಿ ಬೇರೇ ಸಿಕ್ಕಪಟ್ಟೆ ಇದೆ"
"ಮೂರೊತ್ತೂ ಮನಿಕಂಬ್ಕೆ ಆತ್ತಿಲ್ಲ್ಯೇ ಬೇಜಾರಾತ್ತು ಹಿಂಗೇ ತಿರುಗಾಡುಕ್ ಹ್ವಾರೆ ಚೂರು ಹೊತ್ತು ಹ್ವಾತ್ತು ಈ ಬಿಸ್ಲೆಲ್ಲಾ ಎಂತದೇ ನಮ್ಮೂರಂಗೂ ಇತ್ತು, ನಮ್ ಜಾತ್ಯಂಗ್ ಬೆಳಿಗ್ಗೆ ದೋಣಿತಕ ಹ್ವಾರ್ ಸಂಜಿಗೇ ಅಲ್ದಾ ಮನಿಗ್ ಬಪ್ದು ಎಂತಾ ಮಾಡೂಕತ್ತು"
ಅವ ಎಂತಾ ಮಾಡೂಕಾತ್ತು ಎಂದಲ್ಲಿಗೆ ಅವನ ಮಾತು ಮುಗಿಯಿತು ಎಂದು ತಿಳಿಯಲಿಕ್ಕೆ ಅಡ್ಡಿ ಇಲ್ಲ.
"ಏನೋಪ್ಪ ನಿಮ್ ಜಾತಿ ಮಕ್ಳಿಗೆ ಮೀನು ಹಿಡಿಯುವುದೇ ಉದ್ಯೋಗ ಅವರು ಬಿಸಿಲಲ್ಲಿ ಸಮುದ್ರದ ಅಲೆಯಮೇಲೆ ಅಲೆಯದ್ದಿದ್ದರೆ ಹೊಟ್ಟೆಗಿಲ್ಲ ಅದಕ್ಕೇ ಹೊಗ್ತಾರೆ ನಿಂಗ್ಯಾಕೆ ಒಳ್ಳೆ ತೊಳೆದು ಒಣಗಿಸಿದಂತೆ ಕಟ್ಟೆ ಮೇಲೆ ಕುಳಿತು ಮೈಕಾಸಿಕೊಳ್ಳುವ ಹುಚ್ಚು"
ನನ್ನ ಈ ಪ್ರಶ್ನೆಗೆ ಅವನ ಮೊದಲ ಮಾತೂ ಕೂಡ "ಎಂತಮಾಡೂಕಾತ್ತೆ" ಅಗಿತ್ತು.
ಅದರ ನಂತರ ಸ್ವಲ್ಪ ಹೊತ್ತಿನ ಮೌನ ಅವ ಏನೊ ಯೋಚನೆ ಮಾಡುತ್ತಿದ್ದಾನೆ ಎನ್ನುವಂತಿತ್ತು.
"ಒಡಿಯ್ನೆ ಈ ಹ್ಯುಮಿಡಿಟಿ ಹ್ಯುಮಿಡಿಟಿ ಅಂದೆಳಿ ಹೆಳ್ತ್ರಿಯಲ್ಲ ಹಂಗಂದ್ರೆ ಎಂತದ್ದೇ?" ಮೌನ ಮುರಿದಾಗ ಅವನ ಕಣ್ಣಿನಲ್ಲಿ ತಿಳಿದುಕೊಳ್ಳುವ ಉತ್ಸಾಹ ಮಿಂಚಿತ್ತು.
ಎಲಾ ಇವನ ಒಳ್ಳೇ ಪ್ರಶ್ನೆ ಕೇಳಿಬಿಟ್ಟನಲ್ಲ ಅವನಿಗೆ ವಿವರಿಸುವಷ್ಟೆಲ್ಲಾ ನನಗೆಲ್ಲಿ ಗೊತ್ತು,ಆದರು ಹೇಳದಿದ್ದರೆ ಮರ್ಯಾದೆ ಪ್ರಶ್ನೆ !
"ಅದು ಹ್ಯುಮಿಡಿಟಿ ಎಂದರೆ ವಾಟರ್ ವೇಪರ್ಸ್ ಗಾಳಿಯಲ್ಲಿ ಸೇರಿಕೊಂಡಿರುತ್ತದೆ" ಅವನ ಪ್ರಶ್ನೆಗೆ ಉತ್ತರ ಸಿಗಲಿಲ್ಲ ಎಂಬಂತೆ ಅವನ ಚರ್ಯೆ!
"ಈ ಬಿಸಿಲಿನ ತಾಪಕ್ಕೆ ಸಮುದ್ರದ ನೀರು ಆವಿಯಾಗಿ ಗಾಳಿಯಲ್ಲಿ ಸೇರಿಕೊಳ್ಳುತ್ತದೆ"
"ಓಹೋ ಸರಿ ಈಗ್ ಗೊತ್ತಾಯ್ತೆ" ಎಂದಾಗ ಬೀಸುವ ದೊಣ್ನೆಯಿಂದ ತಪ್ಪಿಸಿಕೊಂಡಂತಾಯಿತು.
"ಅಲ್ದೆ ಬಿಸ್ಲಿಗ್ ನೀರ್ ಆವಿ ಆಪುದಿದ್ರೆ ಹಗಲು ಹೊತ್ತಾಂಗ್ ಆಯ್ಕು ಅಲ್ದೇ ಸಂಜೆ ಆರ್ ಗತಿಲೇ ಹ್ಯುಮಿಡಿಟಿ ಹೆಚ್ಚಾತ್ತು ಅಂಬ್ರಲ್ಲ ಅದು ಎಂತಕ್ಕಿರ್ಕೇ?" ಕಾರಿನ ಸಮೇತ ಇವನನ್ನ ಸಮುದ್ರದಲ್ಲಿ ಮುಳುಗಿಸಬೇಕು ಎನಿಸಿತ್ತು.
ಇವನಿಗೆ ಹೇಳುವಲ್ಲಿ ನನ್ನ ಕನ್ವಿನ್ಸಿಂಗ್ ಸ್ಟ್ರ್ಯಾಟಜಿ ಪ್ರಯೋಜನಕ್ಕೆ ಬರುತ್ತಿಲ್ಲ ಅಥವಾ ನನಗೆ ಇವನಿಗೆ ಹೇಳುವಷ್ಟು ಗೊತ್ತಿಲ್ಲ.
ಹಾಗಾದರೆ ಇವನಿಗೆ ನನ್ನ ಮಾಮೂಲಿ ಕನ್ಫ್ಯೂಸಿಂಗ್ ಸ್ಟ್ರ್ಯಾಟಜಿಯ ವರಸೆಯೇ ಸರಿ ಎನ್ನುವ ನಿರ್ದಾರಕ್ಕೆ ಬಂದೆ.
"ಅದು ಸಂಜೆ ಸೂರ್ಯ ಮುಳುಗುವುದು ಎಲ್ಲಿ ಹೇಳು?"
"ಸಮುದ್ರದಲ್ಲಿ"
"ಹಾಂ ಸೂರ್ಯ ಮುಳುಗುವಾಗ ಕೆಂಪಗೆ ಕಾದಿರುವಷ್ಟು ಬಿಸಿಯಾಗಿರ್ತಾನೆ"
"ಹೌದೆ ವಿಷಯ ಹೌದು"
"ಅಷ್ಟು ಬಿಸಿಯಾಗಿ ಕಾದ ಸೂರ್ಯ, ಸಮುದ್ರದಲ್ಲಿ ಮುಳುಗಿದಾಗ ಅಲ್ಲಿ ಇರುವ ನೀರೆಲ್ಲಾ ಆವಿಯಾಗ್ತದೆ ಆದ್ದರಿಂದ ಸಂಜೆ ಸೂರ್ಯ ಮುಳುಗಿದ ಮೇಲೆ ಹ್ಯುಮಿಡಿಟಿ ಹೆಚ್ಚು" ನನ್ನ ಈ ತತ್ವ ಕೇಳಿದ್ದರೆ ಕೆಲವು ವಿಜ್ನಾನಿಗಳು ಕೊತ್ತುಂಬರಿ ಮರ ಹುಡುಕ ಬೇಕಿತ್ತು ನನಗೆ ವಿಧಿ ಇಲ್ಲ ಮುಕುಂದನಿಗೆ ಸಮಾಧಾನ ಆಗುವ ಉತ್ತರ ಕೊಡಬೇಕಿತ್ತು.
"ಓಹೋ ಈ ಬಿಸಿ ದ್ವಾಸೆಬಂಡಿ ಮೇಲೆ ನೀರ್ ಹಾಕ್ರ ಗತಿಲೇ ಆತ್ತಲ ಹಂಗಾ?"
"ಹುಮ್ ಹೌದು ಹೌದು ಸರಿಯಾಗಿ ಹೇಳಿದೆ ನೋಡು" ಅಬ್ಬ ಇನ್ನು ಅವ ಪ್ರಶ್ನೆ ಕೇಳುವುದಿಲ್ಲ ಈ ವಿಷಯದಲ್ಲಿ ಎಂಬ ತೀರ್ಮಾನಕ್ಕೆ ಬಂದು ಕೊನೆಯ ಮಾತನ್ನ ಹೇಳಿದ್ದೆ.
"ಈ ಹ್ಯುಮಿಡಿಟಿಗೆ ಕನ್ನಡದಲ್ಲಿ ತೇವಾಂಶ ಎನ್ನುತ್ತಾರೆ" ಎಲ್ಲೋ ಕೇಳಿದ ನೆನಪಿತ್ತು ಹೊಡೆದು ಹಾರಿಸಿದ್ದೆ.
"ಓ ತೇಮಾಂಶ ನಂಗೆ ಲಾಯ್ಕ್ ಗುತ್ತಿತ್ತು ಕಾಣಿ ನಮ್ಮೂರಂಗೂ ಒಂದೊಂದು ದಿನ 90 ಪರ್ಶೆಂಟ್ ಆತ್ತು ಅಂದೇಳಿ ರೇಡಿಯೋದಂಗ್ ಹೇಳ್ತೀರು"
"ಹೊಯ್ ಒಡಿಯ್ನೆ ಓ ಅಲ್ಕಾಣುತ್ತು ಕಾಣಿ ಒಂದು ಕಟ್ಟೆ ಕಾಲಿ ಇತ್ತು ಅಲ್ಲೇ ಕೂಕಂತೆ ಇಲ್ಲೆ ನಿಲ್ಸಿ"
ಅವ ನಿಶ್ಚಿಂತೆ ಇಂದ ಇಳಿದು ಹೋದ ಅದರೆ ನನಗೆ ತಲೆಕೆದರಿ ಕೊಂಡು ದಾರಿಯಲ್ಲಿ ಹೋಗುವವರಿಗೆ ಕಲ್ಲಲ್ಲಿ ಹೊಡೆಯುವ ಸ್ತಿತಿ ಆಗಿತ್ತು.

Comments
ಮುಕುಂದನಿಗೆ ಯಾಮಾರಿಸಿದಂಗಲ್ಲ ನನಗೆ....ನನ್ನತ್ರ ಬಹಳ ಪ್ರಶ್ನೆ ಇದೆ ತೇವಾಂಶ ಬಗೆ..ಎಲ್ಲ ಇಲ್ಲಿ ಹೇಳೊಕೆ ಆಗೋಲ್ಲ...ಚಾಟ್ ನಲಿ ಕೇಳ್ತಿನಿ....
ಹೆಂಗೊ ನಿನ್ನ ತರ್ಕಗಳು ಕೆಲವು ಸಾರಿ ಕೆಲಸ ಮಾಡುತ್ತೆ ನೋಡು...
ಚೆನ್ನಾಗಿ ಬರೆದಿದ್ದೀಯಾ....ಎಲ್ಲ ಬೆಂಗಳೂರ್ ಕನ್ನಡ ಆಗಿಲ್ಲದಿದ್ದಕ್ಕೆ ಸ್ವಲ್ಪ ಕಷ್ಟ ಆಯಿತು ಓದೊಕೆ...
ಧನ್ಯವಾದಗಳು.
ಅದು ಕುಂದಕನ್ನಡ ಇದ್ದಿದ್ದು ಇದ್ದಹಾಗೇ ಇರಲಿ ಎಂದು ಹಾಗೆ ಬರೆದಿದ್ದೇನೆ.
ನೀವೂ ನನ್ನನ್ನ ಪ್ರಶ್ನೆ ಕೇಳಿದರೆ ದೇವರಾಣೆ ಗೊತ್ತಿಲ್ಲ ಎಂದು ಹೇಳುತ್ತೇನೆ.
ಮುಕುಂದನಿಗೆ ಸ್ವಲ್ಪ ಗೊತ್ತಿದ್ದಿದ್ದರೆ ನಾ ಖಂಡಿತಾ ಬಾಯಿ ಬಿಡುತ್ತಿರಲಿಲ್ಲ. ವಿಷಯ ಗೊತ್ತಿಲ್ಲ ಎಂದಾದರೆ ಮಾತ್ರ ನನ್ನ ಕನ್ಫ್ಯೂಸಿಂಗ್ ಸ್ತ್ರ್ಯಾಟಜಿ ಹೊರಗೆ ಬರುವುದು.
ಧನ್ಯವಾದಗಳು.
ಹ್ಹೋಓ...ಹ್ಹೋಓ...!!
ಸಿಕ್ಕಾಪಟ್ಟೆ ನಗು ಬಂದು ತಡಿಲಿಕ್ಕೆ ಆಗ್ತಾ ಇಲ್ಯೆ....
ಎಂತದು ಮಾರಾಯ್ರೆ...?
ಹಿಂಗೆಲ್ಲ ನಗ್ಸಿದ್ರೆ ನಿಮ್ಮೇಲೆ ಕೇಸ್ ಹಾಕ್ತೆ ಕಾಣಿ....!
ನಗಿಸಿದ್ದಕ್ಕೆ...
ನೆನೆನೆದು ನಗುವಂತೆ ಮಾಡಿದ್ದಕ್ಕೆ ಅಭಿನಂದನೆಗಳು....
ನನ್ನ ಬ್ಲೊಗ್ ಗೆ ಸ್ವಾಗತ ಮೊದಲ ಪ್ರಿತಿಕ್ರಿಯೆಗೆ ಧನ್ಯವಾದ. ಹೊಸ ಹೊಸ ಭಾಷೆ ಕಲಿಯುವುದು,ಮಾತನಾಡುವುದು ನನ್ನ ಹವ್ಯಾಸ ಗಳಲ್ಲಿ ಒಂದು. ನನ್ನ ಪ್ರಯತ್ನದಲ್ಲಿ ತಪ್ಪಾಗಿದ್ದರೆ ಕ್ಷಮಿಸಿ.ಹೀಗೇ ಬರುತ್ತಾ ಇರಿ ಬರೆಯುತ್ತಾ ಇರಿ.
"ನೀವೂ ಬರೀನಿ ನಮ್ಮ ಆಡುಭಾಷೆಲ್ ಬರೂ ಗಮ್ಮತ್ತೇ ಬೇರೆ ಇತ್ತೇ!!!!!!!!"
ನಿಮ್ಮಂತೋರ್ ಕೇಸ್ ಹಾಕ್ತ್ರಿ ಅಂದೇಳಿಯೇ ನಾ ನನ್ನ ಬ್ಲಾಗಿಗ್
"ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗಿ" ಅಂದೇಳಿ ಹೆಸರಿಟ್ಟಿದ್ನೇ.
ಮತ್ತೆ ಕೇಳ್ತ್ರಿಯಾ? ಹೀಂಗ್ ಬರುಕ್ ಪ್ರೇರಣೆ ನಿಮ್ಮ ಶಾರಿ,ಪೆಟ್ಟಿಗೆಗಪ್ಪತಿ,ಚಪಾತಿ,ಉಪಬೆಳೆ ಇಂತವ್ವೇ ಗುತ್ತಿತ್ತಾ?
ಒಡಿಯ್ನೇ ಹೀಂಗ ಈ ಬದಿ ಬಂದು ಹ್ವಾತ್ತಾ ಇರೀನೀ!!!!!!!!
ನಿಮ್ಮ ಮಾತು ಕತೆ ಚೆನ್ನಾಗಿತ್ತು. ನಗು ಬರುತ್ತಿತ್ತು. ಆದ್ರೂ ನೀವು ಅಲ್ಲಿನ ಭಾಷೆಯಲ್ಲೇ ಬರೆದಿದ್ದು ಸ್ವಲ್ಪ ಅರ್ಥವಾಗಲಿಲ್ಲ. ಕೊನೆಯಲ್ಲಿ ನೀವು ಹೇಳಿದ ಉತ್ತರ ಬಲು ಮಜವೆನಿಸಿತ್ತು.
ಪ್ರತಿಕ್ರಿಯೆಗೆ ಧನ್ಯವಾದಗಳು.